Saturday 15 November 2014

ಸಂಪತ್-ಶುಕ್ರವಾರ !


ಸಂಪತ್-ಶುಕ್ರವಾರ !
ಶ್ರಾವಣ ಮಾಸ ಶುಕ್ಲ-ಪಕ್ಷ ತುಂಬಿದ ಮನೆ-ಮನೆಯಲ್ಲಿ ಹಳ್ಳಿ ತುಂಬಾ ಹಬ್ಬದ ವಾತಾವರಣ. ಅಂದು ಸಂಪತ್-ಶುಕ್ರವಾರ. ಊರಲ್ಲಿನ ಪಾರಂಪರೀಕ ನಮ್ಮ ಮನೆಯಲ್ಲಿ ತಲ -ತಲಾಂತರಿಯಿಂದ ಸಂಪ್ರದಾಯ ಹಬ್ಬ-ಹರಿದಿನ ನಡೆಸಿಕೊಂಡು ಬಂದ ಮನೆತನ. ಹಬ್ಬದೂಟ ಮುಗಿಸಿ ತಾಂಬೂಲ ಹಾಕುತ್ತಾ ಅಜ್ಜಿ-ಯನ್ನು ಕಂಡು ಉಭಯ-ಕುಶಲ ಮಾತಾಡಿಸಿ "ರಂಗಕ್ಕಾ ಹಬ್ಬಾ ಭರ್ಜರೀ ಆತ್ರೀ ಹೋಗಿ ಬರ್ತೇವೆ" ಎನ್ನುವಂತೆಯೇ; ಅಜ್ಜಿ "ಶಾಂತಕ್ಕಾ, ಗೌರಕ್ಕಾ ಸಂಜೆ ಸಾರಂಗಿ ಕಾರ್ಯಕ್ರಮಕ್ಕ್ ತಪ್ಪದ ಬರ್ರಿ" ಎಂದು ಬಾಯ್ತುಂಬ ಹರಿಸಿ ಕಳಿಸಿದರು. ಅದೇನು ನೆನಪಾತೋ ಏನೋ ಮನ್ಸ್ನ್ಯಾಗ "ನೋಡ್ರೀ ಎಲ್ಲಾ ವಿಧಿ ಮಕ್ಕಳು ಚಾಚೂ ತಪ್ಪದ..., "ಬಿಕ್ಕಿದರು. ಆಗ ಮರಿ ಮಕ್ಕಳು ಅವ್ವಾ "ಅಜ್ಜೀ ಕಣ್ಣೀರ್ ಹಾಕಾಕ ಹತ್ಯಾಳ" ಅಕ್ಕಾ ಬಂದು ನೇವರಿಸಿದಾಗ ", "ಎನಿಲ್ಲೇಳು ಏನೋ ಧೂಳ ಕಣ್ಣಾಗ ಹಾರಿ ಬಿತ್ತ್" ಅಂತಾ ಸಮಜಾಯಿಶಿ ಕೊಟ್ಟು ಮಾತು ಮುಗಿಸಿದಳು.
ಶಾಲೆ ಮಕ್ಕಳಿಗೆ ಅಂದು ಹಬ್ಬದ ಸೂಟೀ ಬೇರೆ. ಹಿರಿಯರು ಅವರ ಕಾರ್ಯಕ್ರಮದಲ್ಲಿದ್ದರೆ ಮಕ್ಕಳು ಮಸ್ತಾಗಿ ಅವರವರ ಆಟ-ಪಾಠದಲ್ಲಿ ಮುಳಗಿದ್ದರು. ತಮ್ಮ ಕೀಟಲಿ ಕಿಟ್ಟ ಆಕ್ಕನ ಗೋಳು ಹೊಯ್ಯುತ್ತಾ "ಮಡಕೇರಿ ಪ್ಯಾಟ್ಯಾಗ ಈರ್-ಭದ್ರ ಜ್ಯಾತ್ರ್ಯಾ$" ಅಕ್ಕಾ ಯೇನ್ಕಡ್ಮಿಲ್ಲ್ದ "ಗಡ್ಡ-ಮೀಸಿ ಹಚ್ಚಿ-ಕೊಂಡು" ಎನ್ನುತ್ತಲೇ ಮಕ್ಕಳ ಆಟಕ್ಕ ಚಿಗುರಿದ ಕಳೆ-ಬಂದಿತ್ತು.
