Tuesday 14 August 2012

ಬೊಗಸೆ ತುಂಬಿದ ಆಸೆಗಳೇ


ಚೆಲುವು-ಚಿತ್ತಾರ
ಮಂದಸ್ಮಿತ ಮಧುಮಾಸದೊಳು;
ಬನಬನ ಸುತ್ತಲು ಮೇಘ-ಮಂದಾರ;
ಚೈತ್ರ-ವೈಶಾಖದ ಚೆಲುವು-ಚಿತ್ತಾರ.            ||1||

ದಿವ್ಯ-ಚೇತನ ಸುಪ್ತವಾಗಿಹುದು. 
ಮಳೆ-ಹನಿ ಕರಿಸದೆ ಸಾಗುತಿರೆ;
ತುರು-ತುರು ತುಂತುರು ಹನಿಯೇ ಇಲ್ಲ.
ದಿಕ್ಕುಗಳೆಲ್ಲ ಗರಬಡಿದಿಹವು;
ದಿವ್ಯ-ಚೇತನ ಸುಪ್ತವಾಗಿಹುದು.                   ||2||

ದೇವನೋಲುಮೆ-ಚಿತೈಸದಿದರೆ  
ಕೆರೆ ತೊರೆ ಹಳ್ಳಗಳೆಲ್ಲಾ ಬತ್ತಿ;
ಮಳೆ ಗಾಳಿ ಸುಳಿಯಾಗಿ ಸುಳ್ಳೇ ಸುತ್ತುತಿಹುದು.
ನೆಲ-ವೆಲ್ಲ ಬಿರಿ ಬಿಟ್ಟು ಹಸಿರುಲ್ಲು ಕಮರಿಹುದು. ||3||


ಬೊಗಸೆ ತುಂಬಿದ ಆಸೆಗಳೇ
ಆಗಸ ತುಂಬಿದ ಮೋಡಗಳೇ; ಬೊಗಸೆ ತುಂಬಿದ ಆಸೆಗಳೇ;
ಜನ-ವನ ತರು-ಲತೆ ಪಶು-ಪಕ್ಷಿ ಗಳು; ವಾಮಕುಕ್ಷಿಯಲಿ ಪರಿತಪಿ ಸುತಿರೆ,
ಹೇಳುಗರೆಲ್ಲಾ ಕೇಳುಗರೇ!!!                                                              ||4||

ಮನದಾಣ್ಮಯ ಮಧು-ಮಾತನು ಲಾಲಿಸಿ
ಬಾ$$ರೋ ಬಾ$ಬಾ ದಯ ತೋ ರೋ; ಹನಿ ತುಂತುರಿಸೋ ಮಳೆ-ರಾಯಾ.

ಸ್ವರ ಸಿಂಗಾರದೊಳು ವಸಂತ ಬಂದ, ಕರೆದನು ಬಾರೋ-ಬಾ ನೀಲ-ಮೇಘ ಶ್ಯಾಮಾ.
ಮನದಾಣ್ಮಯ ಮಧು-ಮಾತನು ಲಾಲಿಸಿ;  ಡಮರುಗ ಡಮ ಡಮ ಡಮ ಗುಟ್ಟಿಸಲು.,
ಸುಳಿ-ಗಾಳಿಯದು ಮೆಲ್ಲನೆ ಸೂಸಿ; ಮಿಂಚದು ಮಿಂಚಿತು ಗಗನ ಗುಡುಗಿತು.    ||5||

ಮೇಘ-ಮಾಲೆ ರಸದೌತಣ ನೀಡಲು

ಹನಿಗಳುದುರುತ ಜಡಿಮಳೆ ಹಿಡಿಯಲು;
ಮೇಘ-ಮಾಲೆ ರಸದೌತಣ ನೀಡಲು,
ಎಲ್ಲೆಲ್ಲೂ ಜಲ-ಜಲ ಧಾರೆ
ಎಲ್ಲೆಲ್ಲೂ ಶಿವ-ಶಿವಾ ; ಎಲ್ಲೆಲ್ಲೂ ಜಲ-ಜಲ ಧಾರೆ.                                      ||6||

ಜನಸಂಪದಕದು ಹರುಷ ಚೇತನ
ಕೆರೆ ತೊರೆ ಹಳ್ಳಗಳೆಲ್ಲಾ ತುಂಬಿ ರಮಣೀಯ ನೋಟ  ಹರಿಸಿಹುದು.
ದನ-ಕರ ಮೇಯಲು  ರೈತಗೆ ಸಂತಸ;
ಪೈರನು ಬೆಳಿಯಲು ಜನಸಂಪದಕದು ಹರುಷ ಚೇತನ.
ಆಗಸ ತುಂಬಿದ ಮೋಡಗಳೇ; ಬೊಗಸೆ ತುಂಬಿದ ಆಸೆಗಳೇ;                  ||7||

Tuesday 22 May 2012

ಸ್ವಾತಂತ್ರ್ಯ-ಪೂರ್ವ ದಲ್ಲಿ ನಾವು ಚಳುವಳಿ ಮಾಡುವವರೇ!!!

ಸ್ವಾತಂತ್ರ್ಯ-ಪೂರ್ವ ದಲ್ಲಿ ಮಕ್ಕಳು ಮತ್ತು ಮಹಿಳೆಯರ ಪಾತ್ರ:
ಚಳವಳಿ-ಕಾರರಿಗೆ ಊಟ ಬಟ್ಟೆ ವಸತಿ ಸೌಕರ್ಯ ಮಾಡಿದರು.
ಇವರಲ್ಲದೇ ಸ್ವಾತಂತ್ರ ಹೋರಾಟ ಗಾರರು, ಊರೂರು ಹೋಗುವ
ವ್ಯಾಪಾರಸ್ಥರು,ಬಳೇಕಾರರು,ಓಲೆಕಾರರು, ಲಾವಣಿ-ಕಾರರು,
ದುರುಗಮುರುಗರು, ಕಿರ್ತನಕಾರರು ಇತ್ಯಾದಿಗರು ಪ್ರಮುಖರು.
ಶಾಲೆ ಮಕ್ಕಳು ಮಹಿಳೆಯರು ಮುದುಕರು ಪ್ರಭಾತಫೇರಿ ಹಮ್ಮಿದರು.
ಚರ್ಚೆ ಲಾವಣಿ ಗೀ ಗೀ ಪದಗಳು ಮುಖ್ಯವಾಗಿದ್ದವು ಕೆಲವು ಗಳ ಚುಟುಕು ಇಲ್ಲಿದೆ.

1)ಲಾವಣಿ ಯಲ್ಲಿ ಸಂಘಟಕರು (ಪರಿಚಯ ಮಾಡಿಸುವದು):
ಕಸ್ತೂರ-ಬಾಯಿ ಯವರೇ; ಕಮಲಾ ದೇವಿಯವರೇ;
ವಿಮಲಾ-ಬಾಯಿ ಇವರ್ಯಾರೇ ;ನಾವು ಚಳುವಳಿ ಮಾಡುವವರೇ
2)ಬಾವುಟದ ಗಾಥಾ:
ಶಾಂತಿ ಪತಾಕಾ ಗಾಂಧೀ ಪತಾಕಾ;ಅಶೋಕ ಜವಾಹೀರಲಾಲ
ತ್ಯಾಗಮೂರ್ತಿ ಶ್ರೀಮುಖಾ ಸರದಾರ ವಲ್ಲಭ-ಭಾಯಿ-ರಾ
ದೇಶ ಕೀರ್ತಿ ಉಳಿಸಿರಾ.     

3)ಪ್ರಭಾತಫೆರಿಯಲ್ಲಿ ಬಾವುಟ (ಝಂಡಾ) ಗರ್ಜನೆ:  
ವಿಜಯಾವಿಶ್ವತಿ ರಂಗಾ ಪ್ಯಾರಾ ಝಂಡಾ ಉಂಚಾ ರಹೇ ಹಮಾರಾ 
ಸದಾ ಶಕ್ತಿ ಬರಸಾನೆ ವಾಲಾ ಮಾತೃ ಭೂಮಿಕಾ ಜನುಮನ ಪ್ಯಾರಾ
ವಿಜಯಾವಿಶ್ವತಿ ರಂಗಾ ಪ್ಯಾರಾ ಝಂಡಾ ಉಂಚಾ ರಹೇ ಹಮಾರಾ

4)ಗಾಂಧೀಜಿ ಪರ ನ್ಯಾಷನಲ್ ಕಾಂಗ್ರೆಸ್ (ಲಾವಣಿಯಲ್ಲಿ ):
ಏಯ್ ಬೋರ್ಡಿನ ಮ್ಯಾಲಿರುವ ಜೋಡಿ ಬಸವನ ಗುರುತ 
ನೀ$ಟಾಗಿ ನಿಂತು ಕೊಂಡ್ ನೋಡ; ಐತಾದ(ಚೆಂದ-ವಾದ)    

5)ಗಾಂಧೀ ತಾತನ ಭಾಷಣದ ಫರ್ಮಾನು:
ಎಕ್ಕಾ ರಾಜಾಕೋ ಮಾರೋ; ರಾಜಾಸೇ ರಾಣೀ ಕೋ ;
ರಾಣೀ ಸೇ ಗುಲಾಂ ಕೋ ;ನ್ಹೈಲೇಪೇ ದ್ಹೈಲಾ ;
ಸಮಝೋ ಪತ್ತಾಕಾ ಖೇಲ ಹೈ!!!      
6)ಗಾಂಧಿತಾತ ನ ಮಹಿಮಾಗಾಥಾ:
ಎಂಥಾ ಶಹಾಣ್ಯಾ ಮಹತ್ಮಾ ಗಾಂಧೀ ಹಿಂದುಸ್ತಾನ ಕವನ ತಂದಿ.

7)ಗಾಂಧಿಜೀಯವರು ಸ್ವಾತಂತ್ರ್ಯ ಕೊಡಿಸಿದ ದಿನ!!!
ದೇ$ದೀ$-ಹಮೇ ಆಝಾದಿ ಬಿನಾ-ಖಡಗ ಬಿನಾ-ಧಾಲ್ 
ಸಾಬರ್ಮತಿಕೆ ಸಂತ್ ತೂನೇ ಕರದಿಯಾ-ಕಮಾಲ್  
  
8)ಗಾಂಧೀಜೀ ಗುಂಡಿಗೆ ಬಲಿಯಾದ ದಿನ:
ಹಾ!! ಹಾ!! ಪಿತ!! ಭಾರತ ಹಿತ ಗಾಂಧೀ ಪೋದೆಯಾ!!! 

9)ಇಂದಿನ  ಸಾಂಕೇತಿಕ ಲಾವಣಿ:
ಯಾತಕ ಬಂತೂ ಎಲ್ಲಿಗೆ ಬಂತೂ ಹಿಂದೂಸ್ಥಾನಕ ಸ್ವಾತಂತ್ರ್ಯ  
           

ಗಮಾರನ ತಬಲಾ ಥೇಕ್ಕೆಗಳು (ಹಾಸ್ಯಕ್ಕಾಗಿ ಮಾತ್ರ)

ಗಮಾರನ ತಬಲಾ ಥೇಕ್ಕೆಗಳು (ಹಾಸ್ಯಕ್ಕಾಗಿ ಮಾತ್ರ) 
ತಬಲಾಜಿ ಪ್ರಕಾರ:
ಧೀ$ ಧಾಗಿನ್-ತ್ತಿ-ನಕ್ಕ್$ ; ಧೀ$ ಧಾಗಿನ್-ತ್ತಿ-ನಕ್ಕ್$ ;
ತಧಿಗಿನ್ ತೊಂ ;  ತಧಿಗಿನ್ ತೊಂ ; ತಧಿಗಿನ್ ತೊಂ ;
ಗಮಾರನ ಗತ್ತಿನಲ್ಲಿ :
ಹಾಂವ್ -ತು$ಕ್ಕ್$ : ನಕ್ಕ್- ಝ್ಹಾಲ್ಯಾ$ರ್
ತೀ$$$ತು$ಕ್ಕ್$: ನಕ್ಕ್- ಝ್ಹಾಲ್ಯಾ$ರ್
ತಿ$ಕ್ಕ್  ಮ$ಕ್ಕ್ ದೀ : ತಿ$ಕ್ಕ್  ಮ$ಕ್ಕ್ ದೀ (1)

ತಬಲಾಜಿ ಪ್ರಕಾರ:
ಧಿತ್ತಾ-ಧಿಗ್ಗ್-ಧಿಗ್- ಥೈ : ಧಿತ್ತಾ-ಧಿಗ್ಗ್-ಧಿಗ್- ಥೈ :


ಗಮಾರನ ಗತ್ತಿನಲ್ಲಿ :
ತಿಕಿಟ್$- ತಿಕಿಟ್$- ತಾ$ : ತಿಕಿಟ್$- ತಾ$
ಗದ್ಗಿನ್-ತಿಕಿಟ್- $ತಾ$  : ಗದ್ಗಿನ್-ತಿಕಿಟ್- $ತಾ (2)

ರಣಹಲ್ಗೆ ಮಲ್ಲೇಶಯ್ಯ ನ ಹಲಗೆಯ ಗತ್ತು:
ಕಬ್ಬಡ್ಡಿ ಕೆಂಚಣ್ಣ: ಹೋರಿ ಮುಗದಾಣ 

ವರಕವಿ ಬೇಂದ್ರೆಯವರ ಪ್ರಕಾರ:
ತಾಳ್ಯಾಕ ತಂತ್ಯಾಕ ರಾಗದ ಚಿಂತ್ಯಾಕ;  
ಹೆಜ್ಜ್ಯಾಕ್ ಗೆಜ್ಯ್ಯಾಕ ಕುಣಿಯೋಣು ಬಾರಾ;
ಹೊಯ್ ಕುಣಿಯೋಣು ಬಾರಾ ಕುಣಿಯೋಣು ಬಾರಾ.

