Monday 28 July 2014

Rain Rain Pour again We want you to Again,Again!

ಮಳೆ ಅಣ್ಣಾ ಬಾರಣ್ಣ, ಬಾರಣ್ಣ ಓ$ ಮಳೆ ಅಣ್ಣಾ
ಹನಿ-ಹನಿ ಕೂಡಿ, ಹಳ್ಳ ಹರಿಸಿ, ಕೆರೆ-ಕಟ್ಟೆ-ತುಂಬಿಸಣ್ಣಾ   ।। ಪಲ್ಲ ।।
ಹಳ್ಳ-ಹೊಳೆ-ತುಂಬಲು, ಹೊಲ ತುಂಬಾ-ಬೆಳೆ-ಅಣ್ಣಾ
ಮಳೆ ಬನ್ಧಂಘ ಛತ್ರಿ ಹಿಡಿದು, ಆಡುವ ಆಟ ಮೋಜಣ್ಣ
ಹೆಸರಿಗೆ ಛತ್ರಿ ಮಳೆಯಲಿ ನೆನೆಯಲು, ಮಕ್ಕಳ ಆಟ ಮಜಾ ಅಣ್ಣಾ ।।೧ ।।
ಬಣ್ಣಾ ಕೊಡುವೆನು ಬಾರೆಲೇ ಮಳೆಯೇ,
ಸುಣ್ಣಾ ಕೊಡುವೆನು ಸುರಿಯಲೇ ಮಳೆ ಯೇ,
ಜೋಡಿಸಿ ಅಜ್ಜನ ಹಾಡನ್ನ ಹೊಡಿ ಝಾಪಾಟಿ ನೀ ಕಟ್ಟೀ ಪ್ಯಾಟಿ ।। ೨ ।।
ಹುಚ್ಚು ಮಳೆ ಅನ್ನುವರಣ್ಣ ನಿನಗದ ಚಿಂತೆ ಬೇಡಣ್ಣ
ಕಾಡಿದ್ದರೆ ಮಳೆ,ಮಳೆ ಇದ್ದರೆ ಬೆಳೆ ಕೊಡುವೆ ಚಿನ್ನ ಕಾಣಣ್ಣ         
ಚಲಿಸುವ ಮೋಡದ ಗುಡು-ಗುಡು-ಗಗನ ಸಿಡಿಲು-ಮಿಂಚು-ಮಕ್ಕಳುಅಣ್ಣ ।। ೩ ।। 
B.R. Bhate at Slough(uk) Dt:30-07-2014

No comments:

Post a Comment