Tuesday 29 April 2014

ಅಂಗವಾಡಿ ಯಿಂದ, ಮಂಗವಾಡಿ ತನಕ, ಮಕ್ಕಳಿಗೆ ಬಲು ಇಷ್ಠ, ಡುಮ್ಮ-ಡುಮ್ಮಿ-ಕಥೆಯು!!



ಅಂಗವಾಡಿ ಯಿಂದ, ಮಂಗವಾಡಿ ತನಕ, ಮಕ್ಕಳಿಗೆ ಬಲು ಇಷ್ಠ, ಡುಮ್ಮ-ಡುಮ್ಮಿ-ಕಥೆಯು!!
ನನ್ನ ವೈಫಲ್ಯವೋ$$ಜೀವನ ಸಾಫಲ್ಯವೋ ,ಅಂಡಲದೆ ಊರ್-ಊರು,ಯಾ ಉದರ ನೈಮಿತ್ಯವೋ
ಅರ್ಧ-ಮರ್ಧ ಕಲಿತ, ಮೈಮುರಿ-ದುಡಿತ, ಕಾಲ-ಕರ್ಮಕೆ ಬಾಗು, ಎಕ್ಕಡ-ಸವೆತ ಕೆಲಸ. || ೧ ||
ಸರಸ್ವತಿ ಯು ಕೈತುಂಬ, ಬಹು ಕೃತ, ವೇಷದೊಳು, ಇದು ಒಂದು ಕೆಲಸ, ಮಕ್ಕಳ-ಪಾಠ ಹೇಳುವದು.
ಬಿಜಾಪೂರ-ಕಿತ್ತೂರು,ಪರೀಕ್ಷೆ-ಸೈನಿಕ ಸಾಲೆ, ನವೋದಯದ ಮುಂದೆ, ನಾ ಮುಂದು-ತಾಮುಂದು.
ಕಲಿತವರ-ಶ್ರೇಯಸ್ಸು ಪಡೆದು ಸಾಲೆ-ಸೇರಿ,ಸಾಧಿಸಲು-ಹೆಮ್ಮೆ, ಸಾಫಲ್ಯ-ಕೊಟ್ಟಂಥ, ಈಕೆಲ್ಸಒಂದು. || ೨ ||
ಆಟ-ಪಾಠದ-ಕಲಿಕೆ ಕಮ್ಮಿ-ಯಾರಿಲ್ಲ$ಹಿಂದ-ಮುಂದು,  ಎಷ್ಟು-ಸಲ ಹೇಳಿದರು ಯಾವ-ಕಥೆ-ಬೇಕು,
ಹೇಳುವಿರೋ ಕೆಳುವಿರೋ ? ಬೇಸರಿಸದಿರಿ ಕೇಳುವರು , ಬಲು-ಇಷ್ಠ, ಡುಮ್ಮ-ಡುಮ್ಮಿ-ಕಥೆಯು!!      || ೩ ||
B.R. Bhate, Dharwad. Dt:30-04-2014

Sunday 27 April 2014

ಬೇಸಿಗೆ ಮಳೆ ಚಳಿ - ತ್ರಿಕಾಲ, ಠಣ-ಠಣ-ಠಣ ಜೈ ಗೋಪಾಲ !!!



