Friday, 31 December 2010

ಅಗಸನ ಕತ್ತೆ.

ಬಾರೋ ಕತ್ತೆ, ಎತ್ತೋ ಕತ್ತೆ; ಹೇಳುವಳು, ಅಗಸನ ಅತ್ತೆ.
ಮುಂದೆ ಬಂದಾರೆ, ಕಡಿಯುವ ಕತ್ತೆ,
ಹಿಂದೆ ಹೋದರೆ, ಝಾಡಿಸಿ ಒದಿಯುವ ಕತ್ತೆ.
ಅಗಸ ಅತ್ತೆ ಕರೆದರೆ, ಮಾತ್ರ ಬರುತ್ತೆ,
ಇಲ್ಲದಿರೆ ಕಸ ತಿಂದು ಹಾಳ್ ಗ್ವಾಡಿ ಅಲೆಯುತ್ತೆ.
ಅಂಬಾರಿ ಭಾರ ಆನೆಗೆ, ಅಗಸನ ಭಾರ ಕತ್ತೆಗೆ.
ಭಾರ ಹೊರುತ ಊರೂರ ತಿರುಗುತ, ಎದ್ದರೆ ಬಿದ್ದರೇ;
ಕತ್ತೆ ನೀ ಸತ್ತೇ. ಅಯ್ಯೋ ಅಗಸನ ಈ ಕತ್ತೆ.
 

Wednesday, 29 December 2010

ತಾಯೇ ಕರುಣಾssಮಯೇ, ಸಂಧ್ಯಾssದೇವಿಯೇ,

ತಾಯೇ ಕರುಣಾssಮಯೇ,ಶಾರದಾಂಬೆಯೇ,  
ತಾಯೇ ನೀ ಕಾಯೇ; ಸಂರಕ್ಷಿಸು, ಓ-ಮಾಯೇ.
ವಿದ್ಯಾ ಬುಧ್ಧಿ; ವಿನಯವ ಹರಿಸು.ಸುಖ ಶಾಂತಿ ನೀಡು; ದುಃಖವ ದೂಡು,
ನೀ ನಮ್ಮಾ; ಕರುಣೆ-ಯಿಂದಾsಲಿಸೇ, ಮಾಯೇ.
ಪ್ರಾತಃ ಕಾಲದ ಉಷಾ ದೇವಿಯೇ; ಸಾಯಂಕಾಲದ ಸಂಧ್ಯಾ ದೇವಿಯೇ,     
ಶುಭ ನೀಡೆ, ಶುಭ ಹರಸೇ, ಹೊಂಬೆಳಕೇ-ಜ್ಯೋತಿ.
ಕಲ್ಯಾಣ-ಆರೋಗ್ಯ, ನೀಡು, ಸುಖ-ಸಂಪತ್ತು.
ದಹಿಸಿ-ಬಿಡು ದಾರಿದ್ರ; ಜ್ಯೋತೀs, ಆಪತ್ತು.
ಸುಖವಿತ್ತು ಪಾಲಿಸು, ಸೌಭಾಗ್ಯ-ಸಂಪತ್ತು,
ಪರಬ್ರಹ್ಮ ಚೈತನ್ನ್ಯ,ಆನಂದದಾ ಜ್ಯೋತಿ.
ಅಳಿಸು ಅಂಧಃಕಾರ; ಬೆಳಗು ಓಂಕಾರಾ.
ಕಿವಿಗೆ ಕುಂಡಲಿ; ಕೊರಳಿಗೆ ಮುತ್ತಿನಹಾರಾ,
ದೀಪ, ದೀಪದ ಸಾಲೆ; ಬೆಳಗು, ದೀಪತ್ಕಾರ, 
ಜ್ಞಾನ ದೀವಿಗೆ; ತೋರು ಜೀವನ-ಸಾಕ್ಷಾತ್ಕಾರ.
ಸುಖವಿತ್ತು, ಪಾಲಿಸೇ; ಸುಜನ, ಶಿರೋಮಣಿ,
ಅಡಿಗಳಿಗೆರಗುವೆ; ಅಮ್ಮ, ಬ್ರಹ್ಮನರಾಣಿ,
ಭಕ್ತಿ ದಾಯಕಳೇ; ಓ,ದಯದಿಂದ ನೋಡೇ,
ಉಲ್ಲ್ಹಾಃಸ ದಿಂದಾಲಿಸೇ, ದಯಾಮಯೇ.
       

Tuesday, 28 December 2010

ನಾನು ನನ್ನವರು ನಮ್ಮಂತಿರಬೇಕು.

ನಾನು ನನ್ನವರು ನಮ್ಮಂತಿರಬೇಕು.
ಆಸೆ ಬದುಕು ಭರವಸೆಗಳ ಸರಮಾಲೆ,
ಎಲ್ಲೇ ಇರಲೀ ಹೇಗೆ ಇರಲೀ;
ಸುಖವಿರಲೀ ದುಃಖಗಳಲೇ ಬರಲಿ,
ಏನೇ ಬರಲೀ ಯಾಪರಿಇರಲಿ;
ಏನದು ಬರಲಿ ಒಕ್ಕಟ್ಟಿರಲಿ;
ಸಹಜವದು ನಮ್ಮ ಸಂಸಾರ ಬದುಕು,
ಹಸನಾದ ಬಾಳ ಬದುಕಲೇ ಬೇಕು
ನೀನೂ ಬದುಕು ಇತರರ ಬದುಕಿಸು,
ಏಕೋನಾಥನ ನಂಬಿಕೆ ಮಾತು
ನೀನನಗಿದ್ದರೆ ನಾ ನಿನಗೇ
ಜಗದಾಣ್ಮಯ ನಿತ್ತ ಈ ಕೊಡುಗೆ.

ನನ್ನದು ನನ್ನದು ಎಲ್ಲಿ ತನಕ? ನಿನ್ನರಿವು ನಿನಗಿರುವ ತನಕ.

ನನ್ನದು ನನ್ನದು ಎಲ್ಲಿ ತನಕ? ನಿನ್ನರಿವು ನಿನಗಿರುವ ತನಕ.
ಹುಟ್ಟಿಸಿದ ಶಿವ ಹುಲ್ಲನು ತಿನಿಸುವನೆ? ಹಾಗೆಂದರೆ ಶಿವ ಕಾಯುವನೇ?
ನೀ ಬದುಕು ನಿನ್ನವರೂ ಬದುಕಲಿ,ಬದುಕಿನ ಬಾಳು ಹಸನಾಗಿರಲಿ.
ಶಿಸ್ತಿನ ಪಾಠ ಮಸ್ತಾಗಿರಲಿ; ಮಸ್ತಿಯಲದು ಹಾಳಾಗದಿರಲಿ,
ಇದು ನನ್ನದು,ಅದು ನನ್ನದು,ಇದು ನಾ ಪಡೆದದ್ದು,ಅದು ನಾ ದುಡಿದದ್ದು,ಮಿಕ್ಕೆಲ್ಲ ಸೇರಿ ಬಯಸಿದ್ದು,
ಕಾಲ ರಾಯನ ಮಹಿಮೆ ಸ್ಥಿರವಲ್ಲ, ನಿನ್ನಂತಿರಬಹುದು; ನಿನ್ನ ದೋಚಬಹುದು,ಜಾಣರಿವು,ನಿನ್ನದೇ ನಿನಗಿರಲಿ,

Friday, 24 December 2010

ಸ್ವಾಗತಿಸುವೆ ಓ ಬಾ ನೀಲ ಮೇಘ ಶ್ಯಾಮಾ.

ನಾ ತುಳಸಿ; ವೃಂದಾವನದಲ್ಲಿ. ಜನ ಮನೆ ಮನದಾ; ಅಂಗಳದಲ್ಲಿ.
ಆರಾಧಿಸುತ ಕಾದಿಹೆನಿಲ್ಲಿ. ಕರೆಯುವೆ ಕೇಳದೆ; ಲೀಲಾ ಲೋಲಾ,
ಸ್ವಾಗತಿಸುವೆ ಓ ಬಾ; ನೀಲ ಮೇಘ ಶ್ಯಾಮಾ.
ಅಂಗಳ ದೊಳಗಿನ, ಹೂ ಬನದೊಳಗೆ; ಅಂದ ಚೆಂದದ, ಅರಗಿಣಿಯಂತೆ.
ನಳ ನಳಿಸುವ, ಹೂವಿನ ಸೊಗಸು; ಮಧುರ ಮಧುರದಾನಂದದ; ಕನಸು.
ಸುತ್ತಲು ಹಸುರಿನ ಪ್ರಾಂಗಣದಲ್ಲಿ; ಹೂ ಬನ ಅರಳಿದೆ ಮಧುಬನದಲ್ಲಿ.
ರಾಧಾ ತುಳಸಿ ಕಾದಿಹೆನಿಲ್ಲಿ; ಲೀಲಾಲೋಲ, ನೀ ಇರುವೆ ಎಲ್ಲಿ?
ಕರೆಯುವೆ ಕೇಳದೆ; ಲೀಲಾ ಲೋಲಾ? ಸ್ವಾಗತಿಸುವೆ ಓ ಬಾ; ನೀಲ ಮೇಘ ಶ್ಯಾಮಾ.