Monday 21 May 2012

ಇಬ್ಬರು ಲಫಂಗರ ಹಕೀಕತ್ತು (ಇದು ಕೇವಲ ಹಾಸ್ಯಕ್ಕಾಗಿ ಮಾತ್ರ)

ಅಸ್ಸಲ್ಮೆ ದೋ ನವಾಬ ಶಾಹೀ-ಕೇ-ಫಂದೇ; ಹಾಯ್ ಏಕ ಸೇರ್;
ಮನ್ನೇ ತೋ; ಥಾ,-ದೂಸರಾ; ಸವ್ವಾ-ಸೇರ್.
ಏಕ ಚಧಾಯಾ ಟೋಪಿ. ತೋ, ದೂಸರಾ-ಮಖಮಲ್- ಕಾಚ್.
( ಇಬ್ಬರು ಲಫಂಗರ ಹಕೀಕತ್ತು )  
ಈ ಇಬ್ಬರಿಗೆ ಸಿಗದ ಬಕ್ರಾಗಲೇ ಇಲ್ಲ.(1)
ಅಕಸ್ಮಾತ್ ಇವರೋಬ್ಬರಿಗೊಬ್ಬರು ಭೆಟ್ಟಿಯಾದರು.
ಒಬ್ಬ-ನಿನ್ನೋಬ್ಬನಿಗೆ ಮುಜ್ರೈಸಿದ; ಆ$$ಬಾ ಮೇರಾ ಆ$$ಕಾ;
ಇಬ್ಬರಿಗೂ ಅಟ್ಟಿ- ಮಿಟ್ಟಿ  ಅಯಿತು.(2)
  
ಅಸ್ಲಾಂ ಅಲೈಕುಂ. ಕಿತನಾ ಬದಲ್ಗಯಾ ಆಪ್;
ದೆಕ್ಹಕೆ ಬಡೀ ತಸ್ಲಿಯತ್ ಹುಯಿ.
ಕ್ಯಾ ಹಾಲ- ಹೈ ಸಬ್ ಖೈರಿಯತ್.(3)

ವಾಲೈಕುಂ ಸಲ್ಲಾಂ ಹಸ್ಮುಖ್-ಭಾಯ್
ಬಿಸ್ಮಿಲ್ಲಾ ಬರಖಾತು; ಆಜ್ಮೀರೆ ತಕ್ದೀರ್ ಖುಲ್ಗಯಿ
ಸೌ-ಸೌ  ಬೋಲ್ಬೋಲೆ ಕೈಸೆ ಆಪ್?(4)
ಮೇರಾ ಕ್ಯಾ ಜನಾಬ್; ಹೈ ಆಪ್ಕಿದುವಾ!.
ಹಾಯ್ ಬಸ್ ಆಪ್ಕಾತೋ!; ಲಾಜವಾಬ್ ಹೋ!.
ಅಲ್ಲಾ ಖೋಜ್ ತಭಿತೋ! ಆಪ್ಕಾ ಕ್ಯಾ!;
ಚಾರ್ ಹೀ! ಉಂಗ್ಲ್ಯಾ! ಘೀಮೆಚ್! .(5)
ಬಂದಾ ಹಾಜೀರ್ ಹೈ! ಕುಚ್ಹ್ ಜಸ್ನ ಹೋ ಜಾಯ್! ಲುಂಡಿ - ಗಿಂಡಿ!?
ಏಹ್ ಕ್ಯಾಬಾ ತೂ; ಬಸ್ ಕ್ಯಾ ಲುಂಡಿ-ಗಿಂಡಿ ; ಬ್ಲೋಲ್ತಾ-ತೂ! ;
ಚಿಕನ್-ಬಿರ್ಯಾನಿ ಖಾಯೆಂಗೇ!? (6)

ಲೇಕಿನ್, ಆಜ್ ಮೈ ತೋ; ಬಹುತ ಗಡ-ಬಡ
ಮೇ ಫಸಾ ಹುಂ. ಬಸ್; ಏಕ ಕಾಂ ಕರೆ!
ಅಬಕೀಬಾರೀ ಆಪಕೀ!. ಅಗಲಾ; ಹಾ! ಹಾ! ಹಮಾರಿ;
ಫುಕ್ರಸೇ; ದಾವತ್ ಕಬೂಲ್; ಕರೋ  ತಾಜ್-ಮೇ. (7)

ಅರೇ ಮೆಹರ್ಬಾನ್ ಕದರ್-ದಾನ್;
ನಾತೇರಾ-ಕ್ಯಾ-ನಾ ಮೇರಾ ಕ್ಯಾ?(8)

ಬಾತೋ- ಬಾತೋ- ಮೇ;  ಹೋಗಾ-ಕ್ಯಾ?
ಖುದಾ ಹಾಫಿಜ್ ; ಫಿರ್- ಮಿಲೆಂಗೇ!. (9)
ಹಂ ಚಲೇ- ಹಂಸಫರ್; ಫೈರ್ ಮಿಲೇ; ತಮ್-ಅಗರ್;
ತಕ್ದೀರ್ ಖುಲೇ-ತೋ-ಮಿಲೇ ; ನಹೀ-ಅಬ್- ಚಲೇ.(10)


  [ ಹೀಗೆ ಬಡೆದೆಮಿಯ-ಚೋಟೇಮಿಯರ;
       ಮುಗಿಯದ ಮಕ್ಹ್ಮಲ್ ಕಾ ಟೋಪಿ
       ದೋ ದಿನ ಕಿ ಚುಂಗ್ ;ತಗಲಿದರೆ ;
       ಚೌದವಿಕಾ ಚಾಂದ್! .]

ಸರ್ವ-ನಾಮನ-ವಾಖ್ಯಾನ

ನಾನು-ನಾವು, ವಂಧಿ-ಮಾಘದ;
ನೀನು-ನೀವು, ಭಾಗವತರು.
ತಾಳ-ಮದ್ದಲೆ$-ಯನು, ಹಿಡಿದು;
ಚೆಂಡೆ ಗುರುವು-ಬಡೆಯಲು.(1)

ನಾದ-ನಾಮ-ಕ್ರಿಯೆ-ಐತಾಳ;
ಭರತ ನಾಟ್ಯ, ತೊಂ-ತಡ್ಗಿನಿ-ತೊಂ
ನಾಂದಿ-ಹಾಡು ಹಾಡಲು;
ಜನಮನವದು ಪಾವನ.(2)
  
ಇವನು ಹಿಡಿದ$-ಶ್ರುತಿ-ಆಲಾ$ಪ;
ಪಿಯಾನವನು ಬಾರಿಸಲು.
ಇವಳ ಕೊಳಲ$ಧ್ವನಿಗೆ;
ವೀನೆ, ಅವಳು ಮೀಟಲು.(3)

ಹರ್ಷಗೈದ, ಅವರು-ಇವರು;
ಸರ್ವ-ನಾಮನ, ವಾಖ್ಯಾನ.
ಮೈಕಿದು-ಮೈಕದು-ಧ್ವನಿಯ;
ಬಾನಂಗಳ, ತತ್ತರ.(4)

ಆಶೆಯಾ$$- ಭರಚುಕ್ಕಿ

ಹುಣ್ಣಿಮೆ ಇಲ್ಲದ ತಾರಾಂಗಣ ದಲಿ;
ಮಿನುಗು ತಾರೆಗಳ ಆಶಾ ಕಿರಣ
ತಾರೆಗಳಂದದಿ ಜೋಗುಳ ಹಾಡಲು
ಆಶೆಯಾ ಭರಚುಕ್ಕಿ$$; ಮಿನುಗಿತು
ಆಶೆಯಾ ಭರಚುಕ್ಕಿ.(1)

ಅಡಗಿದ ಹುಣ್ಣಿಮೆ ಚಂದ್ರ-ಚಕೋರಿ;

ಮಿನುಗಿತು ಆಶೆಯಾ$$- ಭರಚುಕ್ಕಿ.
ಅರುಣ ರಾಗವದು ಪಲ್ಲವಿಹಾಡಲು,
ಬೆಳ್ಳಿಯು ಮೂಡಿತು ನಸುಕಿನಲಿ;
ಕತ್ತಲೆ ಕಳೆಯಿತು ಭರದಲ್ಲಿ.(2)

ಭುವಿತಾಯ ಮಡಿಲಲಿ ಮಲಗಿದ ಶಿಸುವನು;

ಎಚ್ಚರ ಗೊಳಿಸಿತು ಭೂಪಾಳಿ.
ಘಂಟಾಕಿಂಕಿಣಿ-ಶಂಖನಾದದಲಿ;

ಕೆಸರದುಡಿಗೆಯ ಉಷೆ ಸ್ವಾಗತಿಸಲು;
ಪುಲಕಿತ ಗೊಂಡನು ವನಮಾಳೀ.(3)



ಹೊನ್ನಕಿರಣ ರವಿ ಮೂಡಲು ಮೂಡಣ;

ಹಾಡಿತು  ಬೆಳಕು ಬೆಡಗು ತಿಲ್ಲಾಣ.
ಬೆಳಕನು ಕಂಡು ಕೋಕಿಲ ಕುಹೂ ಕುಹೂ;
ಮಾರ್ದನಿ ಗೈದವು ಮೈನಾಗಳು.(4)

ಚಿವ್ ಚಿವ್ ಗುಟ್ಟಲು ಗುಬ್ಬಿಗಳು
ಕಾ ಕಾ ಎಂದವು ಕಾಗೆ ಗಳು.
ರಾಗ-ತಾಳಕೆ ಸ್ವರವ ಸೇರಿಸುತ
ಬರೆದವು ನೇಸರಗೆ ಹೊಸ ಭಾಷೆ.
ಫಲಿಸಿತು; ಆಶೆಯಾ$$- ಭರಚುಕ್ಕಿ. (5)

ಕನಸು ಕಾಣುವದು ಜನುಮದ ಹಕ್ಕು;

ಶ್ರಮಿಸುವ ಬದುಕಿಗೆ ಆಶೆಯ ಚುಕ್ಕಿ.


ಲಭಿಸಲಿ ಬಿಡಲಿ ಆಶೆಯು ಕುದುರೆಗೆ;
ಕಾಣದ ಕನಸಿಗೆ ನನಸು ಫಲಿಸುವ;
ಆಶೆಯಾ$$- ಭರಚುಕ್ಕಿ. (6)
      
     

Saturday 19 May 2012

ಮುಂಗಾರು-ಹಿಂಗಾರು / ಬಸವ ರೈತನ ಕೆಲಸ [ಕಡೆತನಕ].

ಮುಗಿಸಿದ ಮುಂಗಾರು$; ಹೊಮ್ಮಂಡ ಹಾಕಾ$ಕ;
ಭೂಮಿ ಹರಗಿ-ತಯಾರು ಮಾಡ್ಯಾ$ನು.ಕಡಧಾನ್ಯ;
ಬಗೆ- ಬಗೆ ಯಾ$ಗಿ;  ತಂದಾ$ನು. (1)

ಕಡಲೆ-ಮಡ$ಕೆ ; ಹೆ$ಸ$ರು -ಉದ್ದು;
ತನಗಾತು; ಖರ್ಚಿಗೆ ಅಕ್ಕ$ಡಿ;
ಉಳಿದದ್ದು ಮುಂಗಾರಿಗೆ; ಹಿಡಿ-ತಕ್ಕಡಿ. (2) 

ಶೇಂಗಾ ವಥಾನೆ,ಅಲಸಂದಿ$; ತೊಗರೆ-ಬೇಳೆ-ಚೆನ್ನಂಗಿ$;
ಅರಿಶಿನ,ಶುಂಠಿ ಜೀರಿ$ಗೆ$ ; ಹುಳ್ಳಿ-ಮೆಣ$ಸು-ಕತ್ತೆ$ ಅವರೇ;
ಬೇಕಲ್ಲ ನಮ್ಮ$ನೆ ಅಜವಾ-ರಂಗೇ(ಬಸವಣ್ಣ).(3)

ಸರಗಂಟ ದುಡಿದ ಬಸವಣ್ಣಗ ಬಿಟ್ಟಾಗ ;ಭೂಮ್ಯಾ$ಗ ಆಡ್ಯಾ$ಡಿ ಮೇದಾನ;ಹಸಿರಿಲ್ಲ;
ಅಗರಾಣ ನೀರ ಕುಡಿದಾನ; ಆರಂಭದ ಕೆಲಸ ನೆನದಾ$ನ.(4)   

ಮುಂಗಾರು ಹುಲುಸೋ$; ಹಿಂಗಾರು ಹುಲುಸೋ$;
ಹಸನಾ-ದುದು; ಬಸವ ರೈತನನ ಹೊಲ-ಕೆಲಸ;
ತಪ್ಪದು ಎಂದಿಗೂ ಕಡೆತನಕ.(5)     

 

Friday 18 May 2012

ನಮ್ಮ ದೇಶದ ಬರ್ಮುಡಾ (ತಪ್ಪಲಿ)

[ಅಯ್ನೋರ ಚಾವ್ದ್ಯಾಗಿನ ಹಾಸ್ಯ ;
ಒಂದಾನೊಂದು ಕಾಲದಲ್ಲಿ. 

ಹಂಗಿತ್ತು ಅಂದ್ರೆ ಅದು ಈಗಲ್ಲ. ಆದ್ರ
ಇಂಥಾ ಪರಿಸ್ತಿತಿ ದೇಶವ್ಯಾಪಿ
 ಆಗಿದೆ. ಭಾರತ ಭಾಗ್ಯ ವಿಧಾತಾ.]

ಹಾನಗಲ್ಲಾಗ ಹಾಯ್ಬಾರ್ದು;
(ಕಚೇರಿ-ಕಿರ್ಕು )  
ಶಿಗ್ಗಾಂವ್ಯಾಗ ಸಿಗಬಾರ್ದು;
(ಟೋಲಿಂಗ್-ಕಿರ್ಕು)
ಹಾವೇರ್ರ್ಯಾಗ ಸಾಯ್ಬ್ಯಾರ್ದು;
( ಸುಡುಗಾಡು ಗಟ್ಟಿ ದೂರ-
 ಹೊರಾಕ್ -ಜನ-ನೀರು ಕಟ್ಟಿಗೆ)
ಇದ್ರಾಗ್ ಸಿಕ್ಕಂವಗ...
ಕಾಯ್ಯೋ ತಂದೇ$ಯೇ...ದೇವಾ ಕರುಣಿಸೋ... 
ಶಿವನೇ ಜಂಗಮನ ಮಾತಿದು.
ಹಾಯ್ಬಾರ್ದು,ಹಾದರ$; ಸಿಗಬಾರ್ದು,ಸಿಕ್ಕರ;
ಶಿವನ$ ಕಾಸು;ಸಾಯ್ಬ್ಯಾರ್ದು.
      

