Saturday, 12 September 2015

ಹಾಯಾದ ಅಂಗಳದೆ ಕುಳಿತಲ್ಲಿನಾನು ; ಮನವರಿತ ಭಾವುಕತೆ, ಹಾಗೇ ಬರಿದೆ ನಾನು!

ಹಾಯಾದ ಅಂಗಳದೆ ಕುಳಿತಲ್ಲಿನಾನು ; ಮನವರಿತ ಭಾವುಕತೆ, ಹಾಗೇ ಬರಿದೆ ನಾನು!

ಮುಂಜಾವ ಉಲ್ಹಾಸ, ಹಗಲ ಹೆಗಲೇರಿಸುತ ; ದಣಿವಾರಿ-ಸೆಂದ, ಕಂಡೆ ನಾನು ಮುಸ್ಸಂಜೆ !
ಮುಂಗೋಳಿ ಕೂಗಲವು, ನಸುಕು ಮುಂಜಾವು; ಕುಹೂ-ಕುಹೂ ಕೋಕಿಲಕೆ ಸಂಪಿಗೆ-ಮಲ್ಲಿಅರಳೇ.
ಉದಯ ರಾಗದ ಗಾನ, ಸುಪ್ರಭಾತವೋ ದೇವಾ; ಗೋವಳನ ಕೇಳೋ ಹಟ್ಟಿಲಿ ವೇಣು-ವೆಂದಾ!  || 1 ||

ಹಾಯಾದ ಅಂಗಳದೆ, ಕುಳಿತಲ್ಲಿ ಸಂಜೆ ; ಚಿಲಿ-ಪಿಲಿ ಹಕ್ಕಿ-ಕುಣಿತ, ಎದುರ ಗಡೆ ಟೊಂಗೆ.
ಮೂಡಲದ ಮೂಡಣನ, ನಸುಕು ಮುಂಜಾವು; ಹಗಲು ಪಯಣ, ಇಳಿದ ಪಡುವಣನ ಸಂಜೆ.
ಜಗವ ನೆಬ್ಬಿಸಿ ದುಡಿಸಿ, ಬೆವರಿಳಿಸುವವನೋ ; ಮುಸ್ಸಂಜೆ ಯಲಿ, ಮೆಲ್ಲ, ಮಾಯ ವಾಗುವನೋ!||2 ||

ಹುಟ್ಟು ಸಾವಿನ ಮಧ್ಧ್ಯೆ, ನಿತ್ಯ ಹಗಲು ರಾತ್ರಿ ; ಸೂತ್ರಧಾರೀ ಸೂತ್ರ, ಕುಣಿ-ಕುಣಿಸುವನೋ ಪಾತ್ರಿ.
ವಿಸ್ಮಯದ ಅಳು ನಗುವು, ಸೋಲು ಗೆಲುವುಗಳು; ಇಷ್ಠ ಋಣ-ವಿಮೋಚನ, ವಿಶಿಷ್ಠ ಹಣೆ ಬರಹ.
ಪಾತ್ರ ತೀರಿದ ಮೇಲೆ, ತಿಳಿ ನೀಲ ಸಾಗು ; ಮನವರಿತ ಭಾವುಕತೆ , ಹಾಗೇ ಬರಿದೆ ನಾನು! ||3||  

B.R. Bhate,Dharwad. Dt: 12/09/2015

Wednesday, 1 April 2015

ಮಾವಿನ ಹಣ್ಣಿಗೂ ಮಾವನ ಹೆಣ್ಣಿಗೂ:ಏನೆಲ್ಲಾ ಸಂಬಂಧ?[ಆ-ಅನುರಾಗ ಬಂಧ]

ಮಾವಿನ ಹಣ್ಣಿಗೂ ಮಾವನ ಹೆಣ್ಣಿಗೂ:ಏನೆಲ್ಲಾ ಸಂಬಂಧ?[ಆ-ಅನುರಾಗ ಬಂಧ]

"ಅಪ್ಪೇ-ಮಿಡಿ" ಚೆಟ್ಟಿಕ್ಕಿ ಹಾಕುವರು ಊಪ್ಪಿನ-ಕಾಯಿ; ತಪ್ಪದೆ-ಮಾಡುವರು ಭರಣಿ-"ಗುಳಂಬಾ".
ಸೀಜನ್ನು ಮುಗಿತನಕ "ಕಾಯಿ-ಗೊಜ್ಜು"-"ಮೊರಬ್ಬಾ" ತರ-ತರದ "ಕೋಸಂಬರಿ"-"ಪಾನಕ ಹಬ್ಬ" ಜಗದಂಬಾ   
"ಆಪೂಸು"-"ರಸಪೂರಿ", "ಸಕ್ಕರೆ-ಗುಟುಕಾ"; "ಯಾಲಕ್ಕಿ"-"ಜೀರಿಗೆ" ಎಷ್ಟೆಲ್ಲಾ"ಮಲ್ಲಿಕಾ"!

"ಕರೀ-ಈಷ್ಯಾಡಿ", "ಬಿಳಿ-ಈಶ್ಯಾಡಿ" ನೆಲಕೆ ಮುತ್ತಿಡು ತಿರುವ "ಬಾಗೇ-ಪಲ್ಲಿ" "ಅನಾಮಿಕಾ"
ಬರೆಯುತ್ತ ಹೋದಂತೆ ಕಲಮು-ಲೆಕ್ಕಣಿಕೀ; "ಕಲಮಿ"-ಶೀಕರಣೆ ಪೂರೀ-ಬಾಸುಂದಿ
ಸೀಜನ್ನು ಮುಗಿದಂತೆ ತಿನ್ನು-"ಮಲ್ಗೋವಾ";ಅಂತೆ-ಕಂತೆ-ಸಂತೆ ಮಾವ-ಮಾವಿಗೆ(ನೆಂಟು)-ವಾಹ್ವಾ

ಧಾರವಾಡದ ಹಾಡು ಹಳೆಯದಾದರೇ ಏನು; ಪ್ರೀತಿ ಸಲುಗೆ ಹಾಡು ಮಕ್ಕಳ ಬಾಯ್-ಮಕ್ಕಳ ಸೊಗಸು

ಯಾರು-ಬಂದಾರವ್ವ, ಮಾವ ಬಂದಾನವ್ವ; ಏನು ತಂದಾರವ್ವ [ಹೊಳೆ-ದಾಟಿದ ಮೇಲೆ ... ]
ಹಂಡೆ-ದಂಥ ಅಂ( )-ಬಿಟ್ಕೊಂಡ್; ಹಂಗ ಬಂದಾನವ್ವ. [ಹಿಂಘ ತಡಿ ಹಂಗಾರ...!]

ಮಾವಾ-ಮಾವಾ ಮಾತಾಡೋ; ಮಾವಿನ ಗಿಡಕ ಜ್ಯೋತಾಡೋ
ಮಾವಿನ ಟೊಂಗೆ ಮುರಿತೂ; ಮಾವನ ಮು(..ಖ) ಹರಿತೂ!