ನಸುಕಿನ ಜಾವದ, ಮುಸುಕನು ತೆರೆಯುತ; ಪ್ರಭಾತ ಸೂರ್ಯ; ನಭವ ತುಂಬಲು.
ಮಂಜದು ಸರೆಯಲು, ಕೃಷ್ಣ ವನದೊಳು; ಹೂಗಳು ನಲಿಯಲು, ನವಿಲು ಕುಣಿದವು.
ಚಿಲಿಪಿಲಿ ಹಕ್ಕಿ, ಚಿಲಿಪಿಲಿ ಗುಟ್ಟಲು; ಸ್ವರದಲಿ ಸ್ವರ; ಮೇಳೈಸುತಿರಲು.
ಗುಕ್ ಗುಕ್ ಎಂದವು ಗೊರವಂಕಗಳು, ಕುಹೂ ಕುಹೂ ಕೋಗಿಲೆ; ಮಂಜುಳ ವಾಣಿ,
ಕೇಳಲು ಒಲಿಯನೆ; ಕುಂಜವಿಹಾರಿ? ಮಧುರ ಮಧುರ; ವೀ ಮಂಜುಳ ಗಾನಾ.
ಕುಂಜವಿಹಾರಿ,ಬಾರೋ ಮುರಾರಿ; ಸ್ವಾಗತಿಸುವೆ, ಓ ಬಾ; ನೀಲ ಮೇಘ ಶ್ಯಾಮಾ.
Friday, 17 December 2010

ಇಂದಿನ ಕಂದಾ ನಾಳೆ ಮುಕುಂದಾ

ಇಂದಿನ  ಕಂದಾ, ನಾಳೆ ಮುಕುಂದಾ.
ತಿಳಿಯೋ ನೀ; ಬಾಳ ಮಕರಂದ.
ವಿದ್ಯೆ ಕಲಿತರೆ; ಹಸನಾದ ಬಾಳು.
ಇಲ್ಲದಿರೆ; ಬಾಳು, ಗೋಳು.
ಆಟಾ ಊಟಾ ಪಾಠ;ಹಾರಿ ಜಿಗಿಯುವ ಓಟ.
ಜೀವನ ಕಲೆಸುವ;ಸುಂದರ ಪಾಠ.
ಕಲಿಯುವ ಪಾಠ,ಕಲಿಯಲೇ ಬೇಕು
ಮಾಡುವ ಕೆಲಸ, ಮಾಡಲೇಬೇಕು.
ತಿಳಿಯೋ ಜಾಣಾ, ನೀ ಮಕರಂದಾ,
ಕಲಿಯದ ಬಾಳು ; ಜೀವನ ಖೋತಾ.

ಕಂದನಾ ಹಾಡು

ಅಂದದ ಚೆಂದದ; ಕಂದನಾ, ಹಾಡು.
ಅ ಆ ಇ ಈ ;ಓದು ಬರಿ ಬಳ್ಳಿಯಾ ಹಾಡು.
ಕ ಖ ಕಂಠ ದಿಂದ ಯ ಜ್ಞ ದಾ ವರೆಗೆ,
ಎಲ್ಲೂ ನಿಲ್ಲದೆ ಮುಂದೆ ಸಾಗು.
ಅಮ್ಮನಿಂದ ಅಂಅ: ತನಕಾ ; ಕಲಿತು  ಕಲಿಸುವ ಈ ಹಾಡು.
ಆಹಾ!ಇಳೆಯಲಿ,ಈಶ;ಉಲಿಯುವನು.
ಖುಷಿಯಲಿ ಪಾಠವ ಕಲಿಯುವನು.
ವಿದ್ಯಾಲಕ್ಷ್ಮಿ ಒಲಿಯುವಳು;
ಗಣಪತಿ ವಿಘ್ನವ, ಕಳೆಯುವನು.
ಕಲೆತು; ಆನಂದಿ, ಎನಿಸುವನು.
ಕರುಣಾ ಮಯನ ನೆನೆಯುವ ಹಾಡು.
ಖಂಡಿತ ಗಣಪನ ದಿವ್ಯಾ ಘನತೆಯ;
ಚತುರತೆ ಛಡಿ ಥಡಿ; ಹಾಕುವ ಹಾಡು.
ಕಲೆಯಲು ಕಲಿಸುವ, ಕಂದನ ಹಾಡು.
ಕಲೆತು ಧನ್ಯರಾಗಿಸುವ  ಈ ಹಾಡು.

Thursday, 16 December 2010

ಓಪುಟ್ಟಾ ಏಳೋ ಪುಟ್ಟಾ;ಬೆಳಕು ಆಯಿ ತೇಳು.

ಓಪುಟ್ಟಾ ಏಳೋ ಪುಟ್ಟಾ;ಬೆಳಕು ಆಯಿ ತೇಳು.
ಕೋಳಿ ಗೂಡಿನಲ್ಲಿ ಕೋಳಿ; ಕುಕ್ಕರು ಕೊಕ್ಕೋ ಕೂಗಿತು.
ಗುಬ್ಬಿ ಗೂಡಿನಲ್ಲಿ, ಗುಬ್ಬಿ; ಚಿವ್ ಚಿವ್, ಗುಟ್ಟಿತು.
ಹಿತ್ತಲಗಿಡದೊಳು ಕಾಗೆ,ಕಾವ್ ಕಾವ್ ಕರೆಯಲು;
ಏನು ಆಯಿತು? ಶಿವಾ ಏನೋ ಆಯಿತು.
ಮೂಡಲ ಬಾನಿನಲ್ಲಿ ಬೆಳ್ಳಿ ಚುಕ್ಕಿ ಮೂಡಿತು,ಬೆಳ್ಳಿ ಚುಕ್ಕಿ ಮೂಡಿತು;
ಚುಕ್ಕಿಯನ್ನು ಕಂಡು; ಕರಿಯ ಮೋಡ ಹಿಂದೆ ಸರಿದವು.
ನಸುಕು ಹರೆಯಿತು; ತಂಪು ಗಾಳೀ ಬೀಸಿತು.
ಓಹೋ ಏನುಆಯಿತು, ಮೂಡು ಕೆಂಪ ಗಾಯಿತು.
ಏಳೋ ನೊಡೋ ಕಂದಾ; ಮೂಡಣ ಸುರ್ಯಾ ಬಂದಾ.
ಪುಟ್ಟಾ;ಬೆಳಕು ಆಯಿತು.ಇನ್ನು ಮಲಗಲೇನು ಚಂದಾ,ಏಳು ಕಂದಾ.
ಅಂಬಾ ಎಂದು ದನ ಕರ ಒದರಲು ಗೌಳಿಯ ದೊಡ್ದಿಯಲಿ,
ಮ್ಯಾ ಬ್ಯಾ ಎಂದವು ಟಗರು ಕುರಿಗಳು ಕುರುಬನ ಹಟ್ಟಿಯಲಿ,
ಬೆಳಕದು ಹರಿಯಿತು ಭರದಲ್ಲಿ, ಇನ್ನು ಮಲಗಿರುವೆ ಇಲ್ಲಿ.
ಇನ್ನು ಮಲಗಲೇನು ಚಂದಾ,ಏಳು ಕಂದಾ.
ಹೂವು ಜಾಜಿ ಗಳು ಅರಳಿದವು, ಆಹಾ ನೋಡು ಆನಂದಾ,
ಇನ್ನು ಮಲಗಲೇನು ಚಂದಾ,ಏಳು ಕಂದಾ. 

