ಮಾಗಿಕಾಲ ಬಿಸಿಲೋ ಬಿಸಿಲು
ದಾಹ ದಾಹ ಭಣ ಭಣಗುಟ್ಟಿರಲು
ಜನ ಕರೆದರು ಬಾಬಾರೋ ಮಳೆರಾಯ
ತಣಿಸೋ ತಣಿಸೋ ನೆಲಾತಾಯ
ಝಳ ಝಳ ಬಿಸಿಲು ತಂಗಾಳಿ ಸೂಸಲು
ಸಂತಸದಲಿ ಕಾರ್ಮೋಡ ಕವಿಯಲು
ಸರಿದವು ಹೊಂಬಣ್ಣ ಬಿಳಿ ಮೋಡಗಳು
ಗುಡುಗಲು ಮೋಡ ಹನಿ ಗಳು ಒಡೆದವು
ಮುಗಿಲು ಮಿಂಚಿತು ಹೊಡಿಯಿತು ಸಿಡಿಲು.
ಮೇಘ ಮಾಲೆ ಹನಿ ಹರೆಸಲು ಸಿಂಚನ
ಮಳೆ ಗರೆದನು ಋತು ರಾಜ ಛಂಚನ
ಭೂತಾಯಿ ನೆನೆಯಲು ಹರುಷಿತ ಗೊಂಡವು
ಜನ ದನ ವನ ತರು ಲತೆ ಮಿಕ ಪಕ್ಷಿ ಗಳು
No comments:
Post a Comment