Tuesday, 31 March 2015

ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು? [ಒಂದು-ಕಣ್ಣಿಗೆ ಸುಣ್ಣ; ಮತ್ತೊಂದಕೆ ಬೆಣ್ಣಿ]

ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು?
[ಒಂದು-ಕಣ್ಣಿಗೆ ಸುಣ್ಣ; ಮತ್ತೊಂದಕೆ ಬೆಣ್ಣಿ]                         

ಚಂದನದ ಚೆವುಡಯ್ಯ ದೊರೆಯು ತಾನಾಗಿರಲು; ಕಾಳಿಂಗ-ಮಾಲಿಂಗ ಎಡಬಲಕೆ ಮೈಸೂರು-ಬೆಂಗಳೂರು.
ನಾಟಕದ ಮಂಡಳಿಗೆ ಪಾತ್ರ ಹಾಕಲು ಕೊಟ್ಟು; ಹಾರಹಾಕಲು ನೆನಪು ಗಂಡು-ಮೆಟ್ಟಿದ ನಾಡು!
ಏಕೀಕರಣದ ಹೆಸರು ಚೆಲುವ ಕನ್ನಡ ನಾಡು; ಅದೇ ಕಣ್ಣು ಮುಚ್ಚಾಲೆ ಕೊಟ್ಟುದುದು ಏನು? 
ನಾವೆಲ್ಲಾ ಒಂದು ಆಹಾ ಬಾಯ್ತುಂಬ ಮಾತು! ; ಆದರೆ ಹಿಂದುಮುಂದು APL BPL ರೇಷನ್-ಕಾರ್ಡು.
ಬಣ್ಣ-ಬಣ್ಣದ ಮಾತು ಏನೆಲ್ಲಾ ಗಮ್ಮತ್ತು; ಅನ್ನದಾತಗೆ ಆಧಾರ ಆಶ್ರಯ ಸೋಗು ಭಗವಂತ.
ಗುಡಗೇರಿ-ಮಿತ್ರಮಂಡಳಿ, ಹಿರಣ್ಣಯ್ಯ-ಚೆಲುವಯ್ಯ; ಗೌಡರ-ಗದ್ದಲವು ಏನು ಸೊಗಸಯ್ಯ!
ಅದು-ಮಾತು ಇಂತಿರಲಿ; ನಮ್ಮೂರು-ನಿಮ್ಮೂರು ನಾವಿದ್ದರೇ-ನೀವು ಒಂದು ಅಲ್ಲೇನು?
ಬರಿ-ಒಕ್ಕಲು ಕೆರೆ-ಕಟ್ಟೆ ಇಲ್ಲಿ, ಬರಿ-ಅನ್ನದಾತನಿಗೆ; ವಿದ್ಯೆ-ಶಿಕ್ಷಣ ಸವಲತ್ತು, ಸಿಹಿ-ನೀರು; ಎಲ್ಲ-ನಿಮ್ಮಲ್ಲಿ.
ನಾಟಕದ ಮಂಡಳಿಗೆ, ಪಾತ್ರ ಹಾಕಲು ಕೊಟ್ಟು; ಹಾರಹಾಕಲು ನೆನಪು ಗಂಡು-ಮೆಟ್ಟಿದ ನಾಡು!
ಕಷ್ಟಕ್ಕೆ-ಕರೀ-ಬೇಡ ಇಷ್ಟಕ್ಕೆ-ಮರಿಬೇಡ ಒತ್ತೊತ್ತಿ-ಮತ ಹಾಕುವದಷ್ಟೇ ನಮ್ಮಸ್ವತ್ತೇನು?
ಕೊಡುವಾತ ಕೊಡುತಿರುವ ಸರಸ್ವತಿ ಭಾಗ್ಯ (IIT) ಬಾಗಿಲಲಲಿ ಬಂದಿಹುದು ಎಂಥ ಸೌಭಾಗ್ಯ!
ಇದು-ತನಕ ಕೊಟ್ಟಿಲ್ಲ ನಮ್ಮ-ಮಕ್ಕಳ ಬೇಡುತಿವೆ ಶಿಕ್ಷಣವ; ಎಲ್ಲವೂ ನಿಮಗೇ ಬಿಟ್ಟದ್ದು ನಮಗೇನು?
ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು?