ಸಾಯಂಕಾಲ ದನ-ಕರ ಕೊಟ್ಟಿಗೆ ಸೇರಿದ್ವು. ಮಕ್ಕಳು ಕೈ-ಕಾಲು ಮುಖ ತೊಳಕೊಂಡು "ಸ್ವಾಮಿ ದೇವನೇ" ಅಂದದ್ದ 'ವಿಠಲ ನ ಭಜನೆ ಮನದೊಳ$$' ಮುಗಿಸಿದರು. ಅಂದು ವಾರದ ಶುಕ್ರವಾರ ಅಕ್ಕ ಮಂಗಳಾರತಿಯಲ್ಲಿ, "ಸುಮಂಗಲಾ ನಮನ ತುಲಾ..." ಹೇಳೋದ್ರಾಗ ಕಿಲಾಡಿ ಕಿಟ್ಟ ಪುಥಾಣೀ ಸಕ್ರೀ ತಪ್ಪ$ದ ತಾ ಅನ್ನ-ಬೇಕೇ ?!. ಪುಣ್ಯಾಕ್ಕ ಅಜ್ಜಿಗೆ ಕೇಳಿಸ್ಲಿಲ್ಲ; ಆದ್ರೂ ಅಜ್ಜಿ ಏ ಕಿಟ್ಯಾ ಎಲ್ಲರಿಗೂ ಅಕ್ಕಾ ನ ಜ್ಯೊತೆ ಸುದಾಮ(ಅವಲಕ್ಕಿ) ಪ್ರಸಾದ ಕೊಟ್ಟು ನಮಸ್ಕಾರ ಮಾಡು ಎಂದು ಹೇಳಿದಾಗ ಕಿಟ್ಟಿಗೆ ಸ್ವಾಮಿ ಕಾರ್ಯ ಸ್ವಕಾರ್ಯ ಆಧಂಗಾತು.
ಅವ್ವಾ ನಾನಣ್ಣ- ವಿಮಲಾಅಜ್ಜಿ ಬಂದಾರ ಅಂದಾಗ ಅವ್ವ ಅವರನ್ನು ಒಳಗೆ ಬರಲು ಹೇಳುತ್ತಿದ್ದಂತೆ ಕಿಟ್ಟ ದತ್ತಣ್ಣ ಬಂದಾರ ಅಂದಾಗ ಅಪ್ಪ ಬಾರೋ ಗುಳಗಿ ಒಳ್ಯಾ ವ್ಯಾಳ್ಯಾಕ್ ಬಂಧಂಘಾತು,ಇವತ್ತಿನ್ ಕಾರ್ಯಕ್ರಮದಾಗ ನಿಂದ 'ಘಟ-ವಾದ್ಯ*' ನಡೆಸ ಬೆಕ್-ಮತ್ತ್ -ನೋಡಪಾ! (*ಕೊಡದ ಮೇಲೆ ಬಾರಿಸುವ ಕಲೆ) ಅಕಾ ಶೇಷಣ್ಣ ಮುರಲೀ (ಕೊಳಲು) ಬ್ಯಾತನಾಳ ಹೆಗ್ಗಾ-ಭಟ್ಟ ತಬಲಾ ಹಂಗ ಮೀಸೀ ಹನಮ್ಯಾ ಹಾರ್ಮೊನಿಮ್ ತರತಾರ!
ತಬಲಾಜೀ ತಬಲಾಠಿಕ ಮಾಡ ತಿದ್ಧ್ಂಘ ಥೇಕಾ ತಾ$ತಾ ತಿಕ್ಕಿ$ಟ್$ತಾ ಅನಿತಿದ್ಧ್ಂಘ ಕೊಂಕಣಿಗರ ಬಾಬುರಾಯ$ಗ ಜೋಶ ಬಂದು ಏನೋ ಅಂದ ಬಿಟ್ಟ ಮಜಾ ಕೇಳ್ರೀ "ಹಾಂವ್ ತುಕ್ಕಾ ನಾಕ್ ಝಾಲ್ಯಾರ್ ತೀ ತುಕ್ ನಾಕ್ ಝಾಲ್ಯಾರ್ ತಿಕ್ಕಾ-ಮಕ್ಕಾ ದೀ "! ವೊವ್ಹ್ ಹೆಗ್ಗಾ-ಭಟ್ಟರ ತಬಲಾಕ್ ಕಳೆ ಬಂತು!
