Monday 21 May 2012

ಆಶೆಯಾ$$- ಭರಚುಕ್ಕಿ

ಹುಣ್ಣಿಮೆ ಇಲ್ಲದ ತಾರಾಂಗಣ ದಲಿ;
ಮಿನುಗು ತಾರೆಗಳ ಆಶಾ ಕಿರಣ
ತಾರೆಗಳಂದದಿ ಜೋಗುಳ ಹಾಡಲು
ಆಶೆಯಾ ಭರಚುಕ್ಕಿ$$; ಮಿನುಗಿತು
ಆಶೆಯಾ ಭರಚುಕ್ಕಿ.(1)

ಅಡಗಿದ ಹುಣ್ಣಿಮೆ ಚಂದ್ರ-ಚಕೋರಿ;

ಮಿನುಗಿತು ಆಶೆಯಾ$$- ಭರಚುಕ್ಕಿ.
ಅರುಣ ರಾಗವದು ಪಲ್ಲವಿಹಾಡಲು,
ಬೆಳ್ಳಿಯು ಮೂಡಿತು ನಸುಕಿನಲಿ;
ಕತ್ತಲೆ ಕಳೆಯಿತು ಭರದಲ್ಲಿ.(2)

ಭುವಿತಾಯ ಮಡಿಲಲಿ ಮಲಗಿದ ಶಿಸುವನು;

ಎಚ್ಚರ ಗೊಳಿಸಿತು ಭೂಪಾಳಿ.
ಘಂಟಾಕಿಂಕಿಣಿ-ಶಂಖನಾದದಲಿ;

ಕೆಸರದುಡಿಗೆಯ ಉಷೆ ಸ್ವಾಗತಿಸಲು;
ಪುಲಕಿತ ಗೊಂಡನು ವನಮಾಳೀ.(3)



ಹೊನ್ನಕಿರಣ ರವಿ ಮೂಡಲು ಮೂಡಣ;

ಹಾಡಿತು  ಬೆಳಕು ಬೆಡಗು ತಿಲ್ಲಾಣ.
ಬೆಳಕನು ಕಂಡು ಕೋಕಿಲ ಕುಹೂ ಕುಹೂ;
ಮಾರ್ದನಿ ಗೈದವು ಮೈನಾಗಳು.(4)

ಚಿವ್ ಚಿವ್ ಗುಟ್ಟಲು ಗುಬ್ಬಿಗಳು
ಕಾ ಕಾ ಎಂದವು ಕಾಗೆ ಗಳು.
ರಾಗ-ತಾಳಕೆ ಸ್ವರವ ಸೇರಿಸುತ
ಬರೆದವು ನೇಸರಗೆ ಹೊಸ ಭಾಷೆ.
ಫಲಿಸಿತು; ಆಶೆಯಾ$$- ಭರಚುಕ್ಕಿ. (5)

ಕನಸು ಕಾಣುವದು ಜನುಮದ ಹಕ್ಕು;

ಶ್ರಮಿಸುವ ಬದುಕಿಗೆ ಆಶೆಯ ಚುಕ್ಕಿ.


ಲಭಿಸಲಿ ಬಿಡಲಿ ಆಶೆಯು ಕುದುರೆಗೆ;
ಕಾಣದ ಕನಸಿಗೆ ನನಸು ಫಲಿಸುವ;
ಆಶೆಯಾ$$- ಭರಚುಕ್ಕಿ. (6)
      
     

No comments:

Post a Comment