Saturday 22 January 2011

ಹಿರಿಯರು ಹಾಕಿದ ರಹದಾರಿ,

ಹಿರಿಯರು ಹಾಕಿದ ರಹದಾರಿ,ಅದು ಅನುಭವ ಕಲಿಸಿದ ಸರಿ ದಾರಿ,
ಸುಖವೇ ಇರಲೀ ದುಃಖ ವೇ ಬರಲೀ,ನೆಮ್ಮದಿ ಕೊಡುವ ಧಾರಾಳಿ ,
ದೈನಿಕ ಬದುಕನು ಹಸನಾಗಿ ಸಾಗಲು ಕೈವಾರಿ,  

Monday 17 January 2011

ಕಂದನು ಅಳಲು ತಾಯಿಯ ಒಡಲು;

ಕಂದನು ಅಳಲು ತಾಯಿಯ ಒಡಲು; ಮಗುವನು ಮಡಿಲಲಿ ಕೊಳ್ಳುವದು.
ಅಳುವಕಂದನ ನಗಿಸುವದು, ನಗುವ ಕಂದನ ಕುಣಿಸುವದು.
ಮಗುವದು ಮಣ್ಣನು ಬಾಯಿಗೇ ಹಾಕಲು; ತಾಯಿ ಗೇ ಕೋಪವ ತರಿಸುವದು.
ಬಾಯಿಗೇ ಬಿದ್ದ ಮಣ್ಣನು ತೆಗೆದು,ನೀರಲಿ ಬಾಯಿ ತೊಳೆಯುವಳು.
ಸಿಟ್ಟಲಿ ತುಂಟಗೆ ಕೋಲಲಿ ಬಡೆಯಲು,ಬಿಕ್ಕಳು ತಾರಕ ಕೇರುವದು.
ಮಗುವಿನ ಅಳಲಿಗೆ ತಾಯಿಯ ಕರುಣೆ, ಭರತ ನಾಟ್ಯವ ಮಾಡುವದು.
ಹೊಡೆವಕೈ ಗಳ ನೆತ್ತಿ ತನಗೆ ತಾ ಬಡಕೊಂಡು,
ಹುಸಿ ಕೋಪ ತೋರುತ್ತ ಮಮ್ಮಲ ಮರುಗುತ್ತ,
ಬಿಗಿದಪ್ಪಿ ಕಂದನಳು ಮರೆಸುವಳು.
   

Sunday 16 January 2011

ಸಂಕ್ರಮಣದ ಕರಿ ಹಬ್ಬದ ಸಡಗರ;

ಸಂಕ್ರಮಣದ ಕರಿ ಹಬ್ಬದ ಸಡಗರ;
ಹಳ್ಳಿಮನೆಯಲ್ಲಿ, ವೈಭವ ಹಳ್ಳಿಮನೆಯಲ್ಲಿ.
ಬೆಳಗಾಗೆದ್ದು; ಹೊಳೆಸ್ನಾನವ ಮಾಡೀ,
ನಮಿಸುತ ಸೂರ್ಯಂಗೇ,ದೇವಗೆ.
ಅರ್ಘ್ಯ ಪಾನ ವ ಕೊಟ್ಟು,ಹೂ ತುಳಸಿ ಹಾಕಿ;
ಕುಂಕುಮಾರ್ಚನೆ ಮಾಡೀ,ಕರ್ಪುರಾರತಿ ಮಾಡೀ;
ಹಣ್ಣು ಕಾಯಿ ನೈವೇದ್ಯವ ಮಾಡೀ; ಧೂಪ ದೀಪ ಹಚ್ಚಿ ;
ಭಕ್ತೀಲಿ ದೇವಗೆ ಕೈಮುಗಿದು,
ಗೋಮಾತೆ ಭೂಮಾತೆಗೆ ಎಡೆ ಕೊಟ್ಟು,
ಹೊಸಫಸಲಿಗೆ ನೊರೆ ಹಾಲನು ನಿತ್ತು,
ಸಂಭ್ರಮ ಸ್ವಾಗತ ಕೋರಿದರು. 
ಚರಗವ ನೆಸೆದರು ಹೊಲ ತುಂಬ;
ನೇಗಿಲಯೋಗಿ ಭೋಗಿ ತಾಂಬೂಲ ಕೊಟ್ಟು,
ಕಾಯಪ್ಪ ಬಸವಗೆ ನೆನಿಸಿದರು,
ಹಳೆಬಟ್ಟೆ ಬಿಸಾಕಿ ಹೊಸಾ ಬಟ್ಟೆಯ ತೊಟ್ಟು,
ಹೊಸ ವರ್ಷ ಹೊಸ ಹರುಷವ ಕೋರಿದರು,
ಹಳ್ಳಿಮನೆಯದು ಹಳೆಯದಾದರೂ,
ಹೊಸತನ ನಿತ್ತ್ಯ ಚಿಗುರುವದು.
ದಿನಕೊಂದು ಹೊಸತನ ನೀಡುವದು,