[ಕ್ಷಮೆ ಇರಲಿ ಇದನ್ನು ಯಾರಿಗೂ ಉದ್ದೇಶ ಪೂರಿತ ವಾಗಿ ಬರೆದಿಲ್ಲ. ಅಲ್ಲಿಂದ ಇಲ್ಲಿತನಕ ಕಡೆಗಣಿಸಿದ
ಬಯಲು ಧಾರವಾಡ ಬರಿ-ಬಯಲು ಸೀಮೆ ಆಗದಿರಲಿ ಎಂಬ ಅಳಲು ಅಷ್ಟೇ. ಏನಂತೀರಿ?]

B.R. Bhate, Dharwad. Dt: 01-04-2015

Monday, 30 March 2015

ಬೇಡಿ -ಪಡೆವುದ-ಕಿಂತ ,ದುಡಿದು ಪಡೆವುದು ಲೇಸು! ಓದಿ-ತಿಳಿ,ಮಾಡಿ ಕಲಿ, ಫಲಿತವದು ನೋಡಿ-ನಲಿ!

ಬೇಡಿ -ಪಡೆವುದ-ಕಿಂತ ,ದುಡಿದು ಪಡೆವುದು ಲೇಸು! ಓದಿ-ತಿಳಿ,ಮಾಡಿ ಕಲಿ, ಫಲಿತವದು ನೋಡಿ-ನಲಿ!
ಏಕ-ಮೇವಾ-ದ್ವಿತೀಯ ತ್ರೈರಾಷಿಕ-ಪಂಚ ರಾಷಿಕ; ಎರಡಕ್ಕೆ ಎಡವಟ್ಟು ಮೂರಕ್ಕೇ ಗೋವಿಂದ!
ಸುಲಭ ಪರಿ ವೆಂಕಟ-ರಮಣ ತಿಳಿಸುವೆ ಗುರುವೆಂದ; ಗಣಿತ ದ ತಗಣಿ ಕಡೆತ ಮಜವೆಂದ.
"ಇಷ್ಠ ಕಿಷ್ಟಾದರೆ; ನಿಮ್ಮಪ್ಪನ ಕಷ್ಟಕ್ಕೆಷ್ಟು"? ಕಡೆತ ಹೊಡೆ ಗುಣಿಸಿದರೆ; ಬರುವದುತ್ತರವೆಂದ! ||1||
ಶ್ರೀಕೃಷ್ಣ ಪರಮಾತ್ಮ ಹಿಡಿದ ಚಕ್ರದ ಬೆರಳು; ರಾಶಿ-ಒಂದಾದರೆ, ಮಡ್ಚಿಡಿದ ಚೌರಾಶಿ-;
"ಗೊತ್ತಾದ ಸಮ-ವ್ಯಸ್ಥ ಗಳು ಬರೆದು"; ಪರಿ-ಕಡೆತ ಹೊಡೆ ಗುಣಿಸಿದರೆ; ಬರುವದುತ್ತರ ವೆಂದ!
"ಗಾಂಪ-ಗುರುಗಳ ಮಹಿಮೆ", ತಿಳಿದ ಶಿಶ್ಯೋತ್ತಮನು; ಪಡೆದ ಶ್ರೇಯಾಂಕ ನೂರಕ್ಕೆ ನೂರು!||2||
ವಿಶ್ವ-ವಿದ್ಯಾಲಯದ ಹಣೆಪಟ್ಟಿ ಓದುವದು "ಅರಿವೇ-ಗುರು" ತಿಳಿಸುವದು ಓದಿ-ತಿಳಿ,ಮಾಡಿ ಕಲಿ-
ಫಲಿತವದು ನೋಡಿ-ನಲಿ "ಗುರುವಿನ ಗುಲಾಮ-ನಾಗುವತನಕ ...ಅಹುದು ತಿಳಿ-"ಬೋಧಗುರು"!
ಮನೆ-ಮೊದಲು ಪಾಠ-ಶಾಲೆ, ಜನನಿ-ತಾ-ಮೊದಲಗುರು; ಜೀವ-ಜವ್ವನ ತನಕ ಅನುಭವ "ಗುರು-ಶಿಷ್ಯರು"! ||3||
ಗೋ-ಮಾಳಿ ಕೆಲಸ-ದಲಿ, ಗೋವಳಿಗ ನಾಗುವದು; ಕುರಿ-ಕುರುಬ-ಕೃಷಿಕ-ಒಕ್ಕಲಿಗ; ಸಿಗುತನಕ-ಸಿಕ್ಕಲಗಾರ!
ಸೋನಾರ-ಶಿಂಪಿಗ, ನವ-ತುಕಡಿ ದಂಧೆಯದು; ನೋಡು ಮಾರವಾಡಿ; ಅದು ಅವರವರ-ಕಸುಬು!
ಸೀರೆಯಲಿ ಬಿಡು- ಕುಬುಸದಲಿ ಹಿಡಿವೆನುವ-ಪರಿ, ವ್ಯಾಪಾರ ; ಬೇಡಿ-ಪಡೆವುದ-ಕಿಂತ ದುಡಿದು ಪಡೆವುದು ಲೇಸು!||4||
B.R. Bhate, Dharwad. Dt:30-03-2015.

