Thursday 17 April 2014

ತಿಳವಳ್ಳಿ ಎರಡು ಲೇಖನಗಳು

೧೨ರ ಶತಕದ ತಿಳವಳ್ಳಿಯ, ಜಕ್ಕಣನ ಶಿಲ್ಪಕಲೆ  ಶ್ರೀ ಶಾಂತೇಶ್ವರ ದೇವಾಲಯ. 
ತಿಳವಳ್ಳಿ ರಥ-ಬೀದಿಯಲ್ಲಿ ಸುಮಾರು ೧೨ನೆಯ ಶತಮಾನದ ಅಮರಶಿಲ್ಪಿ ಜಕ್ಕಣಾಚಾರ್ಯರು ಕಟ್ಟಿದ ಪೂರ್ವಾಭಿ ಮುಖ ವಾಗಿ ಅತ್ಯಂತ ಶಾಂತವಾತವರಣದಲ್ಲಿ ಪಾಣಿಪೀಠ-ಶಿವಲಿಂಗ ಹೊಂದಿದ ಶ್ರೀ ಶಾಂತೇಶ್ವರ ದೇವಾಲಯವಿದೆ.
ಇನ್ನೂತನಕ ಇತಿಹಾಸ ಲಭಿಸದ ತಿಳಿಸದ ಪುರಾತತ್ವ ಇಲಾಖೆ!   
ದೇವಸ್ಥಾನಕ್ಕೆ ಎಲ್ಲ ಮತಸ್ಥರು ಭೇಧ ಭಾವ ವಿಲ್ಲದೆ ಊರ ಜನರೆಲ್ಲಾ ನಿತ್ಯ ಪೂಜಾ ಪದ್ಧತಿಯಲ್ಲಿ ಶ್ರದ್ಧಾ-ಭಕ್ತಿ ಯಿಂದ ಪಾಲು ಗೊಳ್ಳುತ್ತಾರೆ. ಹಬ್ಬಹುಣ್ಣಿಮೆ ಗಳಲ್ಲಿ ವಿಶೇಷ ಪೂಜೆ ಜಾತ್ರೆ ಹರಿಕಥೆ, ಕಾರ್ತಿಕ ಮಹೋತ್ಸವ ಮಾಡುತ್ತಾರೆ.ನಿತ್ಯ ನಂದಾದೀಪ/ದೀಪಾರಾಧನೆ ಮಾಡಿಸುತ್ತಾರೆ. ಪೂಜೆಗಾಗಿ ಪ್ರಧಾನ ಅರ್ಚಕ ರಿದ್ದಾರೆ. ಮೊದಲು ದೇವಸ್ಥಾನಕ್ಕೆ ಇನಾಮೀ ಜಮೀನು ಉಂಬಳಿ ಕೊಟ್ಟಿದ್ದರು. ಈಗ ದೇವಸ್ಥಾನವು ಪುರಾತತ್ವ ಇಲಾಖೆಗೆ ಸೇರಿದೆ.
ಒಂದು ಕಾಲಕ್ಕೆ ಹೆಸರು ವಾಸಿ ತಿಳವಳ್ಳಿ ಆಗ ಹೆಂಗಿತ್ತು?
ಮಲೆ-ಬೆಳವಲದ ಮಧ್ಯದ ಗಡಿನಾಡ ಪ್ರದೇಶದ ಭಾಗವಾಗಿದ್ದು, ರೈತರು ಬಳ್ಳದಿಂದ, ಭತ್ತ ರಾಗಿ ಜೋಳ ನವಣೆ ಸಜ್ಜೆ, ಅಳೆದು ಪಣತ ತುಂಬುತ್ತಿದ್ದರು. ಪಡಸಾಲೆ ಶೇಂಗಾ,ಕಡಲೆ ಹೆಸರು, ಹುರುಳಿ ಉದ್ದು  ಅಕ್ಕಡಿ ಕಾಳ ಚೀಲದಿಂದ ತುಂಬಿರುತ್ತಿದ್ದವು. ಸಫಲ ಗೋಮಾಳ ಕೂಡಿದ ದನ-ಕರು-ಗಳಿಂದ ಹಾಲು ಹೈನದ ಕೊರತೆ ಇರಲಿಲ್ಲ. ನೇಕಾರರು ಕೈಮಗ್ಗ ಬಟ್ಟೆ,ಉಣ್ಣೆ ಬಟ್ಟೆ ನೇಯುತ್ತಿದ್ದರು. ನೇಗಿಲ ಯೋಗಿಗೆ ಅನುಕೂಲ ಕರವಾಗಿ ಕುಂಬಾರ, ಮಡಿವಾಳ, ಕಮ್ಮಾರ್, ಬಡಿಗ, ಇತ್ಯಾದಿ ವರ್ಗ ಗಳಿದ್ದವು. ಮತ ಭೇದ ವಿಲ್ಲದೇ ದಾಸೋಹ, ಭಜನೆ, ಹರಿಕಥೆ, ಪೂಜೆ-ಪುನಸ್ಕಾರ ನಡೆಯುತ್ತಿದ್ದವು.
