Tuesday 6 May 2014

ಕಂದನ ಬಾಳಿನ ಕನಸು, ಸವಿ-ಸವಿ ಮಧು ಜೇನಿನ ಸೊಗಸು!



ಕಂದನ ಬಾಳಿನ ಕನಸು, ಸವಿ-ಸವಿ ಮಧು ಜೇನಿನ ಸೊಗಸು!
ಉದಯ ರಾಗದ ಈ ಹರೆಯ, ತೇಲಲಿ ಅನುರಾಗ$ದ-ಹೊಳೆಯ.
ಸಾಗುತ ಅಮರ ಮಧು ಪ್ರೇಮ, ಆಹಾ! ಈ$ ಜೀವನ ಸಂಧ್ಯಾ$$ರಾಗಾ!                         || ೧ ||
ನಗು-ನಗುತೀದಿನಾ ಸಾಗೋಣ, ಗೆಲುವಿನ-ಜ್ಯೊತೆ ಜೀವ-ಸವಿಸೋಣ.
ಜಗವಿದು ಸುಂದರ ತಾಣ, ಬದುಕು ಬಂಗಾರ$ದ ಪ್ರಾಣ, ಈ$ಜಗವೇ$ವಿಸ್ಮಯ!               || ೨ ||
ಅನುರಾಗದ ಈ ಸುಂದರ-ಪಯಣ, ನಮದಾಗಲಿ ಅಮರ ಮಧುಪ್ರೇಮ.  
ಗತವೈಭವ ನಿನ್ನೇ$ತನಕ, ಸವಿ-ಸವಿ ಸುಖದಿನ ಆ$ತನಕ, ಒಹೋ$ನಿನ್ನ$ಚೇತನ!          || ೩ ||
ನಗು-ನಗುತಾ ಜೀವ ಕಳೆಯೋಣ, ಕಷ್ಟ-ಸುಖ-ಪ್ರೀತಿ ಸಂಭ್ರಮಿಸೋಣ.  
ನಲಿಯುತ ಸುಖ-ದುಃಖದ ಮುಂದೆ, ಇಟ್ಟಡಿ-ಬಿಡಸಾಗುವ ಮುಂದೆ, ಸಮರಸವೇ$ಜೀವನ!  || ೪ ||
ಈ ಜೀವನ ಜಟಕಾ ಬಂಡಿ, ವಿಧಿ ಸಾಹೇಬನ ನಿಧಿ ಬಂಡಿ, ಏ$ಏನಿರಲೀ, ಬಾಳ$ಲಿರದಿರಲಿ,
ನೆಮ್ಮದಿ ಪಯಣ-ತೇಲುತಲಿ, ಆ$ ಬೆಳ್ಳಿಮೋಡದ ಅಲೆಯಲ್ಲಿ. ವಿಶ್ವಾ$ಸ$ಜೀವನ!              || ೫ ||
B.R. Bhate, Dharwad:06-05-2014

No comments:

Post a Comment