Saturday, 28 March 2015

ಯಾರಿಗೇ ಬೇಕೋ ಇದುಅವರ ತೂಕದ ಲೆಖ್ಖ?

ಯಾರಿಗೇ ಬೇಕೋ ಇದುಅವರ ತೂಕದ ಲೆಖ್ಖ?         
ಆಡುವರೇ ಆಡುವರು, ಕೇಳುಗರೇ ಕೇಳುವರು; ಉತ್ತರವು ಫಲಿಸದ ಪ್ರಶ್ನೆ-ಗುತ್ತರವು. 
ತಾ ಶೇಷ-ಪ್ರಶ್ನೆ, ಎನಿಸಿದರೆ ಮೌನವದು; ಯಾರಿಗೇ ಏನೇಷ್ಟು? ಇದು-ಅದು ಅವರಲೆಖ್ಖ. 
ಗಣತಿ ತಾ ಹೇಳುವದು, ಲೆಖ್ಖ-ಹಾಕುವ ಲೆಖ್ಖ; ಅಸಲಿಗದು ಬೇರೆ....................... 
ಕೊಡು-ಕೊಳ್ಳುವರಿಗೆ, ಎರಡು ಇಲ್ಲದ ರಾಸು; ತಗಲಿಕೊಳ್ಳದು ಬಡ್ಡಿ ಬರಿ ಯಕ್ಷ ಪ್ರಶ್ನೆ
ಹಾಗಾದರೆ ಇದು-ಕೇವಲ ಬರಿಯದೋ ಅವರಲೆಖ್ಖ;
ಗಣತಿ ತಾ ಹೇಳುವದು; ಎಲೆಗೆಲುವೇ ನೀ ಹೇಳು?
ಯಾರಿಗೇ ಬೇಕೋ ಇದುಅವರ ತೂಕದ ಲೆಖ್ಖ?
P.S: ಕ್ಷಮೆ ಇರಲಿ ಇದು ಕೇವಲ ಜನ-ಸಾಮಾನ್ಯರ ಹರಟೆ-ಮಾತು
ವಿನಃ ಯಾರಿಗೂ ಸಂಬಂಧಿಸಿದುದಲ್ಲ.
B.R. Bhate, Dharwad. Dt:28-03-2015               

Thursday, 26 March 2015

ಕುಛ-ಖೋಯ-ಪಾಯಾ, ಚಂದ್ರ-ಕರಗುತಲಿದ್ದ; ಕಣ್ಬಿಡಲು-ಮೂಡಣದಿ ಭಾಸ್ಕರ-ನಗುತಲಿದ್ದ!

ಕುಛ-ಖೋಯ-ಪಾಯಾ, ಚಂದ್ರ-ಕರಗುತಲಿದ್ದ; ಕಣ್ಬಿಡಲು-ಮೂಡಣದಿ ಭಾಸ್ಕರ-ನಗುತಲಿದ್ದ!
                       