ಬೇಸಿಗೆ ಮಳೆ ಚಳಿ - ತ್ರಿಕಾಲ, ಠಣ-ಠಣ-ಠಣ ಜೈ ಗೋಪಾಲ !!!
ಬೇಸಿಗೆ ಮಳೆ ಚಳಿ - ತ್ರಿಕಾಲ, ಕೈಕೊಟ್ಟರೆ ಜಗದಿನೋಡು, ಠಣ-ಠಣ-ಠಣ ಜೈ ಗೋಪಾಲ
ಕೃಷಿಕ ನೇಗಿಲ ಯೋಗಿ
ಬೆಳೆ ಬೆಳೆಯದಿರೆ ಏನು, ಪಣತ ತುಂಬುವ ಕಣಜ, ಕಳೆಯುವವು ಗಳಿಸುವವೇ , ಜಳ ಜಳ ವಾದಾಗ
ಕೃಷಿಗೆ ಕೈ ಕೊಟ್ಟಾಗ, ದುಡಿದರಿಲ್ಲಾ ಗೆಲುವು. ಹಾವು-ಏಣಿಯ ಆಟ..., ಆಟ ಆಡುವ ಮಾತು,
ಕೈ ಕೆಸರು ಬಾಯಿ ಮೊಸರು, ಹೊಕ್ಕು ಇಳಿದವನೆಂದ, ಎದೆ ತನಕ ಧೂಳು ಕೆಸರು. || ೧ ||
ಕೆಟ್ಟು ಪಟ್ಟಣ ಸೇರು ಉದ್ಯೋಗ ವರಸು
ಕಲಿ-ಕಾಲ ಕಲಿಕೆ-ಯೊಳು ಮುಗ್ಗರಿಸಿ ಬಿದ್ದಾಗ, ಎದ್ದರೇನು? ಬಿದ್ದು ಇಲ್ಲ ಹಾಳು ಉಸಿರು.
ದಿನವು ಹೋಗುವವು, ಇಂದಿನ-ದಿನ ನಾಳೆ, ಹೇಳುವರು ವೇದಾಂತ ಉದ್ಯೋಗ ವರಸು || ೨ ||
ಏನೆಲ್ಲಾ ಕೆಲಸ ಉರಿ-ಸೌದೆಗಾಗಿ
ಕೈಚೀಲ ಹಿಡಕೊಂಡು, ಗೋಮಾಳ ತಿರುಗಿದ್ದು, ಹೆಕ್ಕುತ್ತ, ಕಾಕುಳ್ಳು,(ಸೌದೆ)ಚೀಲದಲಿ ತುಂಬುತ್ತ
ಒಂದೆಡೆಗೆ, ಗುಪ್ಪಿ ಚೀಲ ರಾಶಿ ಹಾಕಿದ್ದು, ಅಂತೆ ಹೊತ್ತು ಗೋಣೀ-ಚೀಲ ಸಾಗಿದ್ದು ಮನೆಗಯತ್ತ
ಕಾಳಿಲ್ಲದಿರೇ ಏನು ಹೆಕ್ಕು ತೆನೆಗಾಗಿ
ಕೈಚೀಲ ಹಿಡಕೊಂಡು, ಹಕ್ಕಲು-ಗದ್ದೆ ತಿರುಗಿದ್ದು , ಹೆಕ್ಕುತ್ತಾರಿ$ಸುತ್ತ, ತೆನೆ-ಭತ್ತ, ಚೀಲದಲಿ
ಬಿದಿರು ಅಕ್ಕಿ ಬಂತು, ಬರಕೆ ಪರಿಹಾರ, ಪಣತ ತುಂಬುವ ಕಣಜ  ಜಳ- ಜಳ ವಾದಾಗ. || ೩ ||
B.R. Bhate, Dharwad. Dt:28-04-2014

೧೨ರ ಶತಕದ ತಿಳವಳ್ಳಿಯ, ಜಕ್ಕಣನ ಶಿಲ್ಪಕಲೆ ಶ್ರೀ ಶಾಂತೇಶ್ವರ ದೇವಾಲಯದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ನಾ ಮರೆಯದ ಸಾರ್ವಜನಿಕ ಕಾರ್ತೀಕೋತ್ಸವ ವೈಭವ.