Wednesday, 15 December 2010

ದಿನಕರನ ದಿನಚರಿ

ನಸುಕಿನ ಜಾವಾ ಮುಸುಕಿನಾ ವೇಳೆ,ಮಂಜು ಬಿದ್ದಿತು ತಣ್ಣ ತಣ್ಣಗೆ.
ತಂಗಾಳಿಯದು,ಬೀಸಲು, ತಂಪಗೆ,ಜಗ ಮರೆತಿದೆ ಮನ ಏಳಲಾಗದೆ.
ಮಾಮರ ಕೋಗಿಲೆ ಕುಹೂ ಕುಹೂ ಕೂಗೆ,ಅರಳುತಲಿವೆ ಹೂ ನಗುತ ಮೆಲ್ಲಗೆ.
ಮುಂಗೋಳಿ ಕೂಗಲುಮೆಲ್ಲಗೆ;ಮೂಡು ನಾಚಿತು ಕೆಂಪಗೆ.
ನೊಸಲಿಗೆ ತಿಲಕವ ನಿಡುತ ನೇಸರ; ಪಸರಿಸಿ ಹೊಂಬಣ್ಣದಾ ಬೆಳಕ.
ಏರುವ ಸೂರ್ಯನ ಬೆಳಕನು ಕಂಡು ; ಹಕ್ಕಿಯಾ ಚಿಲಿಪಿಲಿ ಮಂಜುಳ ಹಾಡು.
ನದಿಯಲಿ ಮುಳುಗುತ ಭಕ್ತರ ದಂಡು; ಅರ್ಘ್ಯವ ನೀಡುತ,ನಮಿಸಿದರು.
ಹೊಸಲಿಗೆ ಬರುತಿಹ ತೇಜದ ಬೆಳುಕಿಗೆ;ಮರೆಯಾಗುತಿಹನು ಚಂದ್ರನು ಮೆಲ್ಲಗೆ.
ಅಚ್ಚಿಗೆ ಹಚ್ಚಿದ ಕಿಚ್ಚದ ಹೊಳಪು.ಗರ್ರನೆ ತಿರುಗುವ ಚಿನ್ನದ ಬೆಳಕು.
ಗುಡಿಯಲಿ ಪೂಜೆಯು ನಡೆಯುತಿರೆ,ಮಕ್ಕಳು ಪಾಠವ ಮಾಡುತಿರೆ,
ದನಕರು ಮೇಯಲು ಸಾಗುತಿರೆ,ರೈತರು ನೇಗಿಲು ಹಿಡಿದಿಹರು.
ಮನೆ ಮನೆಯಲ್ಲಿ ಅಂಗಳ ಗುಡಿಸುತ; ಹೊಸಲಿಗೆ ರಂಗವಲಿ ಹಾಕಿದರು.
ಅಂಗಡಿ ತೆರದವು ವ್ಯಾಪಾರ ಮಾಡಲು,ಸುಂದರ ಗೊಂಡವು  ರಥ ಬೀದಿಗಳು.
ಸುಖ ಶಾಂತಿ ಜಗಕೆ, ನೀಡುತ ದಿನಕರ; ಸಾಗಿದ ಸಂಜೆ,ಪಡುವಣದಿ.
ನಯನ ಮನೋಹರ; ಕೆಂಪಾಗಿ ರವಿ.ಸ್ವಾಗತಿಸಲವಗೆ; ಸಂಧ್ಯಾದೇವಿ.
ದಿನದ ಕಾಯಕ, ಮುಗಿಸಿದ ದಿನಕರ ; ಸೇರಿದ ತಾಯಿಯಾ ಮಡಿ ಲಡಿಗೆ.
ದುಡಿವರು ತಿರುಗಿದರು ಮನೆಯಡಿಗೆ, ಹಕ್ಕಿಯ ಕಲರವ ಸೇರಲು ಗೂಡಿಗೆ,
ಕತ್ತಲೆಯಡರಿತು; ಅಡಿಗಡಿಗೆ.


ನಗುವೇ ನಮ್ಮ ಜೀವನದ ಸೊಗಸು.

ಕಂದಾ ಓಕಂದಾ, ನೀ ಮಕರಂದಾ; ನಿನ್ನ ಮನದಣಿ ನೋಡಲಾನಂದ.
ನಗು ನಗು ನೀ ನಗು; ನಗುತಿರು, ಬಾಳಾ ; ಅಳದಿರು ಮನದಣಿ ನಗುತಿರು ಕಂದಾ.
ನಗುವೇ ನಮ್ಮ ಜೀವನದ ಸೊಗಸು.
ನಗು ಮಗು ನೀ ಮಗೂ,ನಗುತಿರು ಕಂದಾ; ನೆಮ್ಮದಿ ನಗು ಜೀವನಕಾನಂದ.
ನೀ ನಕ್ಕರೆ ಅಕ್ಕರೆ; ಅಕ್ಕರೆ,ಸಕ್ಕರೆ. ಸದಾನಂದದಲಿ; ನಿತ್ಯ ಸಕ್ಕರೆ.
ನಗಲು ನೀ ನಗಲು; ನಗಿಸುತ ನಗುವೇ. ನಗುವೇ ನಮ್ಮ ಜೀವನದ ಸೊಗಸು.
ಸುಖ ದುಃಖ ಗಳ ಜೀವನ ಸುಸಂಸಾರ, ನೆಮ್ಮದಿ ಜೀವಕೆ ಭಾವಾನಂದ.
ಸುಖಕಾಗಿ ಜೀವ ತಳಮಳಿಸುವದು;ದುಃಖ ವಾರಿಗೂ ನೆಮ್ಮದಿ ಕೊಡದು.
ನಕ್ಕರವನು, ಜೀವನ ಸವಿಯುವನು. ನಗುವೇ ನಮ್ಮ ಜೀವನದ ಸೊಗಸು.

Sunday, 12 December 2010

ತಗಣಿ ಆಗದ ಗಣಿತ

ಬಾರೋ ವೆಂಕಿ ಬಾರೋ.
ಗಿಡ ಮಂಕಿ ಆಗಬ್ಯಾಡೋ.
ಮುದ್ದಿನ ಗಿಣಿಯೆ ಬಾರೋ.
ಆಟ ಪಾಠ ದಲಿ ವಿದ್ಯೆ;
ಕಲಿಯದಿರೆ ನೀ ಬಿದ್ದೆ.
ಜಾಣ ಮರಿಗೆ ಕಲಿಸುವರಪ್ಪ;
ಕೋಣ ಮರಿಗೆ ಬಡಿಯುವರಪ್ಪ;
ವಿದ್ಯೆ ಕಲಿಯುವ ಬಾಬಾರೋ;
ಪೆಪ್ಪರಮಿಂಟು ಕೊಡಿಸುವೆ ನಾನು.
ಎನಿಸುವರಾರು  ಹೇಳೋ?
ಪೆಪ್ಪರಮಿಂಟು ರೂಪಾಯಿ ಗೆಂಟು
ಎಣಿಸಿ ನೀನು ತಾರೋ?
ಹಣ್ಣು ಹಂಚಲು ಎಣಿಕೆ ಮಾಡಲು
ಎಣಿಸಲು ನಿನಗೆ ಬರಬೇಕು.  
ಎಣಿಸುವ ಪದ್ಧತಿ, ಬರಿಯುವ ಪದ್ಧತಿ, ಓದುವ ಪದ್ಧತಿ, ಕಲಿಬೇಕು
ಗುರುಗಳು ಪಾಠ ಕಲಿಸುವರು,
ಮಕ್ಕಳು ಪಾಠ ಕಲಿಯುವರು.
ಕಲೆತರೆ ಜಾಣರು ಆಗುವರು.   
ಓದುವ ಪದ್ಧತಿ:
ಒಂದ ರಿಂದ ನೂರರ ತನಕ
ಅಂಕೆ ಮಗ್ಗಿ ಕಲಿಸು ಅಜ್ಜಿ.
ಎಣಿಸುವ ಪದ್ಧತಿ;
ಬಿಡಿ ಬಿಡಿಯಾಗಿ ಕಡ್ಡಿ ಎಣಿಸು ಒಂದ ರಿಂದ  ಒಂಬತ್ತು.
ಹೀಗೆ ಎಣಿಸು ವಸ್ತು; ಆಗದೆ ನೀನು ಸುಸ್ತು.
ಒಂದ ರಿಂದ  ಒಂಬತ್ತು.ಈ ಸಂಖ್ಯೆ ಗೆ ಕರೆವರು ಒಂಟಂಕಿ.
ಒಂದ ರಿಂದ  ಒಂಬತ್ತು ಬೆಂಕಿ ಕಡ್ಡಿ ತತ್ತಾರೋ.
ಗಂಟು ಕಟ್ಟದೆ  (ಒಂಟಿಯಾಗಿ)  ಒಂದೊಂದಾಗಿ ಎಣಿಸು.
ಇವಕೆ ಒಂಟಂಕಿ ಅಂತಾರೋ.
ಅಂಕಿ ಮುಂದೆ ಅಂಕಿ ಬರಿದರೆ ಜೋಡಂಕಿ ಅಂತಾರೋ.
ಅಂಕಿ ಹಿಂದೆ ಅಂಕಿ ಬರಿದರೆ ಜೋಡಂಕಿ ಅಂತಾರೋ.

ನಡೆಯ ಲಾರದೆ ನಿಂತೇ ಏಸೊಂದ ಕೊಡುವೆ.