ನಿದ್ದೆ ಬಾರದೆ ಬೆನ್ನ-ಬದಲಿಸುತಿದ್ದೆ, ಈಕಡೆ-ಆಕಡೆಗೆ;  ಬೇಸಿಗೆಯ ಬಿಸಿಲ-ಧಗೆ ನೆಮ್ಮದಿ-ಸಿಗದೇ. 
ಬಾಯಾರಿಕೆಗೆ- ನೀರು ಕುಡಿದದ್ದೇ-ಕುಡಿದು; ಹೊಟ್ಟೆ-ಉಬ್ಬರಿಸಿದರು ತಾ-ಸಿಗದೆ-ಸಹನೇ,
ಸಾಲದಕೆ ಮೈ-ಕೆರೆತ, ಸೊಳ್ಳೆಗಳ-ಕಡಿತ; ಹಾರಿ-ಹೋಯಿತು-ನಿದ್ದೆ, ಬರಿಕಣ್ಣ-ತೂಕಡಿಕೆ. 

ಎಲ್ಲಿ-ಜಾರಿತು-ಮನಸು ಹಳೆ-ಕಳೆದ-ನೆನಪು; ಹಾಯಾಗಿ-ಕಳೆದನಾ ಚಿಕ್ಕಂದಿನಾ-ಬಾಳು
ಕೆರೆಯ ತಿಳಿ-ನೀರಿನಲಿ, ಸೊಂಟ-ಕಟ್ಟಿದ-ಬೆಂಡು; ತೇಲು-ಮುಳುಗಲಿ ಸೊಗಸು, ಈಜು-ಕಲೆತದ್ದು.
ಕರಿ-ಬಳಪ-ಹಲಗೆಯಲಿ, ಕನ್ನಡವ ಕಲಿತಿದ್ದು; ಅಕ್ಕ-ತಂಗಿಯ ಜ್ಯೋತೆಗೆ, ಆಟ-ಆಡಿದ್ದು. 

ಕಳೆದು-ಕನ್ನಡ ಸಾಲೆ ಖೋಕೋ-ಕಬಡ್ಡಿ; ಕೋಲಾಟ-ಲೆಝೀಮ್ಮು, ಬಗಾಟ-ಬುಗರಿ, ಆ-ಪ್ರಭಾತ-ಫೇರಿ,
ಮಜ-ಮಾಧ್ಯಮಿಕ ಸಾಲೆ, ಹಿಂದೀ-ಸಂಸ್ಕೃತ ಜ್ಯೋತೆಗೆ; ಆಂಗ್ರೇಜೀ-ಮಾಧ್ಯಮವು, ಗರಿ-ಗೆದರಿದ-ಕನಸು.

ಚೆಸ್ಸು-ಕೆರಮ್ಮು ರಿಂಗು-ಟೆನ್ನಿಸ್ಸು, ಇಲ್ಲದಿದ್ದರೇ ಏನು? ಹಾಕೀ-ಕ್ರಿಕೆಟ್ಟು ಕ್ರೇಜು-ಹಾಡಿನಾ-ಬಂಡಿ; ಆ-ಆಕಾಶವಾಣಿ.
ಇವ-ಕಾಲು ಆವಾ-ಮುರಿದ, ಅವ-ತಲೆಗೆ ಇವ-ಜಡಿದ; ನಾಟಕ-ಮಿಮಿಕ್ರಿ, ನೋಡಿ-ತಿಳಿ ಮಾಡಿ-ಕಲಿ; ಪ್ರಯೋಗ-ಶಾಲೆ. 

ಮುಂದೆ-ಕಂದರ ದಲ್ಲಿ ಭೋರೆಂದು ಹಾರೇ; ಪೀಯು-ಪಾವು ಕಟ್ಟಿ ಮುಂದೇ-ಸಾಗದೆ-ಏರಿ; ಎತ್ತು-ಎರೆ-ಕೋಣ-ಕೆರೆ.
ಓದು-ತಾ ಒಕ್ಕಾಲು ಬುದ್ಧಿ-ಮುಕ್ಕಾಲು; ಜ್ಯಾತಿ-ಪಾತಿ-ಗ್ರೇಸು, ಝಣ-ಝಣ-ಕಾಂಚಾಣ; ಎದ್ದವ-ಗೆದ್ದ; ಬಿದ್ದವ-ಬಿದ್ದ.
ಹುಚ್ಚು-ಮನಸಿನ ಹಲವು ನೂರಾರು-ಕನಸುಗಳು; ಆಶೆ-ಚಿಗುರಿನ-ಬೇರು, ಮೇಘ-ಉಯ್ಯಾಲೆ. 