೧೨ರ ಶತಕದ ತಿಳವಳ್ಳಿಯ, ಜಕ್ಕಣನ ಶಿಲ್ಪಕಲೆ  ಶ್ರೀ ಶಾಂತೇಶ್ವರ ದೇವಾಲಯದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ನಾ ಮರೆಯದ ಸಾರ್ವಜನಿಕ ಕಾರ್ತೀಕೋತ್ಸವ ವೈಭವ.
ನಂಬಿ ಕರೆದರೇ..... ಓ.... ಎನ್ನನೇ? ...ಶಿವನು..! ನಂಬ-ದಿದ್ದವಗೆ ಕೈ ಬಿಡುವನೇ ಅವನು, ಭಕ್ತ ವತ್ಸಲ ಬಿರುದುಳ್ಳವನು.
ಈ ನಂಬಿಕೆಗೆ,  ಸಂಕಟ ಬಂದಾಗ ವೆಂಕಟ ರಮಣ ಎಂಬಂತಾಗದೇ ದೇವರಿಗೆ ನಿತ್ಯೋಪಾಸನೆ ಅರ್ಚನೆ, ಅಷ್ಟೋತ್ತರ, ಬಿಲ್ವಾರ್ಚನೆ, ಅಭಿಷೇಕ, ಲಘು-ರುದ್ರ, ರುದ್ರಾಭಿಷೇಕ, ಅಕ್ಕಿ-ಪೂಜೆ, ಬುತ್ತಿ-ಪೂಜೆ,ಕಾರ್ತಿಕ ಮಹೋತ್ಸವ  ಮಹಾ-ಮಂಗಳಾರತಿ ಸೇವೆ ಗಳು ನಡೆಯುತ್ತಲೇ ಬಂದಿವೆ.
ದೇವಾಲಯದಲ್ಲಿ ಕಾರ್ತಿಕ ಮಾಸದ ಮೊದಲದಿನ ದೇವಸ್ಥಾನ ಸುತ್ತ ಮುತ್ತಲ ಆವರಣ ಶುಚಿ ಗೊಳಿಸುವದು,ಹೊರಗಡೆಗೆ ಧೂಳು ಬರದಂತೆ ನೀರಿನಿಂದ ಥಳಿ ಹೊಡೆಯುವದು, ದೇಗುಲ ದೊಳಗೆ ನೀರಿನಿಂದ ತೊಳೆದು ಚೆನ್ನಾಗಿ ಒರೆಸಿ ಎಲ್ಲರೂ ಕೂಡಲು ಅಣಿಗೊಳಿಸುವದು. ಅಂದು ಎಂದಿನಂತೆ ದೇವಸ್ಥಾನದ ಅರ್ಚಕರು ತ್ರಿಕಾಲ ಪೂಜೆ ಮಾಡುತ್ತಾರೆ. ಪಣತಿ ಗಳನ್ನು ತಂದು ದೇಗುಲದ ಆವರಣ ದೊಳಗೆ ಎಣ್ಣೆ-ಬತ್ತಿ ಹಾಕಿ ನಿರ್ದಿಷ್ಟ ಜಾಗೆಯಲ್ಲಿ ಇಡುವದು, ಅಲ್ಲದೇ  ಒಂದು ಎರಡು ಚಿಮಣಿ-ಡಬ್ಬದಷ್ಟು(೬-೮ ಹತ್ತಿಕಾಳು ಬಟ್ಟೆಯಲ್ಲಿ ಕಟ್ಟಿ ಮಾಡಿದ) ಗಂಟುಗಳನ್ನು ಶೇಂಗಾ ಎಣ್ಣೆ ಹಾಕಿ ನೆನೆಸೀ ಇಟ್ಟು ಅವುಗಳನ್ನು ದೇವಸ್ತಾನದ ಮೇಲೆಲ್ಲಾ ನಿರ್ದಿಷ್ಟ ಸ್ಥಳದಲ್ಲಿ ಇಡಲಾಗುತ್ತಿತ್ತು. ಈ ಎಲ್ಲ ಕೆಲಸಗಳನ್ನು ಮನೆಯ ಆಸುಪಾಸು ಜನರು ಸೇವಾ ಭಾವ ದಿಂದ ಮಾಡುತ್ತಾರೆ. ಇಷ್ಟ-ಮಿತ್ರ ಬಂಧುಗಳು, ಸಹಿತ, ಹಳ್ಳಿಯಲ್ಲಿನ ಜನರು ಎಲ್ಲರೂ ಬಂದು ಸೇರುತ್ತಾರೆ. ಸಂಭ್ರಮದಿಂದ ನಲಿಯುತ್ತಾರೆ.