"ಪ್ರೀತಿಯಲಿ ಹರಿದಾವ ಮಕ್ಕಳ ಮಾತು ಮಾವ-ಮಾವಿಲ್ಲ ಮಕ್ಕಳೂ ಇಲ್ಲಿಲ್ಲ"!
'ಅದೇ-ಹಾಡು ಅದೇ-ರಾಗ ಅದೇ-ಹಾಡೋ' ಬೆಳ್ಳಿ-ಬೆಟ್ಟ ನೋಡೋ; "ಚೆಲಿಸುತಿಹ ಮೋಡಗಳು"! 
B.R. Bhate, Dharwad. Dt:01-04-2015

Tuesday, 31 March 2015

ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು? [ಒಂದು-ಕಣ್ಣಿಗೆ ಸುಣ್ಣ; ಮತ್ತೊಂದಕೆ ಬೆಣ್ಣಿ]

ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು?
[ಒಂದು-ಕಣ್ಣಿಗೆ ಸುಣ್ಣ; ಮತ್ತೊಂದಕೆ ಬೆಣ್ಣಿ]                         

ಚಂದನದ ಚೆವುಡಯ್ಯ ದೊರೆಯು ತಾನಾಗಿರಲು; ಕಾಳಿಂಗ-ಮಾಲಿಂಗ ಎಡಬಲಕೆ ಮೈಸೂರು-ಬೆಂಗಳೂರು.
ನಾಟಕದ ಮಂಡಳಿಗೆ ಪಾತ್ರ ಹಾಕಲು ಕೊಟ್ಟು; ಹಾರಹಾಕಲು ನೆನಪು ಗಂಡು-ಮೆಟ್ಟಿದ ನಾಡು!
ಏಕೀಕರಣದ ಹೆಸರು ಚೆಲುವ ಕನ್ನಡ ನಾಡು; ಅದೇ ಕಣ್ಣು ಮುಚ್ಚಾಲೆ ಕೊಟ್ಟುದುದು ಏನು? 
ನಾವೆಲ್ಲಾ ಒಂದು ಆಹಾ ಬಾಯ್ತುಂಬ ಮಾತು! ; ಆದರೆ ಹಿಂದುಮುಂದು APL BPL ರೇಷನ್-ಕಾರ್ಡು.
ಬಣ್ಣ-ಬಣ್ಣದ ಮಾತು ಏನೆಲ್ಲಾ ಗಮ್ಮತ್ತು; ಅನ್ನದಾತಗೆ ಆಧಾರ ಆಶ್ರಯ ಸೋಗು ಭಗವಂತ.
ಗುಡಗೇರಿ-ಮಿತ್ರಮಂಡಳಿ, ಹಿರಣ್ಣಯ್ಯ-ಚೆಲುವಯ್ಯ; ಗೌಡರ-ಗದ್ದಲವು ಏನು ಸೊಗಸಯ್ಯ!
ಅದು-ಮಾತು ಇಂತಿರಲಿ; ನಮ್ಮೂರು-ನಿಮ್ಮೂರು ನಾವಿದ್ದರೇ-ನೀವು ಒಂದು ಅಲ್ಲೇನು?
ಬರಿ-ಒಕ್ಕಲು ಕೆರೆ-ಕಟ್ಟೆ ಇಲ್ಲಿ, ಬರಿ-ಅನ್ನದಾತನಿಗೆ; ವಿದ್ಯೆ-ಶಿಕ್ಷಣ ಸವಲತ್ತು, ಸಿಹಿ-ನೀರು; ಎಲ್ಲ-ನಿಮ್ಮಲ್ಲಿ.
ನಾಟಕದ ಮಂಡಳಿಗೆ, ಪಾತ್ರ ಹಾಕಲು ಕೊಟ್ಟು; ಹಾರಹಾಕಲು ನೆನಪು ಗಂಡು-ಮೆಟ್ಟಿದ ನಾಡು!
ಕಷ್ಟಕ್ಕೆ-ಕರೀ-ಬೇಡ ಇಷ್ಟಕ್ಕೆ-ಮರಿಬೇಡ ಒತ್ತೊತ್ತಿ-ಮತ ಹಾಕುವದಷ್ಟೇ ನಮ್ಮಸ್ವತ್ತೇನು?
ಕೊಡುವಾತ ಕೊಡುತಿರುವ ಸರಸ್ವತಿ ಭಾಗ್ಯ (IIT) ಬಾಗಿಲಲಲಿ ಬಂದಿಹುದು ಎಂಥ ಸೌಭಾಗ್ಯ!
ಇದು-ತನಕ ಕೊಟ್ಟಿಲ್ಲ ನಮ್ಮ-ಮಕ್ಕಳ ಬೇಡುತಿವೆ ಶಿಕ್ಷಣವ; ಎಲ್ಲವೂ ನಿಮಗೇ ಬಿಟ್ಟದ್ದು ನಮಗೇನು?
ಓಟು-ಹಾಕಿಸಿಕೊಂಡು ಹಾಯಾಗಿ-ಮೆಲ್ಲುವಿರಿ; ಮರೆಯದಿರಿ-ಮತದಾರ, ನಾವಿದ್ದರೇ-ನೀವು?

[ಕ್ಷಮೆ ಇರಲಿ ಇದನ್ನು ಯಾರಿಗೂ ಉದ್ದೇಶ ಪೂರಿತ ವಾಗಿ ಬರೆದಿಲ್ಲ. ಅಲ್ಲಿಂದ ಇಲ್ಲಿತನಕ ಕಡೆಗಣಿಸಿದ
ಬಯಲು ಧಾರವಾಡ ಬರಿ-ಬಯಲು ಸೀಮೆ ಆಗದಿರಲಿ ಎಂಬ ಅಳಲು ಅಷ್ಟೇ. ಏನಂತೀರಿ?]

B.R. Bhate, Dharwad. Dt: 01-04-2015

Monday, 30 March 2015

ಬೇಡಿ -ಪಡೆವುದ-ಕಿಂತ ,ದುಡಿದು ಪಡೆವುದು ಲೇಸು! ಓದಿ-ತಿಳಿ,ಮಾಡಿ ಕಲಿ, ಫಲಿತವದು ನೋಡಿ-ನಲಿ!

ಬೇಡಿ -ಪಡೆವುದ-ಕಿಂತ ,ದುಡಿದು ಪಡೆವುದು ಲೇಸು! ಓದಿ-ತಿಳಿ,ಮಾಡಿ ಕಲಿ, ಫಲಿತವದು ನೋಡಿ-ನಲಿ!
ಏಕ-ಮೇವಾ-ದ್ವಿತೀಯ ತ್ರೈರಾಷಿಕ-ಪಂಚ ರಾಷಿಕ; ಎರಡಕ್ಕೆ ಎಡವಟ್ಟು ಮೂರಕ್ಕೇ ಗೋವಿಂದ!
ಸುಲಭ ಪರಿ ವೆಂಕಟ-ರಮಣ ತಿಳಿಸುವೆ ಗುರುವೆಂದ; ಗಣಿತ ದ ತಗಣಿ ಕಡೆತ ಮಜವೆಂದ.
"ಇಷ್ಠ ಕಿಷ್ಟಾದರೆ; ನಿಮ್ಮಪ್ಪನ ಕಷ್ಟಕ್ಕೆಷ್ಟು"? ಕಡೆತ ಹೊಡೆ ಗುಣಿಸಿದರೆ; ಬರುವದುತ್ತರವೆಂದ! ||1||
ಶ್ರೀಕೃಷ್ಣ ಪರಮಾತ್ಮ ಹಿಡಿದ ಚಕ್ರದ ಬೆರಳು; ರಾಶಿ-ಒಂದಾದರೆ, ಮಡ್ಚಿಡಿದ ಚೌರಾಶಿ-;
"ಗೊತ್ತಾದ ಸಮ-ವ್ಯಸ್ಥ ಗಳು ಬರೆದು"; ಪರಿ-ಕಡೆತ ಹೊಡೆ ಗುಣಿಸಿದರೆ; ಬರುವದುತ್ತರ ವೆಂದ!
"ಗಾಂಪ-ಗುರುಗಳ ಮಹಿಮೆ", ತಿಳಿದ ಶಿಶ್ಯೋತ್ತಮನು; ಪಡೆದ ಶ್ರೇಯಾಂಕ ನೂರಕ್ಕೆ ನೂರು!||2||
ವಿಶ್ವ-ವಿದ್ಯಾಲಯದ ಹಣೆಪಟ್ಟಿ ಓದುವದು "ಅರಿವೇ-ಗುರು" ತಿಳಿಸುವದು ಓದಿ-ತಿಳಿ,ಮಾಡಿ ಕಲಿ-
ಫಲಿತವದು ನೋಡಿ-ನಲಿ "ಗುರುವಿನ ಗುಲಾಮ-ನಾಗುವತನಕ ...ಅಹುದು ತಿಳಿ-"ಬೋಧಗುರು"!
ಮನೆ-ಮೊದಲು ಪಾಠ-ಶಾಲೆ, ಜನನಿ-ತಾ-ಮೊದಲಗುರು; ಜೀವ-ಜವ್ವನ ತನಕ ಅನುಭವ "ಗುರು-ಶಿಷ್ಯರು"! ||3||
ಗೋ-ಮಾಳಿ ಕೆಲಸ-ದಲಿ, ಗೋವಳಿಗ ನಾಗುವದು; ಕುರಿ-ಕುರುಬ-ಕೃಷಿಕ-ಒಕ್ಕಲಿಗ; ಸಿಗುತನಕ-ಸಿಕ್ಕಲಗಾರ!
ಸೋನಾರ-ಶಿಂಪಿಗ, ನವ-ತುಕಡಿ ದಂಧೆಯದು; ನೋಡು ಮಾರವಾಡಿ; ಅದು ಅವರವರ-ಕಸುಬು!
ಸೀರೆಯಲಿ ಬಿಡು- ಕುಬುಸದಲಿ ಹಿಡಿವೆನುವ-ಪರಿ, ವ್ಯಾಪಾರ ; ಬೇಡಿ-ಪಡೆವುದ-ಕಿಂತ ದುಡಿದು ಪಡೆವುದು ಲೇಸು!||4||
B.R. Bhate, Dharwad. Dt:30-03-2015.