Tuesday 15 May 2012

ಹಳೆ ಬೇರು ಹೊಸ ಚಿಗುರು ; ಅನುಭವಿಸು ವಿನೂತನ;

ನಾನು ನಾವು , ನೀನು  ನೀವು
ನಮ್ಮ ಕಥೆಯು ಎಲ್ಲಿಗೆ? (1)

ಇವನು ಇವಳು,
ಇವರ ಕಥೆಯು ಎಲ್ಲಿಗೆ? (2)

ಅವನು ಅವಳು 
ಆವರ ಕಥೆಯು ಎಲ್ಲಿಗೆ? (3)

ಇದು ಇವು
ಇಇವುಗಳ ಕಥೆ ಎಲ್ಲಿಗೆ? (4)

ಅದು ಅವು
ಅವುಗಳ ಕಥೆಎಲ್ಲಿಗೆ? (5)

ನಾಂದಿ ಉದಯ ರಾಗದಲ್ಲಿ ;ಆರಂಭದ ಚೇತನ;
ಸಂದ್ಯಾರಾಗದಲ್ಲಿ , ನಿನ್ನ ಅನುಭವಿಸು ವಿನೂತನ;
ಸೂತ್ರ ಧಾರಿ ಸೂತ್ರ ದಂತೆ ನೀ ಕಟಪುತಲಿ ಬೊಂಬೆ.
ಹಳೆ ಬೇರು ಹೊಸ ಚಿಗುರು ; ಅನುಭವಿಸು ವಿನೂತನ.  (6)

ಪಾತ್ರಧಾರಿ ಪಾತ್ರ ; ಕುಣಿಯ ಬೇಕು ಮಾತ್ರ;
ಆಡುವವರ ಆಟವದು; ಬದುಕು ಅದರ ಸೂತ್ರ;
ಹುಟ್ಟು ಸಾವು ಬದುಕಿನಲ್ಲಿ ,ಕಾಲಚಕ್ರದಲ್ಲಿ ಪಾತ್ರ;
ಹಳೆ ಬೇರು ಹೊಸ ಚಿಗುರು ; ಅನುಭವಿಸು ವಿನೂತನ. (7)

ಬದುಕು ಬೇವು ಬೆಲ್ಲ ಸಿಹಿ ಕಹಿ ಇರಬೇಕಲ್ಲ ,ಹುಣಸೆ ಮುಪ್ಪು ಆದರೇನು ಹುಳಿ ಗೇನು ಮುಪ್ಪೇ? 
ಭಾವ ಸಾಗರ-ದೇಳು ಇಳಿವು ಮುಗಿಯದೀ ಕಥೆ;
ಹಳೆ ಬೇರು ಹೊಸ ಚಿಗುರು ; ಅನುಭವಿಸು ವಿನೂತನ. (8)

  

ಹಿಂದೂ ಸಂಖ್ಯಾ ಎಣಿಕೆ ಪದ್ಧತಿ ಮೂವತ್ತೊಂದು ಅಂಕಿಯಸಂಖ್ಯೆ!!!!!

ಹಿಂದೂ ಸಂಖ್ಯಾ ಪದ್ಧತಿ ಮಹಾಜಗತ್ತಿನ ಎಣಿಕೆ ಪದ್ಧತಿಯಲ್ಲೇ ಏಕಮೆವಾದ್ವಿತಿಯ ವಾಗಿದೆ ಎಂದರೆ ತಪ್ಪಿಲ್ಲ್ಲ. ನಾನು ಕಲೆತ ಚಿಕ್ಕಂದಿನ ನೆನಪಿನ ಸುರಳಿಯೋಳಗಿಂದ ಆಯ್ದ ಭಾಗವಿದು ತಪ್ಪಿರಲು ಬಹುದು. ಜಾನವಿದ್ವಾನರಾದ ತಾವು ಮಹನೀಯರು ಸರಿಪಡಿಸಿ ನಮ್ಮ ಮುಂದಿನ ಪೀಳಿಗೆಗೆ ಸಹಕಾರಿಯಾಗಿಸಲು ಸಹಕರಿಸುವಿರಾಗಿ
ಪ್ರಾರ್ಥನೆ. 
ಎಣಿಕೆಯ ಸ್ಥಾನ ಮಾನ: ಎಷ್ಟಂಕಿಯ ಸಂಖ್ಯೆ: ಆಸ್ಥಾನದ ಅತೀ ಚಿಕ್ಕ ಅಂಕೆಯು(1); ಹಾಗೂ ಅತೀ-ದೊಡ್ಡ ಅಂಕೆ (9)  
ದ ಹೆಸರು ................:ಎಷ್ಟಂಕಿಯ ಸಂಖ್ಯೆ : ........................... ಆ  ಸ್ಥಾನದ,ಮುಂದಿರುವ ಸೊನ್ನೆಗಳು
........................................................................................................................................................
ಎಕ್ಕಂ                       ಒಂದು ಅಂಕಿಯ ಸಂಖ್ಯೆ        ....................................                 ಇಲ್ಲ 
ದಹಂ                       ಎರಡು(ಜೋಡು)ಅಂಕಿಯ ಸಂಖ್ಯೆ  .............................                 ಒಂದು 
ಶತಂ                       ಮೂರಂಕಿಯ ಸಂಖ್ಯೆ................................................                 ಎರಡು
ಸಾವಿರ                    ನಾಲ್ಕುಅಂಕಿಯಸಂಖ್ಯೆ  ...............................................             ಮೂರು
ದಶ.ಸಾವಿರ              ಐದಂಕಿಯ ಸಂಖ್ಯೆ.......................................................             ನಾಲ್ಕು  
ಲಕ್ಷ                         ಆರಂಕಿಯ ಸಂಖ್ಯೆ.......................................................               ಐದು 
ದಶ.ಲಕ್ಷ                   ಏಳಂಕಿಯ ಸಂಖ್ಯೆ............................................................         ಆರು  
ಕೋಟಿ                     ಎಂಟ0ಕಿಯ  ಸಂಖ್ಯೆ ..........................................................       ಏಳು 
ದಶ.ಕೋಟಿ               ಒಂಬತ್ತು ಅಂಕಿಯಸಂಖ್ಯೆ ....................................................       ಎಂಟು
ಅರ್ಬುದ                   ಹತ್ತು ಅಂಕಿಯಸಂಖ್ಯೆ..........................................................       ಒಂಬತ್ತು 
ನ್ಯ್ರರ್ಬುದ                  ಹನ್ನೊಂದು ಅಂಕಿಯಸಂಖ್ಯೆ..................................................      ಹತ್ತು 
ಖರ್ವ                       ಹನ್ನೆರಡು ಅಂಕಿಯಸಂಖ್ಯೆ...................................................     ಹನ್ನೊಂದು 
ಮಹಾಖರ್ವ              ಹದಿಮೂರಂಕಿಯ ಸಂಖ್ಯೆ....................................................       ಹನ್ನೆರಡು     
ಪದ್ಮ                       ಹದಿನಾಲ್ಕು ಅಂಕಿಯಸಂಖ್ಯೆ ...............................................      ಹದಿಮೂರು 
ಮಹಾಪದ್ಮ               ಹದಿನೈದು ಅಂಕಿಯಸಂಖ್ಯೆ .................................................     ಹದಿನಾಲ್ಕು 
ಶಂಖ                       ಹದಿನಾರು ಅಂಕಿಯಸಂಖ್ಯೆ .................................................     ಹದಿನೈದು 
ಮಹಾಶಂಖ              ಹದಿನೇಳು ಅಂಕಿಯಸಂಖ್ಯೆ..................................................      ಹದಿನಾರು 
ಕ್ಷೋಣಿ                     ಹದಿನೆಂಟು ಅಂಕಿಯಸಂಖ್ಯೆ ................................................      ಹದಿನೇಳು 
ಮಹಾಕ್ಷೋಣಿ            ಹತ್ತೊಂಬತ್ತು ಅಂಕಿಯಸಂಖ್ಯೆ ..............................................     ಹದಿನೆಂಟು 
ಕ್ಷಿತಿ                        ಇಪ್ಪತ್ತು ಅಂಕಿಯಸಂಖ್ಯೆ .....................................................   ಹತ್ತೊಂಬತ್ತು 
ಮಹಾಕ್ಷಿತಿ                ಇಪ್ಪತ್ತೊಂದು ಅಂಕಿಯಸಂಖ್ಯೆ...................................................    ಇಪ್ಪತ್ತು  
ಪರಿಮಿತಿ                  ಇಪ್ಪತ್ತೆರಡು ಅಂಕಿಯಸಂಖ್ಯೆ................................................. ಇಪ್ಪತ್ತೊಂದು 
ಮಹಾಪರಿಮಿತಿ         ಇಪ್ಪತ್ಮೂರು ಅಂಕಿಯಸಂಖ್ಯೆ ...............................................   ಇಪ್ಪತ್ತೆರಡು
ಸಾಗರ                    ಇಪ್ಪತ್ನಾಲ್ಕು ಅಂಕಿಯಸಂಖ್ಯೆ ...............................................  ಇಪ್ಪತ್ಮೂರು
ಮಹಾಸಾಗರ           ಇಪ್ಪತೈದು ಅಂಕಿಯಸಂಖ್ಯೆ .................................................  ಇಪ್ಪತ್ನಾಲ್ಕು
ನಿಧಿ                        ಇಪ್ಪತ್ತಾರು ಅಂಕಿಯಸಂಖ್ಯೆ .................................................   ಇಪ್ಪತೈದು
ಮಹಾನಿಧಿ               ಇಪ್ಪತ್ತೇಳು ಅಂಕಿಯಸಂಖ್ಯೆ..................................................   ಇಪ್ಪತ್ತಾರು
ಅನಂತ                   ಇಪ್ಪತ್ತೆಂಟು ಅಂಕಿಯಸಂಖ್ಯೆ.................................................   ಇಪ್ಪತ್ತೇಳು
ಮಹಾಅನಂತ          ಇಪ್ಪತ್ತೊಂಬತ್ತು ಅಂಕಿಯಸಂಖ್ಯೆ ...........................................  ಇಪ್ಪತ್ತೆಂಟು
ಊರ್ಧ್ವ                   ಮೂವತ್ತು ಅಂಕಿಯಸಂಖ್ಯೆ ...............................................ಇಪ್ಪತ್ತೊಂಬತ್ತು
ಪರಾರ್ಧ                 ಮೂವತ್ತೊಂದು ಅಂಕಿಯಸಂಖ್ಯೆ..........................................     ಮೂವತ್ತು

Monday 14 May 2012

ಸೋಬನ ದ ಸೋಬಾನ ನೀವಾಗ ಬೇಡಿ; (ರಚನೆ :ಸ್ವಂತದಲ್ಲ)

ಹುಚ್ಚೆದ್ದ ಹೊಳೆಯು ಎತ್ಹೊತ್ತು ನಿಂತೀತು;
ಸಾವರ್ಸಿ ದಿನವ ನೂಕಬೇಕು;
ತಾಳಿದವನು ಬಾಳಿಯಾನು.(1)
 
ಬಂದದ್ದು ಬರಲವ್ವ; ಎದೆಗೊಟ್ಟು ನಿಲ್ಲಬೇಕು,
ಹೆದರಿದರೆ ಬೆನ್ನು ಬಿಡದವ್ವ;ನನ ಮಗಳೇ;
ಒದಗಿದರೆ ದು:ಖ ಒಳನುಂಗು.(2)  

ಸೋಬನ ದ  ಸೋಬಾನ ನೀವಾಗ ಬೇಡಿ;
ಅಜ್ಜ ನೆಟ್ಟ ಆಲವಾಗಿ ಕೂಡ ಬೇಡಿ;
ಎಲ್ಲಾದರು ಇರಿ ಎಂತಾದರು ಇರಿ;
ಎಲ್ಲರೊಳಗೊಂದಾಗಿ ಸುಖವಾಗಿರಿ.(3)


ಉಂಡಾಗ ಉಡುವಾಗ ಊರೆಲ್ಲ ನೆಂಟರು,

ಗುಣಕಿಂತ ಮಿಗಿಲಾಗಿ ಹಣವಂತರಾದರೆ
ಎಲ್ಲಾರು ನಮ್ಮವರೆನಮ್ಮವರೆ .(4)
    
ಇದ್ದುದ ಕಳಕೊಂಡು ನೀನಾದರೆ;ಪದದೊರು ಗುರುತ ಮರೆಯುವರು.
ಸಾವರ್ಸಿ ದಿನವ ನೂಕಬೇಕು;(5)
ಅಧಾರ:ಜನಪದ ಕವಿತೆ (ರಚನೆ :ಸ್ವಂತದಲ್ಲ)
 

ಎಲ್ಲ ಕೆಲಸವ ಮಾಡಿ ಮುಗಿಸುವೆ. ನಿಮ್ಮ ಕಥೆ ಮುಂದೇನು?

ಮಿಲ್ಲರ್ ಮ್ಯಾನ ನ ಮಿಲ್ಲು ಹೋಗಿದೆ ಮನೆ ಮನೆಗೂ ಮಿಕ್ಷಿಗ್ರಾಯ್ನಂಡರು.
ಗುಂಡಾ ಭಟ್ಟರ  ಗುಂಡು ಕಲ್ಲಿಗೂ ಅಡುಗೆ ಭಟ್ಟರ ಅಡಗಲ್ಲು.
ರುಬ್ಬಲು ಬೇಕೇ ,ತಿರುವಲು ಬೇಕೇ,ಕುಟ್ಟಿ ಪುಡಿ ಮಾಡಲು ಬೇಕೇ.
ಗರಂ ಮಸಾಲೆ ಸಾಂಬಾರ್ ಪೌಡರ್ ಚಟ್ನಿ ಎಲ್ಲಾ ವಂಡರ್-ಫುಲ್.(1)
 
ಎಲ್ಲಾ ನಾನೇ ಮಾಡಿ ಮುಗಿಸುವೆ;ಮನೆ ಮನೆಗೂ ಮಿಕ್ಷಿಗ್ರಾಯ್ನಂಡರು.
ಕಣ್ -ಪಿಟಿರ್ ಮಾಡುವ ಕಂಪ್ಯೂಟರ್ ಹೇಳುವದೇನು ಗೊತ್ತೇ?
ಎಲ್ಲ ಕೆಲಸವ ಮಾಡಿ ಮುಗಿಸುವೆ. ನಿಮ್ಮ ಕಥೆ ಮುಂದೇನು? (2)      

ಗದಿಯಾರದ ಗಂಟೆ ಹನ್ನೆರಡು;

ಗಡಿಯಾರದ ಗಂಟೆ ಹನ್ನೆರಡು;
ಒಂದರಿಂದ ಹನ್ನೆರಡು.(1)

ದಿವಸಕೆ(ಗಂಟೆ) ತಾಸು; ಇಪ್ಪತನಾಲ್ಕು.
ಗಂಟೆ(ತಾಸಿ)ಗೆ ಮಿನಿಟು-ಗಳರವತ್ತು.
ಮಿನಿಟಿಗೆ ಸೆಕಂದು-ಗಳರವತ್ತು.(2)
ಕಣ್ಣು ಪಿಳಿ ಪಿಳಿ ಬಡೆಯಲು;
ತಗಲುವ ಸಮಯವು; ಸೆಕೆಂಡು.
ಧಡ ಧಡ ಬಡೆಯುವ ಎದೆ ಬಡಿತ;
ತಗಲುವ ಸಮಯವು; ಸೆಕೆಂಡು.(3)

ನಾಡಿಯ ಬಡಿತಕೆ ಎಣಿಸುವ ಸಮಯ

ಸೆಕೆಂಡಿನದೇ ಕಿಸ್ಮತ್ತು.
ಸಮಯವ ಲಾಲಿಸಿರಿ ; ಶಿಸ್ತನು ಪಾಲಿಸಿರಿ.(4)      
 

ತಪ್ಪದು ಎಣಿಸಲು ದಿನ ಮೂವತ್ತು.

ಎಪ್ರಿಲ ಜೂನ ನೋವ್ಹೆಂಬರ ಸಪ್ತೆಂಬರ;
ಇವು ನಾಲ್ಕು ಎಣಿಸಲು;

ಮೂವತ್ತು ದಿನಗಳ ತಿಂಗಳು.
ಫೆಬ್ರುವರಿಯಲಿ ದಿನ ಇಪ್ಪತ್ತೆಂಟು;ಇಪ್ಪತ್ತೊಂಬತ್ತು.
ಉಳಿದವುಗಳ ದಿನ ಮೂವತ್ತೊಂದು.
ತಪ್ಪದು ಎಣಿಸಲು ದಿನ ಮೂವತ್ತು.   

