Thursday 26 June 2014

(ಆಗಸದಿ-ತೇಲುತಿಹ ಮೋಡ-ಮುಂಗಾರು!)

ಗುನು-ಗುಣಿಸಲು-ಮನವು, ಚೆಲುವ-ಕಂದನ-ಹಾಡು! (ಆಗಸದಿ-ತೇಲುತಿಹ ಮೋಡ-ಮುಂಗಾರು!)   

ಬೇಸಿಗೆಯ-ಸುಡು-ಬಿಸಿಲು ಬೆವರಿಳಿಸು-ತಿರಲು, ಬಡಗು-ತಿಲ್ಲಾಣಗಳು, ತೆಂಕಟ್ಟು-ಸೀಮೆಯೊಳು.
ಬೀಸು ಸುಳಿಗಾಳಿ$ತಾ ಮಲೆ-ಬೆಟ್ಟಗಳ-ಮೇಲೆ, ಕಾರ್ಮೋಡಗಳ-ಸುಳಿವು ಮೆಲ-ಮೆಲ್ಲ-ತಾತರಲು.
ಕಡಲ-ತೆರೆ-ಅಬ್ಬರದ, ತೆರೆ-ಏಳು-ಬೀಳುಗಳು, ಚೆಲ್ಲಾಟ-ನಿಟ್ಟುಸಿರು, ದಡಕೆ-ಕೊಟ್ಟಾವು.        || ೧ ||

ತೆಂಕಣದ-ಸುಳಿಗಾಳಿ, ಕೊಂಕಣದೇ-ಬೀಸುತಿರೆ, ಆಗಸದಿ-ತೇಲುತಿದೆ, ಮೋಡಗಳ-ಬೆರಗು.
ಗುಡು-ಗುಡುಗಿ-ಸುತ-ಮೋಡ, ಛಟ್-ಸಿಡಿಲು-ತಾಸಿಡಿದು, ಬೆಟ್ಟ-ನೆಲ-ನಡುಗಿಸಲು,
ಕೋಲ್-ಮಿಂಚುತಾ$ಮಿಂಚು, ಮೋಡಗಳ-ತಾ$ತಣಿಸೆ, ಜಗಕೆಲ್ಲ-ಹರುಷ, ಮುಂಗಾರು-ತಂತು.|| ೨ ||

B.R. Bhate, Dharwad. Dt:27-06-2014

Friday 20 June 2014

ಈಗ-ರೂ$ಪಾಯ್$ಗೆ ನವಾ-ಪೈಸಾ-ನೂರು!

ದುಡಿಮೆ ದುಡ್ಡಿನ-ಆಣೆ, ಠ೦ಠಣ-ಗೋಪಾಲ. ಗೋವಿಂದ-ಕೇಳೋ, ಗೋಪಾಲ-ಹೇಳೋ[ಅಂದು-ಇಂದು]   
ಚವಲಿ-ಪಾವಲಿ, ಕಾವ$ಲಿ$ನಚೀಲ ನಾಕಾಣೆ, ನದ-ಚಕ್ರ,ಎಂಟಾಣೆ$ಅಂದು-ರೂಪಾಯಿ,
ಪೈಸೆ-ತೂ$ತಿನ-ಬಿಲ್ಲಿ, ದುಗ್ಗಾಣಿ-ಅರ್ಧಾಣೆ, ದಮ್ಮಡಿ-ಅಳಿ$ಲೆಖ್ಖ, ಎಲ್ಲವೂ$ಬಾಯಿಯಲಿ.
ಬಿಲ್ಲಿ$$-ತಕ್ಕ್-ಥೈಎನಲು, ಚಿಲ್ಲರೆಗೆ$ಅಂದಾಗ ಬಿಲ್ಲಿಗಗೇ-ಮೂರು-ಪೈ, ಕಾಸಿಗೇ-ಗುರು-ಸಿದ್ಧ. || ೧ ||
ದೊಡ್ಡವರು ಮಾತಂದ್ರ, ಬಿಲ್ವಾರ,ವಡ್ಯಾಣ, ಕಮ್ಮಿ-ಇಲ್ಲ ಟಿಕ್ಕಿ-ಇಕ್ಕೇರಿ-ವಜ್ರ.
ಸುಂಕೇರಿ-ಲಾಂದ್ರ, ಝಣ-ಝಣ ಅಂದ್ರ, ರೂಪಾಯಿ-ಎಣಿಸಲು, ಬೆಳ್ಳಿ-ಭಂಗಾರ.
ಈಗ-ರೂ$ಪಾಯ್$ಗೆ ನವಾ-ಪೈಸಾ-ನೂರು, ಸೇರಿಗೆ-ಸವ್ವಾ$ಸೇರು ಎಲ್ಲಾ ಠಣ-ಠಣ-ಕಾಣು! ||೨||
B.R. Bhate, Dharwad. Dt:20-06-2014