ಇನ್ನು ದಿಪೋತ್ಸವದ ನಿಮಿತ್ಯಗರ್ಭಗುಡಿಯಲ್ಲಿ ವಿಶೇಷ ಅಲಂಕಾರ ಅರ್ಚನೆ ಪೂಜೆ, ಮುಗಿಸಿ, ದೇವರ ಮಂಗಳಾರತಿ ಹಚ್ಚುವ ವೇಳೆಗೆ ಸರಿಹೊಂದುವಂತೆ ತಯಾರಿ ಮಾಡಿರುತ್ತಾರೆ. ಸುಮಾರು ರಾತ್ರಿ ೭.೩೦ರ ವೇಳೆಗೆ ದೇವರ ನಂದಾ ದೀಪ ಬಿಟ್ಟು ಉಳಿದೆಲ್ಲ್ಲ ದಿಪಗಳನ್ನು ಬಂದು ಮಾಡಿ, ದೀಪ ದ ಅವಶ್ಯಕತೆ ಮತ್ತು ಬೆಳಕಿನ ಮಹತ್ವ, ಮಹಿಮೆ ಎಲ್ಲ ಜನಕ್ಕೆ ಅರ್ಥೈಸುತ್ತಾರೆ. ನಂತರ ಎಲ್ಲರೂ ಸೇರಿ ನಿಗದಿ ಪಡಿಸಿದ ಜನರು, ಭಕ್ತಿ ಮತ್ತು ಎಚ್ಚರ ದಿಂದ ದೇವಾಲಯದ ಆವರಣದ ತುಂಬಾ ಪಣತಿ ದೀಪ ಮತ್ತು ಸಧೃಕಡ ಯುವಕರು ದೇಗುಲ ಹತ್ತಿ ಮೇಲೆ ಇಟ್ಟ ಹತ್ತಿಕಾಳ-ಎಣ್ಣೆ ಗಂಟು ದೀಪ ಹಚ್ಹುತ್ತಾರೆ. ಈ ದಿಪೋತ್ಸವ  ದೀಪಗಳನ್ನು ವ್ಯವಸ್ಥಿತ ವಾಗಿ ಒಮ್ಮೆಲೇ ಬೆಳೆಗುವ ಪ್ರಕ್ರಿಯೆ ಪ್ರಮುಖ ವಾಗಿರುತ್ತದೆ. ಈ ಬೆಳೆಕಿಗೆ ಚ್ಯುತಿ ಬರದಂತೆ ಚಿಕ್ಕ ವಿದ್ಯುತ್ ದೀಪ ಹಚ್ಚುತ್ತಾರೆ. ಚಂದನ ಧೂಪ ಹೊಗೆಯಲ್ಲಿ ದೇವರ ಬೆಳಕು ಮಂದವಾಗಿ ಪ್ರಕಾಶಿಸುತ್ತದೆ. ಆಗ ಅರ್ಚಕರು ಮಂಗಲ ವಾದ್ಯಗಳೊಡನೆ ಮಂಗಳಾರತಿ ಮಾಡುತ್ತಾರೆ.
ಅಂದಿನ ವಿಶೇಷ ಹಮ್ಮಿಕೊಂಡ ಕಾರ್ಯಕ್ರಮಗಳು:
ಅಂದಿನ ಕಾರ್ಯಕ್ರಮಗಳು ಮಂಗಲಾಚರಣೆ ಯೊಂದಿಗೆ, ಅಷ್ಟಾಂಗ ಮಾರ್ಗ ಆಗಮ/ನಿಗಮ-ಉಪನಿಷತ್ ವೇದ-ಮಂತ್ರ ಪಠಣ ಪ್ರಕಾರ ಮಾಡುತ್ತಾರೆ.ಪ್ರತಿ ಕಾರ್ಯಕ್ರಮ ಗಳ ಘೋಷಣೆ ವೇದ ಮಂತ್ರ ಬಲ್ಲವರಿಂದ ಆಗುತ್ತದೆ. ನನಗೆ ತಿಳಿದ ಮಟ್ಟಿಗೆ ಸ್ವಸ್ತಿ ಹೀಗಿರುತ್ತದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ದೇವ-ದೇವೋತ್ತಮ ದೇವತಾ ಸರ್ವಾಭ್ಯಾಮ, ಋಷಿ-ಮುನಿ ಗಣಾನಾಮ್ , ಸರ್ವಾಯುಶಃ ಋಗ್ವೇದ ಸೇವಾ ಮಮಧಾರಯಾ. ಎನ್ನುತ್ತಿದ್ದಂತೆ ಬಲ್ಲವರು ಋಗ್ವೇದದ ಕೆಲ ಭಾಗ ಪಠಣ ಮಾಡುತ್ತಾರೆ. ಇದೇ ರೀತಿ ಸ್ವಸ್ತಿಯೊಂದಿಗೆ, ಸಾಮ ವೇದ, ಯಜುರ್ವೇದ, ಅಥರ್ವಣ ವೇದ ಪಠಣ ಮಾಡುವರು. ಸಂಗೀತ ಸೇವಾ, ನೃತ್ಯ/ನಾಟ್ಯಸೇವಾ, ಗಾಯನ-ಭಜನ ಸೇವಾ, ವೇಣುಪ್ರಿಯ,ವೀಣಾ ಪ್ರಿಯ, ವಾದನ ಪ್ರಿಯ, ಘುಮ್ಮಟ ಪ್ರಿಯ, ಘಟವಾದ್ಯ ಪ್ರಿಯ, ಡಮರು ವಾದ್ಯ ಪ್ರಿಯ, ಇತ್ಯಾದಿ ಗಳ ನಂತರ ಶಂಖನಾದ ಪ್ರಿಯ, ಘಂಟಾ ನಾದನಮ್ ಸಹಿತ ಸರ್ವ ವಾದ್ಯ ಪ್ರಿಯ ಸೇವಾ ಮಮಧಾರಯಾ, ಎಂಬ ಸೇವೆಯಲ್ಲಿ ಮಂಗಳಾರತಿ ಯೊಡನೆ ಕಾರ್ಯ ಕ್ರಮಗಳು ಸಂಪನ್ನ ವಾಗುತ್ತವೆ. ಎಲ್ಲಾ ದೀಪಗಳ ಸಂಭ್ರಮ ವಾದಂತೆ ಸುತ್ತುವರೆದ ಜನಪದವು ತುಪ್ಪದ ದೀಪ ಹಚ್ಚಿ ಆರತಿ ಬೆಳೆಗುತ್ತಾರೆ. ನಂತರ ವಿಶೇಷ ವಾಗಿ  ಆಮಂತ್ರಿಸಿದ ಹರಿದಾಸರಿಂದ ಆ ಪರಿಸರದಲ್ಲಿ ಹರಿಕಥೆ ಕೀರ್ತನೆ ಆರಂಭ ವಾಗುತ್ತದೆ. ಆಗ ಅಲ್ಲಿ ಅವಶ್ಯ ಪಣತಿ ದೀಪ ಗಳ ಪೂರೈಕೆ ಇಟ್ಟಿರುತ್ತಾರೆ.
ಮಂಗಲಾಚರಣೆ ಮುಕ್ತಾಯ ಮಂಗಳಾರತಿ ಯೊಂದಿಗೆ ಎಲ್ಲ ಕಾರ್ಯಕ್ರಮಗಳು ಪ್ರಸಾದ ವಿನಿಯೋಗ ದೊಂದಿಗೆ ಮುಕ್ತಾಯ ಹೊಂದುತ್ತವೆ. ಬಾಲ್ಯದ ಅಂದಿನ ಚಿಕ್ಕಂದಿನ ಕಾರ್ಯಕ್ರಮಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಗಳಿರಬಹುದು. ಬದಲಾವಣೆ ಪ್ರಕೃತಿಯ ನಿಯಮ ಅಂತೆ ದಿನ ಕಳೆದ ಪ್ರಕುರ್ತಿಗೆ ಇಂದು ಸಂದ್ಯಕಾಲ ಆದರೇನಂತೆ, ಉದಯಕಾಲದ ಉದಯ ರಾಗದ ರವಿಗೆ ಇಳಿವಂತೆ ಸಂಧ್ಯಾರಾಗವೂ ಹಾಡಲೇ ಬೇಕಲ್ಲ ಏನೇ ಆದರೂ ಸಮರಸವೇ ಜೀವನದ ಈ ರಸ ನಿಮಿಷಗಳು ಅರಿವಿರುವ ತನಕ ನಿತ್ಯ ವಿನೂತನಗಳ ನಡುವೆ ಬರುವ ಎಂದೂ ಮರೆಯದ ಆ ದಿನಗಳು ಈ ಜಗವೇ  ವಿಸ್ಮಯ!!.
B.R. Bhate, Dt:27 -04-2014

