Friday 25 July 2014

ಕರುನಾಡು ನಮ್ಮ-ನಾಡು, ಎಲ್ಲ-ಬದುಕಿನ-ಬೀಡು, ಎಲ್ಲಕ್ಕೂ-ಬಲುಸವಿ ನಮ್ಮ-ಕನ್ನಡ ಹಾಡು

ಕರುನಾಡು ನಮ್ಮ-ನಾಡು, ಎಲ್ಲ-ಬದುಕಿನ-ಬೀಡು, ಎಲ್ಲಕ್ಕೂ-ಬಲುಸವಿ ನಮ್ಮ-ಕನ್ನಡ ಹಾಡು
ನಿನ್ನೆ ಗಳ ನೆನಪಿನಲಿ ನನ್ನ-ಮನವದು-ತಿರುಗೆ, ಅಂತರಾಳದ ತಿರುಳು-ತಾ-ತೂಕ-ಹಾಕೆ
ಅಂಗಾಯಿ-ಮಂಗಾಯಿ ತಾಯಿ-ತೊಟ್ಟಿಲೊಳು, ಜೋಗುಳದ-ಹಾಡುಗಳ, ಕಿವಿನಿಮಿರೆ-ಕೇಳು
ತೊಟ್ಟಿಲಗಳಿಂದಿಲ್ಲ ತಟ್ಟಿದರೆ ಸಾಕಲ್ಲ, ತಟ್ಟು-ತಟ್ಟುತ ಜೋಗುಳಗಳು ಬರ-ಬೇಕಲ್ಲ ।। ೧ ।।
ಅಂತರ ತಾಣದೊಳು, DVD ಹಚ್ಚಿದರೂ ಸಿಕ್ಕರೂ-ಸಿಗಬಹುದೇ? ಹುಡುಕಿದರೆ ನೋಡು!
ಬರೆದಿದ್ದರೇ-ಅಂದು ಬಾಯಿಗೂಡಿದ-ಹಾಡು, ನೀ-ಹಾಡದಿರೆ ಮುಂದು ತಂತಾನೇ-ಬಂದೀತೆ?
ದುಡ್ಡು-ಗುಡ್ಡು ಇರಬಹುದು, ಬಡ್ಡಿ-ಹಾಕಿದರೇನು ಚಡ್ಡಿಗೂ-ಸಾಲದದು ಮುಂದೆ-ನೋಡು ।।೨ ।।
ಹೆಚ್ಚು-ಹೇಳಲು ಏನು? ಜಾಣ-ಮಕ್ಕಳು-ಕೇಳು. ಕಲಿಸಿದುದ-ಕಲಿಯುವವು, ಮಧುರ-ಹಾಲ್ಜೇನು.
ಮಕ್ಕಳಿಗೆ ವಿದ್ಯೆ ಬಾಲ್ಯ ದೊಳು ಬೇಕು ಚೆಲುವು ಕಂದನ ಹಾಡು ಡಿಂಡಿಮ ಧ್ವನಿಯ ಕೇಳು
ಹುಡುಕಿ-ಮಿಡುಕಿದರೂ ತೊಡುಕಿನೊಳು ಮಿಂಚೀತೆ ಎದ್ದು ನನಸಾಗು   ।। ೩ ।।            
B.R. Bhate, at Slaugh(uk). Dt:25-07-2014

No comments:

Post a Comment