Thursday 26 June 2014

(ಆಗಸದಿ-ತೇಲುತಿಹ ಮೋಡ-ಮುಂಗಾರು!)

ಗುನು-ಗುಣಿಸಲು-ಮನವು, ಚೆಲುವ-ಕಂದನ-ಹಾಡು! (ಆಗಸದಿ-ತೇಲುತಿಹ ಮೋಡ-ಮುಂಗಾರು!)   

ಬೇಸಿಗೆಯ-ಸುಡು-ಬಿಸಿಲು ಬೆವರಿಳಿಸು-ತಿರಲು, ಬಡಗು-ತಿಲ್ಲಾಣಗಳು, ತೆಂಕಟ್ಟು-ಸೀಮೆಯೊಳು.
ಬೀಸು ಸುಳಿಗಾಳಿ$ತಾ ಮಲೆ-ಬೆಟ್ಟಗಳ-ಮೇಲೆ, ಕಾರ್ಮೋಡಗಳ-ಸುಳಿವು ಮೆಲ-ಮೆಲ್ಲ-ತಾತರಲು.
ಕಡಲ-ತೆರೆ-ಅಬ್ಬರದ, ತೆರೆ-ಏಳು-ಬೀಳುಗಳು, ಚೆಲ್ಲಾಟ-ನಿಟ್ಟುಸಿರು, ದಡಕೆ-ಕೊಟ್ಟಾವು.        || ೧ ||

ತೆಂಕಣದ-ಸುಳಿಗಾಳಿ, ಕೊಂಕಣದೇ-ಬೀಸುತಿರೆ, ಆಗಸದಿ-ತೇಲುತಿದೆ, ಮೋಡಗಳ-ಬೆರಗು.
ಗುಡು-ಗುಡುಗಿ-ಸುತ-ಮೋಡ, ಛಟ್-ಸಿಡಿಲು-ತಾಸಿಡಿದು, ಬೆಟ್ಟ-ನೆಲ-ನಡುಗಿಸಲು,
ಕೋಲ್-ಮಿಂಚುತಾ$ಮಿಂಚು, ಮೋಡಗಳ-ತಾ$ತಣಿಸೆ, ಜಗಕೆಲ್ಲ-ಹರುಷ, ಮುಂಗಾರು-ತಂತು.|| ೨ ||

B.R. Bhate, Dharwad. Dt:27-06-2014

No comments:

Post a Comment