Tuesday 11 November 2014

ಶುಭೋದಯದ ಇಂದು ಬೆಳಗು ಹಾಡುತಿದೆ "ಈ(e-ಕನ್ನಡ)"!!!


ಶುಭೋದಯದ ಇಂದು ಬೆಳಗು ಹಾಡುತಿದೆ "(e-ಕನ್ನಡ)"!!!

"ಏಳೋ ಗೋವಿಂದಾ, ಏಳೋ ಗೋಪಾಲಾ!" ಅಂತ ಅಪ್ಪನ ಕಂಠ ಬಿರೀ-ತಿತ್ತಂದ್ರ, ಖಂಡಿತ-ಬೆಳಕಾಗಿರ್ತದ.. ಅಂತ ಅನ್ನೋದರ ವಳಗ 'ಎದ್ದು ನೋಡಿದ್ರ', ಮನ್ಯಾಗ-ಇನ್ನೂ-ಕತ್ತಲಿ ಬೆಳಕ-ಹೆಂಗ-ಕಾಣಬೇಕು, ಮತ್ತ ಮುಸುಕು-ಹಾಕೊದ್ರಾಗ; ದೆವ್ವನ-ಕೇರಿ-ಮುಲ್ಲಾನ ಮೈಕಿನ-ಧ್ವನಿ, "ಅಲ್ಲಾ ಹೋ ಅಕ್ಬರ್" ಅನ್ನುವದಕ್ಕೂ, ಛಪ್ಪರ-ಬಂದ್ ಬಾವಾ-ಸಾಬನ ಕೋಳಿ-ಹುಂಜ ಗಳು, 'ಕೊಕ್ಕ್-ಕೋ$ಕೋ'... ಆಕಾಶವಾಣಿ-ಆಗೋದ್ರಾಗ, ತುರಬೀಗುಡ್ಡ-ಮೂಡೀ-ಸ್ವಾಮಿಗಳ ಮಠದ 'ಝಾಗಟೇ-ಸದ್ದು', ಕ್ವಾಟಿ 'ದತ್ತಾತ್ರೇಯ-ಗುಡಿ' ದಿಂದ 'ಶಂಖನಾದ' ಕೇಳಿಸ್ತು ಅಂದ್ರ; ಕಕ್ಕಡಾರತೀಗೇ ಮಬ್ಬು-ಕತ್ತಲು ಸರಿದಿರೋದು ಗ್ಯಾರಂಟೀ. ಅನ್ನೋದ್ರಾಗ ನಿಲ್ಲದ-ಮುಲ್ಲಾನ-ಧನ್ಯಾಗ ಓಣ್ಯಾಗಿನ-ನಾಯಿ ಓ-ಎಂದು-ಊಳಿಡುವದು ಸಾಮಾನ್ಯ. ಗೌಳಿ-ಬಸ್ಯಾನ ಆಕಳು ಗಳು'ಅಂಬಾ' ಎನ್ನುವದಕ್ಕೂ; ಹಿತ್ತಳದಾಗಿನ ಬೆಣ್ಣಿ-ಸಂಗಪ್ಪನ ಎಮ್ಮೆ,'ಆಂಯ್' ... ನಿಲ್ಸೋದ್ರಾಗ; ಕುರುಬರ-ಬೀರಪ್ಪನ ದೊಡ್ದೀಂದ ಕುರಿಗಳ 'ಬ್ಯಾ$ಬ್ಯಾ'...
ಇವೆಲ್ಲಾ-ನಮ್ಮೂರಾಗಿನ 'ಆರ್ಕೇಸ್ಟ್ರಾ' ಆರಂಭ-ಆಗೋದ್ರಾಗ; ಅಗಸರ ಅಂದಾನೆಪ್ಪನ-ಕತ್ತೆಗೇ 'ಮಾಮೂಲಿ-ಶಿವಪ್ಪ' ಎದ್ದಾನೋ? ಇಲ್ಲಾ--ನೋಡಾಕ 'ಹಜರತ್' ಇಮಾಮ ನನ್ನೇ ಪ್ರಶ್ನಿಸುವಂತೆ "ಹಜರತ್ ಹಾಯ್$ ಕೀ-ನೈಕೀ?"... ಅನ್ನೋದ್ರಾಗ ಶಿವಪ್ಪನ- 'ಡೊಣ್ಣೆ-ಏಟು', ಸಿಕ್ಕತೋ-ಏನೋ! ಪಾಪ. ' ಹೀ$$ ಹೀ' ಎನ್ನುವ ಕುಡ್-ಖಾದೀರ ನ ಕುದರಿ ಸದ್ದು ಇಷ್ಟೆಲ್ಲಾ 'ಹಾಜ್ರೀ' ಕೊಟ್ಟಾಗ ನಸುಕೇನು, ಬೆಳ್ಳನ ಬೆಳಗೇ!
