Saturday 12 September 2015

ಹಾಯಾದ ಅಂಗಳದೆ ಕುಳಿತಲ್ಲಿನಾನು ; ಮನವರಿತ ಭಾವುಕತೆ, ಹಾಗೇ ಬರಿದೆ ನಾನು!

ಹಾಯಾದ ಅಂಗಳದೆ ಕುಳಿತಲ್ಲಿನಾನು ; ಮನವರಿತ ಭಾವುಕತೆ, ಹಾಗೇ ಬರಿದೆ ನಾನು!

ಮುಂಜಾವ ಉಲ್ಹಾಸ, ಹಗಲ ಹೆಗಲೇರಿಸುತ ; ದಣಿವಾರಿ-ಸೆಂದ, ಕಂಡೆ ನಾನು ಮುಸ್ಸಂಜೆ !
ಮುಂಗೋಳಿ ಕೂಗಲವು, ನಸುಕು ಮುಂಜಾವು; ಕುಹೂ-ಕುಹೂ ಕೋಕಿಲಕೆ ಸಂಪಿಗೆ-ಮಲ್ಲಿಅರಳೇ.
ಉದಯ ರಾಗದ ಗಾನ, ಸುಪ್ರಭಾತವೋ ದೇವಾ; ಗೋವಳನ ಕೇಳೋ ಹಟ್ಟಿಲಿ ವೇಣು-ವೆಂದಾ!  || 1 ||

ಹಾಯಾದ ಅಂಗಳದೆ, ಕುಳಿತಲ್ಲಿ ಸಂಜೆ ; ಚಿಲಿ-ಪಿಲಿ ಹಕ್ಕಿ-ಕುಣಿತ, ಎದುರ ಗಡೆ ಟೊಂಗೆ.
ಮೂಡಲದ ಮೂಡಣನ, ನಸುಕು ಮುಂಜಾವು; ಹಗಲು ಪಯಣ, ಇಳಿದ ಪಡುವಣನ ಸಂಜೆ.
ಜಗವ ನೆಬ್ಬಿಸಿ ದುಡಿಸಿ, ಬೆವರಿಳಿಸುವವನೋ ; ಮುಸ್ಸಂಜೆ ಯಲಿ, ಮೆಲ್ಲ, ಮಾಯ ವಾಗುವನೋ!||2 ||

ಹುಟ್ಟು ಸಾವಿನ ಮಧ್ಧ್ಯೆ, ನಿತ್ಯ ಹಗಲು ರಾತ್ರಿ ; ಸೂತ್ರಧಾರೀ ಸೂತ್ರ, ಕುಣಿ-ಕುಣಿಸುವನೋ ಪಾತ್ರಿ.
ವಿಸ್ಮಯದ ಅಳು ನಗುವು, ಸೋಲು ಗೆಲುವುಗಳು; ಇಷ್ಠ ಋಣ-ವಿಮೋಚನ, ವಿಶಿಷ್ಠ ಹಣೆ ಬರಹ.
ಪಾತ್ರ ತೀರಿದ ಮೇಲೆ, ತಿಳಿ ನೀಲ ಸಾಗು ; ಮನವರಿತ ಭಾವುಕತೆ , ಹಾಗೇ ಬರಿದೆ ನಾನು! ||3||  

B.R. Bhate,Dharwad. Dt: 12/09/2015