Tuesday 1 May 2012

ಆನಂದದ ಆ ಸುಂದರ ಬೀಡು.

ಸುಂದರ ಬನದ ನಂದನ ದೊಳಗೆ;
ಎಲ್ಲೆಲ್ಲು ಹಸಿರಿನ ಉಸಿರು.
ಗಿಡ-ಬಳ್ಳಿ- ಮರ ಹೂ ಕಾಯಿ ಹಣ್ಣನು ಬಿಡಲು;
ಗಳಪಲು ಬರುವ ಹಕ್ಕಿಗಳ ಹಿಂಡು.
ಆಲಿಸು ಅವುಗಳ ಚಿಲಿಪಿಲಿ ದಂಡು.
ಆನಂದದ ಆ ಸುಂದರ ಬೀಡು.
ಸಂಜೆಯ ಮೋಡ ಸುಂದರ ನೋಡು;
ನೀಲಾಂಬರದಲಿ ಕರಿ ಬಿಳಿ ಮೋಡ,
ಪಡುವಣ ತೀರದಿರವಿಯ ಹೊಂಬಣ್ಣ.
ಅಸ್ತಂಗತ ನಾಗಲು ರವಿಯಣ್ಣ.
ನಸುಗತ್ತಲೆ ಮೊಳಗಿತು ನೋಡಣ್ಣ.
ಇರುಳನು ಸರೆಸುತ ತಾರೆಗಳಡಗಲು
ಚಂದಿರ ಮೂಡಿದ ತಾರಂಗಣದೊಳು
ಬೆಳ್ಳಿಯ ತೆರೆಯ ಅಲೆಗಳ ಮೇಲೆ
ಕರಿಬಿಳಿ ಮೋಡದ ಮುಸುಕಿನ ಒಳಗೇ
ತೇಲುತ ಸಾಗಿದ ಚಂದ್ರಾಮ.
ನೀಲಾಂಗಣ ದಡಿ ಅನಂತ ಪ್ರೇಮ.            

No comments:

Post a Comment