Saturday 26 April 2014

ನಮ್ಮೂ ರ ಕೇರಿಯಲಿ ಅರ್ಧ ಶತಕದ ಹಿಂದೆ ಪುಟ ತಿರುವಿದಾಗ.... ಗಂಗೇ, ಗೌರಿ, ಯಮುನಿ...


ನಮ್ಮೂ ರ ಕೇರಿ(ತಿಳವಳ್ಳಿ) ಯಲ್ಲಿ, ಶ್ರೀಯುತ ಕೃಷ್ಟರಾವ ಮತ್ತು ಶ್ರೀಮತಿ ಸಾವಿತ್ರಿಬಾಯಿ, ವಯೋವೃದ್ಧ ದಂಪತಿ, ಖಾಂಡೇಕರ ಮನೆತನದ, ಹಿರಿಯ ಜಮೀನು ಯಜಮಾನ ರಿದ್ದರು. ಅಜಾನುಬಾಹು, ಎತ್ತರ ದೇಹ, ಗಂಧ ಲೇಪಿತ ಹಣೆ, ಕೈಯಲ್ಲೊಂದು ಕೋಲು, ಥೇಟ್ ಕನ್ನಡಕ ಧರಿಸಿದ, ಗಾಂಧೀಜಿಯ ಅಪರಾವತಾರ, ಎನ್ನುವಂತಿದ್ದರು. ತೊಂಬತ್ತು ದಾಟಿದ ಅವರ, ನಿತ್ಯ ನಸುಕಿನ ಸುಪ್ರಭಾತ, ಅಭ್ಯಂಜನ, ದೇವಪೂಜೆ-ಪಾರಾಯಣ, ಹರಿಕಥೆ ಕಾಲ ಕ್ಷೇಪ, ಬರುಹೊಗು ಜನರ ಯೋಗ ಕ್ಷೇಮ, ಮನೆ ಉಸ್ತುವಾರಿ, ಸಾಯಂಕಾಲ ತನಕದ ರಿವಾಜು, ನಮ್ಮ ಊರಲ್ಲಿ ನೋಡುವ ಹಾಗಿತ್ತು. ಹಿರಿಯ ಮಗ, ಕೇಶವ ರಾಯರು, ಊರಲ್ಲಿಯ ಗೌಡ-ಶ್ಯಾನು ಭೋಗರ ಜ್ಯೊತೆ, ಕರಣೀಕ ರಾಗಿದ್ದರು, ಕಿರಿಯ ಭೀಮರಾಯ ಮಿಲ್ಟ್ರಿಯಲ್ಲಿ, ಉಳಿದಿಬ್ಬರು ಬೆಳಗಾಂ ಪುಸಾಳ್ಕರ ಕಂಪನಿ ಕೆಲಸಕ್ಕೆ, ದೂರ ಹೋಗಿದ್ದರು. ಉಳಿದ ೫-೬ ಮಕ್ಕಳ ಜ್ಯೊತೆ ಕೇಶವರಾಯರ ಧರ್ಮಪತ್ನಿ, ಅಂಬಕ್ಕ ಅವರ ಗದ್ದೆಮನೆ-ಕೊಟ್ಟಿಗೆ ಯಿಂದ ಊರಲ್ಲಿರುವ, ಸ್ವಂತ ಮನೆ ತನಕ, ಕೆಲಸ ಕುಂದಿಲ್ಲದಂತೆ, ನೋಡಿ ಕೊಳ್ಳುತ್ತಿದ್ದರು. ಸಮಾಜ ಸೇವೆಯಲ್ಲಿ, ಅವರ ಕುಟುಂಬವು ಸಹ, ಎತ್ತಿದ ಕೈ ಆಗಿತ್ತು. ಬೆಳಿಗ್ಗೆ ಗೋಮಾಳ ಸೇರಿದ ದನಕರುಗಳು, ಸಾಯಂಕಾಲ ಬರದಾಗ, ಕೃಷ್ಟರಾಯರು, ‘ಗಂಗೇ, ಗೌರಿ.., ಯಮುನಿ..,ಕರಿಯ...,ಭರಮ... ಎಂದು ಹೆಸರಿಡಿದು, ಎಮ್ಮೆ-ಹಸು-ಕರು ಗಳನ್ನು ಕೆರದಾಗ ಎಲ್ಲಿಲ್ಲದ ಹಸುಗಳು ಗೋಮಾಳದಿಂದ, ಕೊಟ್ಟಿಗೆಯ ತಮ್ಮಜಾಗಕ್ಕೆ, ಸೇರುವ ಶಿಸ್ತು, ಈಗ ನೋಡಲು ಸಿಗುವದಿಲ್ಲ. ಕೃಷ್ಟ ರಾಯರು ಮಧ್ಯಾನ್ಹ ಕಾಕ ವಾಯಸ (ಬಲಿ/ಪಿಂಡ) ವಿಟ್ಟಾಗ ಕಾಗೆಗಳು ತಿಂದು ಮುಗಿಸುತ್ತಿದ್ದಂತೆ ಮುಂದಿನ ಕಾರ್ಯಕ್ರಮ ಸಾಗುತ್ತಿದ್ದವು..... B.R. Bhate, Dharwad. Dt:26-04-2014