ನೆಮ್ಮದಿ ತಾಣವದು.ಕೈ ಕೆಸರಾದರೆ ಬೈಮೊಸರು.
ದುಡಿತದ ದುಡ್ಡಿನ ತಾಯಿ ಅದು.
ದಿನವೂ ಹಬ್ಬದ ತಾಣವದು.




ಮನೆಮನೆಯಲಿ ದವಸ ಧಾನ್ಯ ಕನಕ ಪೂಜೆ ಮಾಡಿದರು,
ಹಾಲು ಹಣ್ಣು ಹೂವ ಎಳ್ಳು ಬೆಲ್ಲ ಹಂಚಿದರು,

Saturday 15 January 2011

ಕೃಷ್ಣೆ ಗಂಗಾ ಸಿಂಧು ಯಮುನೆ ಬ್ರಹ್ಮಪುತ್ರ;
ಹಿಮಗಿರಿಯ ಸುಖ ನಿನಗೇ ಸಂಹ್ಯಾದ್ರಿ ಭದ್ರೆ,
ಸಪ್ತಪುರ ಗಿರಿನಾರ ಹರಿಹರನ ಮುದ್ರೆ;
ಕಾವೇರಿ ಗೋದೆಯರು ಜಲ ತುಂಗಾಭದ್ರೆ,
ಜಮದಗ್ನಿ ರೇಣುಕೆಯ ಸ್ನೇಹಿ ಮಲಪ್ರಭೆ,
ಶೂರ್ಪನಿಯ ಪಾವನೆ ಮಾಡೀ ಪಂಢರೀ ಕಾಳಿ;
ಧರ್ಮಾ ವರದೆಯರೆಲ್ಲ ಹರಿಸುವರಿಲ್ಲಿ,
ಪರಿಸರವ ಕಾಯುವರು ಹರುಶ ಹಸಿರಲ್ಲಿ.
ಹಿಮಗಿರಿಜ ಶಂಕರನು ವಾಸಿಸಿದ ಕಾಶಿ,
ಮಥುರೆಯಲಿ ಪುಟ್ಟಿದ ದ್ವಾರಕೀಶ,
ಶರಯು ತೀರದಿ ಮೆರೆದ ಶ್ರೀ ರಾಮಚಂದ್ರ,
ಮುಗಿಸಿ ರಾಮಾಯಣವ ಗತಿಸಿ ಮಹಾಭಾರತವ;
ಲೀನವಾದನು ಅಲ್ಲಿ ಪುರಿ ಜಗನ್ನಾಥ;  
ದೇವ ದಾನವಗೆ ಜನ್ಮ ಕೊಟ್ಟಳಾ ಮಾತೆ;
ಕಥೆ ಸತ್ಯವೋ ಮಿಥ್ಯವೋ ಬಲ್ಲವ ಏಕನಾಥ,
ಕಲಿಕಾಲವಿದು ದೇವದಾನವರ ಕ್ಯಾತೆ,
ಸೂರ್ಯ ಚಂದ್ರ ಗೆ ಗ್ರಹಣ ಹಿಡಿವ ರಾಹು ಕೇತು;
ಬಿಡಿಸು ಅವರ ಈ ದುಷ್ಟ ಹೇತು,
ಬೇವು ಬೆಲ್ಲವ ತಿಂದು ನೆನಸು ಚಂದ್ರಾಮ.
ಎಳ್ಳು ಬೆಲ್ಲವ ತಿಂದು ಹರಿಸು ಭಾಸ್ಕರನ.
  