Saturday, 28 March 2015

ಯಾರಿಗೇ ಬೇಕೋ ಇದುಅವರ ತೂಕದ ಲೆಖ್ಖ?

ಯಾರಿಗೇ ಬೇಕೋ ಇದುಅವರ ತೂಕದ ಲೆಖ್ಖ?         
ಆಡುವರೇ ಆಡುವರು, ಕೇಳುಗರೇ ಕೇಳುವರು; ಉತ್ತರವು ಫಲಿಸದ ಪ್ರಶ್ನೆ-ಗುತ್ತರವು. 
ತಾ ಶೇಷ-ಪ್ರಶ್ನೆ, ಎನಿಸಿದರೆ ಮೌನವದು; ಯಾರಿಗೇ ಏನೇಷ್ಟು? ಇದು-ಅದು ಅವರಲೆಖ್ಖ. 
ಗಣತಿ ತಾ ಹೇಳುವದು, ಲೆಖ್ಖ-ಹಾಕುವ ಲೆಖ್ಖ; ಅಸಲಿಗದು ಬೇರೆ....................... 
ಕೊಡು-ಕೊಳ್ಳುವರಿಗೆ, ಎರಡು ಇಲ್ಲದ ರಾಸು; ತಗಲಿಕೊಳ್ಳದು ಬಡ್ಡಿ ಬರಿ ಯಕ್ಷ ಪ್ರಶ್ನೆ
ಹಾಗಾದರೆ ಇದು-ಕೇವಲ ಬರಿಯದೋ ಅವರಲೆಖ್ಖ;
ಗಣತಿ ತಾ ಹೇಳುವದು; ಎಲೆಗೆಲುವೇ ನೀ ಹೇಳು?
ಯಾರಿಗೇ ಬೇಕೋ ಇದುಅವರ ತೂಕದ ಲೆಖ್ಖ?
P.S: ಕ್ಷಮೆ ಇರಲಿ ಇದು ಕೇವಲ ಜನ-ಸಾಮಾನ್ಯರ ಹರಟೆ-ಮಾತು
ವಿನಃ ಯಾರಿಗೂ ಸಂಬಂಧಿಸಿದುದಲ್ಲ.
B.R. Bhate, Dharwad. Dt:28-03-2015               

Thursday, 26 March 2015

ಕುಛ-ಖೋಯ-ಪಾಯಾ, ಚಂದ್ರ-ಕರಗುತಲಿದ್ದ; ಕಣ್ಬಿಡಲು-ಮೂಡಣದಿ ಭಾಸ್ಕರ-ನಗುತಲಿದ್ದ!

ಕುಛ-ಖೋಯ-ಪಾಯಾ, ಚಂದ್ರ-ಕರಗುತಲಿದ್ದ; ಕಣ್ಬಿಡಲು-ಮೂಡಣದಿ ಭಾಸ್ಕರ-ನಗುತಲಿದ್ದ!
                       
ನಿದ್ದೆ ಬಾರದೆ ಬೆನ್ನ-ಬದಲಿಸುತಿದ್ದೆ, ಈಕಡೆ-ಆಕಡೆಗೆ;  ಬೇಸಿಗೆಯ ಬಿಸಿಲ-ಧಗೆ ನೆಮ್ಮದಿ-ಸಿಗದೇ. 
ಬಾಯಾರಿಕೆಗೆ- ನೀರು ಕುಡಿದದ್ದೇ-ಕುಡಿದು; ಹೊಟ್ಟೆ-ಉಬ್ಬರಿಸಿದರು ತಾ-ಸಿಗದೆ-ಸಹನೇ,
ಸಾಲದಕೆ ಮೈ-ಕೆರೆತ, ಸೊಳ್ಳೆಗಳ-ಕಡಿತ; ಹಾರಿ-ಹೋಯಿತು-ನಿದ್ದೆ, ಬರಿಕಣ್ಣ-ತೂಕಡಿಕೆ. 

ಎಲ್ಲಿ-ಜಾರಿತು-ಮನಸು ಹಳೆ-ಕಳೆದ-ನೆನಪು; ಹಾಯಾಗಿ-ಕಳೆದನಾ ಚಿಕ್ಕಂದಿನಾ-ಬಾಳು
ಕೆರೆಯ ತಿಳಿ-ನೀರಿನಲಿ, ಸೊಂಟ-ಕಟ್ಟಿದ-ಬೆಂಡು; ತೇಲು-ಮುಳುಗಲಿ ಸೊಗಸು, ಈಜು-ಕಲೆತದ್ದು.
ಕರಿ-ಬಳಪ-ಹಲಗೆಯಲಿ, ಕನ್ನಡವ ಕಲಿತಿದ್ದು; ಅಕ್ಕ-ತಂಗಿಯ ಜ್ಯೋತೆಗೆ, ಆಟ-ಆಡಿದ್ದು. 

ಕಳೆದು-ಕನ್ನಡ ಸಾಲೆ ಖೋಕೋ-ಕಬಡ್ಡಿ; ಕೋಲಾಟ-ಲೆಝೀಮ್ಮು, ಬಗಾಟ-ಬುಗರಿ, ಆ-ಪ್ರಭಾತ-ಫೇರಿ,
ಮಜ-ಮಾಧ್ಯಮಿಕ ಸಾಲೆ, ಹಿಂದೀ-ಸಂಸ್ಕೃತ ಜ್ಯೋತೆಗೆ; ಆಂಗ್ರೇಜೀ-ಮಾಧ್ಯಮವು, ಗರಿ-ಗೆದರಿದ-ಕನಸು.

ಚೆಸ್ಸು-ಕೆರಮ್ಮು ರಿಂಗು-ಟೆನ್ನಿಸ್ಸು, ಇಲ್ಲದಿದ್ದರೇ ಏನು? ಹಾಕೀ-ಕ್ರಿಕೆಟ್ಟು ಕ್ರೇಜು-ಹಾಡಿನಾ-ಬಂಡಿ; ಆ-ಆಕಾಶವಾಣಿ.
ಇವ-ಕಾಲು ಆವಾ-ಮುರಿದ, ಅವ-ತಲೆಗೆ ಇವ-ಜಡಿದ; ನಾಟಕ-ಮಿಮಿಕ್ರಿ, ನೋಡಿ-ತಿಳಿ ಮಾಡಿ-ಕಲಿ; ಪ್ರಯೋಗ-ಶಾಲೆ. 

