ಎಳೆಯ-ಮುಂಜಾವಿನಲಿ, ಅಳುವ ಕೂಸಿಗೆ-ತಾಯಿ
ತಟ್ಟಿ ತಪ-ತಪ-ಎಣ್ಣೆ, ಕಂದ-ಸಳ-ಬುಳ-ಕಂಗೆ
ಬಿಸಿ-ನೀರ-ಅಭ್ಯಂಗ,
ತೈಲ-ಜಳಕವ-ಮುಗಿಸಿ
ಮೈಯ-ಪಂಜಿಯ-ಲೋರಿಸಿ,ಗಂಧ-ಲೇಪಿನ-ಪೂಸಿ
ಧೂಪದೊಳು ಮಲಗಿಸಲು,
ಕಂದ-ನಗು-ಹಾಯಾಗಿ.|| ೧ ||
ಅಂಗ-ಬಟ್ಟೆ ಹಾಕಿ
ದಿಟ್ಟ-ಬೋಟ್ಟ-ನಿಟ್ಟು ಲಟ್ಟಿಕೆ-ಮುರಿದು
ನವಿಲು-ಗರಿಯನು-ಚುಚ್ಚಿ,
ಗಿಳಿವಿಂಡು-ಗಳ-ಕರೆದು
ಗಿಲಿಕೆ-ಗಿಲಿ-ಗಿಂಚಿ,
ಸಿರಿಕಂಠ-ಕೇಳು ನಿನ್ನ-ಲಾಲಿ-ಹಾಡು || ೨ ||
ತೂಗೇ ತೊಟ್ಟಿಲ ಗೀಗೀ
ಪದ-ಜೋಗಿ-ಮಲಗೆ
ಗೋಧೂಳಿ ಸಮಯ-ದೊಳು
ಜಗ-ವಾಗೆ-ಸಂಜೆ. || ೩ ||
No comments:
Post a Comment