   

ಮಾತಾಡು ಬೆಳ್ಳಿ ಮೌನ ಭಂಗಾರ

ಅರಳುವ ಮಲ್ಲಿಗೆ ಬೆಳಕು ಭಂಗಾರ,
ಭೃಂಗ ದ ಗುಂಗಿಗೆ ಹೂವು ಭಂಗಾರ,
ಮಮತೆಯ ಮಡಿಲಿಗೆ ಮಗು ಭಂಗಾರ,
ಬಾಳ ಬದುಕಿಗೆ ಮಗು ಭಂಗಾರ,
ಮಾತಾಡು ಬೆಳ್ಳಿ ಮೌನ ಭಂಗಾರ,
ಹಸಿರು ಹೊನ್ನು ಬೆಟ್ಟಕೆ ಸಿಂಗಾರ,
ಮರಳುವ ಮಣ್ಣಿಗೆ ಸ್ವರ ಸಿಂಗಾರ,
ಹರೆಯುವ ನದಿಗೆ ತೆರೆ ಸಿಂಗಾರ,
ಸಹಜ ಬಾಳಿದು ನೆಮ್ಮದಿ ಸಿಂಗಾರ,
ಇದುವೇ ಜೀವ ಜೀವನ ಸಂಸಾರ,
ಸಾಗಲಿ ಸುದಿನದಿ ಸುಖ ಪರಿವಾರ.

Friday 14 January 2011

ಪಂಚಕಚೇರಿಗೆ ಸಾಗಿದರು.

ಎಂಟುಮಾರು  ಧೋತ್ರ ಉಟ್ಟು,
ಎರಡು ಕಚ್ಚಿ ಹಾಕಿ ಕೊಂಡು;
ಮಕ್ಮಲ್  ಇಜಾರ ತೊಟ್ಟುಕೊಂಡು.
ಭರ್ಜರಿ ಸೆಲ್ಲೇ ಹೊತ್ಕೊಂಡು;
ಹಣೆ ಹುಬ್ಬ ತೀಡಿಕೊಂಡು,
ಅಂಜನೇಯ ನ ತಿಲಕ ಹಚ್ಚಿ,
ಜುಟ್ಟಕ್ಕೊಂದು ಮಲ್ಲಿಗೆ ಹೂವ ಚುಚ್ಚಿ
ಬಾಯೀ ತುಂಬಾ ಕವಳ ಇಟ್ಟಕೊಂಡು
ಹುರಿ ಹುರಿ ಮೀಸೆ ತಿರುವಿ,
ನೀಟಾಗಿ ಕೂತುಕೊಂಡು;
ಬಂದ ಜನಕೆ ಸಂತಸ ಕೈಮುಗಿದು
ದೇಶಾವರಿ ನಗೆಯಾ ಬೀರೀ,
ಮನೆಯಲಿ ಬೈಠಕ ಹೂಡಿದರು.
ಜರ್ದಾರಿ ರುಮಾಲ ಹಾಕಿ ಕೊಂಡು
ನಡೀರಿ ಹೋಗೋಣ ಎನ್ನುತ್ತಾ,
ಕೈಯಾಗ ದಂಡಾ ಹಿಡಕೊಂಡು,
ಗುರಿಕಾರ ಎಕ್ಕಡ ಮೆಟ್ಟಿ ಕೊಂಡು,
ಪಂಚಕಚೇರಿಗೆ ಸಾಗಿದರು.

