Tuesday 24 March 2015

ಧಾರವಾಡದ ತಂಪು ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು ಕಣ್ಣು-ಮಿಟಿಸುತಲಿದ್ದೆ!

ಧಾರವಾಡದ ತಂಪು ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು ಕಣ್ಣು-ಮಿಟಿಸುತಲಿದ್ದೆ!
ಆ ಒಂದು ಬದುಕ ದಿನ, ನೆನೆದೆ ನಾನದನಿಂದು; ಬದುಕ ಬದುಕಿನ ಪಯಣ, ಪಥಿಕ-ಧೃವತಾರೆ-ಬಿಂದು.
ಮೂರು-ದಶಕದ ಹಾದಿ, ಮೂರು ದಶಕದ ಮೇಲೆ; ಏರಿಳಿವಿನ ಹಾದಿ, ಬರಿ ಕಲ್ಲು-ಮುಳ್ಳು.
ಬದುಕಿಗಾರ್ ನಾಯಕರೋ? ಬೆಲ್ಲ-ಕಹಿ, ಬೇವು-ಸಿಹಿ; ಪರಿ ಕಳೆದ ಬಾಳು, ಜೀವ ಕಂಡುದು-ಮುಗಿಲು. ||1||
ಮರೆ-ಮರೆತೇ ನೆನೆ-ನೆನೆದೇ, ಚಿಕ್ಕಂದಿನ ಬಾಳು ; ಹಾಲು-ಸವಿ ಜೇನು, ಕಥೆ ಪುಣ್ಯ-ಕೋಟಿ ಬರಿ-ಕಾಮಧೇನೇನು?
ಹಿಡಿದ-ಪರಿ-ಬಿಡದ ಛಲ, ಬದುಕ ಬೇಕೆಂಬವಗೆ; ಮಾಯಾ-ಮೃಗದ ಹಾದಿ, ಪ್ರಗತಿ ತೋರುವದು.
ಹೊತ್ತು-ಹೊತ್ತಿಗೆ ತಕ್ಕ ಕುಂಬಾರ, ಕಮ್ಮಾರ-ಸೋನಾರ; ಪೆಟ್ಟುಗಳು-ಪಟ್ಟಾಗಿ-ಬೀಳದಿರೆ; ಸತ್ಯ ಎಡವಟ್ಟು. ||2||
ಆ ಒಂದು ಬದುಕ ದಿನ, ನೆನೆದೆ ನಾನದನಿಂದು; ಬದುಕ ಬದುಕಿನ ಪಯಣ, ಪಥಿಕ ಧ್ರುವ-ತಾರೆ ಬಿಂದು.
ಆ ಒಂದು ದಿನ ಸೀತಾ$$ನದಿಯ-ತೀರ ಬಾಳಕುದುರು ಊರು, ಉಡುಪಿ-ಕುಂದಾಪುರದ ಮಧ್ಯದ-ತೆಕ್ಕೆ; ಹಂಗಾರ ಕಟ್ಟೆ.
ಕರಾವಳಿಯ-ತೀರ, ವಿಪರೀತ ಸೆಖೆ-ಹಗಲು; ಬಿಸಲಿಳಿದರೂ ಸಂಜೆ, ನದಿ-ಬಿಸಿಗಾಳಿ ತೆಕ್ಕೆ-ಧಕ್ಕೆ ಮೇಲೆ.||3||
ಹಳೆದಾದ ಮನೆ ಅಲ್ಲಿ, ಸುಂದರ ತೀರದೊಳು; ಕಿಟಕಿ-ಬಾಗಿಲ ನೇರ ತೆರೆ ನೋಡುತಿದ್ದೆ, ಬದುಕ ಪಡೆದಿದ್ದೆ.
ಧಾರವಾಡದ ತಂಪು, ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು, ಕಣ್ಣು-ಮಿಟಿಸುತಲಿದ್ದೆ!
ನಿದ್ದೆ-ಜಂಪದು ಬರಲು, ಜಾರಿದ್ದೆ ನಿದ್ದೆಯೊಳು; ಏನು ಹೇಳಲಿ ಕನಸು, ಹದಿ-ಹರೆಯದ ವಯಸು.||4||
ಕ್ಷಣಿಕ ಮುಚ್ಚಿದ ಕಣ್ಣು, ಸಂಜೆ-ಕಳಚಿತ್ತು ರಾತ್ರೆ; ತಿಂಗಳ ಬೆಳಕಿನೊಳು, ಬಾಂದಳದ ಕನಸು.
ಏನು ಹೇಳಲಿ ಕನಸು, ಹದಿ-ಹರೆಯದ ವಯಸು; ತಿಂಗಳ ಬೆಳಕಿನೊಳು, ಬಾಂದಳದ ಥಳಕು.
ಸಂಜೆ ಸಂಪದ ತಿರುಗಿ, ಕತ್ತಲದ ಕರಿ ರಾತ್ರಿ; ತಗಲು-ತಗಲಿಸೆ ಕಾಣೆ, ಮುಂಜಾನೆ-ಮುಸುಕು. ||5||
ನಬೀ-ಸಾಬನ ಕೋಳಿ ಅರಚಲದು ಕೊಕ್ಕೋ ; ಕಣ್ಬಿಡುತ ಹಸಿವಂತು, ಲೋ ಅವಲಕ್ಕಿ ಮುಕ್ಕೋ !
ಮಧು-ಮಧುರ ಅತೀ ಮಧುರ, ಹಾಯಾದ ಆ-ಸಂಜೆ ; ಮೀಸೆ ಚಿಗುರಲಿ ನಕ್ಕ, ಕನ್ನಡಿ ಮುಂದೆ.
ಅಳಿದುಳಿದ ಅಂಕ, ಪರದೆ-ಜಾರಿದ-ಮೇಲೂ; ಮುಗಿಯದ ಆ ಕಥೆಯು, ಬರಿ ನೆನಪು ಇಂದು.||6||
B.R. Bhate, Dharwad. Dt:24-03-2015

No comments:

Post a Comment