Sunday 12 December 2010

ನಮ್ಮೂರ ಜಾತ್ರೆ

ಜಾತ್ರೆಯು ಜೋರು ಬೆಳ್ಳಿಯ ತೇರು.ಅದರೊಳಗ ಕುಂತಾಳ ಚೌಡವ್ವ ಜೋರು..
ಊರ ಹಿರಿಯರು ಬಂದ್ರು,ನಾರಿಯರು ಸೇರ್ಯಾರು.ಧೂಪ ದೀಪ ಹಚ್ಚಿ,
ತುಳಸಿ ಪುಷ್ಪಾರ್ಚನೆ  ಕುಂಕು ಮಾರ್ಚನೆ ಪೂಜೆ ಮಾಡಿ; ಆರತಿಯ ನೆತ್ತ್ಯಾರು,
ಪ್ರಿತೀಲೇ ಹೂ ಹಣ್ಣು ಕಾಯಿ ಉಡಿಯಾ ತುಂಬಿದರು.ಹೂ ಪನಿವಾರ ಮಾಡಿದರು.
ಶುರುವಾಯ್ತು ಮೆರವಣಿಗೆ ದಿಬ್ಬಣ ಜೋರು. ಹೊರಟರು ಜನರು ಏಳಿಯಾಕ ತೇರು,
ಹಲಗೆಯ ಬಡಿತ ಡೊಳ್ಳಿನ ಕುಣಿತ,ತಾಳ ಮದ್ದಳೆ ಕಂಸಾಳೆ ಕುಣಿತ,
ತಟ್ಟಿರಾಯ~ನೋಡಲ್ಲಿ,ಕೊಲ್ಮೇಲೆ ಚೋಟು~ನೋಡಿಲ್ಲಿ,ಉಧೋ ಉಧೋ ಅಗೋ ಅಲ್ಲಿ,
ಜೈ ಜೈ ಕಾರ ಎಲ್ಲೆಲ್ಲಿ ಹೊರಟಿತು ತೇರು ಭರದಲ್ಲಿ,
ಹರಕೆ ಹೊತ್ತವರು ಉತ್ತತ್ತಿ ಬಿರುವರು,ಬಾಳೆಹಣ್ಣು ಎಸೆಯುವರು.
ಹಳ್ಳಿ ಜಾತ್ರೆಗೆ ಬಂದವರು ಬೇಕಾದ ಸಾಮಾನು ಕೊಳ್ಳುವರು,
ಆಟಿಗೆ ಸಾಮಾನು ಮಕ್ಕಳಿಗೆ ಬೇಕು,ಆಭರಣ ಬೇಕೇ ,ಪಾತ್ರೆ ಪಡಗಾ,ದನಕರು,
ದಿನಸಿ ಬಟ್ಟೆ ಏನೇಲ್ಲ ಕೊಳ್ಳಿರಿ ಬೇಕಾದ್ದು ನಿಮಗೆಲ್ಲ ,ಮೋಜು ಮಸ್ತಿ,ಸವಾಲು,
ಬೆಂಡು,ಬತ್ತಾಸ್ ,ಮಿಠಾಯಿ ಹಲ್ವಾ ,ನಾಟಕ ,ಸಿನಿಮಾ,ಸರ್ಕುಸ್, ಬಂದೈತೆ.
ದೊಂಬರಾಟ ನಡದೈತೆ.ಈ ಪರಿ ಜಾತ್ರೆ ಸಾಗೈತೆ.
ಬನ್ನಿ ಬನ್ನಿ ನೀವು ನೋಡೀ  ಓಟ್ಟರೆ ಮಸ್ತ ಮಜಾ ಮಾಡೀ......
ಜಾತ್ರೆಯು ಜೋರು; ಬೆಳ್ಳಿಯಾ ತೇರು.
ಹಲಿಗೆ ಮಜಲು ಬಡಿತ; ಡೊಳ್ಳಿನ ಕುಣಿತ.
ತಾಳ ಮದ್ದಳೆ ಬಡಿತ; ಕಂಸಾಳೆ ಕುಣಿತ.
ಆ ಕಡೆ ಢಬ್ಬು ತಟ್ಟಿರಾಯ; ಈ ಕಡೆ ಕೊಳ ಚೋಟುರಾಯ.
ಆಟ ಹಾಡು, ಕುಣಿತ ದಲ್ಲಿ; ವೈಭೋಗದ ಲಾ .
ಎಲ್ಲೆಲ್ಲೂ ರಂಗು, ಹಾಡಿನ ಗುಂಗು.
ಎಲ್ಲೆಲ್ಲೂ ಹುರುಪು; ಜಾತ್ರೆಯ ಸೋಗಸು.  
ಝಗ ಝಗ ಬೆಳಕಲ್ಲಿ, ಕಾಸಿರೆ ಕೈಲಾಸ.
ಎಲ್ಲೆಲ್ಲೂ ಮಿಂಚಿತ್ತು; ಹಾಸ್ಸ್ಯಉಲ್ಹಾಸ.
ಎಲ್ಲೆಲ್ಲೂ ಜೂಜು; ಹಾಡಿನ ಮೋಜು.  
ಆಕಳಿಕೆ ತೂಕಡಿಕೆ, ಬಾಯಾಕಳಿಸುತ್ತಾ;
ಕೂತಲ್ಲೇ ಮೈ ಮನಸು; ನಿದ್ದೆ ಮಾಡುತ್ತಾ.
ಜಗ ಮರೆಸಿ ಬಿಟ್ಟಿತ್ತು; ರಾತ್ರಿ ಗಮ್ಮತ್ತು.
ನಿದ್ದೆ ಗುಂಗಿನಲ್ಲಿ ಮಬ್ಬು; ಗೊರಕೆ ಹೊಡಿಯ ಹತ್ತಿತು.
ಗೊರಕೆಯ ಜೋಂಪು; ಹಾಡಿನ ಕಂಪು,
ತಂಪು ಗಾಳಿ ಬೀಸೆ; ನಿದ್ದೆ ಹಾರೀ ಹೋಗಿ ಬಿಟ್ಟಿತು.
ಮಬ್ಬಿನಲ್ಲಿ ಮನಸು; ವಟ ವಟ ಗುಟ್ಟಿತು.
ಕನಸಿನಾ ಗುಂಗು; ಹೊರಟು ಹೋಗಿತ್ತು.
ಕುಡುಕನ ಮತ್ತು, ಇಳಿದು ಹೋಗಿತ್ತು,
ಸಾಕಪ್ಪ ಸಾಕು, ಕುಡುಕನ ಬಾಳು;
ಒಂದಿನಾ ತರತೈತಿ; ಜೀವಕ್ಕಗೋಳು.

No comments:

Post a Comment