ಮುಂದೆ-ಕಂದರ ದಲ್ಲಿ ಭೋರೆಂದು ಹಾರೇ; ಪೀಯು-ಪಾವು ಕಟ್ಟಿ ಮುಂದೇ-ಸಾಗದೆ-ಏರಿ; ಎತ್ತು-ಎರೆ-ಕೋಣ-ಕೆರೆ.
ಓದು-ತಾ ಒಕ್ಕಾಲು ಬುದ್ಧಿ-ಮುಕ್ಕಾಲು; ಜ್ಯಾತಿ-ಪಾತಿ-ಗ್ರೇಸು, ಝಣ-ಝಣ-ಕಾಂಚಾಣ; ಎದ್ದವ-ಗೆದ್ದ; ಬಿದ್ದವ-ಬಿದ್ದ.
ಹುಚ್ಚು-ಮನಸಿನ ಹಲವು ನೂರಾರು-ಕನಸುಗಳು; ಆಶೆ-ಚಿಗುರಿನ-ಬೇರು, ಮೇಘ-ಉಯ್ಯಾಲೆ. 

ಸೆಖೆ ತಡೆಯದೆ ಛತ್ತು(ಮಾಳಿಗೆ) ಮೇಲೆದ್ದು ಬಂದೆ; ನಗುತಿದ್ದ ಹುಣ್ಣಿಮೆ ಚಂದಿರನ ಕಂಡೆ.
ಚೆಲಿಸುತಿಹ ಮೋಡದೊಳು, ತಾರೆಗಳ ಅಡಗು; ತಿಂಗಳ-ಬೆಳಕಿನಲಿ ಎನೆಲ್ಲ-ಸೊಗಸು.
ಕುಛ-ಖೋಯ-ಪಾಯಾ, ಚಂದ್ರ-ಕರಗುತಲಿದ್ದ; ಕಣ್ಬಿಡಲು-ಮೂಡಣದಿ ಭಾಸ್ಕರ-ನಗುತಲಿದ್ದ!

B.R. Bhate, Dharwad. Dt:27-03-2015

Tuesday, 24 March 2015

ಧಾರವಾಡದ ತಂಪು ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು ಕಣ್ಣು-ಮಿಟಿಸುತಲಿದ್ದೆ!

ಧಾರವಾಡದ ತಂಪು ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು ಕಣ್ಣು-ಮಿಟಿಸುತಲಿದ್ದೆ!
ಆ ಒಂದು ಬದುಕ ದಿನ, ನೆನೆದೆ ನಾನದನಿಂದು; ಬದುಕ ಬದುಕಿನ ಪಯಣ, ಪಥಿಕ-ಧೃವತಾರೆ-ಬಿಂದು.
ಮೂರು-ದಶಕದ ಹಾದಿ, ಮೂರು ದಶಕದ ಮೇಲೆ; ಏರಿಳಿವಿನ ಹಾದಿ, ಬರಿ ಕಲ್ಲು-ಮುಳ್ಳು.
ಬದುಕಿಗಾರ್ ನಾಯಕರೋ? ಬೆಲ್ಲ-ಕಹಿ, ಬೇವು-ಸಿಹಿ; ಪರಿ ಕಳೆದ ಬಾಳು, ಜೀವ ಕಂಡುದು-ಮುಗಿಲು. ||1||
ಮರೆ-ಮರೆತೇ ನೆನೆ-ನೆನೆದೇ, ಚಿಕ್ಕಂದಿನ ಬಾಳು ; ಹಾಲು-ಸವಿ ಜೇನು, ಕಥೆ ಪುಣ್ಯ-ಕೋಟಿ ಬರಿ-ಕಾಮಧೇನೇನು?
ಹಿಡಿದ-ಪರಿ-ಬಿಡದ ಛಲ, ಬದುಕ ಬೇಕೆಂಬವಗೆ; ಮಾಯಾ-ಮೃಗದ ಹಾದಿ, ಪ್ರಗತಿ ತೋರುವದು.
ಹೊತ್ತು-ಹೊತ್ತಿಗೆ ತಕ್ಕ ಕುಂಬಾರ, ಕಮ್ಮಾರ-ಸೋನಾರ; ಪೆಟ್ಟುಗಳು-ಪಟ್ಟಾಗಿ-ಬೀಳದಿರೆ; ಸತ್ಯ ಎಡವಟ್ಟು. ||2||
ಆ ಒಂದು ಬದುಕ ದಿನ, ನೆನೆದೆ ನಾನದನಿಂದು; ಬದುಕ ಬದುಕಿನ ಪಯಣ, ಪಥಿಕ ಧ್ರುವ-ತಾರೆ ಬಿಂದು.
ಆ ಒಂದು ದಿನ ಸೀತಾ$$ನದಿಯ-ತೀರ ಬಾಳಕುದುರು ಊರು, ಉಡುಪಿ-ಕುಂದಾಪುರದ ಮಧ್ಯದ-ತೆಕ್ಕೆ; ಹಂಗಾರ ಕಟ್ಟೆ.
ಕರಾವಳಿಯ-ತೀರ, ವಿಪರೀತ ಸೆಖೆ-ಹಗಲು; ಬಿಸಲಿಳಿದರೂ ಸಂಜೆ, ನದಿ-ಬಿಸಿಗಾಳಿ ತೆಕ್ಕೆ-ಧಕ್ಕೆ ಮೇಲೆ.||3||
ಹಳೆದಾದ ಮನೆ ಅಲ್ಲಿ, ಸುಂದರ ತೀರದೊಳು; ಕಿಟಕಿ-ಬಾಗಿಲ ನೇರ ತೆರೆ ನೋಡುತಿದ್ದೆ, ಬದುಕ ಪಡೆದಿದ್ದೆ.
ಧಾರವಾಡದ ತಂಪು, ನೆನೆದ ಮನದೊಳು ಕಂಪು; ಕಿಟಕಿ ಬಾಗಿಲು ತೆರೆದು, ಕಣ್ಣು-ಮಿಟಿಸುತಲಿದ್ದೆ!
ನಿದ್ದೆ-ಜಂಪದು ಬರಲು, ಜಾರಿದ್ದೆ ನಿದ್ದೆಯೊಳು; ಏನು ಹೇಳಲಿ ಕನಸು, ಹದಿ-ಹರೆಯದ ವಯಸು.||4||
ಕ್ಷಣಿಕ ಮುಚ್ಚಿದ ಕಣ್ಣು, ಸಂಜೆ-ಕಳಚಿತ್ತು ರಾತ್ರೆ; ತಿಂಗಳ ಬೆಳಕಿನೊಳು, ಬಾಂದಳದ ಕನಸು.
ಏನು ಹೇಳಲಿ ಕನಸು, ಹದಿ-ಹರೆಯದ ವಯಸು; ತಿಂಗಳ ಬೆಳಕಿನೊಳು, ಬಾಂದಳದ ಥಳಕು.
ಸಂಜೆ ಸಂಪದ ತಿರುಗಿ, ಕತ್ತಲದ ಕರಿ ರಾತ್ರಿ; ತಗಲು-ತಗಲಿಸೆ ಕಾಣೆ, ಮುಂಜಾನೆ-ಮುಸುಕು. ||5||
ನಬೀ-ಸಾಬನ ಕೋಳಿ ಅರಚಲದು ಕೊಕ್ಕೋ ; ಕಣ್ಬಿಡುತ ಹಸಿವಂತು, ಲೋ ಅವಲಕ್ಕಿ ಮುಕ್ಕೋ !
ಮಧು-ಮಧುರ ಅತೀ ಮಧುರ, ಹಾಯಾದ ಆ-ಸಂಜೆ ; ಮೀಸೆ ಚಿಗುರಲಿ ನಕ್ಕ, ಕನ್ನಡಿ ಮುಂದೆ.
ಅಳಿದುಳಿದ ಅಂಕ, ಪರದೆ-ಜಾರಿದ-ಮೇಲೂ; ಮುಗಿಯದ ಆ ಕಥೆಯು, ಬರಿ ನೆನಪು ಇಂದು.||6||
B.R. Bhate, Dharwad. Dt:24-03-2015

Sunday, 22 March 2015

ಏಕ-ತಾರಿಯ ಭಾನ ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ!