ಸೆಖೆ ತಡೆಯದೆ ಛತ್ತು(ಮಾಳಿಗೆ) ಮೇಲೆದ್ದು ಬಂದೆ; ನಗುತಿದ್ದ ಹುಣ್ಣಿಮೆ ಚಂದಿರನ ಕಂಡೆ.
ಚೆಲಿಸುತಿಹ ಮೋಡದೊಳು, ತಾರೆಗಳ ಅಡಗು; ತಿಂಗಳ-ಬೆಳಕಿನಲಿ ಎನೆಲ್ಲ-ಸೊಗಸು.
ಕುಛ-ಖೋಯ-ಪಾಯಾ, ಚಂದ್ರ-ಕರಗುತಲಿದ್ದ; ಕಣ್ಬಿಡಲು-ಮೂಡಣದಿ ಭಾಸ್ಕರ-ನಗುತಲಿದ್ದ!

B.R. Bhate, Dharwad. Dt:27-03-2015

Tuesday, 24 March 2015

ಧಾರವಾಡದ ತಂಪು ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು ಕಣ್ಣು-ಮಿಟಿಸುತಲಿದ್ದೆ!

ಧಾರವಾಡದ ತಂಪು ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು ಕಣ್ಣು-ಮಿಟಿಸುತಲಿದ್ದೆ!
ಆ ಒಂದು ಬದುಕ ದಿನ, ನೆನೆದೆ ನಾನದನಿಂದು; ಬದುಕ ಬದುಕಿನ ಪಯಣ, ಪಥಿಕ-ಧೃವತಾರೆ-ಬಿಂದು.
ಮೂರು-ದಶಕದ ಹಾದಿ, ಮೂರು ದಶಕದ ಮೇಲೆ; ಏರಿಳಿವಿನ ಹಾದಿ, ಬರಿ ಕಲ್ಲು-ಮುಳ್ಳು.
ಬದುಕಿಗಾರ್ ನಾಯಕರೋ? ಬೆಲ್ಲ-ಕಹಿ, ಬೇವು-ಸಿಹಿ; ಪರಿ ಕಳೆದ ಬಾಳು, ಜೀವ ಕಂಡುದು-ಮುಗಿಲು. ||1||
ಮರೆ-ಮರೆತೇ ನೆನೆ-ನೆನೆದೇ, ಚಿಕ್ಕಂದಿನ ಬಾಳು ; ಹಾಲು-ಸವಿ ಜೇನು, ಕಥೆ ಪುಣ್ಯ-ಕೋಟಿ ಬರಿ-ಕಾಮಧೇನೇನು?
ಹಿಡಿದ-ಪರಿ-ಬಿಡದ ಛಲ, ಬದುಕ ಬೇಕೆಂಬವಗೆ; ಮಾಯಾ-ಮೃಗದ ಹಾದಿ, ಪ್ರಗತಿ ತೋರುವದು.
ಹೊತ್ತು-ಹೊತ್ತಿಗೆ ತಕ್ಕ ಕುಂಬಾರ, ಕಮ್ಮಾರ-ಸೋನಾರ; ಪೆಟ್ಟುಗಳು-ಪಟ್ಟಾಗಿ-ಬೀಳದಿರೆ; ಸತ್ಯ ಎಡವಟ್ಟು. ||2||
ಆ ಒಂದು ಬದುಕ ದಿನ, ನೆನೆದೆ ನಾನದನಿಂದು; ಬದುಕ ಬದುಕಿನ ಪಯಣ, ಪಥಿಕ ಧ್ರುವ-ತಾರೆ ಬಿಂದು.