Thursday 13 January 2011

ಅಂಕದ ಪರದೆ ಜಾರುವ ಮೊದಲೇ

ಅಂದಿನ ನಾಟಕ ಗಮ್ಮತ್ತೇನು ಹೇಳಲೇನು ಒಂದೇ ಎರಡೇ,
ನಾಟಕ ಸಾರಲು ಎತ್ತಿನ ಬಂಡಿ,ಚಿತ್ತಾರದ ಗಾಡಿ,
ತುತ್ತೂರಿ ಡ್ರಮ್ಮಿನ ಕೂಗೇನು, ಜೋಕರಣ ಲಾವಣಿ ಹಾಡೇನು,
ಹಂಚುವ ಹ್ಯಾಂಡಬಿಲ್ ಮೊಜೇನು.
ಬಡಜೋಕರನ ಕನ್ನಡ ಪ್ರೇಮ ಅಂದ;ಕನ್ನಡಕೊಬ್ಬ ಕೈಲಾಸಂ.
ಹಾದುವೆಯಾ ಕೈಲಾಸಂ ನಾ ಮಿಮಿಕ್ರಿಯೋ;
ಅದಕ್ಕೇನೋ ರಾಜಾ ಮತ್ತೆ ಮತ್ತೆ ಹಾಡ್ತೆನಿ ಕೇಳ್ರೋ,
ಕಲೆಕ್ಷನ್ ಘನಾಗಿ ಮಾಡ್ಸಿ,ಕಂಪನಿ ಬದುಕಿಸ್ರೋ,
ಎಂಥಾ ಮಾತು ಡೈಲಾಗೋ ಮತ್ತೆ ಮತ್ತೇ ಹೇಳ್ತೆನ್ರೋ.
ದುಡ್ಡು ಕೊಟ್ಟು ನೋಡ್ರಿ ಮತ್ತೆ ಮತ್ತೆ ಬರಲಾರ್ದೋ,
ಚಪ್ರ ಖರ್ಚು ಹೊಂಡಸ್ದಿದ್ರೆ ಮತ್ತೆಂದೂ ಕಾಣಲಾರ್ದೋ,
ಬೋ ಪಸಂದಾ ಆತು ಸಾಬ್ರೆ ಮಾಲಕ ನೆಲಾ ಸಸ್ತಾ ಕೊಟ್ರೆ,
ಕಾಸು ಕೊಟ್ಟೇ ಪಸಂದಾಗಿ ಚಾಪೆ ಹಾಸಿ ನೋಡ್ತೇವೆ.
ನಾಟಕಾ ಚೆನ್ನಾಗಿರದಿದ್ರೆ; ನಿನ್ನೊಂದಕೈ ನೋಡ್ಕೊಂತೇವೆ.
ಆತ್ಬುದ್ಧಿ ನಾನೇ ಯಜಮಾನ್ ಚೆನ್ನಿಲ್ಲಾಂದ್ರೆ ಕಾಸು ವಾಪಸ್ಸ್,
ಸವಕಲ್ ನಾಣ್ಯ ಕೊಡಬೇಡಿ, ನಾಟಕ ನೋಡಲು ಮರಿಬೇಡಿ,
ಕೊರಿಚುಟ್ಟ ಸೇದಿ ತೊಟ್ಟಿಲ್ಹಾಕೀ,ಬೋ ವೈನಾಗೀ,
ಲೇ ಕುಡ್ಕಾ ಕುಡದ್ ಗಿಡದ್ ಬಂದೀ, ಪೋಲೀಸಪ್ಪಗ ಸಿಕ್ಕೀ,
ಅಂದ್ರ ಲಾಕಪ್ ನ್ಯಾಗ ಬಂದೀ.  
ನಾಟಕ ಕಂಪನಿ ನಾಟಕಕಾರರು ಕೈಲಾಸಂ ನಾ ಸೇರಿದರು,
ಅಂಕದ ಪರದೆ ಜಾರುವ ಮೊದಲೇ
ನಾಟಕ ವೇ ಕಥೆ ಮುಗಿದಿಹುದು.

ಗಡಿ ಬಿಡಿ ಗುಂಡ ನೀನು, ಭೇಷ್ ಒಟ್ಟಿನಲ್ಲಿ ನಾನು.

