Sunday 12 December 2010

ಸುಪ್ರಭಾತವು ನಿನಗೆ ಓ ಮಾತೆ!.

ದೂರದ ಬೆಟ್ಟದ ಮಲೆಯ ಗಿರಿಯಲಿ, ಹರಿತಿರೋ ಆ ನದಿ ಜುಳು ಜುಳು ನಾದ.
ಆಲಿಸು ತಡಸಲು ಭೋರ್ಗರೆ ಮೊರೆತ ಚಿಲಿಪಿಲಿ ಗುಟ್ಟುವ ಹಕ್ಕಿ ಕಲರವ.
ಇರಳು ಕಳೆಸುವ ಆ ನಸುಕಿನ ಜಾವ ತಂಗಾಳಿ ಚಳಿ ಬೀಸಿತು ನೋಡ,
ಮಲಗಿದವರ ಕನಸನು ಸರಿಸುತ್ತಾ,ಹೊಸ ಚೇತನವನ್ನು ನೀಡುತ್ತ
ಇಳೆಯನು ಕಳಿಸುತ ಉಷೆ ತಾ ಬಂದಳು ಹಾರೈಸುತ ಬಾರೋ ರವಿ ಸನಿಹ
ಹೊನ್ನ ಕಿರಣ ರವಿ ಮೂಡಲು ಮೂಡಣ ಹಾಡಿತು ಬೆಡಗು ಬೆಳಗು ತಿಲ್ಲಾಣಾ
ಹಕ್ಕುಕ್ಕೆನ್ನುತ ಹಕ್ಕೀ ಗಾನ, ಕುಹೂ ಕುಹೂ ಕೋಗಿಲ ಮಂಜುಳ ವಾಣಿ
ಕೊಕ್ಕೋ ಕೂಗಿತು ಗೂಡಲಿ ಮುರಗ ಗೂಕ್ಕ್ ಗೂಕ್ಕ್ ಗೂಬೆಯ ನೋಡಿಸುತಾ.
ಚಿವ್ ಚಿವ್ ಗುಟ್ಟಲು ಗುಬ್ಬಿಗಳು,ಕಾಗೆಗಳಂದವು ಕಾ ಕಾ ಕಾ.
ರಾಗ ತಾಳಕೆ ಸ್ವರ ಸೇರಿಸುತ ಬರೆದವು ನೇಸರಗೇ  ಹೊಸ ಭಾಷೆ.
ಸುಪ್ರಭಾತವು ನಿನಗೆ ಓ ಮಾತೆ!.

No comments:

Post a Comment