Sunday 9 January 2011

ನೀಲಾಂಗಣ ದಲಿ ಮೇಘ ಮಂದಾರ

ನೀಲಾಂಗಣ ದಲಿ ಮೇಘ ಮಂದಾರ
ಹಾಡಲು ರಾಗ ಮೀಯಾ ಮಲ್ಹಾರ
ಏಕೋ ಮಿಂಚಿತು ಮುಗಿಲಲಿ ಮೋಡ
ಭರ ಭರ ಬೀಸಿ ತಂಗಾಳಿ ತೀಡಲು
ಗಡ ಗಡ ನಡುಗಲು ಗುಡುಗದು ಗುಡುಗಿತು
ಕಾರ್ಮೋಡ ದಲಿ ಹೊಡೆಯಲು ಸಿಡಿಲು.
ಮಳೆ ಅಬ್ಬರಿಸಲು ಅಲೆ ಜಲಲ ಧಾರೆ; ಎಲ್ಲೆಲ್ಲೂ ಹರಿಯುತಿದೆ ನೀರು.
ಹರೆಯುವ ನೀರು ಹಳ್ಳವ ಸೇರಿ ತುಂಬಿಸುತ ಕೆರೆ ಕೊತ್ತಲಗಳು
ಕೋಡಿ ಬಿದ್ದು ಹೊಳೆ ಹರಿಯಲು ತಡಸಲ
ಭೋರ್ಗರೆಯುವ ಸುಂದರ ಜಲಪಾತ
ತವರ ತುಂಬಿದ ಬಿಂಕದ ಸಿಂಗಾರಿ
ಕುಣಿಯುವ ಡೊಂಕಿನ ವೈಯ್ಯಾರಿ.
ಅಂಕು ದೊಂಕಲಿ ಬಳಕುತ ಸಾಗೆ;
ಸೇರುತ ಪ್ರಿಯಕರ ವಾರಿಧಿಗೆ.

  

No comments:

Post a Comment