ಪ್ರತಿ ವಾರಕೆ ಎಳೇ ಏಳು ದಿನ.

ದಿನ ದಿನಕೊಂದು
ಹೆಸರಿದೆ ವಾರ.
ಇಂದು ಯಾವ ದಿನ
ಯಾವ ವಾರ? (1)


ಪ್ರತಿಯೊಂದಿನಕಿದೆ
ಹೆಸರಿನ ವಾರ

ಭಾನುವಾರ ದಿಂದ ಶನಿವಾರ. (2)

ಭಾನುವಾರ ದಿಂದ ಶನಿವಾರ,
ಎಣಿಸುವೆ ಜಾಣ ಈ ಏಳು ದಿನ.
ದಿನಕೊಂದು ವಾರ, ಏಳು ದಿನ. (3)

ವಾರ ವಾರಕೂ ಏಳು ದಿನ;

ಪ್ರತಿ ವಾರಕೆ ಎಳೇ ಏಳು ದಿನ.(4)

ವರುಷಕೆ ತಿಂಗಳು ಹನ್ನೆರಡು;

ವಾರ ವಾರಕೂ ಏಳು ದಿನ,
ಮಾಸ ಮಾಸಕೆ ಹೊಸ ತಿಂಗಳು;

ಮಾಸಕೆ ನಾಕು ವಾರಗಳು.(1)

ವರುಷಕೆ ತಿಂಗಳು ಹನ್ನೆರಡು;
ಹಿಂದೂ ತಿಂಗಳು ಹನ್ನೆರಡು,
ಅಂಗ್ರೇಜಿ ತಿಂಗಳು ಹನ್ನೆರಡು,(2)

ಚೈತ್ರ ದಿಂದ ಫಾಲ್ಗುಣ ವರೆಗೆ
ಹಿಂದೂ ತಿಂಗಳು ಹನ್ನೆರಡು;
ಜಾನೆವಾರೀ ಇಂದ  ಡಿಸೆಂಬರ ತನಕ

ಅಂಗ್ರೇಜಿ ತಿಂಗಳು ಹನ್ನೆರಡು,(3)
  

ಜೋಗುಳ ಪಾಡುವೆ ಕಂದ ಮುರಾರಿ!

ಜೋ ಜೋ$$ ಜೋ ಜೋ$$ ಲಾಲೀ- ಲಾಲೀ!
ಜೋಗುಳ ಪಾಡುವೆ ಕಂದ ಮುರಾರಿ!
ಮಂದ ವಾಗಿಸೆ ದೀಪ ನಿನ್ನ ಮಲಗಿಸಲು;
ಮೆಲ್ಲ ಮೆಲ್ಲಾನೆ ತೂಗುವೇ ನಿನ್ನ ತೊಟ್ಟಿಲು.(1)

ಮಲಗು ಮಲಗು ನನ್ನ $$ ಚಿನ್ನ- ರನ್ನ;
ದಿನ ವಿಡಿ ನಲಿದಾಡಿ ದಣಿದಿರುವೆ ಚಿನ್ನ.
ಜೋ ಜೋ$$ ಜೋ ಜೋ$$ ಲಾಲೀ- ಲಾಲೀ!
ಮೆಲ್ಲ ಮೆಲ್ಲಾನೆ ತೂಗುವೇ ನಿನ್ನ ತೊಟ್ಟಿಲು.(2)

ಜೋಗುಳ ಪಾಡುವೆ ಕಂದ ಮುರಾರಿ!
ಜಗವ ನಾಡಿಸು ತಿರುವೇ ನಿನ್ನ ತೆರದಲಿ.
ನಿನ್ನಾಟ ಪಾಠಕೆ ಎಣೆಯುಂಟೆ ?     
ದಿನ ವಿಡಿ ನಲಿದಾಡಿ ದಣಿದಿರುವೆ ಚಿನ್ನ. (3)

ಬಿಸಿ ಬಿಸಿ ನಿರಲಿ ನಿನಗಭಿಷೇಕ;

ಎಲೆ ಎಲೆ ಕಂದ ಮುದ್ದು ಮುಕುಂದ;
ಕಣ್ಣಾಲಿಸುತಿವೆ ಪಿಳಿ ಪಿಳಿ ಚೆಂದ.

ಪುಟ್ಟ-ಹೆಜ್ಜೆ-ಗೆಜ್ಜೆ ನಾ$ದ ದಿಂದ;
ಮತಿ ಮರೆಸುತಿದೆ ಮನಕಾನಂದ.(1)
ಅಂಗುಷ್ಟದಿಂದ ತಲೆ ತನಕ;
ಎಣ್ಣೆಯ ಲೇಪಿಸಿ ತಟ್ಟಿ ತಟ-ತಟ;
ತೈಲಂಜನ ಬಿಸಿ-ಬಿಸಿ ಮಜ್ಜನ. (2)


ಚಂದದ ಗಂಧ ಪರಿಮಳದ ಲೇಪ; 
ಬಿಸಿ ಬಿಸಿ ನಿರಲಿ ನಿನಗಭಿಷೇಕ;
ಸೋಪಿನ ನೊರೆಯಲಿ ಮುಳುಗಿಸುತ
ಬಿಸಿ ಬಿಸಿ ನೀರಲಿ ನಿನಗಭಿಷೇಕ; (3)


ಮೈಯನು ಒರೆಸುವೆ,ಬಟ್ಟೆಯ ಸುತ್ತುತ;
ಸ್ನೌ ಪೌಡರಗಳ ಭಸ್ಮದ ಲೇಪ.
ದಟ್ಟಿಯ ಬೊಟ್ಟು; ಕಣ್ಣಿಗೆ ಕಾಡಿಗೆ.
ಬಣ್ಣ ಬಣ್ಣ ದ ಅಂಗಿ ತೊಡಿಸುವೆ;ನಿನಗೆ.(4)                     

ದಣಿದ ಮನ ತಣಿದಾಗ

ದುಡಿ ದುಡಿದು ದಣಿದಾಗ
ತಂಪು ನೀರನು ಕುಡಿದು 
ದಣಿದ ಮನ ತಣಿದಾಗ
ಹಾಯಾಗಿ ಒರಗಿರಲು
ಮಾಮರದ ಅಡಿಯಲ್ಲಿ
ಪರಮಾತ್ಮ ಸುಖಗೊಂಡ
ನಿದ್ದೆ ಗೊರಕೆಯಲಿ.(1)
  
ಕುಹೂ ಕುಹೂ ವಾಣಿಯಲಿ
ಮಂದ ಕೋಕಿಲ ಗಾನ
ಹೂವ ಮಧು ಕೇಸರದ
ಬಂಡುಂಬು ತಿರುವಾಗ
ಹಿಂಡು ದುಂಬಿಯ ಮತ್ತು
ಝೇಂಕಾರ ದಲ್ಲಿ.
ಹಾರಿಹೋಯಿತು ನಿದ್ದೆ
ಕಂಠ ಸ್ವರದಲ್ಲಿ.(2)

           
ಹೊತ್ತು ಹೊತ್ತಿಗೆ ಬಾಳು
ಕೊಡುವಾತ ಕೊಡುತಿರಲು   
ತುತ್ತು ಜೀವಕೆ ಕೂಳು
ನೆಮ್ಮದಿಯ ಜೀವಕ್ಕೆ
ಹಾರೈಸುತಿಹುದು.(3)

Tuesday 1 May 2012

ಮಿನುಗು ತಾರೆ; ಮೇಘ ಮಾಧವ.

ನೀಲ ಹಾಳೆ ಯಲ್ಲಿ,ಮೇಘ;
ಶ್ಯಾಮ-ನ,ಚಿತ್ತಾರ.
ರಚಿಸೆ ನೀಲ ಬಣ್ಣ ದಲ್ಲಿ;
ಕಾಣೇ ಗಗನ ದೆತ್ತರ. (೧)
ನಾನು ಬರೆದ ಚಿತ್ರ ವೆಲ್ಲ;
ಗಗನ ನುಂಗಿ ಹಾಕಿತೇ?
ಇಲ್ಲ ವೆಲ್ಲ ನೋಡುತಿಹನೇ?
ಮೇಘ ದೂತ; ನರಸನೆ?. (೨) 
ಮೇಘ ಮಡಿಲ ಬಾಳಲಿ;
ಭಾನು-ಚಂದ್ರ ಬೆಳಕಲಿ.
ಇಲ್ಲ ದಿರಲು ಮಿಣುಕು;
ಹುಡುಕುತಿಹೆ ತಾರೆ ಬೆಳಕಲಿ.(೩)
ತಿರಚಿ ದೂತ ಹಿಡಿದ ನವನ,
ನೋಡು ಅವನ ಪರಿಯಲಿ.
ದಿನಕರನವ ಹಗಲಲಿ
ಬಿದಿಗೆ ಇಂದ ಇರುಳಲಿ. (೩)
ಬೆಳದಿಂಗಳ ಚಂದಿರ;
ಮಿನುಖುಳುಪರಿ;ಬಾನಲಿ;
ಮಿನುಗು ತಾರೆ;
ಮೇಘ ಮಾಧವ.   (೪)

  
     
 

ರಾಧೆಯಂತೆ ಮೆರೆಯುವೆ.

ನವಿಲೇ ನವಿಲೇ ಬಾರೆ ಇಲ್ಲಿ 
ನಿನ್ನ ಗರಿಯ ಬಿಚ್ಚಿ ಕುಣಿವೇಯಾ;
ಅಚ್ಚು ಮೆಚ್ಚು ನಿನ್ನ ಗರಿಯ ಬಿಚ್ಚಿ ಎನಗೆ ಕೊಡುವೆಯಾ;
ಝಗ ಮಗಿಸುವ ಅಂದ ಗರಿಯ ಲಂಗಹೊಲಿಸಿ ಕೊಲ್ಲುವೆ.(1)
ನಿನ್ನ ಹೆಜ್ಜೆಯಲೀ ಹೆಜ್ಜೆ ಗೆಜ್ಜೆ ಕಟ್ಟಿ ಕುಣಿಯುವೆ.
ಜುಟ್ಟ ನಿನ್ನ ಕೊಟ್ಟರೆ ಪುಟ್ಟನ ಕೃಷ್ಣ ನ ಮಾಡುವೆ.(2)
ಅವನ ಕೊಳಲ ದನಿಯ ಕೇಳಿ 
ರಾಧೆಯಂತೆ ಮೆರೆಯುವೆ.(3)
ನವಿಲೇ ನಿನ್ನ ನಿತ್ಯ ನಲಿವೆ.
ನಲಿವಿನೆಲ್ಲ ನೋವ ಮರೆತು;
ಥಕ-ಥಕ-ಥೈ ಕುಣಿಯುವೆ.(4)
   
  

ಆನಂದದ ಆ ಸುಂದರ ಬೀಡು.

ಸುಂದರ ಬನದ ನಂದನ ದೊಳಗೆ;
ಎಲ್ಲೆಲ್ಲು ಹಸಿರಿನ ಉಸಿರು.
ಗಿಡ-ಬಳ್ಳಿ- ಮರ ಹೂ ಕಾಯಿ ಹಣ್ಣನು ಬಿಡಲು;
ಗಳಪಲು ಬರುವ ಹಕ್ಕಿಗಳ ಹಿಂಡು.
ಆಲಿಸು ಅವುಗಳ ಚಿಲಿಪಿಲಿ ದಂಡು.
ಆನಂದದ ಆ ಸುಂದರ ಬೀಡು.
ಸಂಜೆಯ ಮೋಡ ಸುಂದರ ನೋಡು;
ನೀಲಾಂಬರದಲಿ ಕರಿ ಬಿಳಿ ಮೋಡ,
ಪಡುವಣ ತೀರದಿರವಿಯ ಹೊಂಬಣ್ಣ.
ಅಸ್ತಂಗತ ನಾಗಲು ರವಿಯಣ್ಣ.
ನಸುಗತ್ತಲೆ ಮೊಳಗಿತು ನೋಡಣ್ಣ.
ಇರುಳನು ಸರೆಸುತ ತಾರೆಗಳಡಗಲು
ಚಂದಿರ ಮೂಡಿದ ತಾರಂಗಣದೊಳು
ಬೆಳ್ಳಿಯ ತೆರೆಯ ಅಲೆಗಳ ಮೇಲೆ
ಕರಿಬಿಳಿ ಮೋಡದ ಮುಸುಕಿನ ಒಳಗೇ
ತೇಲುತ ಸಾಗಿದ ಚಂದ್ರಾಮ.
ನೀಲಾಂಗಣ ದಡಿ ಅನಂತ ಪ್ರೇಮ.            