Friday 25 April 2014

ಸುಡಬೇಕ ಜನ್ಮ ಸುಖ ವಿಲ್ಲ ಎನಬೇಡ, ಬೆದರುಕಗು ಬೆದರಿಸುತ, ಬರತಾವ-ಹಕ್ಕಿಗಳು



ಸುಡಬೇಕ ಜನ್ಮ ಸುಖ ವಿಲ್ಲ ಎನಬೇಡ, ಬೆದರುಕಗು ಬೆದರಿಸುತ, ಬರತಾವ-ಹಕ್ಕಿಗಳು
ಬರತಾವ ಬೆದರಿಸತಾವ, ಬೆದರುಕಗು ಬೆದರಿಸುತ, ಹಕ್ಕಿಗಳು ಹೊಲಕಾಳ, ಮುಕುರಿ ಮುಗಿಸ್ಯಾವು
ಜನುಮ ಸಹಿಸಲು ಬೇಕ, ಇನ್ನೆಷ್ಟು ಕಾಡ್ಯಾವು, ಕಾಳ ಕರ್ಕೊಟಕನ, ಕಡಿತ ಮಿಕ್ಕ ಬಳಿಕ.
ತಂಪೆರೆವ ಮಳೆಗಾಲ, ಕೆಸರು ಕಿಚ್ಚಲಿ ಜಾರಿ, ಧೊಪ್ಪನೆ ಬಿದ್ದು, ಕೈ- ಸೊಂಟ ಮುರಿದಾಗ,
ಜಿಟಿ-ಜಿಟಿ ಸುರಿಮಳೆ, ಸಾಕಪ್ಪ ಸಾಕು, ಕೆರೆ ಕೊತ್ತಲು ತುಂಬಿ, ಹಸಿರು ಹೊಲ ಬೆಳೆದಾಗ,
ಕಡು-ಕಷ್ಟ ಗಳು ಇರಲಿ, ಹಬ್ಬ-ಹುಣ್ಣಿಮೆ ಬರಲಿ, ಬರಗಾಲದಲಿ ಬರದೆ ಈ ಅಧಿಕ ಮಾಸ.
ಸುಡಬೇಕ ಜನ್ಮ ಸುಖ ವಿಲ್ಲ ಎನಬೇಡ, ಕೆಳೆದಾವ ಕಷ್ಟ, ಸಂತಸ ದುಃಖ ಮರೆಸುತ್ತ,
ಜಗ ಶಿವನ ಸಂಸಾರ, ಸುಖ-ದುಃಖ ಪರಿವಾರ, ಹಗಲಿರುಳು ಹೋದಂತೆ,ಕಾಣ ಹೊಸ ಬೆಳಕ.
B.R. Bhate, Dharwad. Dt;26-04-2014