Wednesday 4 June 2014

ಅರಸು-ಮಕ್ಕಳಿಗೂ ಸಿಕ್ಕದ-ಸೊಗಸು, ವರಕವಿ-ಕಾಣುವ ಸೃಷ್ಟಿಯ-ಸೊಬಗು

ದಿನ-ತರಂಗ-ಮುಗಿಯಲು, ತುಂಬಿ-ತಿಳಿವ-ಸಂಜೆಯು, ಬಾನು-ಎಲ್ಲ-ಎಲ್ಲೆಯೂ.........,

ಸಂದ್ಯಾ ರಾಗ ಹಾಡಲು-ಚೆಂದಮಾಮ-ಕೇಳಲು   
ಮಲೆಗಿರಿ-ಬೆಟ್ಟದ ದಿನದೊಳು-ಸಂಜೆ, ಹೊಂಬೆಳ-ಕಿರುಳಲು  ತಿಂಗಳ-ಬೆಳಕು!       
ಇಳಿಯುತ ಸಂಜೆ ಕವಿಯಲು ಕತ್ತಲು, ಕವಿಭಾ$ವಕು-ದಿಗಿಲು-ಬರಲು, ಹಿಟ್ಟು ಚೆಲ್ಲುತ ಬೆಳಕು.
ನೋಡವ$ನ$,ಬಂದ$ಅಂದ , ನಮ್ಮ ಮಾಮ-ಚೆಂದ, ಗೀ$$ಚುತ ಎರಡು-ಸಾಲು- ಅಂದ. || ೧ || 

ಗಗನ-ತಾರೆ-ಅರಸಲು ನಾದ-ಝರಿಯ ಜುಳು-ಜುಳು 
ಮಿನುಗು$ತಾರೆಗಳ-ಝಲಕು-ಮೋಡ$ದಲೆ, ನಗುತ-ಸಾಗಿಹ-ವನ$ಮಾಳಿ-ಅದರಲೆ.
ಅಂಬರ-ಚುಂಬಿತ ನೀಲನ-ಗಗನ, ಹಸಿರಿನ-ಸಿರಿ, ಸೊಬಗಿನ-ಸಹ್ಯಾದ್ರಿ,
ಪಸರಿಸಿ-ಚೆಲ್ಲಿದ ತಿಂಗಳ-ಬೆಳಕಲಿ, ಜುಳು-ಜುಳು ಹರಿವ ನಾದ$ಝರಿ. || ೨ ||

ಕಪ್ಪು-ಬಿಳಿಪು-ಕರಗಲು ಬೆಳ್ಳಿ-ಮೋಡ-ಅರಳಲು
ಕಪ್ಪದು-ಅಡರಲು ತೆಪ್ಪಗೆ-ದುಂಬಿ, ಮತ್ತಲಿ-ಆಲಿಸೆ ಚಿಟ್ಟೆ-ಚೀರಿ-ಪಿರಿ. 
ಕಪ್ಪು-ಬಿಳಿಪು ಮಧುಬನ-ಸೆಳೆತ, ಕಾಣದ$ಕನಸಲು ಮೌನದ$ಥಳಕು,
ಅರಸು-ಮಕ್ಕಳಿಗೂ ಸಿಕ್ಕದ-ಸೊಗಸು, ವರಕವಿ-ಕಾಣುವ ಸೃಷ್ಟಿಯ-ಸೊಬಗು || ೩ ||

(ಧಾಟಿ-ಪಾಟಿಯು-ಬೇಡ, ಶಬ್ದ-ಕುಣಿವ-ಚೆಂದ, ಕಂದನ-ಹಾಡು, ನೀ-ಮನದಣಿ-ಕೇಳು)

B.R. Bhate, Dt:25-05-2014

Sunday 1 June 2014

ತಮ್ಮಗಳ ಹರಕೆ ಮತ್ತು ತಮ್ಮ ಗಳ ಅಭಿಮಾನಕ್ಕೆ ನಾನು ಸದಾ ಚಿರಋಣಿ.



ಆತ್ಮಿಯರೇ,
ನಮಸ್ಕಾರಗಳು.
ಇಂದು ನಸುಬೆಳುಗಿನಿಂದ ಹುಟ್ಟು ಹಬ್ಬದ ಶುಭಾಶಯಗಳ ಹರಕೆ ತಮ್ಮೆಲ್ಲರಿಂದ ಬರುತ್ತಲೇ ಇವೆ. ತಮ್ಮ ಗಳ ಅಭಿಮಾನಕ್ಕೆ ನಾನು ಸದಾ ಚಿರಋಣಿ. ನಮ್ಮ ಪ್ರೀತಿ ವಿಶ್ವಾಸಗಳು ಹೀಗೆ ಇರಲಿ, ಮತ್ತು ತಮ್ಮಗಳ ಹರಕೆ ಈ ಬೇಸಿಗೆಯ ಈ ಕೊನೆ ದಿನಗಳಲ್ಲಿ ಬೆವರ ಹನಿ ಸರಿಸಿ, ತಂಪಾಗಿಸುವಂತೆ ಪ್ರತೀಕ್ಷೆ ಮಳೆಗಾಲವು ಬರಲಿ, ನಮಗೆಲ್ಲ ಉತ್ತಮ ಮಳೆ ಬೆಳೆ ಕೊಟ್ಟು ಎಲ್ಲರಲ್ಲೂ ಸಂತಸ ತರಲಿ ಎಂಬ ಹಾರೈಕೆ ಯೊಡನೆ ತಮ್ಮ ಈ ವಿಶ್ವಾಸಿ ಬಂಧು
B.R. Bhate, Dharwad Dt: 01-06-2014