ಒಟ್ನಲ್ಲಿ ಹಾಳಾದ್ನಯ್ಯ; ಸಿದ್ದ್ರಾಮಯ್ಯ

ಇಲ್ಲಿ ಶಿವನೇ ಸಿದ್ದಯ್ಯ ; ಅಲ್ಲಿ ನೋಡಿದ್ರೆ ಹಾಲ್ಗ್ವಾಡಿಲಿ ಬಿದ್ದಾನಯ್ಯ.
ಇಲ್ಲಿ ಉಟ್ಟುಟ್ಕೋಕೊಂಡು ಹಾಯ್ಯಾಗಿ ಇದ್ದೊವ್ನು
ಅದು ಹ್ಯಾಗೆ ಕೆಟ್ಹೋದ್ನಯ್ಯ;ಶಿವ ಸಿದ್ದಯ್ಯ.(೧)

ಇಲ್ಲಿ ಖಲಿಫಯ್ಯ; ಅಲ್ಲಿ ಫಕಿರಯ್ಯ!!!
ಹಾದಿ ಬಿಟ್ಮ್ಯಾಗೆ ಯಾರೇನು? ಹೆಂಗ್ಯೇನು?
ಅದು ಹ್ಯಾಗೆ ಕೆಟ್ಹೋದ್ನಯ್ಯ;ಶಿವ ಸಿದ್ದಯ್ಯ.(2)

ಎಲ್ಲಿ ಶಿವ ಸಿದ್ದಯ್ಯ? ಎಲ್ಲಿ ಸಿದ್ದ್ರಾಮಯ್ಯ?
ನೋಡ್ ಶಿವನ ಹ್ಯಾಂಗ್ ಆಗ್ಹೋದ ಹೆಂಗ ಸಿದ್ದ್ರಾಮಯ್ಯ
ಒಟ್ನಲ್ಲಿ ಹಾಳಾದ್ನಯ್ಯ; ಸಿದ್ದ್ರಾಮಯ್ಯ. (೩)

ಶಿವ ಪಾಪಿ ಕಾಪಾಡೋ ಹಾದಿ ಬಿಟ್ಟವಗೆ!!!
ಸರಿ ದಾರಿಬರಲು ನಿನ್ಕರುಣೇ-ಬೇಕಯ್ಯ.
ಬೇಡುವೆ ಕರುಣಿಸಿ  ಕಾಪಾಡಯ್ಯ. (೩)

ಖಾನಾಪುರ ಮಲಪ್ರಭೆ

ಖಾನಾಪುರ ಮಲಪ್ರಭೆ ಮನ ತುಂಬಿ ಹರೆದು ಭಾರಿ ಸುದ್ದಿ ಮಾಡ್ಯಾಳ;
ಘಟಪ್ರಭೆ ಧಬ-ಧಭೆ ಸದ್ದನು ಮಾಡಿ ಭರ್ಜರಿ ಜೋರ ಹರಿದಾಳ;
ನೋಡಾಕ್  ಔತಣ ತವರಲಿ ನಿಡ್ಯಾಳ. (೧)

ಹುರುಪಿನ ಜನ ಮನಸ ಮಾಡ್ಯಾರ. ರಾಗಿ ಮುದ್ದಿ,ನುಚ್ಚಂಬ್ಲಿ ಜಡದು;
ಕಡಕ್ ರೊಟ್ಟಿ ಇಡುಗೈ ಪಲ್ಲ್ಯ ರಂಜಕಾ ಚೆಟನಿ ಬುತ್ತಿ ಗಂಟ ಕಟ್ಟ್ಯಾರ.
ಗಂಡಸರಿಗೊಂದು ಹೆಂಗಸರಿಗೊಂದು ಎರಡು ಟೆಂಪೂ ಮಾಡ್ಯಾರ (೨)

ಲಿಂಬಿ ಹಣ್ಣು ಗಾಲಿಗಿಟ್ಟು ಹಣ್ಣು ಕಾಯಿ ಎಡೆ ಕೊಟ್ಟು
ಧೂಪ ದೀಪ ಆರತಿ ಎತ್ತಿ ಗ್ರಾಮ ದೇವಿ ಗೆ ಕೈ ಮುಗಿದು;
ಶುಭದ ಹರಕೆ ಹೊತಾರೆ. ಖುಷಿಯಲಿ ಟೆಂಪೋ ಹತ್ತಿದರು. (೩)

ಗರಿ ಗರಿ ಇಸ್ತ್ರಿ ಬಟ್ಟೆ ಅವ್ರವರಿಸ್ಟ್ ವೇಷ ಭೂಷ ಮಾಟಾಗಿ ಹಾಕೊಂಡು;
ಎಲ್ಲರು ಒಟ್ಟಾಗಿ ಹೊಂಟಾರ. ಜೋರಾಗಿ ಬಹೂಪರಾಕ್ ಹೇಳ್ಯಾರ.
ಅತ್ತಿ ಆಳದ ಮರ ಸುತ್ತು ಬೇವಿನ ಮರ ನಡುವೆ ಮುತ್ತತ್ತಿ ಮರ
ಕುಂತ ಧಾರವಾಡ ಉಳವಿ ಚೆನ್ನ ಬಸವೇಶ್ವರ ಬಹೂಪರಾಕ್. (೩)
  
ಹೊಗಾಕ್ ಬೇಕು ಗೋಕಾಕ; ತಿನ್ನಾಕ ಬೇಕು ಕರದಂಟ.
ಗಡಿಬಿಡಿ ಮಾಡ ಬ್ಯಾಡ ಗಡ-ಬಡ್ ಭಾರಿ ತಿಂದಾರ.
ಬೆಳಗಾಂ ಕುಂದಾ ತಂದಾರ ಸಂಪಾಗಿ ಕುಂತ ತಿಂದಾರ.
ಪದಗಳ ಬಂಡಿ ಹಚ್ಚ್ಯಾರ.(೪)

ಎಳನೀರು ಕಂಠಮಟ ಕುಡದಾರ. ಗಮ್ಮತಲ್ಲಿ ಪ್ರಯಾಣ ಹೊಂಟಾರ.
ಮಿರ್ಚಿ ಭಜಿ, ಕಾಂದಾ ಭಜಿ, ಗಿರ್ಮಿಟ್ ಭರ್ಜರಿ; ಹೊಡ ದಾರ.
ಮತ್ತೆನೀಲ್ಲ ನವ್ಲೂರ್ ಪೆರ್ಲ್ಹಣ್ಣ ತಿಂದಾರ. ಪಡ್ಡೆ ರಂತೂರ ತಿರ್ಗ್ಯಾರ.
ಲೈನ್ ಬಜಾರ್ ಧಾರವಾಡ ಪೇಢ;ಖಂಡಿತ ಕೊಂಡಾರ. (೫)

ಭರ್ಜಾರಿ ಸೀರಿ ಲಂಗಾ ದಾವಣಿ ಅವರವ್ರಿಗಿಸ್ಟ ತೊಟ್ಟಾರ;
ಹಾಡಿನ ಬಂಡಿ ಕಟ್ಟ್ಯಾರ. ಎಲ್ಲಮ್ಮಗೆ ಉಧೋ ಉಧೋ ಅಂದಾರ.
ಹಾಕ್ಯಾರ ಕೈತುಂಬಾ ಕಾಜಿನ ಬಳೆ; ತೊಡಿಸ್ಯಾರ ಇಚಲ್ಕರಂಜಿ ಸೀರೆ.
ಚೂಡಿ-ದಾರಾ ಅಂದ ಚೆಂದ ತೊಡುಗೆ ತೊಟ್ಟಾರ. (೬)

ಧಬೆ ಧಬೆ ಊರಾ ಸೇರ್ಯಾರೆ; ತೂಗು ಸೇತುವೆ ಮೇಲೆ ಹೊಯ್ದಾರೆ.
ಮಲ್ಲವ್ವಗೆ ನೋಡಿ  ಮನಸಾರೆ ಕೈಮುಗಿದಾರೆ.
ಪೂಜೆ ಹೂ ಹಣ-ಕಾಯಿ ಎಡೆ  ಮಾಡ್ಯಾರೆ.
ಆನಂದ ಸಾಗರಕೆ ಕೈ ಬಿಸ್ಯಾರೆ; ಹೋಗಿ ಬಾ ತಾಯಿ ಅನ್ದಾರೆ.(೭)

ತವರವರ ಕಂಡು ಉಕ್ಕಿ ಉಕ್ಕಿ  ಹರಿದು ಮುಂದ ಮುಂದಕೆ ಸಾಗ್ಯಾಳೆ;
ಹತ್ತೂರ ಸೇವೆ ಹರಸ್ಯಾಳೆ ನಮ್ಮಮ್ಮ. ಕೊನೆ ತನಕ ನಮ್ಮ ಸಾಕ್ಯಾಳೆ.   
ರಾಜ ನಾದರೇನು ರಂಕ ನಾದರೇನು ಎಲ್ಲರಿಗು ಒಂದೇ ನಮ್ಮವ್ವ. (೮)
ಸಿರಸಿಯ ಮಾರೆಮ್ಮ, ಚಂದ್ರಗುತ್ತಿ ಗುತ್ತೆಮ್ಮಾ.ಜೋಯಿಡಾ ದುರ್ಗಮ್ಮ ;
ಸವದತ್ತಿ ಎಲ್ಲವ್ವ, ತಿಳವಳ್ಳಿ ದ್ಯಾಮ್ಮವ್ವ;
ದಾಂಡೇಲಿ ಜಗದಂಬೆ, ಕೊಲ್ಲೂರ ಮೂಕಾಂಬೆ,ಜದಂಬೆ. (೯)

ಉಡಿಯಲಿ ನೀಡೌರೆ; ದಾಳಿಂಬೆ ಮೊಸಂಬೆ;
ಪ್ರಸಾದ ನಿಡೌಳೇ;ಪನಿವಾರ-ಫಳ್ಹಾರ ಏಕ್ಕುಂಬೆ;
ತಿಂದುಂಡು ತೆಗ್ಯಾರೆ ಜಗದಂಬೆ. (೧೦)

ಸವಣೂರೆಲೇ,ಸಿಂಪಿ-ಸುಣ್ಣ ,ಚಿಕಣಾ-ಅಡಕಿ,ಕಾಚುಪುಡಿ
ಕಸಕಸಿ ಏಲಕ್ಕಿ ಹಾಕಿ ಮಡಿಚಿ, ಬಾಯೋಳಗಿಡಲು;
ಕಲ್ಲು ಸಕ್ಕರೆ ಧನ್ನ್ಯ ಎಂದಿತು ಆ ಗೋವೆ ಗೋಡಂಬೆ.(೧೧)
  
   

ಪಾಪು ಅಂದಿತು ಥಾಂಕ್ಯೂ ಮರಿ.


ಕೋ ಕ್ಕೊ - ಕೋಳಿ
ಕುಹೂ - ಕುಹೂ ಕೋಗಿಲೆ;
ಕಾ$$-ಕಾ$$-ಕಾಗೆ;
ಚಿವ್ವ್ $ಚಿವ್-ಗುಬ್ಬೆ 
ಗುಕ್ ಗುಕ್ ಎನ್ನುವ;
ಗೂಬೆಯ ಬೊಬ್ಬೆ;
ಹಕ್ಕುಕ್ ಎನ್ನುವ ಗೊರವಂಕ 
ಮಿಯಾವ್ ಬೆಕ್ಕಿನ ಸಪ್ಪಳ ಆಲಿಸಿ;
ಇಳಿಯು ಸೇರಿತು ಬಿಲದಲ್ಲಿ.
ಅಂಬಾ$$ ಅಂಬಾ ಹಸು-ಕರು ಕರೆಯಿತು;
ಗೌಳಿಯ ದೊಡ್ದಿಯಲಿ.
ಬೌ ಬೌ  ಬೊಗಳಿತು ನಾಯಿ ಮರಿ.
ಪಾಪು ಅಂದಿತು ಥಾಂಕ್ಯೂ ಮರಿ.

Sunday 29 April 2012

ಮೇಘರಾಜನ ಫರ್ಮಾನು!!!

ವನಚರಿ ತೋಳ ನರಿ ಹದ್ದುಗಳು;
ಮಾಂಸ ತಿನ್ನುವ ಪ್ರಾಣಿಗಳು;
ವಿಚಾರ ವಿನಿಮಯ ಮಾಡಿದವು.
ಕೂಡಲು ಮಂಗವು ಕತ್ತೆಯ ಮೇಲೆ;
ಮೆರವಣಿಗೆಯನು ಮಾಡಿದವು; 
ಮೇಘ ರಾಜನ ಸಭೆಗವು ಬರಲು.
ತಮಗೆ ನ್ಯಾಯವ ಕೇಳಿದವು.
ಚಿತ್ತದಿ ಆಲಿಸಿ ಮೇಘ-ರಾಜನು;
ಹೊರಡಿಸುತ ಫರ್ಮಾನೊಂದು.
ನನಗೆ ಪ್ರಿಯ ಸಸ್ಸ್ಯಾ-ಹಾರ;
ನಿಮಗೆ ಪ್ರಿಯ ಮಾಂಸಾ-ಹಾರ.
ಹಸಿವಿಗೆ ಪ್ರಿಯವೇ-ಆಹಾರ.
ಮಿಗಿಲದಕೆ? ಬದುಕೇ?
ಕೊಡುವೆನು ನಿಮಗೆ;
ತಿನ್ನಲು ಪ್ರಾಣಿಗಳ
ಅಷ್ಟಕ್-ಕಷ್ಟೇ  
ಮಾಂಸಾ-ಹಾರ.
ತಪ್ಪದಿರಿ ಈ ಋಣ-ಭಾರ


 

Saturday 28 April 2012

ಹಾರುತಲಿದ್ದೆ ಹಕ್ಕಿಯ ತೆರದಲಿ

ಹಾರುತಲಿದ್ದೆ ಹಕ್ಕಿಯ ತೆರದಲಿ
ಕನಸಿನ ಲೋಕ ವಿಹಾರದಲಿ,
ಮನದಾಸೆಯ ಆ ಕನಸಿನಲಿ.
ಬೇಸಿಗೆ ಬಿಸಿಲ ಬೇಗೆಯಲಿ,
ಬೇವಿನ ಮರದ ತಂಪಿನಲಿ.
ಕರಿ ಬಿಳಿ ಮೋಡದ ಹನಿಗಳೊಡೆಯಲು;
ನಿದ್ದೆಯು ಹಾರಿತು ಭರದಲ್ಲಿ,

ನೆನಪಿನಂಗಳ ದೊಳಗೆ ಪ್ರಾಥಮಿಕ ಸಾಲೆ[part1]

ನೆನಪಿನಂಗಳ ದೊಳಗೆ ಕ್ಷಣಿಕ ಮುತ್ತೊಂದರಳಿ
ಬಾಳ ಚಿಗುರಿನ ಕೊನರು ಹೊರಹೊಮ್ಮಿತಲ್ಲಿ;
ಓದುಗರೇ ಹುದುಗಿಹುದು ನನ್ನ ಕಥೆ ಇಲ್ಲಿ. (೧)
ಬಾಲ-ಬಳಗದ ಬಾಳು ಹಾಲು-ಸವಿ-ಜೇನು,
ತೊದಲು ನುಡಿ ನಡೆ ಮಾಟ; ಚೆಂದ-ಮಾಮನ ಕಥೆಯು.
ಕಥೆ ಕೇಳಿದ ಮೇಲೆ ನಿದ್ದೆ ತಗಲುವದು. (೨)
ತುಂಟ ಹಟಮಾರಿತನ ಸಿಟ್ಟು ಸೆಡಕು;
ಬಡೆತ ಗದರಿಕೆಗಳಲಿ ಬಿಕ್ಕಳಿಸುತಲಿಹುದು;
ಮಾಯಾ ಮೋಹದ ಜಾಲ ಮುದವ ತುಂಬಿಹುದು.(೩)
ಸಾಲೆ ಹೋಗುವ ಪರಿಯು ಹಿರಿಯ ಬಾಲರು ಹೊರುವ
ಮರಕೋತಿಯ ಮಜವು,ತುಂಬಿಹುದು ನೆನಹು.(೪)
ಹೊಸ ಅಂಗಿ ಹೊಸ ಪಾಟಿ ಖಾಕಿ ಚಡ್ಡಿಯ ಧರಿಸಿ 
ಹಣಿಗೆ ನಾಮವ ನೆಳೆದು ತಲಿಗೆ ಟೊಪ್ಪಿಗೆ ಹಾಕಿ
ಹೊರಟೆ ಸಾಲೆಗೆ ಮಾಣಿ ಚಿಣ್ಣರ ಜೊತೆಯಲ್ಲಿ. (೫)
ದೇವಿ ಶಾರದೆ ಲಕುಮಿ ಧ್ಯಾನ-ಮನ ಮುಗಿಸಿ
ಅವರವರ ತರಗತಿಗೆ ಆ ಮಕ್ಕಳನು ಕಳಿಸಿ;
ಹರಸಿ ಗುರುಗಳು ಕಂಠ ಪಾಠ ಓಲೈಸಿ.(೬)
ಹಲಿಗೆ ಬಳಪದ ಬರಹ ಲೆಕ್ಕಣಿಕೆ ದೌತಿ,
ಅಂದಿನಂದಿನ ಪಾಠ ಮಾಡಲಾಗದೆ ಅಲ್ಲಿ,
ಚಿಮಣಿ ದೀಪದ ಕೆಳಗೆ ಆ ರಾತ್ರಿ ಸಾಲೆ. (೭)
ಗಾಂಧೀ ಹಾಕದ ಟೋಪಿ ಕಡ್ಡಾಯ ಹಾಕಿ,
ಹಲ್ಲುಗುರು ಮುಖ ಮಾಟ; ಮನೆಕೆಲಸ ನೋಡಿ,
ತಪ್ಪಿದವರನು ಸನ್ನೆ ; ತರಗತಿಯ ಹೊರ ಹಾಕಿ; (೮)
ಲೇಖ ಚೂಕ್ಕತೆ ನೋಡಿ,ಕಂಠ ಪಾಠದ ದತ್ತಿ,
ತಪ್ಪಿದರೆ ಚಳಿ ನಡುಕ ಚುಳಿಕಿ(ಬೆತ್ತ) ಬಾರಿಸೆ ಅಲ್ಲಿ.
ಕಲಿತೆ ವೀ ಪರಿ ಮುಲ್ಕಿ ಪಾಸಾದೆ ವಲ್ಲಿ.(೯)
ಆಟ ಪಾಠದ ಮಾಟ ಕಳೆದು ಬಯಲಾಟ 
ಎಲ್ಲ ಕಥೆಯದು ಬರಿ ಬಾಲ್ಯ ಹುಡುಗಾಟ.(೧೦)
ಪ್ರಾಥಮಿಕ ಸಾಲೆಯಲಿ ಮುಗಿಸಿ ಪಂದ್ಯಾಟ;
ಮುಂದಕಾದುದು ಎಲ್ಲ ಬರಿಯ ದೊಡ್ಡಾಟ.(೧೧)   
ಒತ್ತುಸಿರು ಬಿಟ್ಟುಸಿರು ನಾಗ-ಬೈರನ(ಸರಕಾರೀ) ಸಾಲೆ(೧೨)