ಪ್ರಕೃತಿ ವಿಕೋಪ ಸ್ಥಿಮಿತ ಕಳೆದಾಗ (ದೇವ ಕಾಯೋ ಮಹಾ-ಮಹಿಮ!!!)
ಅಕಾಲ, ಮಳೆ ,ಮಹಾಪೂರ, ಬರ, ಕ್ಷಾಮ ಗಳು, ಇನಫ್ಳುಎಂಝಾ, ಕಾಲರಾ, ಕ್ಷಯರೋಗ, ಇಲಿಗಳು ಹೆಚ್ಚಾಗಿ ಪ್ಲೇಗ್ ಮಹಾಮಾರಿ ಬಂದು ಗುದ್ದವ್ವನ ಬೇನೆ ಹೆಸರಲ್ಲಿ ಊರು ಬಿಟ್ಟ ಇತಿಹಾಸ ದಲ್ಲಿ ಉಳಿದವರಿಗೆ ಶಾಂತೇಶ (ಶಾಂತಪ್ಪ) ಕಾದ ನೆಂಬ ನಂಬಿಕೆ ದೇವರ ಭಯ-ಭಕ್ತಿ-ಸೇವಾ ಭಾವನೆ ಬಲಪಡಿಸಿದೆ.
ನಂಬಿ ಕರೆದರೇ..... ಓ.... ಎನ್ನನೇ? ...ಶಿವನು....!!!
ಈ ನಂಬಿಕೆ ಸಂಕಟ ಬಂದಾಗ ವೆಂಕಟ ರಮಣ ಎಂಬಂತಾಗದೇ ದೇವರಿಗೆ ನಿತ್ಯೋಪಾಸನೆ ಅರ್ಚನೆ, ಅಷ್ಟೋತ್ತರ, ಬಿಲ್ವಾರ್ಚನೆ, ಅಭಿಷೇಕ, ಲಘು-ರುದ್ರ, ರುದ್ರಾಭಿಷೇಕ, ಅಕ್ಕಿ-ಪೂಜೆ, ಬುತ್ತಿ-ಪೂಜೆ,ಕಾರ್ತಿಕ ಮಹೋತ್ಸವ  ಮಹಾ-ಮಂಗಳಾರತಿ ಸೇವೆ ಗಳು ನಡೆಯುತ್ತಲೇ ಬಂದಿವೆ.
ಜನಹಿತ-ಜನಮತ-ವಿಶ್ವಾಸ ಒಂದೇ. ಭಯ-ಭಕ್ತಿಯ ಮುಂದೆ. ವೆಂಕಟ-ರಮಣ.
ಬಿಡು ಬಾಹ್ಯ ದೊಳು ಡಂಭವ ಮಾನಸ್ದೋಳ ಗೆಡಬೀಡ ದಿರು ಶಂಭುವ ಎನ್ನಲೇ ? ನಿರ್ಮಲ-ಚಿತ್ತ ಮನವೇ ಕರ್ಪೂರ ದಾರುತಿ.... ಎಂಬ ಇಹ-ಪರದ ಭಯ-ಭಕ್ತಿ-ವಿಸ್ವಾಸ ವಾಣಿ ಜನ-ಹಿತ-ಜನ-ಮತಕ್ಕೆ ಸೇರಿದ್ದು, ಎಂದು ನನ್ನವಯುಕ್ತಿಕ  ಅಭಿಪ್ರಾಯ.
