Wednesday 7 May 2014

ಸಾಗಲೀ ನಮ ಸಾರಂಗ , ಅದೋ ಬಾನಲ್ಲಿ ಚೆಂದ ಮಾಮ ! [ಕಂಡಂತೆ ಹುಣ್ಣಿಮೆ-ಚಂದ್ರ !]

ಸಾಗಲೀ  ನಮ ಸಾರಂಗ , ಅದೋ ಬಾನಲ್ಲಿ ಚೆಂದ ಮಾಮ ! [ಕಂಡಂತೆ ಹುಣ್ಣಿಮೆ-ಚಂದ್ರ !]

ಬೆಳಕನು ಚೆಲ್ಲುತ ಬಂದಾ, ಬಾನಲ್ಲಿ ಚೆಂದ ಮಾಮ. ಹುಸಿ-ಹುಸಿ ನಗುತಾ ಅಂದಾ, ಬಾನಲ್ಲಿ ಚೆಂದ ಮಾಮ.
ಬೇಕೋ$ಬೇಡೋ ಹೇಳೋ ,ಈ ಒಲುಮೆ-ಜುಲುಮೇ ಸಾಕೋ , ಆಹಾ ಈ ಒಲುಮೆ-ಜುಲುಮೇ ಸಾಕೋ ,
ಅಕ್ಕರೆ-ಹಣ್ಣು-ಹಾಲನು ಹಿಡಿದು, ಕಾದಿಹೇ ನಾ ನಿನಗಾಗಿ , ಆಹಾ ಈ ರಾಧಾ-ಮಾಧವಿಯಾಗಿ ,
ಒಲವೋ ನಲಿವೋ ಕೂಡಿದೆ ನಿನ್ನ, ಕಾಡಿದೇ ನಾಚಿಕೇ ಎನ್ನ, ಆಹಾ ಈ ರಾಧಾ-ಮಾಧವಿಯಾಗಿ ||೧||

ಚೆಲುವನು ಚೆಲುವಿಗೆ ಅಂದಾ, ಸಾಗಲೀ  ನಮ ಸಾರಂಗ, ಸಾಗಲೀ  ನಮ ಸಾರಂಗ,
ಹಗಲಿರಳೂ ಇರುತಿರಲು, ಇರುಳಿನಲೂ ಬೆಳಕಿರಲೂ , ಸಾಗಲೀ  ನಮ ಸಾರಂಗ     || ೨ ||

ಮೋಡದ ಮುಸುಕಲಿ ನಿಂತಾ , ಓ ನಲ್ಲನು ನಲ್ಲೇ ಗೆಂದಾ, ಬಾನಲ್ಲೆ ನಾನಿರುವಲ್ಲೇ ,
ಸಾಗಲೀ  ನಮ ಸಾರಂಗ, ಸಾಗಲೀ  ನಮ ಸಾರಂಗ, || ೩ ||

ಮದನನು ವದನೆಗೆಂದಾ, ನಾ ಕುಡಿದೇ ಬಿಡುವೆ ನಂದಾ, ಮಧುವೆಂದಾ ಈ ಮಕರಂದಾ,
ಸಾಗಲೀ  ನಮ ಸಾರಂಗ, || ೪ ||

ಆಸೆಯು ತೀರದ ಬಯಕೆ, ಈ ಬೊಗಸೆ ಕಣ್ಣುಗಳೆಂದಾ, ಬರಿ ಭ್ರಮೆಯದು ಮನಕಾನಂದಾ,
ಸಾಗಲೀ  ನಮ ಸಾರಂಗ, || ೫ ||

ಕೊಳಲ-ನ್ನೂದುತ ಬಂದಾ, ಜ್ಯೊತೆ ಕಾಲ್ಗೆಜ್ಜೆ-ಗಳಾ-ನಂದ, ನಡಗುತ ನಿಂತ ಹಿಡಿದು ನನ್ನ,
ಬಳಿಯಲಿ-ಪಿಸುಮಾತೆಂದಾ , ಬಾನಲ್ಲೇ ಮೊಗದಲ್ಲೇ , ಸಾಗಲೀ  ನಮ ಸಾರಂಗ, || ೬ ||

ಅಡಗುತ-ಸಾಗುತ ತೇಲುತ ಮೆಲ್ಲಗೆ, ನಾ ಎಲ್ಲಾ ಬಲ್ಲೇ ನಂದಾ. ಕಹಿ-ಸವಿ-ಮೆಲ್ಲುತ,
ಮರೆಯುತ–ಜಗವ, ಸಾಗಲೀ  ನಮ ಸಾರಂಗ ಸಾಗಲೀ  ನಮ ಸಾರಂಗ, || ೭ ||

B.R. Bhate, Dt: 08-05-2014

No comments:

Post a Comment