Tuesday 14 August 2012

ಬೊಗಸೆ ತುಂಬಿದ ಆಸೆಗಳೇ


ಚೆಲುವು-ಚಿತ್ತಾರ
ಮಂದಸ್ಮಿತ ಮಧುಮಾಸದೊಳು;
ಬನಬನ ಸುತ್ತಲು ಮೇಘ-ಮಂದಾರ;
ಚೈತ್ರ-ವೈಶಾಖದ ಚೆಲುವು-ಚಿತ್ತಾರ.            ||1||

ದಿವ್ಯ-ಚೇತನ ಸುಪ್ತವಾಗಿಹುದು. 
ಮಳೆ-ಹನಿ ಕರಿಸದೆ ಸಾಗುತಿರೆ;
ತುರು-ತುರು ತುಂತುರು ಹನಿಯೇ ಇಲ್ಲ.
ದಿಕ್ಕುಗಳೆಲ್ಲ ಗರಬಡಿದಿಹವು;
ದಿವ್ಯ-ಚೇತನ ಸುಪ್ತವಾಗಿಹುದು.                   ||2||

ದೇವನೋಲುಮೆ-ಚಿತೈಸದಿದರೆ  
ಕೆರೆ ತೊರೆ ಹಳ್ಳಗಳೆಲ್ಲಾ ಬತ್ತಿ;
ಮಳೆ ಗಾಳಿ ಸುಳಿಯಾಗಿ ಸುಳ್ಳೇ ಸುತ್ತುತಿಹುದು.
ನೆಲ-ವೆಲ್ಲ ಬಿರಿ ಬಿಟ್ಟು ಹಸಿರುಲ್ಲು ಕಮರಿಹುದು. ||3||


ಬೊಗಸೆ ತುಂಬಿದ ಆಸೆಗಳೇ
ಆಗಸ ತುಂಬಿದ ಮೋಡಗಳೇ; ಬೊಗಸೆ ತುಂಬಿದ ಆಸೆಗಳೇ;
ಜನ-ವನ ತರು-ಲತೆ ಪಶು-ಪಕ್ಷಿ ಗಳು; ವಾಮಕುಕ್ಷಿಯಲಿ ಪರಿತಪಿ ಸುತಿರೆ,
ಹೇಳುಗರೆಲ್ಲಾ ಕೇಳುಗರೇ!!!                                                              ||4||

ಮನದಾಣ್ಮಯ ಮಧು-ಮಾತನು ಲಾಲಿಸಿ
ಬಾ$$ರೋ ಬಾ$ಬಾ ದಯ ತೋ ರೋ; ಹನಿ ತುಂತುರಿಸೋ ಮಳೆ-ರಾಯಾ.

ಸ್ವರ ಸಿಂಗಾರದೊಳು ವಸಂತ ಬಂದ, ಕರೆದನು ಬಾರೋ-ಬಾ ನೀಲ-ಮೇಘ ಶ್ಯಾಮಾ.
ಮನದಾಣ್ಮಯ ಮಧು-ಮಾತನು ಲಾಲಿಸಿ;  ಡಮರುಗ ಡಮ ಡಮ ಡಮ ಗುಟ್ಟಿಸಲು.,
ಸುಳಿ-ಗಾಳಿಯದು ಮೆಲ್ಲನೆ ಸೂಸಿ; ಮಿಂಚದು ಮಿಂಚಿತು ಗಗನ ಗುಡುಗಿತು.    ||5||

ಮೇಘ-ಮಾಲೆ ರಸದೌತಣ ನೀಡಲು

ಹನಿಗಳುದುರುತ ಜಡಿಮಳೆ ಹಿಡಿಯಲು;
ಮೇಘ-ಮಾಲೆ ರಸದೌತಣ ನೀಡಲು,
ಎಲ್ಲೆಲ್ಲೂ ಜಲ-ಜಲ ಧಾರೆ
ಎಲ್ಲೆಲ್ಲೂ ಶಿವ-ಶಿವಾ ; ಎಲ್ಲೆಲ್ಲೂ ಜಲ-ಜಲ ಧಾರೆ.                                      ||6||

ಜನಸಂಪದಕದು ಹರುಷ ಚೇತನ
ಕೆರೆ ತೊರೆ ಹಳ್ಳಗಳೆಲ್ಲಾ ತುಂಬಿ ರಮಣೀಯ ನೋಟ  ಹರಿಸಿಹುದು.
ದನ-ಕರ ಮೇಯಲು  ರೈತಗೆ ಸಂತಸ;
ಪೈರನು ಬೆಳಿಯಲು ಜನಸಂಪದಕದು ಹರುಷ ಚೇತನ.
ಆಗಸ ತುಂಬಿದ ಮೋಡಗಳೇ; ಬೊಗಸೆ ತುಂಬಿದ ಆಸೆಗಳೇ;                  ||7||

No comments:

Post a Comment