ಮೀಸೀ ಹನಮ್ಯಾನ ಹಾರ್ಮೊನಿಮ್ 'ನಿಮ್ಮಪ್ಪಾ- ಧಪ್ಪಾ ನಿಮ್ಮಮ್ಮ-ಸಣ್ಣಾ ನೀ-ಧನೀ$, ಸನಿ$, ಧಪಾ ಗಾಮ$ಪಾ$$ ಗಾಮಾ--ಗರೆ$ಸಾ$$' ವಾವ್ ಧನೀ ಸಾದ್ ಮಾಡೇ-ಬಿಟ್ಟ!
ಭರತ-ನಾಟ್ಯದ ಶಾರದಕ್ಕ ಸಾರಂಗಿ ಅಕ್ಕಾಗ ಗೆಜ್ಜಿ ಕಟ್ಟಿಸಿ ತ ಣ್-ಧೀರೆ ತೋಂ ತಂಣಾ ತ ಣ್-ಧೀರೆ ತೋಂ ನಿತ್ತಾಂಗ್-ಧಿಕ್-ಧಿಕ್ ಥೈ ಅಂತಾ ತಾಲಿಂ ನಡೆಸಿದಾಗ ಕಿಟ್ಯಾ ಸಂಣ್ ಕ ಒಂದು-ಬಿಲ್ಲಿ ತಕ್ಕ್-ಥೈ ಬಿಲ್ಲಿಗೇ ಮೂರು ಪೈ ಅಂದ ನಕ್ಕ್ ಸಾರಂಗಕ್ಕನ ತಾಲಿಂ ಮಸ್ತ್ ಆತು!
ಸಾರಂಗಿ ಕಾರ್ಯಕ್ರಮದಲ್ಲಿ 'ಕೃಷ್ಣಾ ನೀ ಬೇಗನೇ ಬಾರೋ ಮುಖವನೇ ತೋರೋ', 'ಆಡ ಪೋಗೊಣು ಬಾರೋ ರಂಗಾ ಕೂಡಿ ಯಮುನೆ ತೀರದಲ್ಲಿ''ಮಧುವನದಲಿ ಕುಣಿದಳೋ ಆ ರಾಧೇ.. ಮೋಹನನಾ ಮುರಲಿಯಾ ಸ್ವರ ಕೇಳೆ','ಕಾಲಿಗೆ ಗೆಜ್ಜೆಯ-ಕಟ್ಟಿ ಮೀರಾ ಕುಣಿದಳೋ', 'ಕಾಹೇ ಘಟಾಮೇ ಬಿಜಲೀ ಚಮಕೀ' ವಾಹ್ ವ್ಹಾ-ವಾಹ್ ವ್ಹಾ ಕರತಾಡನ ಗಳ ಸದ್ದಲ್ಲಿ ಕಣ್ಬಿಟ್ಟಾಗ ಮೂಡಲ ಮನೆ ಸೂರ್ಯ ಕೆಂಪಾಗೆದ್ದಿದ್ದ ಹಕ್ಕಿ-ಕಲರವ್ದಾಗ್ ಅವ್ವಾಅಂತಿದ್ಲು"ಯಾಕೋ ಪುಟ್ಯಾ ಇನ್ನೂ ಮಲಗ್ಯಾನ" ಎದ್ದು ನೋಡಿದ್ರ ಎಲ್ಲಿ ಅವ್ವಾ ಅಪ್ಪಾ ಅಕ್ಕಾ ಭಾವಾ ಅಣ್ಣಾ ಎಲ್ಲಾ ಮೋಡೀ ಮಾಡೀ ಹೋದ ತಲೆ ಮಾರು ಗಳು ಕಂಡ ಮನೆತನದ ಮನೆ ಬಿಕ್ಕೋ ಎನ್ನುತ್ತಾ ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಣು ಕಂಡ ಕಥೆ ನಾಲ್ಕು ಸಾಲು ಗೀಚಿದೆ ಇನ್ನೇನು ಮಾಡಲು ಸಾಧ್ಯ ಇಷ್ಟ ವಾದರೆ ಓದಿ ಮರೆತು ಬಿಡಿ.
B.R. Bhate, at Slough-U.K. Dt: 14-11-2014

No comments:

Post a Comment