ಧಡಬಡ ಲೆದ್ದು ಗಡಿಬಿಡಿ ಮಾಡುತ ಎದ್ದನು ಸುಬ್ಬಣ್ಣ.
ಹಲ್ಲನು ಉಜ್ಜುತ ಹಾಕಿದ ಸ್ವಿಚ್ಚು ಜಳಕ ವಮಾಡಲಿಕೆ;
ಧಬಧಬ ನೀರು ಸುರಿಯುತ ಮೈಗೆ ಜಳಕವ ಮುಗಿಸುತ್ತ,
ಮಾತಲಿ ಮಂತ್ರವ ಮಣ ಮಣ ಜಪಿಸುತ ಬಟ್ಟೆಯ ಹಾಕಿದನು,
ಮುಗಿಯುತ  ಕೈ ದೇವಗೆ ತಿಂಡಿ ಬಾಯಿಗೆ ಮುಕ್ಕಿದನು.
ಗಡಿಬಿಡಿಲರ್ಧ ಚಹಾವನು ಕುಡಿದು ತಲೆಯನು ಬಾಚಿದನು,
ಬ್ರಿಫ್ ಕೇಸನು ಕೈಯಲಿ ಹಿಡಿದು ಬೂಟಿಗೆ ಹುಡುಕಿದನು.
ಕರೆದನು ಲಿಲ್ಲಿ ಬಾರೇ ಇಲ್ಲಿ ಹುಡುಕೇ ನನ್ನ ಬೂಟ್ ಎಲ್ಲಿ?
ಸಿಕ್ಕಲು ಬೂಟು,ಹಾಕಿದ ಹೆಲ್ಮೇ ಟ್ ಹೊರಟನು ಬೈಕಲ್ಲಿ,
ದಣಿಯುತ ಮಣ ಮಣ ಮನಕೆ ಬೈದನು,
ಗಡಿ ಬಿಡಿ ಗುಂಡ ನೀನು, ಭೇಷ್ ಒಟ್ಟಿನಲ್ಲಿ ನಾನು.

      

Tuesday 11 January 2011

ಮರೆತರು ಕೆಲವು ಮರೆಯವು ಹಲವು.

ಕಳೆದವು ದಿನಗಳು ಹಾಗೂ ಹೀಗೂ
ಬರಲಿರೋ ದಿನಗಳು ಮೆಲಕುತಲಿಹವು.
ಮರೆತರು ಕೆಲವು ಮರೆಯವು ಹಲವು.
ಬಾಲ್ಯದ ಹಲಗೆಯ ಬಳಪದ ನೆನಪು.
ಗಲಗಿನ ಲೆಕ್ಕಣಿಕೆ ಮಸಿ ದೌತಿ ಒಕ್ಕಣಿಕೆ.
ಹಿಂಜುತ ಹತ್ತಿ ಹಿಡಿಯಲು ತಕಲಿ
ತಿರುಗುತ ತಕಲಿ ನೂಲನು ತೆಗೆದು
ವಿದ್ದೆಯ ಕಲೆತು ಆತವನಾಡುತ
ಮೊಜಲಿ ಕಳೆದವು ಚಿಕ್ಕಂದಿನಗಳು.
ಮಧ್ಯಮ ದಿನಗಳು ಭಾರದಿ ಕಳೆದವು
ಆಳುವವನ ಭೂವಡೆತನ ಹೋದವು.
ಉಳುವವ ಹೊಲದೊಡೆಯ ನಾಗಲು
ಮಿಸಲಾತಿಯಲಿ ಆದೆವು ಮೀಸಲು
ಎತ್ತಿಗೆ ಜ್ವರ ವಾದರೆ ಎಮ್ಮೆಗೆ ಬರೆ.
ಹರಕತ್ತಿನಲಿ ಹರೆತನ  ಕಳೆದೆವು
ಕಾಸಿಗಾಗಿ ಖಾಸಗಿ ಕೆಲಸ 
ಮಡದಿ ಮಕ್ಕಳೆರಡು ಕೂಡಿ
ಬದುಕು ಸಾಗಿತು ಬಲು ಜೋಡಿ
ಓದಿದ ಮಕ್ಕಳು ದುಡಿಕೆಯ ಮೋಡಿ;
ನಿಂತಿತು ನನ್ನಗಾಡಿ.
ಕಳೆದವು ದಿನಗಳು ಹಾಗೂ ಹೀಗೂ
ಮರೆತರು ಕೆಲವು ಮರೆಯವು ಹಲವು.