ದುಡಿ ದುಡಿದು ಬಸವಳಿದು, ನನ್ನಷ್ಟಕೆ ನಾನು;
ಬೆಂಡೆದ್ದು ಕುಳಿತು,ಬಿಡುತಾ ಏದುಸಿರು.
ಕರಣಿ ಬೆಲ್ಲವ ತಿಂದು, ಬೊಗಸೆ ನೀರನು ಕುಡಿದು;
ಸುಸ್ತಿನಲಿ,ಸಾವರಸಿ; ದಣಿವಾರಿಸುತಿರಲು,
ಚಾಪೆ ಕರೆಯಿತು, ಒರಗು; ಹಾಯಾಗಿ ಮಲಗು.
ಬೇಸಿಗೆಯ ಉರಿಬಿಸಿಲು,ಧರೆಯ ಸುಡುತಿಹುದು.
ಸಾಗರದ ಒಣ ಗಾಳಿ,ಬರಿದು ಬರಿ ಬಿಸಿಗಾಳಿ,
ಮನಕೆ ನೆಮ್ಮದಿ ಇಲ್ಲ; ಬಿಸಿಲು ತಂಪಿಗೆ ಸಲ್ಲ.
ಜೀವ ಉಸಿರಿಡುವಾಗ,ಧರೆಗೆ ನೆರಳನು ಕೊಡುವ;
ಗಿರಿಧಾಮ ಸಿರಿಧಮ, ವನಸಿರಿಯನೆ ;ನೋಡು.
ಗಿರಿಕಂದರದಿ ನಿಂತು; ಗಗನ ದೆತ್ತರ ಬೆಳೆದು,
ಜಗವ ಕಾಯುವ ನಿಂತ; ಅಮೃತ ಧಾರೆ ಅವಳು.
ಜೀವರಾಶಿಗೆ ನಿತ್ತ್ಯ, ಹಸಿದೊಡಲು ತುಂಬಿಸುವ;
ಕನಿಕರದ ಖಣಿಯು,ಆ ಜ್ನ್ಯಾನಿ ಸುಜ್ನ್ಯಾನಿ.
ಆಕಾಶ ಕಾಯೇ, ಎದೆ ಎತ್ತಿ ನಿಂತಿರುವ;
ಭುವಿತಾಯಿ ಧನ್ಯೆ ; ಸಂಜೀವಿನಿ ಕಾಮಧೇನು.
   
        

ಕನಸಿನಲ್ಲಿನ ಕನಸು;ಕನಸಲ್ಲ ನನಸು.

ನೋಡು ನೋಡುತ ಮಾಡ,ಬಿಳಿ ಮೋಡ ಕರಿಮೋಡ;
ತಂಪುಗಾಳಿಗೆ ಸೊಗಡ;ಹನಿಯೊಡೆಯಿತು,ನೋಡ.|| ಪಲ್ಲ ||
ಬಾನಂಗಳದಿ ನೋಡಿ; ಆಸೆ ಚಿಗುರಿತು ಮೂಡಿ.
ಎಲ್ಲೆಲ್ಲೂ ಹಸಿರು ಪೈರು,ಈ ಜೀವನದ ಉಸಿರು.
ನೆನೆ ನೆನೆದು ಮನದಾಗ,ಮನದಾಳ ತುಡಿದಾಗ;
ಮಳೆಯಲ್ಲಿ ನೆನೆದಾಗ, ಹಾಯ್ ಎಂದ ಮನಸು. || ೧ ||
ಮಳೆ ಎಲ್ಲಿ ಚೆಳಿ ಎಲ್ಲಿ ? ಮೈಮರೆತ ರಸಿಕತೆಯು ಕನಸಿನಾ ಮೋಡಿ.
ಆಸೆ ಚಿಗುರಿತು ಮೂಡೀ,ಮನಕೆ ಸ್ಪಂದನೆ ನೀಡಿ;
ಎಲ್ಲೋ ಕಂಡಿತು ಮನಸು; ಆ ಮುಗ್ಧ ಹೊಂಗನಸು.
ಕನಸು ಕನಸಿನಲಿ ಕನಸು; ಎಲ್ಲೋ ಜಾರಿತು ಮನಸು.
ಮರೆಯಾಗಲದು ಮನಸು,ಬರಿದು ಕನಸೋ ಮನಸು. || 2 ||
ನಿನ್ನೆ ನಿನ್ನೆಯ ನೆನಪು,ನಾಳೆ ನಾಳೆಗೆ ಇರಲು;
ಹೋಗಲಹುದೇ ಮನಸು? ನೆನಪಾಗಲದು ಕನಸು.
ಮರೆತು ಹೋದರೆ ಮನಸು,ಬರಿದು ಕನಸೋ ಮನಸು.
ಬಾರದದು ಇನ್ನೆಲ್ಲಿ;ಬರೀದೆ ಕನವರಿಸು.                 || 3 ||
ಬಿಡಿಗಾಸು ಕೂಡಿಟ್ಟ ಕೊಪ್ಪರಿಗೆ ಹೊನ್ನು;
ಅರಮನೆಯ ಕಟ್ಟಿದರು, ಸುಖವಾಸಕೆಂದು.
ಬಂಧು ಬಳಗವ ಕೂಡಿ, ಹಾಯಾಗಿ ತಿಂದುಂಡು.
ರಾಜಭೋಗವೇ ರಾಮರಾಜ್ಯ ವು ಎಂದು;
ಇದ್ದುದನು ಅಡವಿಟ್ಟು, ಸಾಲವನು ಮಾಡೀ;
ಹಬ್ಬ ಹರಿದಿನ ನೋಡೀ; ಹೇಗೆ ಬಿಡುವದು ಹೇಳೀ,
ಕೊಟ್ಟವನು ಕೋಡಂಗಿ; ಇಸುಗೊಂಡ ಈರಭದ್ರ.
ಓಟ್ಟಾರೆ ವೈಭೋಗ; ಛಿದ್ರ ಛಿದ್ರ.                        || 4 ||
ಕೂತು ತಿಂದರು,ಕುಡಿಕೆ ತಿರಿಸುತ ಹೊನ್ನು;
ಹಾಯಾಗಿ ಸವಿಯುತ್ತಾ ವೈಭೋಗ ಜಾತ್ರೆ.
ತಿಂದುಂಡು ತೀರಿದರು,ಇಹ ಪರದ ಯಾತ್ರೆ;
ಬಿಟ್ಟು ಹೋದರು, ಮಿಕ್ಕಿ ಅಳಿದುಳಿದ ಅಲ್ಲೇ;
ಹೊರಲಾರದ ಮುರಕು ಖಾಲಿ ಖಾಲಿ ಪಾತ್ರೆ.
ಹರಿಯ ಪಾಲಿಗೆ ಹರಕೆ ಬರಿ ಸ್ವಸ್ಥಿ ಭಾಗ್ಯ.
ರಾಮಜಾನಕಿ ಗದುವೇ ಶುಷ್ಕ ಸೌಭಾಗ್ಯ.                  || 5 ||
ಆರದೋ ಅರಮನೆಯು; ಅಲ್ಲ ನಿಮ್ಮದು ಹೌದು.
ಅಳಿಸುವಿರೋ ,ಗಳಿಸುವಿರೋ? ಬೆಳಿಸಿ ಸುಖಿಸುವಿರೋ?
ರಾಮ ಜಾನಕಿ ಬಿಟ್ಟ ;ಕಥೆಯ ಸಾಮ್ರಾಜ್ಯ .               || 6 ||ನಮ್ಮೂರ ಜಾತ್ರೆ