ಏಕ-ತಾರಿಯ ಭಾನ ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ!
ಬಲಗೈನ ತಮ್ಬೂರಿ, ತಂತಿ-ಯದನಾ-ಮೀಟಿ; ಎಡಗೈ ಬೆರಳೊಳ-ಕಾವಳಿಗಿ ತಾಳ-ವ ಕುಟ್ಟಿ;
ಧ್ಯಾನ-ಮುದ್ರೆಯ ನಾಮ ಕಣ್ಣು ತಾ ಸ್ಮರಿಸುತಿರೆ; ಅಂಥ-ಕರುಳಿನ ರಾಗ ಭಾವ-ಧಾರೆಯ ತುಂಬಿ.
ಏಕ-ತಾರಿಯ ಭಾನ, ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ-ಹಾಡುತಿರೆ, ಕೇಳುಗರೇ ಧನ್ಯ! ||1||
ಗಂಟ-ಲುಲಿಯಲು ಸ್ವರವು, ಅಲಾಪಿಸುತಿರಲು; ನಾದ-ಲೋಲನ ಮುರಲಿ, ಕಂಠ ಊದಿರಲು.
ಉದಯ-ರಾಗವು ಮಂದ, ಸ್ಥಾಯಿ ಪಂಚಮ-ಸ್ಥಬ್ಧ; ಅರುಣೋದಯ ಲಯವು, ಸಂಜೆ ಸಂಧ್ಯಾ-ರಾಗ.
ಮಧು-ಮಧುರ ಅತಿಮಧುರ, ಕಾಫಿ-ಮಿಶ್ರ ಪ್ರಿಯರೇ; ಹಸಿವು-ನೀರಡಿಕೆ-ಮನ, ಎಲ್ಲವನ ಮರೆಸುವವು||2||
ಕನ್ನಡದ-ಕುಲಪುತ್ರ ಕನಕ-ಪುರುಂಧರ-ದಾಸ; ಕಾಗಿನೆಲೆ-ಕೇಶವ ವಿಜಯ-ವಿಠಲನೇ-ನೆನೆವ ಉಡುಪಿ-ಶ್ರೀ ಕೃಷ್ಣ.
ಉತ್ತರ-ಕನ್ನಡ(ಧಾರಾನಗರಿಯ)ಮಹಿಮೆ; ದಕ್ಷಿಣ-ಕನ್ನಡ(ಭಾರ್ಗವ-ರಾಮನ)ಗಮಕ ಎತ್ತರಕೆ ಪಟ-ಪಟ ಶ್ರೀ-ಕೃಷ್ಣ-ಧ್ವಜವ.
ತ್ಯಾಗರಾಜ-ಗುರುಮಧ್ವ (ಗುರು-ಶಿಷ್ಯ) ವಾದ-ಸಂವಾದದೊಳು; ಉಗ್ಗಡಿಸಿದವು ಹರಿಕಥೆ-ಕೀರ್ತನಗಳು.||3||
ಸರಳ-ಕನ್ನಡದಲ್ಲಿ ತ್ರಿಪದಿ-ಚೌಪದಿಗಳಲಿ; ಏಕತಾರಿಯ ಯೋಗಿ/ಭೋಗಿ ಕಾಣದ-ನಿತ್ಯ-ಜ್ಯೋಗಿ.
ಧರ್ಮ$ವರದೆ ತುಂಗಾ$ಭದ್ರೆ, ನೇತ್ರಾವತಿ$ಶರಾವತಿ; ಕಾಳಿ$ಪಾಂಡರೀ ಕಾವೇರಿ; ಮಲ-ಪ್ರಭೆ ಮರೆಯದೇ ಶಾಲ್ಮಲೆ$ಕೃಷ್ಣೆ.
ಸಾಲೆಲ್ಲ-ತುಂಬಿದವು, ಭಾವನಾ-ಮನದಲ್ಲಿ(ಸಾಗರ-ಸಂಗಮ ದಲ್ಲಿ); ಮಲೆ-ಗಡಿ-ಬೆಳವದಲ್ಲಿ ಧನ್ಯ-ಕನ್ನಡ-ನಾಡು.||4|
ಹರಿದಾಸರ-ಭಜನೆ ಲಾಲಿ-ಗೀಗಿ ಪದವು; ಲಾವಣಿ-ಸುರ-ಸಂಗಮ ಸರಳ ಹಾಡು. ಪುಕ್ಕಟೆ-ಹೇಳುವನು, ಅವ-ಜೋಗೀ-ಕೇಳು
ಮಧು-ಮಧುರ ಅತಿಮಧುರ, ಕಾಫಿ-ಮಿಶ್ರ ಪ್ರಿಯರೇ; ಹಸಿವು-ನೀರಡಿಕೆ-ಮನ, ಎಲ್ಲವನ ಮರೆಸುವವು.
ಏಕ-ತಾರಿಯ ಭಾನ, ಸ್ವರ-ರಾಗ-ಲಯ ದೊಳಗೆ; ಜ್ಯೋಗಿ ತಾ ಹಾಡುತಿರೆ, ಕೇಳುಗರೇ ಧನ್ಯ! ||5||
B.R. Bhate, Dharwad. Dt:22-03-2015

Tuesday, 10 February 2015

'ಕಪ್ಪೆ-ಮರಿ ಗೂಳಿ ಕಂಡಿತು' ನೋಡು ಅದರ ಕಥೆ ಮಗು-ನೀ-ಕೇಳು [ बेडकीच्या पिल्लांन बैल पाहिला ದಿಂದ ಅನುವಾದಿತ ಸಮರ್ಪಣೆ ]