Sunday 9 January 2011

ಮೇಘ ಮಾಲೆ ಹನಿ ಹರೆಸಲು ಸಿಂಚನ

ಮಾಗಿಕಾಲ ಬಿಸಿಲೋ ಬಿಸಿಲು
ದಾಹ ದಾಹ ಭಣ ಭಣಗುಟ್ಟಿರಲು
ಜನ ಕರೆದರು ಬಾಬಾರೋ ಮಳೆರಾಯ
ತಣಿಸೋ ತಣಿಸೋ ನೆಲಾತಾಯ
ಝಳ ಝಳ ಬಿಸಿಲು ತಂಗಾಳಿ  ಸೂಸಲು
ಸಂತಸದಲಿ ಕಾರ್ಮೋಡ ಕವಿಯಲು
ಸರಿದವು ಹೊಂಬಣ್ಣ ಬಿಳಿ ಮೋಡಗಳು
ಗುಡುಗಲು ಮೋಡ ಹನಿ ಗಳು ಒಡೆದವು
ಮುಗಿಲು ಮಿಂಚಿತು ಹೊಡಿಯಿತು ಸಿಡಿಲು.
ಮೇಘ ಮಾಲೆ ಹನಿ ಹರೆಸಲು ಸಿಂಚನ
ಮಳೆ ಗರೆದನು ಋತು ರಾಜ ಛಂಚನ
ಭೂತಾಯಿ ನೆನೆಯಲು ಹರುಷಿತ ಗೊಂಡವು
ಜನ ದನ ವನ ತರು ಲತೆ ಮಿಕ ಪಕ್ಷಿ ಗಳು
 

ನೀಲಾಂಗಣ ದಲಿ ಮೇಘ ಮಂದಾರ

ನೀಲಾಂಗಣ ದಲಿ ಮೇಘ ಮಂದಾರ
ಹಾಡಲು ರಾಗ ಮೀಯಾ ಮಲ್ಹಾರ
ಏಕೋ ಮಿಂಚಿತು ಮುಗಿಲಲಿ ಮೋಡ
ಭರ ಭರ ಬೀಸಿ ತಂಗಾಳಿ ತೀಡಲು
ಗಡ ಗಡ ನಡುಗಲು ಗುಡುಗದು ಗುಡುಗಿತು
ಕಾರ್ಮೋಡ ದಲಿ ಹೊಡೆಯಲು ಸಿಡಿಲು.
ಮಳೆ ಅಬ್ಬರಿಸಲು ಅಲೆ ಜಲಲ ಧಾರೆ; ಎಲ್ಲೆಲ್ಲೂ ಹರಿಯುತಿದೆ ನೀರು.
ಹರೆಯುವ ನೀರು ಹಳ್ಳವ ಸೇರಿ ತುಂಬಿಸುತ ಕೆರೆ ಕೊತ್ತಲಗಳು
ಕೋಡಿ ಬಿದ್ದು ಹೊಳೆ ಹರಿಯಲು ತಡಸಲ
ಭೋರ್ಗರೆಯುವ ಸುಂದರ ಜಲಪಾತ
ತವರ ತುಂಬಿದ ಬಿಂಕದ ಸಿಂಗಾರಿ
ಕುಣಿಯುವ ಡೊಂಕಿನ ವೈಯ್ಯಾರಿ.
ಅಂಕು ದೊಂಕಲಿ ಬಳಕುತ ಸಾಗೆ;
ಸೇರುತ ಪ್ರಿಯಕರ ವಾರಿಧಿಗೆ.

  

Monday 3 January 2011

ಸಿಟ್ಟಿನ್ಯಾಗ ಅಣ್ಣಾ ಅಂದ ತಪ್ಪಿತು ನಿನ್ನ ಕಾಟಾ.