ಜಾತ್ರೆಯು ಜೋರು ಬೆಳ್ಳಿಯ ತೇರು.ಅದರೊಳಗ ಕುಂತಾಳ ಚೌಡವ್ವ ಜೋರು..
ಊರ ಹಿರಿಯರು ಬಂದ್ರು,ನಾರಿಯರು ಸೇರ್ಯಾರು.ಧೂಪ ದೀಪ ಹಚ್ಚಿ,
ತುಳಸಿ ಪುಷ್ಪಾರ್ಚನೆ  ಕುಂಕು ಮಾರ್ಚನೆ ಪೂಜೆ ಮಾಡಿ; ಆರತಿಯ ನೆತ್ತ್ಯಾರು,
ಪ್ರಿತೀಲೇ ಹೂ ಹಣ್ಣು ಕಾಯಿ ಉಡಿಯಾ ತುಂಬಿದರು.ಹೂ ಪನಿವಾರ ಮಾಡಿದರು.
ಶುರುವಾಯ್ತು ಮೆರವಣಿಗೆ ದಿಬ್ಬಣ ಜೋರು. ಹೊರಟರು ಜನರು ಏಳಿಯಾಕ ತೇರು,
ಹಲಗೆಯ ಬಡಿತ ಡೊಳ್ಳಿನ ಕುಣಿತ,ತಾಳ ಮದ್ದಳೆ ಕಂಸಾಳೆ ಕುಣಿತ,
ತಟ್ಟಿರಾಯ~ನೋಡಲ್ಲಿ,ಕೊಲ್ಮೇಲೆ ಚೋಟು~ನೋಡಿಲ್ಲಿ,ಉಧೋ ಉಧೋ ಅಗೋ ಅಲ್ಲಿ,
ಜೈ ಜೈ ಕಾರ ಎಲ್ಲೆಲ್ಲಿ ಹೊರಟಿತು ತೇರು ಭರದಲ್ಲಿ,
ಹರಕೆ ಹೊತ್ತವರು ಉತ್ತತ್ತಿ ಬಿರುವರು,ಬಾಳೆಹಣ್ಣು ಎಸೆಯುವರು.
ಹಳ್ಳಿ ಜಾತ್ರೆಗೆ ಬಂದವರು ಬೇಕಾದ ಸಾಮಾನು ಕೊಳ್ಳುವರು,
ಆಟಿಗೆ ಸಾಮಾನು ಮಕ್ಕಳಿಗೆ ಬೇಕು,ಆಭರಣ ಬೇಕೇ ,ಪಾತ್ರೆ ಪಡಗಾ,ದನಕರು,
ದಿನಸಿ ಬಟ್ಟೆ ಏನೇಲ್ಲ ಕೊಳ್ಳಿರಿ ಬೇಕಾದ್ದು ನಿಮಗೆಲ್ಲ ,ಮೋಜು ಮಸ್ತಿ,ಸವಾಲು,
ಬೆಂಡು,ಬತ್ತಾಸ್ ,ಮಿಠಾಯಿ ಹಲ್ವಾ ,ನಾಟಕ ,ಸಿನಿಮಾ,ಸರ್ಕುಸ್, ಬಂದೈತೆ.
ದೊಂಬರಾಟ ನಡದೈತೆ.ಈ ಪರಿ ಜಾತ್ರೆ ಸಾಗೈತೆ.
ಬನ್ನಿ ಬನ್ನಿ ನೀವು ನೋಡೀ  ಓಟ್ಟರೆ ಮಸ್ತ ಮಜಾ ಮಾಡೀ......
ಜಾತ್ರೆಯು ಜೋರು; ಬೆಳ್ಳಿಯಾ ತೇರು.
ಹಲಿಗೆ ಮಜಲು ಬಡಿತ; ಡೊಳ್ಳಿನ ಕುಣಿತ.
ತಾಳ ಮದ್ದಳೆ ಬಡಿತ; ಕಂಸಾಳೆ ಕುಣಿತ.
ಆ ಕಡೆ ಢಬ್ಬು ತಟ್ಟಿರಾಯ; ಈ ಕಡೆ ಕೊಳ ಚೋಟುರಾಯ.
ಆಟ ಹಾಡು, ಕುಣಿತ ದಲ್ಲಿ; ವೈಭೋಗದ ಲಾ .
ಎಲ್ಲೆಲ್ಲೂ ರಂಗು, ಹಾಡಿನ ಗುಂಗು.
ಎಲ್ಲೆಲ್ಲೂ ಹುರುಪು; ಜಾತ್ರೆಯ ಸೋಗಸು.  
ಝಗ ಝಗ ಬೆಳಕಲ್ಲಿ, ಕಾಸಿರೆ ಕೈಲಾಸ.
ಎಲ್ಲೆಲ್ಲೂ ಮಿಂಚಿತ್ತು; ಹಾಸ್ಸ್ಯಉಲ್ಹಾಸ.
ಎಲ್ಲೆಲ್ಲೂ ಜೂಜು; ಹಾಡಿನ ಮೋಜು.  
ಆಕಳಿಕೆ ತೂಕಡಿಕೆ, ಬಾಯಾಕಳಿಸುತ್ತಾ;
ಕೂತಲ್ಲೇ ಮೈ ಮನಸು; ನಿದ್ದೆ ಮಾಡುತ್ತಾ.
ಜಗ ಮರೆಸಿ ಬಿಟ್ಟಿತ್ತು; ರಾತ್ರಿ ಗಮ್ಮತ್ತು.
ನಿದ್ದೆ ಗುಂಗಿನಲ್ಲಿ ಮಬ್ಬು; ಗೊರಕೆ ಹೊಡಿಯ ಹತ್ತಿತು.
ಗೊರಕೆಯ ಜೋಂಪು; ಹಾಡಿನ ಕಂಪು,
ತಂಪು ಗಾಳಿ ಬೀಸೆ; ನಿದ್ದೆ ಹಾರೀ ಹೋಗಿ ಬಿಟ್ಟಿತು.
ಮಬ್ಬಿನಲ್ಲಿ ಮನಸು; ವಟ ವಟ ಗುಟ್ಟಿತು.
ಕನಸಿನಾ ಗುಂಗು; ಹೊರಟು ಹೋಗಿತ್ತು.
ಕುಡುಕನ ಮತ್ತು, ಇಳಿದು ಹೋಗಿತ್ತು,
ಸಾಕಪ್ಪ ಸಾಕು, ಕುಡುಕನ ಬಾಳು;
ಒಂದಿನಾ ತರತೈತಿ; ಜೀವಕ್ಕಗೋಳು.

ನಮ್ಮ ಹಳ್ಳಿಯ ಮಳೆ ಗಾಲ

ನಮ್ಮ ಹಳ್ಳಿಗೆ ಬರಲೀ ಮಳೆಗಾಲ ಏಲ್ಲರಿಗೂ ಹರುಷ ಶುಭಕಾಲ.
ಸೆಳುಕ ಮಿಂಚೊಂದ ಗುಡುಗುಡಿಗಿತ್ತ; ಎಲ್ಲೆಲ್ಲೂ  ಮಳೆ ಸುರಿದಿತ್ತ,
ಎಲ್ಲೆಲ್ಲೂ ಹರುಷ ,ಹೊಸಾ ಹುರುಪು, ಅವರವರ ಕೆಲಸ ಅಲ್ಲೇ ನೋಡ,

ಮಳೆಗಾಲ ಬಂತಂದ್ರ ನೋಡ ,ರಸ್ತೆ ತಿರುಗಾಟಾ ಯಾತಕ್ಕೂ ಬ್ಯಾಡ್ರೀ.
ಎಲ್ಲೆಲ್ಲೂ ರಸ್ತ್ತೆ ಕಿಚಿ ಕಿಚೀ, ಇಂಬಳ ಹೀರ್ತಾವ ರಕುತಾ ಬಾಚೀ
ಎಲ್ಲೆಲ್ಲೂ ಹಸಿರಿನಾ ಉಸಿರು, ಮರೆತೀರೀ ಜಾರಿಬಿದ್ರೆ ಕೆಸರು.
ಹಳ್ಳಿ ಕೆರೆ ಕೊತ್ತಳಾ ತುಂಬಿ,ಕಪ್ಪೆ ಹಾಕ್ತಾವ ಖುಷಿ ವಟ್ರಾ ವಟರು.
ದನಾ ಮೇಯ್ತಾವ ಕೇರಿ ತಲಿಮ್ಯಾಗ, ಕುರಬ್ರು ಹಾಡ್ತಾರ ಕುರಿ ಹಿಂಡಿನ್ಯಾಗ.

ಸುಂಟರಗಾಳಿ ಬಿಸೀ ಒಮ್ಮಿಟ್ಟ; ಕಾರ್ಮೋಡ ಸುತ್ತ ತಲಿಮ್ಯಾಗ;
ಸೆಳುಕ ಮಿಂಚೊಂದ ಗುಡುಗುಡಿಗಿತ್ತ; ಎಲ್ಲೆಲ್ಲೂ  ಮಳೆ ಸುರಿದಿತ್ತ.
ಹರಗ್ಯಾರ ಹೊಲವ ಬಿತ್ತ್ಯಾರ; ಕಾಳ ಹುಟ್ಟ್ಯಾವ, ಸಸಿಯ ನೋಡ,   
ರೈತ ಹೊಂಟಾರ, ಬುತ್ತಿ  ಕಟ ಗೊಂಡ; ಗೊಂಗಡಿ ಹೊತ್ತಾರ  ನಾಟಿ ಮಾಡಾಕ;
ಕುಡಚಿ ಹಿಡಿದಾರ ಕಳೆ ಕೀಳಾಕ,ಬರ್ತಾರ ಮನೆಗೆ  ಸಂಜೆ ಮ್ಯಾಕ,
ಹಣ್ಣು ತರಕಾರಿ ಮನೆಗೆ ತರ್ತಾರ. ಹಾಲು ಹೈನ ಮನ್ಯಾಗ ಕರೆತಾರ.

ಜನಾ ಕರಿತಾರೋ ಬಾರೋ ಮಳೆ ರಾಯಾ. ಖುಷಿಯಾಗ ತೈತೆ ಮಹರಾಯಾ.
ಮಳೆ ಯಾಗ ಬೆಳೆಯ ಬೆಳಿತಾನ; ಚಳಿ ಬಿಸಿಲಾಗ, ಕಾಳು ಒಕ್ಕುತಾನ.
ಹಳ್ಳ್ಯಾಗ ಇರಲಿ ಮಳೆಗಾಲ , ಏಲ್ಲರಿಗೂ ಕೊಡಲಿ ಶುಭ ಕಾಲ.

ಜನಕ ನಡಿಯಾಕ ಕಾಲೆರಡೂ ಬೇಕ;ಮೈ ಮುರಿದು ಕೆಲಸ ಮಾಡ ಬೇಕ,
ಬೆಳೆ ಬೆಳಿಯಾಕ,ಜನ ಬದುಕಾಕ;ಮಾದೇವನಾ,ಮೂರೂ ಕಾಲ ಬೇಕ.

