Sunday 12 December 2010

ಗಡಗಡೆಗೆ ಆಯ್ತು ಬಿಡುಗಡೆ

ನೀ ಭಾವಿ ಭುವಿ ಬಾಯಿ ಒಡಲು ತುಂಬಿದೆ ತಾಯಿ,
ಬಾಯಾರಿಸಿದವರ ; ದಾಹ ತಣಿಸುವೆ ತಾಯಿ.

ನಿನ್ನಲ್ಲಿದೆ ನೀರು,ನನ್ನಲ್ಲಿದೆ ಕೊಡವು.ಆತನಲ್ಲಿದೆ ಹಗ್ಗ ಕುಣಿಕೆ, ಗಡಗಡೆಯು,
ದಣಿದ ಬಾಯಿಗೆ ಬೇಕು,ಕುಡಿಯಲು ನೀರು.ಕೊಡುವಾತನನ ಕೇಳು,

ನೀರು ಸೆಳೆಯಲು ಬೇಕು, ಹಗ್ಗ ಚಕ್ರಕೆ ಹಾಕು;
ಕೊಡದ ಕಂಠಕೆ ಕುಣಿಕೆ, ಹಾಕಿ ಹಗ್ಗವ ಬಿಡಲು;
ಕೊಡವ ತುಂಬಲು;ಜಗ್ಗಲು,ಸಾಧನವು ಗಡಗಡೆಯು;
ಸೇದಿ ಕುಡಿಯಲು ನೀರು,ದಾಹ ಬಿಡುಗಡೆಯು.

ನೀರು ತುಂಬಿಸೋ ಕಾಯ, ಸರಸರೆಯ ಗಡಗಡೆಗೆ; ಕಾಲರಾಯನ ಮಹಿಮೆ; ಮೂಲೆ ಸೇರಿದೆ ಕಡಿಗೆ.
ಗಂಟಿರೋತನಕ ತಿರುಪತಿ ಬಾ  ನಮ್ಮಪ್ಪ; ಗಂಟು ತೀರಿದ ಮ್ಯಾಕೆ ನಡೀ ನೀ ತಿರಕಪ್ಪ.

              

No comments:

Post a Comment