ತಾತಾ ತಾತಾ ಅಂದಾಗ ತಾತಾ ಮುತ್ತು ಕೊಡುತಿದ್ದ,
ಅಜ್ಜಿ ಅಜ್ಜಿ ಅಂದಾಗ ಅಜ್ಜಿ ಮಜ್ಜಿಗೆ ಕೊಡುತಿದ್ದಳು.
ಅಪ್ಪಗೆ ಸಿಟ್ಟು ಬಂದಾಗ ಬೆತ್ತದ ಏಟು ಹಾಕ್ತಿದ್ದ.
ಅಮ್ಮಗೆ ಸಿಟ್ಟು ಬಂದಾಗ ಹಿಡಿ ಹಿಡಿ ಮಾಡ್ತಿದ್ದಳು.
ಸಿಟ್ಟು ಮಾಡೀ ಅತ್ತಾಗ ಮುದ್ದು ಮುದ್ದು ಮಾಡುತಿದ್ರು.
ಕಾಕಾ ಕಾಕಾ ಅಂದಾಗ ಕಾಕಾ ಖಾರಾ ತರ್ತಿದ್ದ.
ನಾನು ಊರಿಗೆ ಹೊಂಟಾಗ ಅಣ್ಣಾ ಗೆಂದೇ ಟಾಟಾ.
ಸಿಟ್ಟಿನ್ಯಾಗ ಅಣ್ಣಾ ಅಂದ ತಪ್ಪಿತು ನಿನ್ನ ಕಾಟಾ.      

ಹಾರುವ ಹಕ್ಕಿಗೆ ಸುಂದರ ಗಗನ. ಪಂಜರ ಗಿಳಿಗೆ ಸುಂದರ ಸದನ.

ಹಾಡಿಗೆ  ಪಂಜರ  ಗಿಳಿಯನು ಬಿಟ್ಟರೆ,ಹಾಡುತ ಪಂಜರ ಸೇರುವದು.
ನಲಿಯುವ ಹಕ್ಕಿಯ ಪಂಜರ ಕೇ ತಂದರೆ,ಗದಗದ ನಡಗುತ ಮಿಡುಕುವದು.
ಗಿಳಿ ಅರಮನೆಯದು ಹಕ್ಕಿಗೆ ಪಂಜರ,ಹಕ್ಕಿಯ ಹಂದರ ಗಿಳಿಗೆ ಪಂಜರ.
ಹಾರುವ ಹಕ್ಕಿಗೆ ಸುಂದರ ಗಗನ. ಪಂಜರ ಗಿಳಿಗೆ ಸುಂದರ ಸದನ.
ದುಡಿಯುವ ಜೀವಕೆ ದುಡ್ಡದು ಗಹನ,ಸುಖ ಜೀವಿಗದು ಝಣ ಝಣ.

ಪಂಡಿತರ ಉಪದೇಶ, ಉಪಯೋಗಕ್ಕಲ್ಲ.

ಹೇಳುವದು ಒಂದು ಮಾಡುವದು ಮತ್ತೊಂದು.
ಹೇಳು ಆಚಾರ; ತಿನ್ನು ಬದನೆ ಈರುಳ್ಳಿ.
ಮೆಣಸು ಕಾರ ಬಳ್ಳೊಳ್ಳಿ.
ಸುಳ್ಳೀ ಗೊಂದು ಸುಳ್ಳು ನೊರೆಂಟು ಸುಳ್ಳು.
ಆಟಕ್ಕುಂಟು, ಲೆಕ್ಕಕ್ಕಕ್ಕಿಲ್ಲ.
ಪಂಡಿತರ ಉಪದೇಶ, ಉಪಯೋಗಕ್ಕಲ್ಲ.

Sunday 2 January 2011

ದಣಿದ ದೇಹಕೆ ಬೇಕು ಚೈತನ್ನ್ಯ ತುಂಬು.