ಸುಪ್ರಭಾತವು ನಿನಗೆ ಓ ಮಾತೆ!.

ದೂರದ ಬೆಟ್ಟದ ಮಲೆಯ ಗಿರಿಯಲಿ, ಹರಿತಿರೋ ಆ ನದಿ ಜುಳು ಜುಳು ನಾದ.
ಆಲಿಸು ತಡಸಲು ಭೋರ್ಗರೆ ಮೊರೆತ ಚಿಲಿಪಿಲಿ ಗುಟ್ಟುವ ಹಕ್ಕಿ ಕಲರವ.
ಇರಳು ಕಳೆಸುವ ಆ ನಸುಕಿನ ಜಾವ ತಂಗಾಳಿ ಚಳಿ ಬೀಸಿತು ನೋಡ,
ಮಲಗಿದವರ ಕನಸನು ಸರಿಸುತ್ತಾ,ಹೊಸ ಚೇತನವನ್ನು ನೀಡುತ್ತ
ಇಳೆಯನು ಕಳಿಸುತ ಉಷೆ ತಾ ಬಂದಳು ಹಾರೈಸುತ ಬಾರೋ ರವಿ ಸನಿಹ
ಹೊನ್ನ ಕಿರಣ ರವಿ ಮೂಡಲು ಮೂಡಣ ಹಾಡಿತು ಬೆಡಗು ಬೆಳಗು ತಿಲ್ಲಾಣಾ
ಹಕ್ಕುಕ್ಕೆನ್ನುತ ಹಕ್ಕೀ ಗಾನ, ಕುಹೂ ಕುಹೂ ಕೋಗಿಲ ಮಂಜುಳ ವಾಣಿ
ಕೊಕ್ಕೋ ಕೂಗಿತು ಗೂಡಲಿ ಮುರಗ ಗೂಕ್ಕ್ ಗೂಕ್ಕ್ ಗೂಬೆಯ ನೋಡಿಸುತಾ.
ಚಿವ್ ಚಿವ್ ಗುಟ್ಟಲು ಗುಬ್ಬಿಗಳು,ಕಾಗೆಗಳಂದವು ಕಾ ಕಾ ಕಾ.
ರಾಗ ತಾಳಕೆ ಸ್ವರ ಸೇರಿಸುತ ಬರೆದವು ನೇಸರಗೇ  ಹೊಸ ಭಾಷೆ.
ಸುಪ್ರಭಾತವು ನಿನಗೆ ಓ ಮಾತೆ!.

ಬದುಕು ಕಲಿಯದ ಬದುಕು; ಬದುಕೊಂದೆ ಬದುಕೇ?

ಕಲಿಯೋ ಕಾಲ್ದೊಳು ಕಲೀದೆ ಬಾಳಿ ಬದುಕುವರುಂಟೇ? ಬದುಕು ಕಲಿಯದ ಬದುಕು; ಬದುಕೊಂದೆ ಬದುಕೇ?
ದುಡಿ ಮನವೇ ಮೈ ಮುರಿದು ಮೈ ಸವರಿಕೆ ಯಾಕೇ? ಹರೆಯ ತಿರುಗುವ ಮುನ್ನ ಮೈ ಉಳಿಕೆ ಯಾಕೇ?
ಕುಂಟನಿಗೆ ಕುಂಟು ನೆಪ ವೊಂದೇ ಸಾಕೇ? ಮೂಕನಿಗೆ ಮೂಕತೆಯು ದಾರಿಗಡ್ಡಾಗುವದೇ?
ಬಧಿರನ ಬಧಿರತೆಯು ಕೆಲಸಕ್ಕೆ ಬಾಧಕವೇ? ಕುರುಡಂಗೆ ಕುರುಡುತನ ಕೆಲಸಕ್ಕೆ ಬಾಧಕವೇ?
ಏನೇಲ್ಲ ನಿನಗುಂಟು ಹಿಂಜರಿತ ಯಾಕೇ? ಸೋಗಲಾಡಿ ಸುಬ್ಬ ಈ ಪಟ್ಟ ಬೇಕೇ ?
ಜಗಜೆಟ್ಟಿ ಕೈಕಟ್ಟಿ ಪಟ್ಟಿಹಿಡಿವನೇನು? ಪಂಚರಂಗಿಯ ಮುಂದೆ ಬಜರಂಗನದೇನು?
ಕೋತಿಯಂತೆ ನೀನು ಕುಣಿಯಲು ಬೇಡ,ನೀತಿ ಬಿತ್ತಡಿ ನೀನು ಸಾಗ ಬೇಡ?
ಮುಗಿದ ಕಥೆ ಯದು ನಿನ್ನೆಯದು ನಾಳೆ ಗಿರದಿರಬಹುದು; ಇಂದಿದೆ ಸಿದ್ಧ ನಿನಗಾಗಿ ಇಹುದು;
ಕಳೆದೆ ನಿನ್ನೆಯ ಶೋಕ ಬಿಡು ನಾಳೆ ಚಿಂತೆ,ನಿನ್ನೆ ಮೊನ್ನೆಯ ಜೊತೆಗೆ ಬಿಡು ನಾಳೆ ನಾಳೆ .
ಬಿಡಬ್ಯಾಡ ಎಂದೆಂದೂ ಸಿಗಲಾರದೀ ಇಂದು.    
        

ಭರವಸೆಗಳ ಮಾಲೆ

ಕನಸಿನಾ ಸೆಲೆ ಭ್ರಮೆಯ ಲೀಲೆ ಮನಸಿನ ಅಲೆಮೇಲೆ ಏ..ಏ..ಏ..ಏ..ಭರವಸೆಗಳ ಮಾಲೆ ಜೀವನ.
ಕನಸಲಿ ಚಂದಿರ ಕಂಡ ಚಕೋರಿಗೆ; ಹಾಕಿದ ವರ ಮಾಲೆ ಏ..ಏ..ಏ..ಏ..ಭರವಸೆಗಳ ಮಾಲೆ ಜೀವನ.
ಕಾಣದ ಚಂದಿರ ಹುಣ್ಣಿಮೆ ಬೆಳಕಲಿ,ರಚಿಸಿದ ಹೊಸ ಕವಿತೆ.ಭರವಸೆಗಳ ಮಾಲೆ ಜೀವನ.
ಈ ಪರಿ ಸುಂದರ ಬನದಲಿ ಪಯಣ,ಕನಸಿನಾ ದೋಣಿಯಲಿ.ಜೀವನ ಭರವಸೆಗಳ ಮಾಲೆ.      

ಭಾವನೆಯ ಭಾವಗೀತೆ

ಹಾವ ಭಾವನೆಯಲ್ಲಿ ಭಾವಗೀತೆಯ ಹಾಡಿ, ಕೇಳುಗರ ಎದೆ ತುಂಬಿ; ಹೃದಯ ಜಾಲಾಡಿ.
ತಾಳ ಮದ್ದಳೆಯಲ್ಲಿ ಗಾನ ಮಧುರತೆ ಬೆರೆಸಿ; ನಟರಾಜ ನಾಟ್ತ್ಯಕೆ ಕಿರು ಪದವ ಹೊಮ್ಮಿಸಿ.
ವೇಣು ಲೋಲನ ಮುರಲಿ,ಶ್ರುತಿಗೆ ಶ್ರುತಿಯನು ತುಂಬಿ,ಮಧುವನರಸುತ ರಾಗ ಝೇಂಕಾರ ತುಂಬಿ,
ವೇಣು ವಾದಕೆ ಸಾಟಿ ತಂಬೂರಿಯದ ಮೀಟಿ; ಕನ್ನಡದಿ ಹಾಡಿದೊಡೆ ಕೇಳುಗರ ಸೀಟೀ.
ದಾಸ ದಾಸರ ದಾಸ ಇಂಪಾಗಿ ಹಾಡಿ ದೊಡೆ,ಮಾಮರದ ಕೋಗಿಲೆ ಕುಹೂ ಕುಹೂ ಕೂಗೆ,
ಗಿಣಿರಾಮ ಕುಣಿದ ಹೆಜ್ಜೆ ಉಗುರಲ್ಲಿ;ಕೇಳುಗರು ಕೇಳುತಲೇ ಮೈಮರೆತರಲ್ಲಿ.
ಗಾನ ಗಂಧದ ಸುರಳಿ ಬಿರಿದು ಮನ ವರಳುತಲಿ.          

ಆಸೆಗೆ ಇರಲಿ ಚಿತ್ತದ ನೆಮ್ಮದಿ.