'ಕಪ್ಪೆ-ಮರಿ ಗೂಳಿ ಕಂಡಿತು' ನೋಡು ಅದರ ಕಥೆ ಮಗು-ನೀ-ಕೇಳು
[ बेडकीच्या पिल्लांन बैल पाहिला ದಿಂದ ಅನುವಾದಿತ ಸಮರ್ಪಣೆ ]
ಮಂಡ-ಕಪ್ಪೆ ನಸುಕಿನೊಳಗ ಗೂಳೀ-ಕಂಡಿತ್ತ ಹೌದ?
ಗೂಳಿಯ-ಕಂಡಿತ್ತ, ನಸುಕೊಳು ಗೂಳೀ-ಕಂಡಿತ್ತ.
ಹಂಬೋ-ಹಂಬೋ ಅದರ-ಗುಟುರಿಗೆ,
ಜಿಗಿದ್ಹಾರೀ-ಬಿತ್ತ. ನಸುಕೊಳು ಗೂಳೀ-ಕಂಡಿತ್ತ. || 1 ||
ಶ್ಯಾನೆ-ಗಾತ್ರದ ಗುಟರುವ-ಗೂಳೀ, ಭಾರೀ-ಗಾತ್ರದ ಗೂಳಿಡೋ-ಖೋಡೀ
ಕೈಕಾಲ್-ನಡಗಿ ಕಣ್ಣ-ಕಟ್ಟಿ, ಹೊಂಡಕೆ-ಧುಮಿಕಿತ್ತ, ಧೊಪ್ಪನೆ-ತಳವನು ಸೇರಿತ್ತ
ಎಗರಿ-ಮಾರಿಗೆ ಡೊರಕ್-ಹಾರೀ ಬಿಲವನು-ಸೇರಿತ್ತ್, ಹೆದರಿ-ಥರ-ಥರ ಗೊಂಡಿತ್ತ
ಗೂಳಿಯ-ಕಂಡಿತ್ತ, ನಸುಕೊಳು ಗೂಳೀ-ಕಂಡಿತ್ತ. || 2 ||
ಧಾವಿಸಿ-ಧಾವಿಸಿ ತಾಯಿ-ಕಪ್ಪೆಯ ತೆಕ್ಕೆಗೆ-ಬಿದ್ದಿತ್ತ ಕಪ್ಪೆ-ಬಳಗವ-ಕರೆದಿತ್ತ
ಮಂಡ-ಕಪ್ಪೆ ನಸುಕಿನೊಳಗ ಗೂಳೀ-ಕಂಡಿತ್ತ ಹೌದ?
ಶ್ಯಾನೆ-ಗಾತ್ರದ ಗುಟರುವ-ಗೂಳೀ, ಭಾರೀ-ಗಾತ್ರದ ಗೂಳಿಡೋ-ಖೋಡೀ
ಗೂಳಿಯ-ಕಂಡಿತ್ತ, ನಸುಕೊಳು ಗೂಳೀ-ಕಂಡಿತ್ತ. ||3 ||
ನಕ್ಕಿತು ನೋಡಿ ಹಿರಿ-ಮಂಡೂಕೀ, ಮುಚ್ಚೇ-ಬಾಯಿ ಅಮ್ಮಾ-ತಾಯಿ
ಕಪ್ಪಿಗೆಂದಿತು ಡರಾವ್-ಡರಾವ್ ಹೆದರುವದೇಕೆ ಮಂಡೂಕರಾವ್
ಹೊಟ್ಟೆ ಅಗಲಿಸಿ ಕೈ-ಕಾಲ್ ಎತ್ತಿ ಹೇಳತೊಡಗಿತು
ಹೊಟ್ಟೆ ಅಗಲಿಸಿ ಕೈ-ಕಾಲ್ ಎತ್ತಿ, ಹೇಳತೊಡಗಿತು ಏನೆಲ್ಲಾ,
ಇಷ್ಟು ದೊಡ್ಡದೇ ಮೇಯುವ ಪ್ರಾಣಿ, ಹಿಂಗೆ ಡುಮ್ಮಕಲಾಗಿತ್ತು. ||4 ||
ಮಂಡುಕಿ ಎಂದಳು ಡರಾವ್-ಡರಾವ್, ಇಷ್ಟು ದೊಡ್ಡದೇ ನೋಡೀ-ರಾವ್,
ಸಾದ್ಯವೇ ಇಲ್ಲ-ಜಗವೆಲ್ಲಾ,ನನ್ನ ಮೀರೊರಾರಿಲ್ಲ. ಮುಂದಕೆ ಬಂದು ದೇಹ ಉಬ್ಬಿಸಿ,
ಮರಿಯನು ನೋಡಿ ಕಿಸರೀ-ಕೇಳಿತು, ದೊಡ್ಡದೇ ಇಷ್ಟಾ-ಇನ್ನೂ ದೊಡ್ದದಾ?
ಇಲ್ಲಾ ಅಮ್ಮಾ ಇನ್ನೂ ದೊಡ್ಡಾ. ಕೇಳುತ ಅಮ್ಮ ಇನ್ನೂ ಉಬ್ಬುತ, ಇನ್ನೂ ದೊಡ್ಡಾ. ||5 ||
ಕೇಳುತ ಅಂದಳು ಇಷ್ಟು ದೊಡ್ದದಾ? ಇಲಾ ಇಲ್ಲಾ ಇದಕೂ ದೊಡ್ಡಾ,
ಉಬ್ಬಿ-ಉಬ್ಬಿಸುತ ತಾಯಿ-ಅಂದಳು ಇಷ್ಟು ದೊಡ್ದದಾ? ಇಷ್ಟು ದೊಡ್ದದಾ?
ಉಬ್ಬಿಸಿ-ಉಬ್ಬಿಸಿ ಊದಿದ-ಹೊಟ್ಟೆ, ತಡೆಯಲಾಗದೇ ಹೋಯಿತು-ವಡೆದು,
ಕಥೆಯಲ್ಲಾತು ಎಡವಟ್ಟು ಆಗ-ಹೋಗದ ಪಡಿ-ಪಾಟು, ಮಕ್ಕಳೇ ತಿಳಿಯಿರಿ ಹಿತಗೊಟ್ಟು || 6 ||
ತಾಕತ್ತಿಲ್ಲದ-ಪೊಳ್ಳು-ಯೋಗ್ಯತೆ, ಮಾಡಲು ಹೋಗಿ ಸರಿ-ಸಾಟಿ, ಜೀವತೆತ್ತಳು ಮಂಡಕ್ಕಿ
ಹಠ-ಜೀವನ ಗಂಡಾಗುಂಡಿ ಅದಕೇ ಬಡ್ಹಾಯಿ ಕೊಚ್ಚದಿರಿ, ನಿಜವೀ ಸತ್ಯ ವನು ಕೇಳಿ!
ಮಂಡ-ಕಪ್ಪೆ ನಸುಕಿನೊಳಗ ಗೂಳೀ-ಕಂಡಿತ್ತ ಹೌದ? || 7 ||
B.R. Bhate at Slough UK. Dt:12-09-2014

ಹರಕೆ-ತಿರ್ಸೋ ಅಪ್ಪನ-ಆಸೆ; ಪರಿಕ್ಷ್ಯಾಗ, rank ಹೊಡ-ದಾವು!

ಹರಕೆ-ತಿರ್ಸೋ ಅಪ್ಪನ-ಆಸೆ; ಪರಿಕ್ಷ್ಯಾಗ, rank ಹೊಡ-ದಾವು!

ಗಡ್ಡಾ-ದಾಡೀ-ಬಿಟ್ಟುಕೊಂಡು, ಕೊಡೋ-ದೇನಪ್ಪ; ಹೊತ್ತು-ಹೊತ್ತಿಗೆ ಸಾತೇನ-ಹಳ್ಳಿ-ಸಾಕಾತೇನಪ್ಪಾ
ಮುಂಜಾನಿಂದ ಸಂಜಿ-ಮಟ, ಮೈಮೂಳೇ-ವಾರೆವ್ಹ; ಮಟ್ಟ-ಕಡೆದು ಹೆಂಟೀ-ಹೊತ್ತು, ಸೊಂಟಾ-ಹಿಡಿದಂವ
ರಂಟೀ-ಕುಂಟೀ-ಕೊರಡು, ಬೇಸಾಯ-ದೂರಕ್ಕ; ಬಸ್ಕಿಹೊಡಿಯೊಂವಾ; ಜಾತ್ರಿಯೋಳ್ಗ ನಿಕಾಲೀ-ಕುಸ್ತಿ, ತಪ್ಪದ-ಆಡೊಂವಾ || 1 ||

ಹಳ್ಳಿ-ಹೈದ ಹರೆದಾಗ ವಿದ್ಯಾ ಕಲಿಯದಂವಾ; ಹರೇ-ತಿರುಗೀ ಪಡಿಪಾಟಲ; ಹೊತ್ತ ಕಳದಂವಾ
ತೋಳ್ಬಲಾ-ಇರೋಮಟ ಚಿಂತೀ-ಇಲ್ದಂವ ; ನನ್ಹಂಗ ನಮ್ಕಳು ಆಗಬಾರ್ದಂತೀಗ ಅಂತಾನ ಕಾಣಂವ್ವಾ
ಅಜ್ಜ ಅಂದಾ ತಲೀಲಿಗ-ಹೊಳೀತ; ಪೈಲವಾನ-ಪಾಪಣ್ಣ; ತಪ್ಪ್ ಮಾಡ್ದೆ ಅಡ್ಡ-ಬುದ್ಧಿ ಸರೀ-ಹಾದೀ-ಹಿಡಿದಂವಾ || 2 ||

