Tuesday 31 March 2015

ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು? [ಒಂದು-ಕಣ್ಣಿಗೆ ಸುಣ್ಣ; ಮತ್ತೊಂದಕೆ ಬೆಣ್ಣಿ]

ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು?
[ಒಂದು-ಕಣ್ಣಿಗೆ ಸುಣ್ಣ; ಮತ್ತೊಂದಕೆ ಬೆಣ್ಣಿ]                         

ಚಂದನದ ಚೆವುಡಯ್ಯ ದೊರೆಯು ತಾನಾಗಿರಲು; ಕಾಳಿಂಗ-ಮಾಲಿಂಗ ಎಡಬಲಕೆ ಮೈಸೂರು-ಬೆಂಗಳೂರು.
ನಾಟಕದ ಮಂಡಳಿಗೆ ಪಾತ್ರ ಹಾಕಲು ಕೊಟ್ಟು; ಹಾರಹಾಕಲು ನೆನಪು ಗಂಡು-ಮೆಟ್ಟಿದ ನಾಡು!
ಏಕೀಕರಣದ ಹೆಸರು ಚೆಲುವ ಕನ್ನಡ ನಾಡು; ಅದೇ ಕಣ್ಣು ಮುಚ್ಚಾಲೆ ಕೊಟ್ಟುದುದು ಏನು? 
ನಾವೆಲ್ಲಾ ಒಂದು ಆಹಾ ಬಾಯ್ತುಂಬ ಮಾತು! ; ಆದರೆ ಹಿಂದುಮುಂದು APL BPL ರೇಷನ್-ಕಾರ್ಡು.
ಬಣ್ಣ-ಬಣ್ಣದ ಮಾತು ಏನೆಲ್ಲಾ ಗಮ್ಮತ್ತು; ಅನ್ನದಾತಗೆ ಆಧಾರ ಆಶ್ರಯ ಸೋಗು ಭಗವಂತ.
ಗುಡಗೇರಿ-ಮಿತ್ರಮಂಡಳಿ, ಹಿರಣ್ಣಯ್ಯ-ಚೆಲುವಯ್ಯ; ಗೌಡರ-ಗದ್ದಲವು ಏನು ಸೊಗಸಯ್ಯ!
ಅದು-ಮಾತು ಇಂತಿರಲಿ; ನಮ್ಮೂರು-ನಿಮ್ಮೂರು ನಾವಿದ್ದರೇ-ನೀವು ಒಂದು ಅಲ್ಲೇನು?
ಬರಿ-ಒಕ್ಕಲು ಕೆರೆ-ಕಟ್ಟೆ ಇಲ್ಲಿ, ಬರಿ-ಅನ್ನದಾತನಿಗೆ; ವಿದ್ಯೆ-ಶಿಕ್ಷಣ ಸವಲತ್ತು, ಸಿಹಿ-ನೀರು; ಎಲ್ಲ-ನಿಮ್ಮಲ್ಲಿ.
ನಾಟಕದ ಮಂಡಳಿಗೆ, ಪಾತ್ರ ಹಾಕಲು ಕೊಟ್ಟು; ಹಾರಹಾಕಲು ನೆನಪು ಗಂಡು-ಮೆಟ್ಟಿದ ನಾಡು!
ಕಷ್ಟಕ್ಕೆ-ಕರೀ-ಬೇಡ ಇಷ್ಟಕ್ಕೆ-ಮರಿಬೇಡ ಒತ್ತೊತ್ತಿ-ಮತ ಹಾಕುವದಷ್ಟೇ ನಮ್ಮಸ್ವತ್ತೇನು?
ಕೊಡುವಾತ ಕೊಡುತಿರುವ ಸರಸ್ವತಿ ಭಾಗ್ಯ (IIT) ಬಾಗಿಲಲಲಿ ಬಂದಿಹುದು ಎಂಥ ಸೌಭಾಗ್ಯ!
ಇದು-ತನಕ ಕೊಟ್ಟಿಲ್ಲ ನಮ್ಮ-ಮಕ್ಕಳ ಬೇಡುತಿವೆ ಶಿಕ್ಷಣವ; ಎಲ್ಲವೂ ನಿಮಗೇ ಬಿಟ್ಟದ್ದು ನಮಗೇನು?
ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು?

[ಕ್ಷಮೆ ಇರಲಿ ಇದನ್ನು ಯಾರಿಗೂ ಉದ್ದೇಶ ಪೂರಿತ ವಾಗಿ ಬರೆದಿಲ್ಲ. ಅಲ್ಲಿಂದ ಇಲ್ಲಿತನಕ ಕಡೆಗಣಿಸಿದ
ಬಯಲು ಧಾರವಾಡ ಬರಿ-ಬಯಲು ಸೀಮೆ ಆಗದಿರಲಿ ಎಂಬ ಅಳಲು ಅಷ್ಟೇ. ಏನಂತೀರಿ?]

B.R. Bhate, Dharwad. Dt: 01-04-2015

No comments:

Post a Comment