ಭಾವ ಭಕ್ತಿಯ ಮುಂದೆ,ಯುಕ್ತಿ ಶಕ್ತಿಯದೇನು?
ಇಷ್ಠ ದೇವರ ಮುಂದೆ,ಅಷ್ಟ ದೆವರದೇನು?
ಕಾಶಿ ದೇವರ ಮುಂದೆ, ಕಾಸು ಲಿಂಗನದೇನು?
ಆಸೆಗಳ ಕೊಡ ಹೊತ್ತು,ಲೇಸ ಬಯಸಿದರೇನು?
ಇಲ್ಲದಾದ ಹುಡುಕುತ್ತ; ಇದ್ದುದನ ಕಳೆವೇನು?
ದುಡಿಯಬರದ ದುಡುಕಿ ಫಲವೇನು?
ಕಡು ಕಷ್ಟವೋ ಸುಖವೋ,ಇದ್ದುದನನುಭವಿಸಿ;
ಶಾಂತ ಚಿತ್ತದಿ ನೆಮ್ಮದಿಯಾಗು ಮನುಜ.          

 

ಗಡಗಡೆಗೆ ಆಯ್ತು ಬಿಡುಗಡೆ

ನೀ ಭಾವಿ ಭುವಿ ಬಾಯಿ ಒಡಲು ತುಂಬಿದೆ ತಾಯಿ,
ಬಾಯಾರಿಸಿದವರ ; ದಾಹ ತಣಿಸುವೆ ತಾಯಿ.

ನಿನ್ನಲ್ಲಿದೆ ನೀರು,ನನ್ನಲ್ಲಿದೆ ಕೊಡವು.ಆತನಲ್ಲಿದೆ ಹಗ್ಗ ಕುಣಿಕೆ, ಗಡಗಡೆಯು,
ದಣಿದ ಬಾಯಿಗೆ ಬೇಕು,ಕುಡಿಯಲು ನೀರು.ಕೊಡುವಾತನನ ಕೇಳು,

ನೀರು ಸೆಳೆಯಲು ಬೇಕು, ಹಗ್ಗ ಚಕ್ರಕೆ ಹಾಕು;
ಕೊಡದ ಕಂಠಕೆ ಕುಣಿಕೆ, ಹಾಕಿ ಹಗ್ಗವ ಬಿಡಲು;
ಕೊಡವ ತುಂಬಲು;ಜಗ್ಗಲು,ಸಾಧನವು ಗಡಗಡೆಯು;
ಸೇದಿ ಕುಡಿಯಲು ನೀರು,ದಾಹ ಬಿಡುಗಡೆಯು.

ನೀರು ತುಂಬಿಸೋ ಕಾಯ, ಸರಸರೆಯ ಗಡಗಡೆಗೆ; ಕಾಲರಾಯನ ಮಹಿಮೆ; ಮೂಲೆ ಸೇರಿದೆ ಕಡಿಗೆ.
ಗಂಟಿರೋತನಕ ತಿರುಪತಿ ಬಾ  ನಮ್ಮಪ್ಪ; ಗಂಟು ತೀರಿದ ಮ್ಯಾಕೆ ನಡೀ ನೀ ತಿರಕಪ್ಪ.

              

Saturday, 11 December 2010

ನಮ್ಮೂರ ಹಳ್ಳಿ ನಮಗ ಪಾಡಾ,ಬಂದು ನೋಡಿ ನಮ್ಮ ಹಳ್ಳಿ ವಾಡಾ.

ನಮ್ಮೂರ ಹಳ್ಳಿ ನಮಗ ಪಾಡಾ,ಬಂದು ನೋಡಿ ನಮ್ಮ ಹಳ್ಳಿ ವಾಡಾ.
ನೆಮ್ಮದಿಲಿರಾಕ ಹಳ್ಳಿ ಸಾಕು ತಿರುಗಾಟ ಪಟ್ಟಣ ಬಳ್ಳಿ.
ಹೊತ್ತು ಹೋಗಾಕ ಬೇಕು ಹಳ್ಳಿ,ನೆಮ್ಮದಿಗೂ ಇಲ್ಲ ಆ ದಿಳ್ಳಿ.
ಹರಟೆ ಹೊಡಿಯಾಕ ಪುರಸೊತ್ತು ಇಲ್ಲಿ,ಖಾಲಿ ಎಲ್ಲೈತಿ ಹೊತ್ತು ಅಲ್ಲಿ,
ನೋಡ್ತಾರ ಇಲ್ಲಿ ಕಳಬಳ್ಳಿ; ಬಿಡ್ತಾರ ಪಟ್ಟಣ ರೈಲಲ್ಲಿ.
ಹಾಲು ಹೈನ ಬೆಳದ ರೈತ ಜಗ ಜಟ್ಟಿ;ಸುಸ್ತಾದ ಸೇರಿ ಪಟ್ಟಣ ಶೆಟ್ಟಿ.
ಇರಲಿ ಬಿಡಲೀ ಹಳ್ಳಿ ಬಾಳ ಪಾಡ, ದುಡ್ಡಿಲ್ಲಾಂದ್ರೆ ಪಟ್ಟಣ ಸುಡುಗಾಡ.

ನಾ ಬರೆದ ನಾ ಕವಿತೆ

ನಿನ್ನ ಕಾಗದ ಬರದೇ ಬರದೇನೇ  ನಾನೀ ಕವಿತೆ. ಬಯಸಿ ಬರದೇ ಮನದಿ ಗಾನ ಕೋಗಿಲೆ ವರತೆ    
ನಾ ಬರೆದ ನಾ ಕವಿತೆ; ನೀ ಹಾಡಿದೆ ಕವಿತೆ; ಬರೇ ಬರಹ ವಲ್ಲೇ ಇದು ಬಾಳ ಸವಿ ಗೀತೆ.
ನಾ ಬರೆದ ನಾ ಕವಿತೆ; ನೀ ಹಾಡಿದೆ ಕವಿತೆ.
ಆಲಾಪನೆ ಯು ಇಲ್ಲಾ ಹಾವ ಭಾವದೇ ಎಲ್ಲ, ಸ್ನೇಹ ಪಲ್ಲವಿ ಇಲ್ಲಿ ಸವಿ ಕಂಪ ಶ್ರವಣಾ.
ಸಹಜತೆಯ ಸವಿಗಾನ ಸಂಪಾಗಿದೆ ಪಯಣಾ.
ತುಂಬಿ ತುಂಬಿಗೆ  ದುಂಬಿ ಜೇನು ಹೀರುತ್ತ,
ದುಂಬಿ ಗುಂಗಿಯ ಮತ್ತು ಝೇಂಕಾರ ಗೈಯುತ್ತ; ಎಗ್ಗಿಲ್ಲದೇ ನುಗ್ಗಿ ಬಂಡುತ್ತ ಮಧುವ.
ಈ ಪರಿಯ ಗಾನ ಪಂಚಮ ರಾಗ ಕವನ.
ಹಾಯಾದ ಈ ಹಾಡು ನೀ ಹಾಡುತಿರಲು,ಜನ ಮೆಚ್ಚಿ ಮನತುಂಬಿ ತಲೆದೂಗು ತಿರಲು
ಕೇಳುಗರು ಚಪ್ಪಾಳೆ ತಟ್ಟು ತಿರಲು, ಶಿರ ಬಾಗಿ ವಂದಿಸುತೆ;
ನೀ ಮುಗಿಸಿದೆ ಈ ಹಾಡು. ಈ ಪರಿಯ ಗಾನ ಪಂಚಮ ರಾಗ ಕವನ.

                

ಸಹಜವಿದು ಈ ಬಾಳು ಬಾಳ ಸವಿ ಜೇನು

ಸಹಜವಿದು ಈ ಬಾಳು ಬಾಳ ಸವಿ ಜೇನು, ಈಸು ಬಾಳಲಿ ನೀನು ಕೊನೆತನಕ ಬದುಕು.
ಭಾವಸಾಗರದಲ್ಲಿ ದಿನನಿತ್ತ್ಯ ಏರಿಳಿತ,ಬಂಡೆಕಲ್ಲಿನ ಬಾಳು ಹಿಗ್ಗಿಲ್ಲ ಕುಗ್ಗಿಲ್ಲ.
ರಾಹು ಕೇತು ಬಡಿತ, ಆ ಧೂಮ ಕೇತು; ಭಾವ ಸಾಗರದಲ್ಲಿ ಅಲ್ಲೋಲ ಕಲ್ಲೋಲ,
ಕಲಿಕಾಲವಿದು ಎಲ್ಲ ಶನಿಚಕ್ರ ಮಹಿಮೆ.
ಬಂಧು ಬಳಗಕ್ಕಿಲ್ಲಾ ಇರಲಿ ಇರದಿರಲಿ; ನಿನಗಾಗಿ ನೀನು ಮುಂದಾಗಿ ಸಾಗು.
ಅಂಜದಿರು ಅಳುಕದಿರು ಏನಿಲ್ಲ ಕುಂದು; ಧ್ರುವತಾರೆ ಎಡೆ ನೋಡು ಸೋಲಿಲ್ಲ ಗೆಲವು
ಈಸು ಜೈಸು.
ಈ ಬಾಳು ಸತ್ತ್ಯ, ಜೀವಕದು ನಿತ್ತ್ಯ ; ಒಡಲಾಳ ಓಡನಾಟ, ಸ್ನೇಹ ಸೌಭಾಗ್ಯ.
ಜೀವನಾಡಿ ಮಿಡಿತ, ಸಹಜ ಏರಿಳಿತ, ಸಹಜತೆಯ ಸವಿ ಬಾಳ ಕಲೆತ ಸಂಜೀವ,