ಹಂಗಂಥೇಳೀ$ಹನುಮಂತಪ್ಪಗ, ಹರಕೆ ಹೊತ್ತಂವಾ; ಅವ್ನ-ಮಹಿಮೇ-ಇರಬೇಕದ್ಕ; ಪುಣ್ಯಾ-ಮಾಡ್ಯಾನ
ಅಪ್ಪನ-ಹರಿಕೆ ಅವ್ವನ-ಪ್ರೀತಿ, ಮಕ್ಕಳು- ಶ್ಯಾಣ್ಯಾ ಹೊಂಟಾವು; ವಿದ್ಯೇದಾಗ ಎತ್ತಿದ ಕೈ; ಅಂಥಾ-ಗುರುಗಳು-ಸಿಕ್ಕಾರೂ;
ಹರಕೆ-ತಿರ್ಸೋ ಅಪ್ಪನ-ಆಸೆ; ಪರಿಕ್ಷ್ಯಾಗ, rank ಹೊಡ-ದಾವು ; ಉಬ್ಬಿದ ಅಪ್ಪಾ ಆಂಜನೇಯಗ, ಬಸ್ಕಿ-ಹೊಡೆದಾನು! ||3 ||

B.R. Bhate,Dharwad. Dt:22-01-2014

ಆ ಮಡಿಕೆ ಯೊಳಗೆ ಹಿಂಡಿದಾ ನಿನ್ನ ಹಾಲು; ಅತಿ ಸಿಹಿ ಎನಿಸುತಿದೇಕೋ ಈ ಮನಕೆ:

ಆ ಮಡಿಕೆ ಯೊಳಗೆ ಹಿಂಡಿದಾ ನಿನ್ನ ಹಾಲು; ಅತಿ ಸಿಹಿ ಎನಿಸುತಿದೇಕೋ ಈ ಮನಕೆ:
ಕೆನೆವಾಲಿಗಿಂತ ಮೆತ್ತನೆ ಆ ಮೊಲೆಗಳು; ಸುರುಬುರು-ಸುರುಬುರು ಧಾರೆಯ ಕರೆಯುವವು
ಕಿಣಿ-ಕಿಂಕಿಣಿ ಸ್ವರ-ಬಳೆ-ಗಳ-ಗೀತೆ; ಮನದ ಗೊಣಗ-ಜ್ಯೊತೆ-ಗಿಳಿದಿದೆ-ಕಾಣೆ? ||1 ||
ಅತಿ ಸಿಹಿ ಎನಿಸುತಿದೇಕೋ ಈ ಮನಕೆ; ಆಮಡಿಕೆ-ಯೊಳಗೆ ಹಿಂಡಿದಾ-ನಿನ್ನ-ಹಾಲು
ಅತಿ ಸಿಹಿ ಎನಿಸುತಿದೇಕೋ ಈ ಮನಕೆ ?ಆಮಡಿಕೆ-ಯೊಳಗೆ ಹಿಂಡಿದಾ-ನಿನ್ನ-ಹಾಲು ||2 ||
ಇಳಿ ಸಂಜೆಯ ಹೊತ್ತಿಳಿವಿನ ಮಹಿಳೆ ; ಎಡೆ -ತೊರೆ-ಹೊಲ, ಮಧ್ಯದೊಳಿರೋ-ಗುಡಿಸಲು
ಅವರ ದೇವಿ-ಧಾರೆಯನು ಕರೆಯುವಳು. ಆಮಡಿಕೆ-ಯೊಳಗೆ ಹಿಂಡಿದಾ-ನಿನ್ನ-ಹಾಲು ||3 ||
ಹಾಲೊಳು, ಸ್ವಪ್ನ-ಭೂಮಿ ಕಂಡುದು-ದೇಕೋ? ಅತಿ ಸಿಹಿ ಎನಿಸುತಿದೇಕೋ-ಈ-ಮನಕೆ
ಆ ಮಡಿಕೆ ಯೊಳಗೆ ಹಿಂಡಿದಾ ನಿನ್ನ ಹಾಲು; ಅತಿ ಸಿಹಿ ಎನಿಸುತಿದೇಕೋ ಈ ಮನಕೆ ||4 ||
ಈ ದೃಶ್ಯ-ಹಿಡಿದ ಎನ್ನ-ಕಣ್ಣುಗಳು; ಕಾಲೇಳೆ-ದೆಳೆ-ಯುವವು, ಮನಸೆನ್ನನು
ಮೋಡಿ ಮಾಡಿಹ-ಪರಿ ನನ್ನ ಮನದೊಳು; ಎಕದೇಕೋ ಹಾಲು ಸಿಹಿ ಮಾಡಿಹವು.
ಆ ಮಡಿಕೆ ಯೊಳಗೆ ಹಿಂಡಿದಾ ನಿನ್ನ ಹಾಲು! || 5 ||
[ते दूध तुझ्या त्या घटातले Poet: B.R. Tambe(1874-1941) Singer:Lata Mangeshkar]
B.R. Bhate, Dharwad. Dt:30-01-2015

Saturday, 15 November 2014

ಸಂಪತ್-ಶುಕ್ರವಾರ !


