Sunday 12 December 2010

ಕನಸಿನಲ್ಲಿನ ಕನಸು;ಕನಸಲ್ಲ ನನಸು.

ನೋಡು ನೋಡುತ ಮಾಡ,ಬಿಳಿ ಮೋಡ ಕರಿಮೋಡ;
ತಂಪುಗಾಳಿಗೆ ಸೊಗಡ;ಹನಿಯೊಡೆಯಿತು,ನೋಡ.|| ಪಲ್ಲ ||
ಬಾನಂಗಳದಿ ನೋಡಿ; ಆಸೆ ಚಿಗುರಿತು ಮೂಡಿ.
ಎಲ್ಲೆಲ್ಲೂ ಹಸಿರು ಪೈರು,ಈ ಜೀವನದ ಉಸಿರು.
ನೆನೆ ನೆನೆದು ಮನದಾಗ,ಮನದಾಳ ತುಡಿದಾಗ;
ಮಳೆಯಲ್ಲಿ ನೆನೆದಾಗ, ಹಾಯ್ ಎಂದ ಮನಸು. || ೧ ||
ಮಳೆ ಎಲ್ಲಿ ಚೆಳಿ ಎಲ್ಲಿ ? ಮೈಮರೆತ ರಸಿಕತೆಯು ಕನಸಿನಾ ಮೋಡಿ.
ಆಸೆ ಚಿಗುರಿತು ಮೂಡೀ,ಮನಕೆ ಸ್ಪಂದನೆ ನೀಡಿ;
ಎಲ್ಲೋ ಕಂಡಿತು ಮನಸು; ಆ ಮುಗ್ಧ ಹೊಂಗನಸು.
ಕನಸು ಕನಸಿನಲಿ ಕನಸು; ಎಲ್ಲೋ ಜಾರಿತು ಮನಸು.
ಮರೆಯಾಗಲದು ಮನಸು,ಬರಿದು ಕನಸೋ ಮನಸು. || 2 ||
ನಿನ್ನೆ ನಿನ್ನೆಯ ನೆನಪು,ನಾಳೆ ನಾಳೆಗೆ ಇರಲು;
ಹೋಗಲಹುದೇ ಮನಸು? ನೆನಪಾಗಲದು ಕನಸು.
ಮರೆತು ಹೋದರೆ ಮನಸು,ಬರಿದು ಕನಸೋ ಮನಸು.
ಬಾರದದು ಇನ್ನೆಲ್ಲಿ;ಬರೀದೆ ಕನವರಿಸು.                 || 3 ||
ಬಿಡಿಗಾಸು ಕೂಡಿಟ್ಟ ಕೊಪ್ಪರಿಗೆ ಹೊನ್ನು;
ಅರಮನೆಯ ಕಟ್ಟಿದರು, ಸುಖವಾಸಕೆಂದು.
ಬಂಧು ಬಳಗವ ಕೂಡಿ, ಹಾಯಾಗಿ ತಿಂದುಂಡು.
ರಾಜಭೋಗವೇ ರಾಮರಾಜ್ಯ ವು ಎಂದು;
ಇದ್ದುದನು ಅಡವಿಟ್ಟು, ಸಾಲವನು ಮಾಡೀ;
ಹಬ್ಬ ಹರಿದಿನ ನೋಡೀ; ಹೇಗೆ ಬಿಡುವದು ಹೇಳೀ,
ಕೊಟ್ಟವನು ಕೋಡಂಗಿ; ಇಸುಗೊಂಡ ಈರಭದ್ರ.
ಓಟ್ಟಾರೆ ವೈಭೋಗ; ಛಿದ್ರ ಛಿದ್ರ.                        || 4 ||
ಕೂತು ತಿಂದರು,ಕುಡಿಕೆ ತಿರಿಸುತ ಹೊನ್ನು;
ಹಾಯಾಗಿ ಸವಿಯುತ್ತಾ ವೈಭೋಗ ಜಾತ್ರೆ.
ತಿಂದುಂಡು ತೀರಿದರು,ಇಹ ಪರದ ಯಾತ್ರೆ;
ಬಿಟ್ಟು ಹೋದರು, ಮಿಕ್ಕಿ ಅಳಿದುಳಿದ ಅಲ್ಲೇ;
ಹೊರಲಾರದ ಮುರಕು ಖಾಲಿ ಖಾಲಿ ಪಾತ್ರೆ.
ಹರಿಯ ಪಾಲಿಗೆ ಹರಕೆ ಬರಿ ಸ್ವಸ್ಥಿ ಭಾಗ್ಯ.
ರಾಮಜಾನಕಿ ಗದುವೇ ಶುಷ್ಕ ಸೌಭಾಗ್ಯ.                  || 5 ||
ಆರದೋ ಅರಮನೆಯು; ಅಲ್ಲ ನಿಮ್ಮದು ಹೌದು.
ಅಳಿಸುವಿರೋ ,ಗಳಿಸುವಿರೋ? ಬೆಳಿಸಿ ಸುಖಿಸುವಿರೋ?
ರಾಮ ಜಾನಕಿ ಬಿಟ್ಟ ;ಕಥೆಯ ಸಾಮ್ರಾಜ್ಯ .               || 6 ||



No comments:

Post a Comment