  

   
  

ನೆನಪಿನಂಗಳದೊಳಗೆ ಮಾಧ್ಯಮಿಕ ಸಾಲೆ(ಹೈಸ್ಕೂಲು) [part2]

ಪ್ರಾಥಮಿಕ ಸಾಲೆ ಪ್ರಮಾಣ ಪತ್ರವ ಪಡೆದು,
 ಪಾಟಿ ಚೀಲ ಬಳಪ ಟೊಪಿಗೆ ತಿಮ್ಮಗೆ ಕೊಟ್ಟು.
ದಾಖಲಿಸೆ ಸುರುವಾಯ್ತು ನನ್ನ ಮಾಧ್ಯಮ ಸಾಲೆ.(೧)
ತಲೆಗೆ ತೈಲವ ಹಚ್ಚಿ,ಹಣಿಗೆ ಬೈತಲೆ ಹೊಡೆದು.
ಅಕ್ಕ ಕೊಟ್ಟ ಹೊಸ ಹೊಸ ಬಟ್ಟೆ ಉಡುಪು.
ಒಂದೆರಡೆ ನೋಡು!(೨)
ಲಂಡ ಚೊಣ್ಣದ ಜೊತೆಗೆ ಹಾಕೆ ಟೀ-ಶರ್ಟು
ಸೊಂಟ ಪಟ್ಟಿಗೆ ಹಾಕೆ ಚರ್ಮದ ಬೆಲ್ಟು;
ಅಪ್ಪ ಕೊಡಿಸಿದ ತೊಟ್ಟೆ,ಇಲಿಮೊತಿ ಚಪ್ಪಲ್ಲು.(೩)
ಝುಗ ಮಗ ದ ದಿರಿಸ್ತು ಬಿರಿಸಿತ್ತು ಕೆಲವರಲಿ;
ಉಂಗುರ ವಾಚು.ನೀ ಮಿಗಿಲೋ ನಾ ಮಿಗಿಲೋ;
ಕಿಲ ಕಿಲ ದ ನಗುವು.(೪)
ಬಾಲೆಯರು ಕಮಿಇಲ್ಲ ಲಂಗ ದಾವಣಿ ತೊಟ್ಟು
ಜಡೆಗೆ ಮಲ್ಲಿಗೆ ಮಾಲೆ ಮುಖ ತುಂಬಾ ನಗುವು.   
ಹುರುಪಲ್ಲಿ ಹೊರಟಿತ್ತು ಜಂಬೂಸವಾರಿ.(೫)
ಗಂಟೆ ಸೌದಾಗರನ ಗಣ ಗಣ ಗಂಟೆ.
ಸೂಚಿಸುತ ಕೂಡಿಸುತ ಕಳಿಸೆ ಹೊಸ ಕೋಣೆ (೬)
ಅದ್ಧ್ಯಾಪಕರ ಜೊತೆಗೆ ಪ್ರಾಧ್ಯಾಪಕರು ಬಂದು;
ಮಕ್ಕಳೆಲ್ಲರ ಪರಿಚಯ ವ ನೆವರಿಸೆ,
ಸುರುವೈತು ಅವರವರ ಕ್ಲಾಸು ರೂಮು (೭)
ಸುರ್ವೈತು ಅಲ್ಲಲ್ಲಿ ಅವರವರ ಭಾಷೆ ವೈವಿಧ್ಯಮವು;
ಮಾಧ್ಯಮಿಕ ಮಾಧ್ಯಮದ ಭಾವ ಗೀತೆಯ ಸೊಗಸು.(೮)
ನಾಕು ಭಾಷೆಯ ತಿಗಡು ಕಲಿಯ ಲಾಗದೆ ಕಲಿಯೇ
ಹಿಂದಿ ಯಲಿ ಹಿಂದೆ ಕನ್ನಡದಿ ಮುಂದೆ.(೯)
ಸಂಸ್ಕೃತಿಯ ಸಂಸ್ಕ್ರುತ ವು ಅರ್ಧ-ಮರ್ಧ;
ಮತ್ತೆ ಕಲಿಯಲೇ ಬೇಕಲ್ಲ; ಆಂಗ್ರೆಜಿನಲ್ಲೇ!(೧೦)
ಬಾರದವರಿಗೆ ಸೇರಿ ಓತ್ತೊತ್ತಿ ಕಳಿಸಿದರು;
ಕಂಠ-ಪಾಠ ದ ಐಸಿ;ಹಾಗಾದೆ ಎಸ್.ಎಸ್.ಎಲ್.ಸಿ.!(೧೧)
ಅರ್ಥ ವಾಗದ ತಿರುಪು ಕರಿಯ ನೆರಳಲಿ ಕಲಿಯೇ;
ಬಿದ್ದೆ ಪಿ.ಯು.ಸಿ.ಆಗ ದ್ಹೋಗದೆ ಎ.ಟಿ.ಕೆ.ಟಿ. ಬಿ.ಎಸ.ಸಿ. (೧೨)
    































ನಾನು ನಾನಿರುವಂತೆ ಬಯಸಿ ಬರೆ ತಿರುವಾಗ;[part3]

ನಾನು ನಾನಿರುವಂತೆ ಬಯಸಿ ಬರೆ ತಿರುವಾಗ;
ಹುಚ್ಚು ಮುಖಗಳ ಹಲವು...!!!(ಶಿವರಾಮ ಕಾರಂತ)
ಬೇಕು ಬೇಡದ ಮದ್ಧ್ಯೆ ಮನದಾಳ ನೆನಕೊಂಡೆ;
ಏನ ಬರೆವುದು ಎಂದೇ ? ಯಾಕೆ ಬರಯುವುದೆಂದೆ?
ಮನಸಾರೆ ಒಪ್ಪದದು ಹೀಗೆ ಬರೆಯಲು ಹೇಗೆ?
ಜಗ್ಗು ಜಗ್ಗುತ ಹೇಳಿ ಹಾಗೆ ಬರೆದರೆ ಹೇಗೆ? (೧)

ಭಾವನಾತ್ಮಕ ಜೀವ ಭಾವವನೆ ತಡೆ ದಾಗ
ಹೇಳು ಕೇಳದ ಗೋಳು ಹೇಳಲಾಗದೆ ಅಲ್ಲಿ.
ತೇಲಿಹೊಗಲು ನಾನು ನನ್ನ ಕಥೆಯಲ್ಲಿ. (೨)

ಕಳೆದ ದಿನಗಳ ನೆನಪು ಮನಸು ಮಾಸದ ಹೂವು;
ಪೋಣಿಸುತ ಹೋದಂತೆ ರಾಶಿ ಕಾಶಿಯ ಮಾಲೆ.
ಬರೆಯಲಾಗದ ಬರಹ ಅದು ಒಂದು ಕೇಡು.(3)

ಹೊಸ ಅಂಗಿ ಹೊಸ ಪಾಟಿ ಖಾಕಿ ಚಡ್ಡಿ ಧರಿಸಿ
ತಲೆಗೆ ಟೊಪ್ಪಿಗೆ ಹಾಕಿ ಹಣೆಗೆ ಗಂಧವ ನೆಳೆದೆ
ದೇವ ನೋಲಿಮೆಗೆ ಪೂಜೆ ಮನಸಾರೆ  ಗೈದೆ
ಹೊರಟೆ ಶಾಲೆಗೆ ಶಾಲೆ ಮಕ್ಕಳ ಜೊತೆಗೆ 
ನಾನು ಖುಷಿಯಲ್ಲೇ ಅವರ ಜೊತೆಗೆ . (೩)

ಚಿಕ್ಕಂದಿನ ಬಾಳು ಹಾಳು ಸವಿ ಜೇನು 
ಕಳೆದ ದಿನಗಳವು ಇಂದು ಸಂಜೆ ಮುಸುಕು 
ಹಳ್ಳಿಗಾಡಿನ ಓದು ಮುಘ್ದ ಪ್ರೇಮದ ಬದುಕು.(೪)

ಮಾಧ್ಯಮದ ಕೊರತೆ ದಿನಕೊಂದು ಗುರುವು 
ಅರ್ಥ ವಾಗದ ವಿದ್ಯೆ ಕೀಳರಿಮೆ ಮಧ್ಯೆ 
ಹೇಳತಿರದ ಕಥೆಯು ಇನ್ನೆಲ್ಲಿ ಓದು?       (೫)

ಜಗವೊಂದು ನೆಪ ಮುಂದು,ದೊರ ಸರಿದವರು
ಸಾಗು ಸಾಗದೆ ಮುಂದೆ ;ಎಡವಿ ಬಿದ್ದೇನು ಹಿಂದೆ.
ಬದಕು ತಾಸಿನ ಕೆಲಸ ಕೊಡುವ ಕಾಸಿನ ಮುಂದೆ 
ದೂರ ತಿರದ ಪಯಣ ಸಹನೆ ಒಂದೇ!   (೬)

ಈ ಪರಿಯ ಬದುಕಿನಲಿ ಸಂಸಾರಿಯಾದೆ.
ಗಂಡ ಹೆಂಡತಿ   ಒಲುಮೆ; ಆಸೆ ಚಿಗುರಿನ ಕುಲುಮೆ.
ದೇವ ನೊಲುಮೆಯ ಮುಂದೆ; ಎರಡು ಮಕ್ಕಳ ತಂದೆ
ಎಳೆಯುತ್ತ ಬಂಡಿ ಬದುಕು ಗಂಡಾಗುಂಡಿ. (೭)

ಶಾಲೆ ಮಕ್ಕಳ ಓದು;ಓದು ಮಕ್ಕಳ ಬುದ್ಧಿ ;
ಸರಿ ದಾರಿ ಯಲಿ ಮುಂದೆ ವಿಶ್ವಾಸ- ಬುದ್ಧಿ.
ಉದ್ದ್ಯೋ ಗ ವರೆಸಿದರು ಜೀವ ಗರಿ ಗೆದರಿ. (೮)
ತಂದೆ ತಾಯಿಯಾ ಹರಕೆ; ಮಾಡಿ ಮಗಳಿಗೆ ಮದುವೆ; 
ಅಜ್ಜ ನಾದೆನು ನಾನು ಅಜ್ಜಿ ಯಾದಳು ಅವಳು 
ಸ್ನೇಹಮಯ ಜೀವನವು ಸಾಫಲ್ಲ್ಯ ಸೊಗಸು .(೯)
ದಿನ ದಿನದ ಬಾಳಲ್ಲಿ ಸುಖ ಒಂದು ಸೋಲೆರಡು;
ಗಳಿಸಿದ್ದು ಕೆಲವು ಕಳೆದದ್ದು ಹಲವು .
ತಂದೆ- ತಾಯಿ; ಅಕ್ಕ-ಭಾವ ; ಜೊತೆ ಅತ್ತೆ-ಮಾವ
ಸರತಿಯಲಿ ಸಾಗಿದರು ಇಹ ಲೋಕ ಧಾಮ.(೧೦)
ಇಹ ಪರದ ಗತಿಗೆ ಮರಳಿ ಬಾರದ ಕರೆಗೆ 
ಕ್ಷಣ ವೊಂದು ಯುಗ ವಾಗೆ;ಯುಗವು ಕ್ಷಣ ವಾಗೆ;
ಹರಸಿ ಹೋದರು ಅವರು ತೋರಿ ಧ್ರುವ ತಾರೆ! (೧೧)

ಬಯಸಿ ಬರೆಯುತ ಕೊನೆಗೆ ಚಕ್ರ ವಾಕದ ಜೊತೆಗೆ.
ಅವರವರ ಕಾರ್ಯ ಕುಶಲತೆಯ ಸೌ ಭಾಗ್ಯ;
ಬರುವದೇ ನುಂಟೊಮ್ಮೆ ಬರುವ ಕಾಲಕೆ ಬಹುದು.
ಸ್ನೇಹಮಯ ಜೀವನವು ಸಾಫಲ್ಲ್ಯ   ಸೊಗಸು.(೧೨)
        



 
ಇದ್ದುದಿದ್ದನ ಬರೆವೆ,ಮನಸಾರೆ ಬರೆವೆ.
ನನ್ನ ಜೀವನ ವ್ಯರ್ಥ ಕಳಕೊಂಡೆ ಪರಿಯಾಗೆ.
ನನ್ಹಾಗೆ ಆಗದಿರಿ ಸಿಲುಕಿ ಶೋಷಣೆ ಯೊಳಗೆ.
ಹುಟ್ಟು ಹಾಕದೇ ತೆಪ್ಪ ಸಾಗದದು ಮುಂದೆ.  
ಹಿರಿದೇನು ಕಿರಿದೇನು ಹಾಕಿ ತಿಪ್ಪರ-ಲಾಗ.
ಸಿಕ್ಕೀರೀ ಜೋಕೇ ತಪ್ಪಿ ಮೀನದ ಗಾಳ.
  