ಯಾರು ಮಾಡದ ಎಲ್ಲರ ಕೆಲಸ ಆಗದೆ ಎಡವಟ್ಟಾಗುವದು.
ಆಗದ ಕೆಲಸ ಮಾಡಲು ಹೋಗಿ, ಎಲ್ಲಾ  ಹಳ್ಳಾ ಹಿಡಿಸುವದು.
ಸಂಸಾರ ಸಾಗರದೀ ಬಾಳ ಪಯಣ,ಚಲಿಸುತ ಹಾರುತ ಈಜುವದು.
ದಣಿದ ದೇಹಕೆ ಬೇಕು ಚೈತನ್ನ್ಯ ತುಂಬು.
ಬದುಕಿಗೂಟವು ಬೇಕು,ಊಟಕ್ಕೆ ಬದುಕಲ್ಲ.
ತಲೆಯ ತುಂಬ ತುಂಬಿಹುದು ನೆನಪುಗಳ ಕಥೆಯು.
ಹಣೆ ಹುಬ್ಬು ಹಿಡಿದಿಹುದು ನೋಡುತಿದೆ ಕಣ್ಣು.
ಕರುಣಾಳು ಬಾ ಬೆಳಕೇ ಮುಸುಕಿದೆ ಮಬ್ಬು.
ಅಧರಗಳು,ಹೊಮ್ಮುತಿವೆ ಮನದಾಳ ಹಾಡು,
ಹಾಡು ಹರುಷವ ಹಂಚು ಕಥೆ ಬಾಳ ಬೆಳಕು.
ಭಾವನೆಯ ಭಾವಗಳ ಭಾವುಕತೆಯ ತುಂಬಿ,
ಕೇಳುಗರ ಕಣ್ಮಣಿಯ ಧಾರೆ ತುಂಬಿ.
ನಾನು ನಾನೆಂಬ ಜಡ ಜೀವವು,
ಮಣ್ಣಿಂದ ಹುಟ್ಟಿಹುದು ಮಣ್ಣಾಗಿ ಹೋಗುವುದು.
ಇದು ವಾಸ್ತವ ,ಬಾಳ ಬದುಕಲು ಬಹುದು
ಸಾಧನೆಯ ಸಾಧ್ಯತೆಯು,ಹರೆ ಇರುವ ತನಕ,
ಏರುವದು ಸಹಜ, ನಿಲ್ಲುವದಸಾಧ್ಯ ಕೊನೆತನಕ;
ಗಟ್ಟಿರುತನಕ ದೇಹಕೆ ಕೈಕಾಲು ಎರಡು,
ಬೇಡುವದು ಟೊಂಕ ಊರಲು ಕೋಲು.
ಊರೆಲ್ಲ ನೆಂಟರು ಹೊತ್ತಿಗಾಗರು ಇರರು.
ಹೊಗಳುವರೆಲ್ಲ ಮಿತ್ರರು ಅಲ್ಲ.ತೆಗಳುವರೆಲ್ಲ ಶತ್ರುಗಳಲ್ಲ.
ಕೊಳಚಇಂದ ಎತ್ತುವರು ನಿನ್ನಲ್ಲಿರುವತನಕ.
ಕೊಳಚಿಯಲಿದ್ದು ಹಾರಾಡಲು ಸಲ್ಲ. ಬೀಳಲೇ ಬೇಕು ಏಳುತನಕ 
ಈ ಬಾಳ ಬದುಕು ಈ ಪರಿ ದಾಟುವ ತನಕ;
ಅವಿರತ ಪ್ರಯತ್ನ ಸಾಧ್ಯ ಸಹಜ.
 

Saturday 1 January 2011

ದನಾ ಕಾಯೋ ಶಿವನ ಹೆಂಗ ನೋಡಲವ್ವ?

ಎಂಥಾ ಧಡ್ಡ ಖೋಡಿ ಈ ಖಡ್ಡಿ ಕೊಟ್ಟಿ ಮಾವಾ?
ಸಾಲಿ ಬಿಟ್ಟು ಹಿಡಿದಾ ದನಾ ಕಾಯೋ ಕೆಲಸಾ.
ಓದು ಬರೆಹಾ ಬಿಟ್ಟು ಪುಂಡು ಪೋಕರಿ ಆದಾ.
ಹೇಳಿಕೇಳಿ ಇವರಪ್ಪ ಕುಡುಕ ಮಲ್ಲಪ್ಪ.
ಮಲ್ಲವ್ವನಾ ಮಾತು ಮಗಾ ಕೇಳಲೇ  ಇಲ್ಲಾ.
ಬಿಟ್ಟಿ ಕೆಲಸದಾಗ ಶಿವನಾಪಾದ ಕಂಡಳವರವ್ವ.
ದನಾ ಕಾಯೋ ಶಿವನ ಹೆಂಗ  ನೋಡಲವ್ವ?