Sunday 12 December 2010

ನಡೆಯ ಲಾರದೆ ನಿಂತೇ ಏಸೊಂದ ಕೊಡುವೆ.

ದುಡಿ ದುಡಿದು ಬಸವಳಿದು, ನನ್ನಷ್ಟಕೆ ನಾನು;
ಬೆಂಡೆದ್ದು ಕುಳಿತು,ಬಿಡುತಾ ಏದುಸಿರು.
ಕರಣಿ ಬೆಲ್ಲವ ತಿಂದು, ಬೊಗಸೆ ನೀರನು ಕುಡಿದು;
ಸುಸ್ತಿನಲಿ,ಸಾವರಸಿ; ದಣಿವಾರಿಸುತಿರಲು,
ಚಾಪೆ ಕರೆಯಿತು, ಒರಗು; ಹಾಯಾಗಿ ಮಲಗು.
ಬೇಸಿಗೆಯ ಉರಿಬಿಸಿಲು,ಧರೆಯ ಸುಡುತಿಹುದು.
ಸಾಗರದ ಒಣ ಗಾಳಿ,ಬರಿದು ಬರಿ ಬಿಸಿಗಾಳಿ,
ಮನಕೆ ನೆಮ್ಮದಿ ಇಲ್ಲ; ಬಿಸಿಲು ತಂಪಿಗೆ ಸಲ್ಲ.
ಜೀವ ಉಸಿರಿಡುವಾಗ,ಧರೆಗೆ ನೆರಳನು ಕೊಡುವ;
ಗಿರಿಧಾಮ ಸಿರಿಧಮ, ವನಸಿರಿಯನೆ ;ನೋಡು.
ಗಿರಿಕಂದರದಿ ನಿಂತು; ಗಗನ ದೆತ್ತರ ಬೆಳೆದು,
ಜಗವ ಕಾಯುವ ನಿಂತ; ಅಮೃತ ಧಾರೆ ಅವಳು.
ಜೀವರಾಶಿಗೆ ನಿತ್ತ್ಯ, ಹಸಿದೊಡಲು ತುಂಬಿಸುವ;
ಕನಿಕರದ ಖಣಿಯು,ಆ ಜ್ನ್ಯಾನಿ ಸುಜ್ನ್ಯಾನಿ.
ಆಕಾಶ ಕಾಯೇ, ಎದೆ ಎತ್ತಿ ನಿಂತಿರುವ;
ಭುವಿತಾಯಿ ಧನ್ಯೆ ; ಸಂಜೀವಿನಿ ಕಾಮಧೇನು.
   
        

No comments:

Post a Comment