ಆ ಒಂದು ದಿನ ಸೀತಾ$$ನದಿಯ-ತೀರ ಬಾಳಕುದುರು ಊರು, ಉಡುಪಿ-ಕುಂದಾಪುರದ ಮಧ್ಯದ-ತೆಕ್ಕೆ; ಹಂಗಾರ ಕಟ್ಟೆ.
ಕರಾವಳಿಯ-ತೀರ, ವಿಪರೀತ ಸೆಖೆ-ಹಗಲು; ಬಿಸಲಿಳಿದರೂ ಸಂಜೆ, ನದಿ-ಬಿಸಿಗಾಳಿ ತೆಕ್ಕೆ-ಧಕ್ಕೆ ಮೇಲೆ.||3||
ಹಳೆದಾದ ಮನೆ ಅಲ್ಲಿ, ಸುಂದರ ತೀರದೊಳು; ಕಿಟಕಿ-ಬಾಗಿಲ ನೇರ ತೆರೆ ನೋಡುತಿದ್ದೆ, ಬದುಕ ಪಡೆದಿದ್ದೆ.
ಧಾರವಾಡದ ತಂಪು, ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು, ಕಣ್ಣು-ಮಿಟಿಸುತಲಿದ್ದೆ!
ನಿದ್ದೆ-ಜಂಪದು ಬರಲು, ಜಾರಿದ್ದೆ ನಿದ್ದೆಯೊಳು; ಏನು ಹೇಳಲಿ ಕನಸು, ಹದಿ-ಹರೆಯದ ವಯಸು.||4||
ಕ್ಷಣಿಕ ಮುಚ್ಚಿದ ಕಣ್ಣು, ಸಂಜೆ-ಕಳಚಿತ್ತು ರಾತ್ರೆ; ತಿಂಗಳ ಬೆಳಕಿನೊಳು, ಬಾಂದಳದ ಕನಸು.
ಏನು ಹೇಳಲಿ ಕನಸು, ಹದಿ-ಹರೆಯದ ವಯಸು; ತಿಂಗಳ ಬೆಳಕಿನೊಳು, ಬಾಂದಳದ ಥಳಕು.
ಸಂಜೆ ಸಂಪದ ತಿರುಗಿ, ಕತ್ತಲದ ಕರಿ ರಾತ್ರಿ; ತಗಲು-ತಗಲಿಸೆ ಕಾಣೆ, ಮುಂಜಾನೆ-ಮುಸುಕು. ||5||
ನಬೀ-ಸಾಬನ ಕೋಳಿ ಅರಚಲದು ಕೊಕ್ಕೋ ; ಕಣ್ಬಿಡುತ ಹಸಿವಂತು, ಲೋ ಅವಲಕ್ಕಿ ಮುಕ್ಕೋ !
ಮಧು-ಮಧುರ ಅತೀ ಮಧುರ, ಹಾಯಾದ ಆ-ಸಂಜೆ ; ಮೀಸೆ ಚಿಗುರಲಿ ನಕ್ಕ, ಕನ್ನಡಿ ಮುಂದೆ.
ಅಳಿದುಳಿದ ಅಂಕ, ಪರದೆ-ಜಾರಿದ-ಮೇಲೂ; ಮುಗಿಯದ ಆ ಕಥೆಯು, ಬರಿ ನೆನಪು ಇಂದು.||6||
B.R. Bhate, Dharwad. Dt:24-03-2015

Sunday, 22 March 2015

ಏಕ-ತಾರಿಯ ಭಾನ ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ!

