Tuesday 11 January 2011

ಮರೆತರು ಕೆಲವು ಮರೆಯವು ಹಲವು.

ಕಳೆದವು ದಿನಗಳು ಹಾಗೂ ಹೀಗೂ
ಬರಲಿರೋ ದಿನಗಳು ಮೆಲಕುತಲಿಹವು.
ಮರೆತರು ಕೆಲವು ಮರೆಯವು ಹಲವು.
ಬಾಲ್ಯದ ಹಲಗೆಯ ಬಳಪದ ನೆನಪು.
ಗಲಗಿನ ಲೆಕ್ಕಣಿಕೆ ಮಸಿ ದೌತಿ ಒಕ್ಕಣಿಕೆ.
ಹಿಂಜುತ ಹತ್ತಿ ಹಿಡಿಯಲು ತಕಲಿ
ತಿರುಗುತ ತಕಲಿ ನೂಲನು ತೆಗೆದು
ವಿದ್ದೆಯ ಕಲೆತು ಆತವನಾಡುತ
ಮೊಜಲಿ ಕಳೆದವು ಚಿಕ್ಕಂದಿನಗಳು.
ಮಧ್ಯಮ ದಿನಗಳು ಭಾರದಿ ಕಳೆದವು
ಆಳುವವನ ಭೂವಡೆತನ ಹೋದವು.
ಉಳುವವ ಹೊಲದೊಡೆಯ ನಾಗಲು
ಮಿಸಲಾತಿಯಲಿ ಆದೆವು ಮೀಸಲು
ಎತ್ತಿಗೆ ಜ್ವರ ವಾದರೆ ಎಮ್ಮೆಗೆ ಬರೆ.
ಹರಕತ್ತಿನಲಿ ಹರೆತನ  ಕಳೆದೆವು
ಕಾಸಿಗಾಗಿ ಖಾಸಗಿ ಕೆಲಸ 
ಮಡದಿ ಮಕ್ಕಳೆರಡು ಕೂಡಿ
ಬದುಕು ಸಾಗಿತು ಬಲು ಜೋಡಿ
ಓದಿದ ಮಕ್ಕಳು ದುಡಿಕೆಯ ಮೋಡಿ;
ನಿಂತಿತು ನನ್ನಗಾಡಿ.
ಕಳೆದವು ದಿನಗಳು ಹಾಗೂ ಹೀಗೂ
ಮರೆತರು ಕೆಲವು ಮರೆಯವು ಹಲವು.

No comments:

Post a Comment