ಬಾಳು ಕೂಳಿಗೂ ಒತ್ತಾಯದ ದುಡಿಮೆ.[ಕನಸು ಗಾರನ ಕನಸು 1 ]

ಆಸೆ ಚಿಗುರಿನ ಕುಸುಮ ಗಗನ ತುಂಬಿದ ಕನಸು. 
ತಗಲ ಲಾರದ ವಿದ್ಯೆ, ಬಾಳ ಬದುಕಿಗೆ ಹೊಸೆದು;
ಹೇಳ ತಿರದ ಕಥೆಯು ದುಡಿಯಲಾಗದ ಮಾಣಿ; 
ಹರಿವ ನದಿಯಲಿ ಹೊರಟ ಹುಟ್ಟಿಲ್ಲದ ದೋಣಿ,(೧)

ಮುಂದೆ ಕಂದರದಲ್ಲಿ ಭೋರೆಂದು ಹಾರಿ,
ಜೀವನದ ಪಡಿ-ಪಾಟ ಸಾಕು ಮುರಾರಿ.
ಕಂಗೆದಿಸಿದಾ ಬಾಳು ಕೂಳಿಗೂ ಗೋಳು.
ಬೇಕು-ಬೇಡದ ಕೆಲಸ ಒತ್ತಾಯದ ದುಡಿಮೆ.
ಮೊಣ ಕೈಗೆ ಹಚ್ಚಿದ ಬೆಲ್ಲದಾಸೆ. (೨)

ಹೇಳುವರು ಹೇಳಿದರು ನೂರೆಂಟು ಉಪದೇಶ;
ಸಿಕ್ಕ ಕೆಲಸವ ಮಾಡು ಮುಂದೆ ಒಳಿತಿಗೆ ನೋಡು;
ಇಷ್ಟ ತಿಷ್ಟ ಬಿಟ್ಟು ಹಾಸಿಗೆ-ಯಷ್ಟು ಕಾಲು-ಚಾಚು; 
ಮುಂದೆ ಚೆನ್ನಾಗುವದು ಎಂದೆಲ್ಲ ಪ್ರೀಚು.(೩)

ದಿನಕೊಂದು ಕೆಲಸ,ಅದು ಮುಂದೆ ಇದು ಮುಂದೆ.
ಓದು ಮುಗಿದರೆ ಚೆನ್ನ ಕೆಲಸ  ಕೊಡುವರು ಅಂದೇ.
ಛಲ ಬಿಡ ತ್ರಿವಿಕ್ರಮನ ಪರಿಯರ್ಧ; ಏನಾದರೂ ಸರಿಯೇ;
ಮುಗಿಸ ಹೋದರು ಮಾಮು ಬಿ.ಕಾಮು. ಅರ್ಧಮರ್ಧ.(೪)
 
ಅಂದವರು ಅಂದಾರು ಬಿಟ್ಟಾರು; ಏನೆಲ್ಲ.
ಕನಸುಗಾರಗೆ ಮಾತ್ರ ಬರಿ ಛತ್ರಿ ಎಲ್ಲ.
ಬದುಕು ದಿನ ದಿನ ಕೆಲಸ, ಕೊಡುವ ಕಾಸಿನ ಮುಂದೆ;
ದೂರ ತಿರದ ಪಯಣ ಒಣಗಿದರು ದೇಹ ಸಹನೆ ಒಂದೇ!! (೫)

ಏನಾದರೂ ಸರಿಯೇ ಚಿಕ್ಕಂದಿನಾ ಬಾಳು;ಹಾಲು -ಜೀನು;
ಚೊಕ್ಕ ಕಲಿಸದೆ ವಿದ್ಯೆ; ಬಾಳವನ ಹಾಳು.
ಇಹ ಪರದ ಈ ಗತಿಗೆ ನೀ ಬೀಜ ಬಾಳು;
ಇದನರಿಸ ದವನ ಜೀವನ ವೆಲ್ಲ ಗೋಳು.(೬)

ಒಪ್ಪು ತಪ್ಪೋಲೆಯ ಈ ನೆನಪು ಸುರಳೀ,
ಎದ್ದು ನೋಡಲು ನನ್ನ; ಕಣ್ಣು ಮಂಜು ಮುಸುಕಿ;
ತಿಲಿಸುತಿದೆ ಚಿನಕುರಳಿ ಎಲ್ಲ ಹೊರ-ಮರಳಿ.(೭)

ಕಲಿತ ವಿದ್ದ್ಯೆಗೆ ತಕ್ಕ ಉದ್ಯೋಗ ವರೆಸಿ;
ಕೆಲಸವಾಗದೇ ಬಿದ್ದೆ ಮೀಸಲಾತಿಗಳ ಮದ್ಧ್ಯೆ.
ದಾಟುವರು ದಾಟಿದರು ನಾ ಮುಂದು,ತಾ ಮುಂದು;
ದುಡ್ಡು ತೊಳ್ಬಲದಲ್ಲಿ. ಕುಣಿತಿದೆ ಝಣ ಝಣ;
ಕುರುಡು ಕಾಂಚಾಣ.(೮)

ಕುಳಿತವರು ಕುಳಿತಲ್ಲೇ, ಕಳಕೊಂಡು ಹಿಂಡು;

ದಾರಿ ತಾಪ್ಪಿತು ಅಲ್ಲೇ; ನೋಡು ನಿನ್ನ ಬದುಕು.
ಒಂದು ಕಣ್ಣಿಗೆ ಬಣ್ಣ ಇನ್ನೊಂದಕೆ ಸುಣ್ಣ;
ಸಾದ್ಧ್ಯ ವಾಗದ ಬದಕು,ತಡಕುತ್ತ ಮಣ್ಣು.(೯)

ಕಿತ್ತು ತಿಂದರು ಭೂಮಿ ಉಳುವಾತ ವಡವಿ;
ಹಾರುವನು ಹಾರಿದನು ಹಗಲು ಭಾವಿ.
ಏನು ಜೀವನ ದರ್ಥ ಉಪದೇಶ ಬೇಡ.
ಮುಳುವಾಗದಿರಿ ಇಂಥ ಹಾಳು ಭಾವಿ.(೧೦) 













    


















ಮನೆ ಮಮಕಾರ ತುಂಬಿರ ಬೇಕು.

ಇರಬೇಕು ದುಡಿತಿರಬೇಕು,
ಅಷ್ಟ ಲಕ್ಷ್ಮೀ ಮನೆ-ಮನ,ತುಂಬ ಬೇಕು.
ಮನಮೆಚ್ಚುತ ಸುಖ ಭರಿಸ ಬೇಕು,
ಸಂಸಾರ ಸುಖದೀ ಬಾಳ ಬೇಕು.
ಬರಬೇಕು ಕೂಡಿ ಕಳೆಯ ಬೇಕು.
ಗುಣಿತ-ಭಾಗಾಕಾರ ಸಾಗ ಬೇಕು.
ಹಾಗೇ ಶೇಷ ವು ನಿತ್ತ್ಯ ಉಳಿಯ ಬೇಕು.
ಮನೆ ಮಮಕಾರ ತುಂಬಿರ ಬೇಕು.

ಸಹಜವಿದು ಪ್ರಕುರ್ತಿಯ ಧರ್ಮ.

ಮನದೊಳಗಿರೋ ಮನದಾಳದ ಮಾತು
ಹೊಮ್ಮದೇ ಹೊರಗೆ; ಹಿಡಿವುದೇ ಒಳಗೇ .
ಹೇಳುವದೆಲ್ಲಾ ಹೇಳಿದರೆ; ಕೆಳುಗರೆಲ್ಲಾ ಕೇಳುವರೇ?
ಹೇಳುಗರಿಗದು ಹೃದಯದ ಭಾವ,
ಕೇಳುಗರಿಗದು; ನಿರ್ಜೀವ.
ಅನುಭವಿಸುವದು, ಅವರ ಕರ್ಮ; 
ಸಹಜವಿದು ಪ್ರಕುರ್ತಿಯ ಧರ್ಮ. 

Friday 27 April 2012

ಬದುಕು ತಿರಿದಮೇಲೆ; ಕಥೆ ಅರ್ಧ ಸತ್ತ್ಯ.[ಕನಸು ಗಾರನ ಕನಸು 2]

ನನ್ನ ನೀ ಮರೆತಂತೆ ನಿನ್ನ ನೀ ಮರೆಯುವೆಯಾ?
ನಿನ್ನ ನೀ ಮರೆತರೆ ಹಂಗಂತೆ ಬದುಕುವೆಯಾ? (೧)
ಮರೆಗುಳಿ ಮನದಲಿ ಮನಕೆ ನೆನಪುಳಿಯದಿರೆ;
ಮರೆಯಲಾಗದ ಮನಕೆ ತನದ ನೆನಪುಳಿಯುವದೇ?(೨)
ಕಳೆದು ಮೂವ ತ್ತಿಂದು ಆಗೇ ಅರವತ್ತಾಗೆ;
ಓ ಮರೆಗುಳಿ ಮರೆವು ನೆನಪುಳಿಯದು ಸತ್ತ್ಯ.(೩)
ಬರುವದೆ ನುಂಟೊಮ್ಮೆ ಬರುವ ಕಾಲಕೆ ಬಿಡದು;
ಅಲ್ಲಿ ತನಕ ಸಮಯ ಟಕ-ಟಕ ನಿಲದು.(೪)
ಹಸಿರೆಲೆಯು ನಕ್ಕಾಗ ನೆನಪು ಹಣ್ಣೆಲೆ ಚಿಗುರೆ!
ಉದುರದೇ ಹರೆ ಚಿಗುರೇ ವ್ಯರ್ಥ ಪ್ರಲಾಪ.(೫)
ನೆನಪೆಂಬುದು ಬಾಳ ಬದುಕಿನ ಸತ್ತ್ಯ;
ಬದುಕು ತಿರಿದಮೇಲೆ; ಕಥೆ ಅರ್ಧ ಸತ್ತ್ಯ.(೬}
    

Tuesday 27 March 2012

ಭರ್ಜರಿ ಹೊಳ್ಳರ ತಾಳ-ಮದ್ದಳೆ

ಬಾಯಿಗೆ ಚಪಲ ನಾಲಿಗೆ ನುಡಿಯಲು;ಹೊರಟವು ರಾಗದಾ ಭಾವಗಳು.
ಏನು ತಿಳಿಯದೆ ತಲೆಯದು ಹಾಕಲು; ಬೆರಳು ಬಡಿದವು ಥೆಕ್ಕೆಗಳು.
ಸುಗಮ ಸುಸ್ವರಕೆ ಪಿಯಾನದು ಸಿಗಲು. ತಾಳವ ತಟ್ಟಿದ ಐತಾಳ.
ಸಾಥ ಕುಟ್ಟಿದನು ತಬಲಾಜಿ.
ರಾಗ ತಾಳ ಸಮ್ಮಿಲನ ವಾಗಲು;ದಾಸಯ್ಯ ಮೀಟಿದ ತಂಬೂರೀ.
ವೈಣಿಕ ವೀಣೆ ನುಡಿಸಲು,ಏಕ ತಾರಿಯ ನಾದ ಹೂಮ್ಮಲು;
ಹಾಕಲು ಹೆಜ್ಜೆ; ಕುಣಿಯಿತು ಗೆಜ್ಜೆ, ಭರತನಾಟ್ಯ ಕದು ಮೊದಲ ಹೆಜ್ಜೆ.
ತಾಳವ ತಟ್ಟಲು,ಬಡಿಯಲು ಮದ್ದಳೆ; ಭರ್ಜರಿ ಹೊಳ್ಳರ ತಾಳ-ಮದ್ದಳೆ.
ಮೃದಂಗ ತದಗಿಣ್ ತೋಮ್;ಭಜಗೋವಿಂದಮ್ 

Monday 26 March 2012

ನಗು ನಗುತ ದಿನ ಸಾಗೋಣ


ಕಂದನ ಬಾಳಿನ ಕನಸು; ಸವಿ ಮಧು ಜೇನಿನ ಆ ಸೊಗಸು.
ಉದಯ ರಾಗದ ಈ ಹರೆಯ; ತೇಲಲಿ ಅನುರಾಗದ ಹೊಳೆಯ.
ಸಾಗುತ ಅಮರ ಮಧು ಪ್ರೇಮ; ಈಜೀವನ ಸಂಧ್ಯಾ ರಾಗ.
ನಗು ನಗುತ ದಿನ ಸಾಗೋಣ; ನಗುವಿನ ಜೊತೆ ಜೀವ ಸವಿಸೋಣ.
ಕಣ್ಮಣಿ ನೆನೆದ ಆ ಕನಸು; ಸವಿ ಮಧು ಜೇನಿನ ಆ ಸೊಗಸು.
ಉದಯ ರಾಗದ ಈ ಹರೆಯ; ತೇಲಲಿ ಅನುರಾಗದ ಹೊಳೆಯ.

ಜಗವಿದು ಸುಂದರ ತಾಣ ಬದುಕು ಬಂಗಾರದ ಪ್ರಾಣ.
ಅನುರಾಗದ ಈ ಸುಂದರ ಪಯಣ;ನಮದಾಗಲಿ ಅಮರ ಮಧು ಪ್ರೇಮ.

ಗತವೈಭವ ನಿನ್ನೆ ತನಕ; ಸವಿಯೋ ದಿನ ಸುಖ ಆತನಕ.
ನಗುವಲಿ ಜೀವ ಕಳಿಯೋಣ; ಸುಖದಲಿ ಜೀವನುಭವಿಸೋಣ.
ನಲಿಯುತ ಸುಖ ದುಃಖದ ಮುಂದೆ; ಇಟ್ಟಡಿ ಬಿಡೆ ಸಾಗುವ ಮುಂದೆ.
ಏನಿರಲಿ ಬಿಡೇ ಇರದಿರಲಿ; ಸರಿ ಸಾಗಲಿ ನಮ ಜಟಕಾಬಂಡಿ.
ನಮ ನಿಧಿ ಸಾಹೇಬನ ನಿಧಿ ಬಂಡಿ.    


ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.


ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.
ಅಭಿರುಚಿ ಶಿಸ್ತಿನ ಆ ಓದು;ಆಟ ಪಾಠದಲಿ ತಾ ಮುಂದು.
ಒಲವಿನ ಕಥೆಯ ಬರೆಯುವ ಮೊದಲು;ಗೆಲುವಿನ ಗುರಿಯದು ಎಂದೆಂದೂ ಓಹೋ;
ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.

ಅನುರಾಗದ ಈ ಸುಂದರ ಪಯಣ ಆಗಲಿ ಅಮರ ಮಧು ಪ್ರೇಮ;
ಸೋಲು ಗೆಲುವು ಗಳ ಜೋದಾಟ;ತಪ್ಪದು ಜೀವಕೆ ಹೋರಾಟ.
ಸೋಲಿರಲಿ ಗೆಲುವೇ ಬರಲಿ;ಆ ಗಂಡೆದೆಯು ನಮಗಿರಲಿ.
ಸೋಲು ಗೆಲುವಿನ ಸೋಪಾನ ; ಗೆಲುವಾಗಲಿ ನಿನಗೆ ಜೋಪಾನ.
ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.