B.R. Bhate, Dt:08-04-2014
ಎಲ್ಲೆಲ್ಲೂ ನೋಡಿದರೂ ಅಲ್ಲೆಲ್ಲೂ ನಮ್ಮವರೇ!!!.. ನಮ್ಮೂರು ತಿಳವಳ್ಳಿ
ನಮ್ಮೂರು ನೆನೆದಾಗ! ನಾ ಹುಟ್ಟಿ ನಲಿ ಕಳೆದ, ಚಿಕ್ಕಂದಿನ ಬಾಳು, ಚಪರಿಸೆ ಜೇನು. ನಮ್ಮೋರು ಕಾಣುವರು, ಮನವು ಬೀಗುವದು. ಅಂಥಃ ಕರುಣದ ಜನು-ಮನವು ಅಥಹದು. ಅಡಿಯಿಂದ-ಮುಡಿತನ ಜೀವನ ಎತ್ತಿನ ಗಾಡಿ, ಕಣ್ಣಿದುರಿಗೆ ಬಂದು ಮರೆಯಾಗುವವು. ಎಲ್ಲೆಲ್ಲೂ ನೋಡಿದರೂ ಅಲ್ಲೆಲ್ಲೂ ನಮ್ಮವರೇ, ಅವಿನಾ-ಭಾವತೆ ಅಲ್ಲಿ ಮನೆಯ ಮಾಡಿಹುದು. ಈ ಪ್ರೀತಿ-ವಾತ್ಸಲ್ಯ-ವಿಶ್ವಾಸ ದಲ್ಲಿ, ಶ್ರೀಯುತ ನಾರಾಯಣ ಸುಬ್ಬರಾಯ (N.S)ಹರ್ಡಿಕರ ಹುಬ್ಬಳ್ಳಿ ದಿಳ್ಳಿ(ದೆಹಲಿ) ತಲುಪಿ ಘಟಪ್ರಭಾ ಸೇವಾದಳದಲ್ಲಿ ಐಕ್ಯವಾದರೂ, ಇಲ್ಲಿ ಕೆಳಗಿನ ಜನಪದದ ನಮ್ಮೂರು, ತಿಳವಳ್ಳಿ ಹೂ...ಬಳ್ಳಿ ಹುಬ್ಬಳ್ಳಿ ತನಕ ಹಬ್ಬಿ ಬೆಳೆದ ಪರಿಚಯ ಸಹಿತ ಹಾಸು ಹೊಕ್ಕಾಗಿದೆ, ಹೆಚ್ಚು ಬರೆಯೋಲ್ಲಾ ಓದಿ ನೋಡಿ!    
ಜಯಭೇರಿ ಹೊರಟಾಗ ಹೀಗೆ ನಮ್ಮೂರು.
ಆತ್ತಿ ಆಲದ ಮರ ಸುತ್ತು ಬೇವಿನ ಮರ , ನಡುವೆ ಉತ್ತತ್ತಿ- ಮರ ಬಹೂಪರಾಕ.
ಏರಿಲ್ಲಾ ಇಳಿವಿಲ್ಲಾ ಕೊಲ್ಲಾರಿ  ಬಸವಣ್ಣ; ಅಡ್ಡ ಗುಡ್ಡದ ಮಲ್ಲಾ ಪುರ ದಾಟಿ;ಸೇರ
ಕಾಣೋ- ಬಟಾ-ಬಯಲ ತಿಳ$$ಳ್ಳಿ.                 || 1 ||
ನಮ್ಮೂರ ದ್ಯಾಮವ್ವ ಕಂಡಾಳು ಹೀಗೆ
ಹೆಬ್ಬಳ್ಳಿ ಹುಬ್ಬಳ್ಳಿ ಹಬ್ಬಿ$$ ರಸಬಳ್ಳಿ; ತಗ್ಗಿ$ನ ವಳಗ ತಿಳವಳ್ಳಿ;
ತಿಳವಳ್ಳಿ ದ್ಯಾಮವ್ವ್ನ$ಹುಬ್ಬಿನ ಗಂಧ ಶ್ರೀ ಗಂಧ.         || 2 ||
ಬನವಾಸಿ ಮಧುಕೇಶ ಇಲ್ಲಿ ಶಾಂತೇಶ(ದೇವಸ್ಥಾನ)
ಅಕ್ಕನೂರ್ ಆಲೂರು; ತಂಗಿಯೂರ್ ಬೇಲೂರು; ಚಿಕ್ಕಕ್ಕನೂರು ಬನವಾಸಿ
ಬನವಾಸಿ ಬಯಲಾಗೆ; ಒಡೆದು ಮೂಡಿದನೇ ಮಧುಕೇಶ. || 3 ||
ಮಲೆ-ಬೆಳುವಲದ ಮಧ್ಯೆ ನಮ್ಮೂರು ಗಡಿನಾಡು
ಅತ್ತ ಮಲೆ ನಾಡಲ್ಲ ; ಇತ್ತ ಬೆಳವಲ್ಲ. ಮಧ್ಯದ ನಾಡು; ಗಡಿನಾಡು.
ಗಡಿನಾಡ ಬಯಲಿನಲು, ಊರು ತಿಳವಳ್ಳಿ.                || 4 ||
B.R. Bhate, Dt:08-04-2014

No comments:

Post a Comment