ಎದ್ದು ಹಾಸಿಗೆ-ಹಚ್ಚಡ ಮಡಚಿ; ಬಚ್ಚಲಿಗೆ ಹೋಗಿ ಹಲ್ಲುಜ್ಜಿ ಮುಖತೊಳಕೊಂಡು; ಫ್ರೆಶ್-ಆಗೀ, ದೇವರಿಗೆ ಕೈಮುಗಿತಿದ್ಧಂಗ: 'ಸಣ್ಣಕ್ಕ' "ಎಷ್ಟೊತ್ತಪಾ! ಏಳ್ಲಿಕ್ಕೆ!! ಮಾವಷಿ ಕರೆದದ್ದು ಕೇಳಿಸ್-ಲಿಲ್ಲೇನು?" ಬಾ-ಎಂದು ಮಣೆ ಹಾಕೀ; ಎದುರಿಗೆ ಬಿಸಿ-ಬಿಸಿ ಕಾಫೀ-ಕಪ್ಪು ಇಟ್ಟಳು. "ಇಲ್ಲ್ ಸಣ್ಣಕ್ಕಾ, ರಾತ್ರೀ ಕೆಲ್ಸ್ ಮುಗ್ಸಿ ಬರೋದಕ್ಕ ತಡಾ-ಆಗೀ ಮಲಗಿದ್ದೆ". "ಈಗ-ಲಗೂನ-ಹೋಗಬೇಕಾಗೀದ". ಅಂತ ಒಂದ್ ಸಣ್ಣ ಸುಳ್ಳು ಹೇಳಿ ಕಾಫೀ ಕುದೀತಿದ್ಧಂಗ ಆಕಾಶವಾಣಿ "ಬೆಳ್ಳನ ಬೆಳಗಾ ಆಯಿತು ... " ಕೇಳ್ತಿದ್ದ್ಂಘ ಪಡಸಾಲ್ಯಾಗ ಆರಾಮ ಖುರ್ಚಿ ಮ್ಯಾಗ ಕುಂತೆ.
ಹೊರಗ ಬಾಗಿಲದಾಗ ಸೂರ್ಯನ ಕಿರಣ ಪಸರಿಸಿತ್ತು. ಕೈಯಾಗ ವರ್ತಮಾನ ಪತ್ರ ಹಿಡಿತಿದ್ದ್ಂಘ ರಾರಾಜಿಸಿದ್ದು ಶುಭೋದಯ "ಕನ್ನಡ ರಾಜ್ಯದ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು "
ಇತ್ತ ತಂಗಿ, ಹಾರ್ಮೊನಿಮ್ ಹಿಡಿದು; ಸುಪ್ರಭಾತದ ಪದ " ಮೋದದಿ-ನಗಿಸುತಾ ಮಾತೆಯ-ಅರುಣಾ " ಹಾಡುತ್ತಿದ್ದಂತೆ ತಮ್ಮನ 'ಪ್ರಭಾತ್ ಭೇರಿ ತಾಲಿಮ್', "ತಾಯೇ ಬಾರೇ ಮೊಗವ ತೋರೆ ಕನ್ನಡಿಗರ ಮಾತೆಯೇ ".
ಅಂದು ಧಾರವಾಡದ ಹುಯಿಲಗೋಳ ನಾರಾಯಣ ರಾಯರು " ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು " ಗಾಗಿ ಗರ್ಜಿಸಿದ್ದರು.
ಇಂದು ಬದುಕಾಗಲೀ ಕನ್ನಡ ಎನ್ನುವ ಅನುಷ್ಠಾನ ಚಿಂತನೆ ನಡೆದಿದೆ. ನಾಡು-ಕನ್ನಡ ನುಡಿಯು-ಕನ್ನಡ ಮನೆ-ಮನ-ಜನ ದನಿಯು ಕೂಡ ಹಾಡುತಿದೆ "(e-ಕನ್ನಡ)"!!!
B.R. Bhate, at Slough-UK. Dt:01-11-2014

No comments:

Post a Comment