ವಿಜಯ ವಿಟ್ಠಲನ ಕಲ್ಲಿನ ತೇರು; ಎಳೆಯಲು ಆಗಲಿ ಈ ಜೋರು.
ಹಂಪೆಯು ಕೊಂಪೆ ಹಳೆಕೋಟೆ; ಆಗಲಿ ಪ್ರೇರಣೆ ಹೊಸಕೋಟೆ. 
ಅದೇ ಹಾಡು ಅದೇ ರಾಗ, ತಿರುಚಲು ಹೋದರು ಬರದು.

  

Sunday 25 March 2012

ಬಿದಿಗೆ ಚಂದಿರ ಆದ ಹುಣ್ಣಿಮೆಯ ಚಂದಿರ

ಬಯಸಿ ಬಂದ ಆಸರೆಗೆ ಬಿದಿಗೆ ಚಂದ್ರ. ಓಹೋ ಬೀದಿಗೆ ಚಂದ್ರ.
ಬಂದಾನೋ ಚಂದ್ರಾಮ ಹುಣ್ಣಿಮೆ ರಾತ್ರಿ.ಓಹೋ ಬಿದಿಗೆ ಚಂದ್ರ.
ಬಿದಿಗೆ ಚಂದ್ರ ಬೆಳೆದಂತೆ ಅಷ್ಟಮಿ ರಾತ್ರಿ;ನವಮಿ ಕಳೆದು ನಾಕು ಇಂದು ಹುಣ್ಣಿಮೆ ರಾತ್ರಿ.
ನಾನು ನಿನ್ನ ಜೋಡಿ ನೀನು ನನ್ನ ಜೋಡಿ, ಆ ಇಬ್ಬರೂ ಎಳೆವಾ ಈ ಜೀವನ ಗಾಡಿ.
ಸಖೀ ನೀನು ಎಲ್ಲೇ, ಸಖಾ ನಾನು ಅಲ್ಲೇ; ಆ ಇಬ್ಬರೂ ಎಳೆವಾ ಈ ಜೀವನ ಗಾಡಿ.
ನೀ ನಗು ನಾ ನಗು ಈ ನಗುವಿನಲ್ಲೇ,ದಿನ ದಿನ ಕಳೆದರೂ ಬರ್ತಾವಲ್ಲೇ.ಈ ನಗುವಿನಲ್ಲೇ.
ಕಣ್ಣು ಮಿಟುಕಿ ಮಾಯವಾದ, ಬೀದಿಗೆ ಚಂದಿರ; ಭ್ರಮೆ ಹುಣ್ಣಿಮೆ ರಾತ್ರಿ.
ಬಿದಿಗೆ ಚಂದ್ರ ಮಾತಿನಲ್ಲಿ ನವಮಿ ಚಂದಿರ; ಮುಗಿಯದಿರಲಿ ನನ್ನ ನಿನ್ನ ಸವಿ ಸವಿ ರಾತ್ರಿ;ಓಹೋ ಬಿದಿಗೆ ಚಂದಿರ.  
ಆಹಾ ಥೈಯ್ಯಾ-ತಕ್ಕಾ ,ಹಾಕು ಹೆಜ್ಜೆ ಹಾಕು;ಹೆಜ್ಜೆಯಲ್ಲಿ ಹೆಜ್ಜೆ ಕಾಲ್ಗೆಜ್ಜೆ ಕುಣಿಯಿತು;
ಕೊಲಿಗೊಂದು ಕೋಲು ಬಡೆ ಕೋಲಾಟ ವಾಯಿತು;
ಅಲ್ಲಿ ತಾಳಾ ಇಲ್ಲಾ ತಂಬೂರೀ ಇಲ್ಲ,ಮೃದಂಗ ವಂತೂ ಇಲ್ಲೇ ಇಲ್ಲಾ;
ಸಾರುತ್ತಾ ಸಾಗಿದಾ ರಾಧೇ ಮಾಧವಾ;ನಡೆಯಲೀಗ ಅಮರ ಪ್ರೇಮ ಮಧುರ ಸಂಗಮ.

ಬಂದಾನೋ ಚಂದ್ರಾಮ ಹುಣ್ಣಿಮೆ ರಾತ್ರಿ.ಓಹೋ ಬಿದಿಗೆ ಚಂದ್ರ.
ನಡೆಯಲೀಗ ಅಮರ ಪ್ರೇಮ ಮಧುರ ಸಂಗಮ.

ಈ ಆಸೆಗೊಂದು ಎಲ್ಲೇ ಎಲ್ಲಿದೆ ?

ಆಸೆ ಎಂಬ ಚಿಗುರೆ ಭ್ರಮಿಸಿ ಬಾಳು ಸಾಗದು,
ಗೋಳು ಬಾಳು ಎಂದು ಜೀವ ಬಿಡಲು ಆಗದು.
ಯಡರು-ತೊಡರು ದಾಟಿ ನಿನ್ನ ದೋಣಿ ಸಾಗಿಸು.
ಸೋಲು ಗೆಲವು ನಿನ್ನದಲ್ಲ ಪಂದ್ಯ ದಾಟಿಸು.
ಅದೇನೇ ಆಗಲಿ ಚಿತ್ತ ಅವನ ದಾಗಿಸು.

ಎಲ್ಲಾತನ ಮಹಿಮೆ.

ಕುಂಬಾರಗೆ ವರುಷ ದೊಣ್ಣೆಗೆ; ತಗಲದು ಬರೀ ನಿಮಿಷ.
ಅಗಸನ ಬಡೆತ ಕತ್ತೆಯ ಒದೆತ; ಈ ಜೀವನ ಕಸರತ್ತು.
ಕಳೆಯುತ ಕೊಳಕು ಈ ಜೀವದ ಥಳಕು, ಈ ಜೀವದ ಶಿಸ್ತು.
ಕಷ್ಟವೋ ಸುಖವೋ ದುಃಖವ ಮರೆಯುವ ನೆಮ್ಮದಿ ಈ ಬಾಳು.
ಕೊಡುತಾ ಪ್ರೀತಿ ನೆಮ್ಮದಿ ಬಾಳಿಗೆ,
ದಿನನಿತ್ತ್ಯದ ದುಡಿಮೆ.ಹರುಷದ ಎಲ್ಲಾತನ ಮಹಿಮೆ.  

ಆಗದೇ; ಈ ಜೀವದ ನನಸು.

ಕಲಿಸುವ ಸಾಲೆ ಅಕ್ಷರ ಮಾಲೆ ,
ಬಾಳಿಗೆ ಈ ಜೀವನ ಕರೆಯೋಲೆ.
ಆಸೆಯ ಚಿಗುರು,ಸುಂದರ ಕನಸು,
ಹರೆಯದ ವಯಸು ದುಡಿಯುವ ಹುರುಪು;
ಆಹಾ ಈ ಜೀವನ ಸೊಗಸು. ಆಗದೇ;
ಈ ಜೀವದ ನನಸು. 

ಆತಗೆ ದಿನ ನಿತ್ತ್ಯದ ಕೆಲಸ

ದೇವನ ಒಲುಮೆ ಆಸೆ ಚಿಲುಮೆ
ಕರ್ತಾರನ ಕುಲುಮೆ ಹೊಮ್ಮುತ ಈ ಜೀವನ ಗರಿಮೆ.
ಸೋನಾರನು ಅವ ನೆಕಾರನು ಅವ ಆಗಸದಾ ಅಗಸ,
ಮುಗಿಸುವ ದಿನ ನಿತ್ತ್ಯದ ಕೆಲಸ.
ಕಂಮರನು ಅವ ಚಮ್ಮಾರನು ಅವ;
ನೇಯುತ ನೂಲ ತೊಡಪು  ಮಾಡುತ,
ನಿಲಾಂಬರದ ಕೆಲಸ, ಆತಗೆ ದಿನ ನಿತ್ತ್ಯದ ಕೆಲಸ.
ಚಿನ್ನಕೆ ಮೆರಗು ಲೋಹಕೆ ಅಲಗು ಗಾರೆಯದೇ ಕೆಲಸ.
ಆದರೂ ದಿನ ನಿತ್ತ್ಯದ ಕೆಲಸ.
ದುಡಿಯುವನು ಅವ ದುಡಿಸುವನೂ ಅವ,
ದುಡಿಸುವ ಧರ್ಮ ದುಡಿಯುವ ಕರ್ಮ,
ದಿನನಿತ್ಯದ ಮರ್ಮ. ಆತಗೆ ದಿನ ನಿತ್ತ್ಯದ ಕೆಲಸ. 

    

ನನ್ನಣ್ಣ ಅಣ್ಣ ಬಂದಾಗನನ್ನ, ಖುಷಿ ಮೇರೆ ದಾಟಿ ಬಂತು.

ನನ್ನಣ್ಣ ಅಣ್ಣ ಬಂದಾಗನನ್ನ, ಖುಷಿ ಮೇರೆ ದಾಟಿ ಬಂತು.ಬಾರೋ ನನ್ನಣ್ಣ ತಂಬಿಟ್ಟು ಚಿಣ್ಣ ಬಯಲಾಯ್ತು ನನ್ನಬಣ್ಣ.
ನೆನಪಾಗಿ ನಿನ್ನ ಹಾರುತ್ತ ಹಕ್ಕಿ ಇಳಿದಿಲ್ಲಿ ಓಡಿ ಬಂದೆ.ಎಲ್ಲೆಲ್ಲಿ ಇಳಿದೆ ಎಲ್ಲೆಲ್ಲಿ ಉಳಿದೆ ಕರಿದ್ಹಂಗೆ ನಂಗೆ ನಂಗೆ.
ಮರೆತಂಗ್ಹೆ ನನ್ನ ಮರೆಲ್ಹೆಂಗೆ ತಂಗಿ. ಅದಕೆಂದೇ  ಇಲ್ಲೇ  ಬಂದೆ.ಏನೆಲ್ಲಾ ಕೊಡುವೆ ತವರೆಲ್ಲ ಕೇಳು ಅದನ್ನೆಲ್ಲಾ ಕೊಡುವೆ ತಂಗಿ.
ಹಿಂಗ್ಯಾಕ ಅಂತಿ, ಬರ್ಲ್ಯಾಕ ಚಿಂತಿ, ಇರಲೇಳು ನಾಕುತಂತಿ.
ಎಸೊಂದಾ ದಿನವು ಕಳೆ ದಂಘ ಹೋತು ಬಂತಲ್ಲ ಹೋಗೋ ದಿನವು.
ಹಂಗ್ಹಿಂದ ಬಂದೆ ಹಿಂಗ್ಹಂತ ಹೊಂಟೇ ಉಳಿಲಾಕ ಒಲ್ಲೆ ಎನುವೆ.
ಹೊತ್ತಾರ ಬರುವೆ,ಹತ್ತ್ಹೇರ ತರುವೆ;ಉಳಿಲಾಕ ಎಂದೇ ಬರುವೆ.
ಅಂದ್ಹಂಗ ಬಂದು ಏನೆಲ್ಲಾ ಕೊಟ್ಟು ಪಟ್ಟಾಗಿ ಹೊರಟನಲ್ಲ.
ಖುಷಿಯಲ್ಲಿ ಬಾರೋ ಕೈಎತ್ತಿ ಸಾರಿ ಪೆಚ್ಚಾಗಿ ಬಿಟ್ಟೆನಲ್ಲ.
ನನ್ನಣ್ಣ ಅಣ್ಣ ಹೋದಾಗ ನನ್ನ,ಮನ ಬಿಕ್ಕಿ ಬಿಕ್ಕಿ ಅಂತು.
ಕರೆ ಆತನನ್ನ,ಎಂದಾಗ ನಿನ್ನ,ಮರೆಲ್ಯ್ಹ್ಹಾಂಗ ನೆನಪು ಅಂತು.
ಬಂದಾಗ ಬರಲಿ ಬರಲಾರದಿರ್ಲಿ,ಮರೆಲಾರ್ಧಂಗ ಬರ್ಲಿ. ಅದ ಕಿಂತ ಇಲ್ಲಿ ಇನ್ನೇನು ಮಿಗಿಲು ದಿಗಿಲಾಗಿ  ಏನು ಅಂತಿ?

Saturday 10 March 2012

ಹಳ್ಳಿ ಯಾಗ ಹೀಗಿತ್ತು ತಿಳವಳ್ಳಿ ಗ್ರಾಮ

ಅಷ್ತೈಶ್ವರ ರಿಂದ,ಸಪ್ತ-ಮಾತ್ರಿಕೆಯರಿಂದ,
ಅಭಯ ವಾಗಿತ್ತು ತಿಳವಳ್ಳಿ ಊರು.
ಕಲ್ಲುಮಠದ ಬತ್ತದ ಸಿಹಿನೀರಿನ ಭಾವಿ,
ಸುತ್ತಲು ನೀರಿನ ದೊಡ್ಡಕೆರೆ,
ಯಾತ್ರಿಕರಿಗೆ ನೀರಿಗಾಗಿ ದಾಸನ ಕಟ್ಟೆ.
ಉಳಿಯಲು ಕಟ್ಟಿದ ಧರ್ಮಸಾಲೆ.
ಮಡಿನೀರಿಗಾಗಿ ನರಸಿಂಹನ ಹೊಂಡ,
ಹರ ಭಕ್ತ ಶರಣರಿಗೆ ಶಾಂತಪ್ಪ,
ಹರಿ ಭಕ್ತರಿಗೆ ನರಸಿಂಹ ದೇವರು,
ರಾಮಭಕ್ತರಿಗೆ ಶ್ರೀರಾಮ, ಹನುಮಂತ,
ಗ್ರಾಮ ರಕ್ಷೆಗೆ ದ್ಯಾಮವ್ವ ದುರ್ಗವ್ವ ಕಾಳವ್ವ,
ನೆಮ್ಮದಿ ಇಂದಿತ್ತು ತಿಳವಳ್ಳಿ.

Thursday 8 March 2012

ಭಾವನೆ ಸಾಗುವ ಜೀವನದ ನೌಕೆ

ಭಾವನೆ ಯು ಭಾವದೊಳು ಉಲಿದಳಾ ಭಾವಗೀತೆ. ಭಾವನನೆ ನೆನೆಯುತ್ತ ಭಾವತುಂಬಿದ ಕವಿತೆ.
ಅಕ್ಕ ಭಾವನ ನೆನಪು ಹಚ್ಹ ಹಸಿರಾಗಿಸುತ, ಕಳೆದು ತವರಿನ ಹರುಷ ಮನ ಭಾರವಾಗಿಸುತ.
ಕಳೆದ ದಿನ ಗಳ ನೆನಪು ಮೆಲಕು ಹಾಕುತ್ತ, ಭಾವನೆ ಸಾಗುವ ಜೀವನದ ನೌಕೆ.