Sunday 12 December 2010

ನಮ್ಮ ಹಳ್ಳಿಯ ಮಳೆ ಗಾಲ

ನಮ್ಮ ಹಳ್ಳಿಗೆ ಬರಲೀ ಮಳೆಗಾಲ ಏಲ್ಲರಿಗೂ ಹರುಷ ಶುಭಕಾಲ.
ಸೆಳುಕ ಮಿಂಚೊಂದ ಗುಡುಗುಡಿಗಿತ್ತ; ಎಲ್ಲೆಲ್ಲೂ  ಮಳೆ ಸುರಿದಿತ್ತ,
ಎಲ್ಲೆಲ್ಲೂ ಹರುಷ ,ಹೊಸಾ ಹುರುಪು, ಅವರವರ ಕೆಲಸ ಅಲ್ಲೇ ನೋಡ,

ಮಳೆಗಾಲ ಬಂತಂದ್ರ ನೋಡ ,ರಸ್ತೆ ತಿರುಗಾಟಾ ಯಾತಕ್ಕೂ ಬ್ಯಾಡ್ರೀ.
ಎಲ್ಲೆಲ್ಲೂ ರಸ್ತ್ತೆ ಕಿಚಿ ಕಿಚೀ, ಇಂಬಳ ಹೀರ್ತಾವ ರಕುತಾ ಬಾಚೀ
ಎಲ್ಲೆಲ್ಲೂ ಹಸಿರಿನಾ ಉಸಿರು, ಮರೆತೀರೀ ಜಾರಿಬಿದ್ರೆ ಕೆಸರು.
ಹಳ್ಳಿ ಕೆರೆ ಕೊತ್ತಳಾ ತುಂಬಿ,ಕಪ್ಪೆ ಹಾಕ್ತಾವ ಖುಷಿ ವಟ್ರಾ ವಟರು.
ದನಾ ಮೇಯ್ತಾವ ಕೇರಿ ತಲಿಮ್ಯಾಗ, ಕುರಬ್ರು ಹಾಡ್ತಾರ ಕುರಿ ಹಿಂಡಿನ್ಯಾಗ.

ಸುಂಟರಗಾಳಿ ಬಿಸೀ ಒಮ್ಮಿಟ್ಟ; ಕಾರ್ಮೋಡ ಸುತ್ತ ತಲಿಮ್ಯಾಗ;
ಸೆಳುಕ ಮಿಂಚೊಂದ ಗುಡುಗುಡಿಗಿತ್ತ; ಎಲ್ಲೆಲ್ಲೂ  ಮಳೆ ಸುರಿದಿತ್ತ.
ಹರಗ್ಯಾರ ಹೊಲವ ಬಿತ್ತ್ಯಾರ; ಕಾಳ ಹುಟ್ಟ್ಯಾವ, ಸಸಿಯ ನೋಡ,   
ರೈತ ಹೊಂಟಾರ, ಬುತ್ತಿ  ಕಟ ಗೊಂಡ; ಗೊಂಗಡಿ ಹೊತ್ತಾರ  ನಾಟಿ ಮಾಡಾಕ;
ಕುಡಚಿ ಹಿಡಿದಾರ ಕಳೆ ಕೀಳಾಕ,ಬರ್ತಾರ ಮನೆಗೆ  ಸಂಜೆ ಮ್ಯಾಕ,
ಹಣ್ಣು ತರಕಾರಿ ಮನೆಗೆ ತರ್ತಾರ. ಹಾಲು ಹೈನ ಮನ್ಯಾಗ ಕರೆತಾರ.

ಜನಾ ಕರಿತಾರೋ ಬಾರೋ ಮಳೆ ರಾಯಾ. ಖುಷಿಯಾಗ ತೈತೆ ಮಹರಾಯಾ.
ಮಳೆ ಯಾಗ ಬೆಳೆಯ ಬೆಳಿತಾನ; ಚಳಿ ಬಿಸಿಲಾಗ, ಕಾಳು ಒಕ್ಕುತಾನ.
ಹಳ್ಳ್ಯಾಗ ಇರಲಿ ಮಳೆಗಾಲ , ಏಲ್ಲರಿಗೂ ಕೊಡಲಿ ಶುಭ ಕಾಲ.

ಜನಕ ನಡಿಯಾಕ ಕಾಲೆರಡೂ ಬೇಕ;ಮೈ ಮುರಿದು ಕೆಲಸ ಮಾಡ ಬೇಕ,
ಬೆಳೆ ಬೆಳಿಯಾಕ,ಜನ ಬದುಕಾಕ;ಮಾದೇವನಾ,ಮೂರೂ ಕಾಲ ಬೇಕ.

No comments:

Post a Comment