Friday 18 April 2014

ಜಾನ-ಪದದ ಜ್ಞಾನ ಸೊಗಡು ! ಹುಡುಕಿದರೆ... ಸಿಗುವದೇನು?



ಜಾನ-ಪದದ ಜ್ಞಾನ ಸೊಗಡು ! ಹುಡುಕಿದರೆ... ಸಿಗುವದೇನು?
ಓದು ಬರಹ ಬರದರೇನು ? ಅವರ ಮನಸು ಭಾರವೇನು?
ಪದವಿಲ್ಲದ ಬಾಳೇನು ? ವಿದ್ಯೆ- ಬರೀ- ನೈವೆದ್ದ್ಯೇ ...!       || ೧ ||
ತಿಳಿ ಮನಸೇ- ನೀ ಕಲಿತರೇನು, ನೆಮ್ಮದಿ-ಬರಿ ಸಿಗುವದೇನು?   
ಜಾನ-ಪದದ ಜ್ಞಾನ ಸೊಗಡು, ಮನದಾಳದ- ಬರಹ ಕೇಳು! || ೨ ||
ಬೀಸುವಾಗ ತೂರುವಾಗ, ಯೋಗಿ ರಂಟೆ - ಹೊಡೆಯುವಾಗ,
ರೈತ-ಬಸವ ಮೇಟಿಯಲ್ಲಿ ,ಕೇಳು ಜಾನ-ಪದದ ಹಾಡು!  || ೩ ||
ತೊಟ್ಟಿಲ ಕೈ ತೂಗೀದರು,ಮಗು ನೆಮ್ಮದಿ-ಮಲಗುವುದೇ
ತೂಗು-ತೂಗು ಜೋಗುಳದಲಿ, ಕೇಳು ಜಾನ-ಪದದ ಹಾಡು! || ೪ ||
B.R. Bhate, Dharwad. Dt: 18-04-2014

No comments:

Post a Comment