ಏಕ-ತಾರಿಯ ಭಾನ ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ!
ಬಲಗೈನ ತಮ್ಬೂರಿ, ತಂತಿ-ಯದನಾ-ಮೀಟಿ; ಎಡಗೈ ಬೆರಳೊಳ-ಕಾವಳಿಗಿ ತಾಳ-ವ ಕುಟ್ಟಿ;
ಧ್ಯಾನ-ಮುದ್ರೆಯ ನಾಮ ಕಣ್ಣು ತಾ ಸ್ಮರಿಸುತಿರೆ; ಅಂಥ-ಕರುಳಿನ ರಾಗ ಭಾವ-ಧಾರೆಯ ತುಂಬಿ.
ಏಕ-ತಾರಿಯ ಭಾನ, ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ! ||1||
ಗಂಟ-ಲುಲಿಯಲು ಸ್ವರವು, ಅಲಾಪಿಸುತಿರಲು; ನಾದ-ಲೋಲನ ಮುರಲಿ, ಕಂಠ ಊದಿರಲು.
ಉದಯ-ರಾಗವು ಮಂದ, ಸ್ಥಾಯಿ ಪಂಚಮ-ಸ್ಥಬ್ಧ; ಅರುಣೋದಯ ಲಯವು, ಸಂಜೆ ಸಂಧ್ಯಾ-ರಾಗ.
ಮಧು-ಮಧುರ ಅತಿಮಧುರ, ಕಾಫಿ-ಮಿಶ್ರ ಪ್ರಿಯರೇ; ಹಸಿವು-ನೀರಡಿಕೆ-ಮನ, ಎಲ್ಲವನ ಮರೆಸುವವು||2||
ಕನ್ನಡದ-ಕುಲಪುತ್ರ ಕನಕ-ಪುರುಂಧರ-ದಾಸ; ಕಾಗಿನೆಲೆ-ಕೇಶವ ವಿಜಯ-ವಿಠಲನೇ-ನೆನೆವ ಉಡುಪಿ-ಶ್ರೀ ಕೃಷ್ಣ.
ಉತ್ತರ-ಕನ್ನಡ(ಧಾರಾನಗರಿಯ)ಮಹಿಮೆ; ದಕ್ಷಿಣ-ಕನ್ನಡ(ಭಾರ್ಗವ-ರಾಮನ)ಗಮಕ ಎತ್ತರಕೆ ಪಟ-ಪಟ ಶ್ರೀ-ಕೃಷ್ಣ-ಧ್ವಜವ.
ತ್ಯಾಗರಾಜ-ಗುರುಮಧ್ವ (ಗುರು-ಶಿಷ್ಯ) ವಾದ-ಸಂವಾದದೊಳು; ಉಗ್ಗಡಿಸಿದವು ಹರಿಕಥೆ-ಕೀರ್ತನಗಳು.||3||
ಸರಳ-ಕನ್ನಡದಲ್ಲಿ ತ್ರಿಪದಿ-ಚೌಪದಿಗಳಲಿ; ಏಕತಾರಿಯ ಯೋಗಿ/ಭೋಗಿ ಕಾಣದ-ನಿತ್ಯ-ಜ್ಯೋಗಿ.
ಧರ್ಮ$ವರದೆ ತುಂಗಾ$ಭದ್ರೆ, ನೇತ್ರಾವತಿ$ಶರಾವತಿ; ಕಾಳಿ$ಪಾಂಡರೀ ಕಾವೇರಿ; ಮಲ-ಪ್ರಭೆ ಮರೆಯದೇ ಶಾಲ್ಮಲೆ$ಕೃಷ್ಣೆ.
ಸಾಲೆಲ್ಲ-ತುಂಬಿದವು, ಭಾವನಾ-ಮನದಲ್ಲಿ(ಸಾಗರ-ಸಂಗಮ ದಲ್ಲಿ); ಮಲೆ-ಗಡಿ-ಬೆಳವದಲ್ಲಿ ಧನ್ಯ-ಕನ್ನಡ-ನಾಡು.||4|
ಹರಿದಾಸರ-ಭಜನೆ ಲಾಲಿ-ಗೀಗಿ ಪದವು; ಲಾವಣಿ-ಸುರ-ಸಂಗಮ ಸರಳ ಹಾಡು. ಪುಕ್ಕಟೆ-ಹೇಳುವನು, ಅವ-ಜೋಗೀ-ಕೇಳು
ಮಧು-ಮಧುರ ಅತಿಮಧುರ, ಕಾಫಿ-ಮಿಶ್ರ ಪ್ರಿಯರೇ; ಹಸಿವು-ನೀರಡಿಕೆ-ಮನ, ಎಲ್ಲವನ ಮರೆಸುವವು.
ಏಕ-ತಾರಿಯ ಭಾನ, ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ ಹಾಡುತಿರೆ, ಕೇಳುಗರೇ ಧನ್ಯ! ||5||
B.R. Bhate, Dharwad. Dt:22-03-2015