Wednesday, 1 December 2010

ಬರ್ತಾವ ಕಾಲ

ಬರ್ತಾವ ಕಾಲ ತರ್ತಾವ ನೋಡು; ದಿನಕೊಂದು ಹೊಸತು ಹೊಸೆದು
ಹಂಗಿತ್ತು ವೊಮ್ಮೆ ಹೊಂದುತ್ತ ಬದಲು ತಿಳಿಯುತ್ತ ಹುಡುಕಿ ಹೊಸತು                       II 1 II
ಹತ್ತಲೆಯ-ಹಿಂದೆ, ಹಳ್ಳಿಊರ-ಒಳಗೆ; ರಹದಾರಿ ಇರಲೇ-ಇಲ್ಲ,

ಬರಿಗಾಲ-ನಡಿಗೆ,ಸಂಜೇಯಾ-ಒಳಗೆ
ತಿರುಗಾಟ-ಮುಗಿಯುತಿತ್ತ ಬದುಕ್ಹಂಗ-ಸಾಗುತಿತ್ತ.                                      II 2 II

ಅರಸಂಗೆ ಬೇಕು,ಆನೆ-ಅಂಬಾರಿ;ಒಂಟೆ-ಕುದುರೆ-ಸವಾರಿ.
ಅಗಸಂಗೆ ಸಾಕು -ಕತ್ತೆ ಸವಾರಿ; ಇತರರಿಗೆ ಭಾರಿ ದುಬಾರಿ,
ಚಕ್ಕಡಿ-ಕೊಲ್ಲಾರಿ-ಗಾಡಿ.ಬದುಕದು-ಮುಂದಕ-ಸಾಗಿತ್ತ.                        II 3 II

ಜನಕದು-ನಿತ್ಯದ-ಒಡನಾಡಿ, ಚಕ್ಕಡಿ-ಎಕ್ಕಾ ಎತ್ತಿನ-ಗಾಡಿ,
ಟಾಂಗಾ-ಢಮಣಿ-ಸಾರೋಟು; ಮಾಡಲು-ಬೇಕು-ವಹಿವಾಟು.
ರಸ್ತೆಲಿ-ಸಾಗಲು ರಥ- ಬಂಡೆ; ಒಂಟೆಯು ಮರಳು ನಾಡಿಗೆ,
ಈಗೆಲ್ಲ ಬರಿ ಹಾಡಿಗೆ; ಬದುಕದು-ಮುಂದಕ-ಸಾಗಿತ್ತ.                        II 4 II

ಹಳಿ-ಮೇಲೆ ಉಗಿಬಂಡೆ; ಈಗಿಲ್ಲಾ ಹಳೆಬಂಡೆ,
ನೀರ-ಮ್ಯಾಗೆ,ಪಯಣಕ್ಕೆಬೇಕು, ದೋಣಿ-ಹಡಗು ಬಂದರಿಗೆ,
ರಸ್ತೆ ಮ್ಯಾಗೆ ಹೊಗಾಕ್ ಸೈಕಲ್ಲು\ಮೊಪೆಡ್ಡು;
ಹೊಡಿತಾರ್ ಸ್ಕೂಟರ್\ಬೈಕು-ಕಾರು;ಸರಕು;
ಸಾಗಸಾಕ್ -ಟ್ರಕ್ಕು-ಮೋಟಾರು, ಊರಿಂದೂರಿಗೆ ಹೊರಟಾರು; ಬದುಕದು-ಮುಂದಕ-ಸಾಗಿತ್ತ.            II 5 II


ಉಗಿಬಂಡೆ ಈಗ (ಹೊಗೆ)ಡೀಜೈಲು ರೈಲು; ಎಲ್ಲಿಗೆ ಬೇಕು ಬಿಡು ರೈಲು,
ಗಗನದಿ ಹಾರುವ  ವಿಮಾನು-ಜೆಟ್ಟು; ಬಂದಿದೆ ಈಗ ರಾಕೆಟ್ಟು
ನಿಲ್ಲಲು ಅದಕೆ ಸೆಟಲೈಟು; ಗುದಿಸಲರಮನೆ  ಹೋಗೀಗ
ಏನೂ ಇಲ್ಲ ಪಿಕಲಾಟು; ಬದುಕದು-ಮುಂದಕ-ಸಾಗಿತ್ತ.             II 6 II


ಆಗೀ ಸಾಲುಮನೆ-ಅಪಾರ್ಟ್-ಮೆಂಟು; ರಾಜಾಧಿಪತಿ\ಪ್ರಜಾಪತಿ ಈಗ ರಾಷ್ಟ್ರಪತಿ
ಎಂಎಲ್ಲೇ -ಎಂಪಿಮಂತ್ರಿ-ತಂತ್ರಿ , ಬದುಕದು-ಮುಂದಕ-ಸಾಗಿತ್ತ.              II 7 II

ಗಜ-ತುರಗ-ಕಾಲಾಳು ಕಾಲ ಬದಲಾತು; ಈಗ ಇನ್ಫಂಟ್ರಿ-ಎರ್ಫೊರ್ಸು-ನೇವ್ಹಲ್ಲು;
ಖಡ್ಗ\ ತುಪಾಖಿ-ತೊಫು;ಹಳೆದಾತು ರೈಫಲ್ಲು;ಈಗ ಏಕೇ-ರೈಫಲ್ಲು.
ಹೋತು ಮದ್ದು-ಗುಂಡು ಬಂತು ಅಟಾಂಬಾಂಬು,
ಅಸ್ಟೇಅಲ್ಲ ಸ್ಕಡ್ಡು ಮಿಸೈಲು; ವೈರಿಗಳು ಬರಿ ಶತ್ರುಗಳಲ್ಲ ನಕ್ಸಲೈಟು ಟೆರರಿಸ್ಟು.
ಫೋನು ತಂತಿ,ಹಳೆದಾತು ಮೋಬೈಲು; ನೋಡಲು ಮರಿಬೇಡ ವೆಬ್ ಸೈಟು ಇಂಟರ್ನೆಟ್ಟು. 
ಬದುಕದು-ಮುಂದಕ-ಸಾಗಿತ್ತ.             II 8 II


ವೀಣಾ ಹಾರ್ಮೋನಿಯಮ್-ತಬಲಾ  ಈಗ ಗಿಟಾರು ಟಾಂಗು
ಭರತ ನಾಟ್ಯ ಇಲ್ಲೀಗ ಬ್ರೇಕು ದ್ಯಾನ್ಸು; ಭಗವಂತ ಆದ ಇಲ್ಲಿ ಬರಿ ಭಾಗುವಾನ
ಸೇವಕ ಆದ ಬರೀ ಜವಾನ ; ಸಾಕಪ್ಪ ಸಾಕು ಕಾಲಾಯ ತಸ್ಮ್ಯೇ ನಮಃ  ಗುರವೇ ನಮಃ
ಅಯ್ಯೋ ಈಗ ಅದೂ ಉಲ್ಟಾ ಪಲ್ಟಾ; ಕಾಲೇನ್-ಮಹಾ, ಗುರು ವೆನ್-ಮಹಾ,
ಇದಕೇ- ನಂತೀ ಸಾಕೇ ಗುರು ; ಬದುಕದು-ಮುಂದಕ-ಸಾಗಿತ್ತ. II 9 II

my first blog(ಅನಂಗ-ರಂಗ ಕಾಮೋದ)

ಮನ್ಮಥ ರಾಜನು,ರಾಗ ರತಿಯ  
ಬಿಟ್ಟನು ಸುಮ-ಬಾಣ.(1)
ಹೊರಟಿತು ಭೃಂಗದ ಸುಮಗಾನ;
ಸೊಂಕಲು ದೇಹ;ಭಂಗವು ಧ್ಯಾನ.(2)
ಕೆರಳಿಸಿ ಧ್ಯಾನ; ಶಿವ-ಯೋಗೆಶ್ವರನ;
ರೋಮ ರೋಮ ಕೆರಳಿಸಿ ಓಂಕಾರ.(3) 
ಶಿವ ತಂಡವದ -ಡಮರು ನಿನಾದ.
ನಟವರ ಪಂಚಾನನ ತ್ರಿನೇತ್ರ.(4)
ನೋಡಲು ಅಣು-ರೇಣು-ತೃಣ -ಕಾಷ್ಟ;
ಕ್ಷಣದೊಳು ಕಾಮ-ದಹನ; ರತಿ-ಮನ್ಮಥ.(5)
ಭಳಿರೇ-ಭಳಿರೇ ಉಘೆ ನಾದ ಬ್ರಹ್ಮ .
ಪಾಪಿ-ಚಿರಾಯು ಅನಂಗ-ರಂಗ ಕಾಮೋದ.(6)