ಸಂಪತ್-ಶುಕ್ರವಾರ !
ಶ್ರಾವಣ ಮಾಸ ಶುಕ್ಲ-ಪಕ್ಷ ತುಂಬಿದ ಮನೆ-ಮನೆಯಲ್ಲಿ ಹಳ್ಳಿ ತುಂಬಾ ಹಬ್ಬದ ವಾತಾವರಣ. ಅಂದು ಸಂಪತ್-ಶುಕ್ರವಾರ. ಊರಲ್ಲಿನ ಪಾರಂಪರೀಕ ನಮ್ಮ ಮನೆಯಲ್ಲಿ ತಲ -ತಲಾಂತರಿಯಿಂದ ಸಂಪ್ರದಾಯ ಹಬ್ಬ-ಹರಿದಿನ ನಡೆಸಿಕೊಂಡು ಬಂದ ಮನೆತನ. ಹಬ್ಬದೂಟ ಮುಗಿಸಿ ತಾಂಬೂಲ ಹಾಕುತ್ತಾ ಅಜ್ಜಿ-ಯನ್ನು ಕಂಡು ಉಭಯ-ಕುಶಲ ಮಾತಾಡಿಸಿ "ರಂಗಕ್ಕಾ ಹಬ್ಬಾ ಭರ್ಜರೀ ಆತ್ರೀ ಹೋಗಿ ಬರ್ತೇವೆ" ಎನ್ನುವಂತೆಯೇ; ಅಜ್ಜಿ "ಶಾಂತಕ್ಕಾ, ಗೌರಕ್ಕಾ ಸಂಜೆ ಸಾರಂಗಿ ಕಾರ್ಯಕ್ರಮಕ್ಕ್ ತಪ್ಪದ ಬರ್ರಿ" ಎಂದು ಬಾಯ್ತುಂಬ ಹರಿಸಿ ಕಳಿಸಿದರು. ಅದೇನು ನೆನಪಾತೋ ಏನೋ ಮನ್ಸ್ನ್ಯಾಗ "ನೋಡ್ರೀ ಎಲ್ಲಾ ವಿಧಿ ಮಕ್ಕಳು ಚಾಚೂ ತಪ್ಪದ..., "ಬಿಕ್ಕಿದರು. ಆಗ ಮರಿ ಮಕ್ಕಳು ಅವ್ವಾ "ಅಜ್ಜೀ ಕಣ್ಣೀರ್ ಹಾಕಾಕ ಹತ್ಯಾಳ" ಅಕ್ಕಾ ಬಂದು ನೇವರಿಸಿದಾಗ ", "ಎನಿಲ್ಲೇಳು ಏನೋ ಧೂಳ ಕಣ್ಣಾಗ ಹಾರಿ ಬಿತ್ತ್" ಅಂತಾ ಸಮಜಾಯಿಶಿ ಕೊಟ್ಟು ಮಾತು ಮುಗಿಸಿದಳು.
ಶಾಲೆ ಮಕ್ಕಳಿಗೆ ಅಂದು ಹಬ್ಬದ ಸೂಟೀ ಬೇರೆ. ಹಿರಿಯರು ಅವರ ಕಾರ್ಯಕ್ರಮದಲ್ಲಿದ್ದರೆ ಮಕ್ಕಳು ಮಸ್ತಾಗಿ ಅವರವರ ಆಟ-ಪಾಠದಲ್ಲಿ ಮುಳಗಿದ್ದರು. ತಮ್ಮ ಕೀಟಲಿ ಕಿಟ್ಟ ಆಕ್ಕನ ಗೋಳು ಹೊಯ್ಯುತ್ತಾ "ಮಡಕೇರಿ ಪ್ಯಾಟ್ಯಾಗ ಈರ್-ಭದ್ರ ಜ್ಯಾತ್ರ್ಯಾ$" ಅಕ್ಕಾ ಯೇನ್ಕಡ್ಮಿಲ್ಲ್ದ "ಗಡ್ಡ-ಮೀಸಿ ಹಚ್ಚಿ-ಕೊಂಡು" ಎನ್ನುತ್ತಲೇ ಮಕ್ಕಳ ಆಟಕ್ಕ ಚಿಗುರಿದ ಕಳೆ-ಬಂದಿತ್ತು.
ಸಾಯಂಕಾಲ ದನ-ಕರ ಕೊಟ್ಟಿಗೆ ಸೇರಿದ್ವು. ಮಕ್ಕಳು ಕೈ-ಕಾಲು ಮುಖ ತೊಳಕೊಂಡು "ಸ್ವಾಮಿ ದೇವನೇ" ಅಂದದ್ದ 'ವಿಠಲ ನ ಭಜನೆ ಮನದೊಳ$$' ಮುಗಿಸಿದರು. ಅಂದು ವಾರದ ಶುಕ್ರವಾರ ಅಕ್ಕ ಮಂಗಳಾರತಿಯಲ್ಲಿ, "ಸುಮಂಗಲಾ ನಮನ ತುಲಾ..." ಹೇಳೋದ್ರಾಗ ಕಿಲಾಡಿ ಕಿಟ್ಟ ಪುಥಾಣೀ ಸಕ್ರೀ ತಪ್ಪ$ದ ತಾ ಅನ್ನ-ಬೇಕೇ ?!. ಪುಣ್ಯಾಕ್ಕ ಅಜ್ಜಿಗೆ ಕೇಳಿಸ್ಲಿಲ್ಲ; ಆದ್ರೂ ಅಜ್ಜಿ ಏ ಕಿಟ್ಯಾ ಎಲ್ಲರಿಗೂ ಅಕ್ಕಾ ನ ಜ್ಯೊತೆ ಸುದಾಮ(ಅವಲಕ್ಕಿ) ಪ್ರಸಾದ ಕೊಟ್ಟು ನಮಸ್ಕಾರ ಮಾಡು ಎಂದು ಹೇಳಿದಾಗ ಕಿಟ್ಟಿಗೆ ಸ್ವಾಮಿ ಕಾರ್ಯ ಸ್ವಕಾರ್ಯ ಆಧಂಗಾತು.
ಅವ್ವಾ ನಾನಣ್ಣ- ವಿಮಲಾಅಜ್ಜಿ ಬಂದಾರ ಅಂದಾಗ ಅವ್ವ ಅವರನ್ನು ಒಳಗೆ ಬರಲು ಹೇಳುತ್ತಿದ್ದಂತೆ ಕಿಟ್ಟ ದತ್ತಣ್ಣ ಬಂದಾರ ಅಂದಾಗ ಅಪ್ಪ ಬಾರೋ ಗುಳಗಿ ಒಳ್ಯಾ ವ್ಯಾಳ್ಯಾಕ್ ಬಂಧಂಘಾತು,ಇವತ್ತಿನ್ ಕಾರ್ಯಕ್ರಮದಾಗ ನಿಂದ 'ಘಟ-ವಾದ್ಯ*' ನಡೆಸ ಬೆಕ್-ಮತ್ತ್ -ನೋಡಪಾ! (*ಕೊಡದ ಮೇಲೆ ಬಾರಿಸುವ ಕಲೆ) ಅಕಾ ಶೇಷಣ್ಣ ಮುರಲೀ (ಕೊಳಲು) ಬ್ಯಾತನಾಳ ಹೆಗ್ಗಾ-ಭಟ್ಟ ತಬಲಾ ಹಂಗ ಮೀಸೀ ಹನಮ್ಯಾ ಹಾರ್ಮೊನಿಮ್ ತರತಾರ!
ತಬಲಾಜೀ ತಬಲಾಠಿಕ ಮಾಡ ತಿದ್ಧ್ಂಘ ಥೇಕಾ ತಾ$ತಾ ತಿಕ್ಕಿ$ಟ್$ತಾ ಅನಿತಿದ್ಧ್ಂಘ ಕೊಂಕಣಿಗರ ಬಾಬುರಾಯ$ಗ ಜೋಶ ಬಂದು ಏನೋ ಅಂದ ಬಿಟ್ಟ ಮಜಾ ಕೇಳ್ರೀ "ಹಾಂವ್ ತುಕ್ಕಾ ನಾಕ್ ಝಾಲ್ಯಾರ್ ತೀ ತುಕ್ ನಾಕ್ ಝಾಲ್ಯಾರ್ ತಿಕ್ಕಾ-ಮಕ್ಕಾ ದೀ "! ವೊವ್ಹ್ ಹೆಗ್ಗಾ-ಭಟ್ಟರ ತಬಲಾಕ್ ಕಳೆ ಬಂತು!
ಮೀಸೀ ಹನಮ್ಯಾನ ಹಾರ್ಮೊನಿಮ್ 'ನಿಮ್ಮಪ್ಪಾ- ಧಪ್ಪಾ ನಿಮ್ಮಮ್ಮ-ಸಣ್ಣಾ ನೀ-ಧನೀ$, ಸನಿ$, ಧಪಾ ಗಾಮ$ಪಾ$$ ಗಾಮಾ--ಗರೆ$ಸಾ$$' ವಾವ್ ಧನೀ ಸಾದ್ ಮಾಡೇ-ಬಿಟ್ಟ!
ಭರತ-ನಾಟ್ಯದ ಶಾರದಕ್ಕ ಸಾರಂಗಿ ಅಕ್ಕಾಗ ಗೆಜ್ಜಿ ಕಟ್ಟಿಸಿ ತ ಣ್-ಧೀರೆ ತೋಂ ತಂಣಾ ತ ಣ್-ಧೀರೆ ತೋಂ ನಿತ್ತಾಂಗ್-ಧಿಕ್-ಧಿಕ್ ಥೈ ಅಂತಾ ತಾಲಿಂ ನಡೆಸಿದಾಗ ಕಿಟ್ಯಾ ಸಂಣ್ ಕ ಒಂದು-ಬಿಲ್ಲಿ ತಕ್ಕ್-ಥೈ ಬಿಲ್ಲಿಗೇ ಮೂರು ಪೈ ಅಂದ ನಕ್ಕ್ ಸಾರಂಗಕ್ಕನ ತಾಲಿಂ ಮಸ್ತ್ ಆತು!
ಸಾರಂಗಿ ಕಾರ್ಯಕ್ರಮದಲ್ಲಿ 'ಕೃಷ್ಣಾ ನೀ ಬೇಗನೇ ಬಾರೋ ಮುಖವನೇ ತೋರೋ', 'ಆಡ ಪೋಗೊಣು ಬಾರೋ ರಂಗಾ ಕೂಡಿ ಯಮುನೆ ತೀರದಲ್ಲಿ''ಮಧುವನದಲಿ ಕುಣಿದಳೋ ಆ ರಾಧೇ.. ಮೋಹನನಾ ಮುರಲಿಯಾ ಸ್ವರ ಕೇಳೆ','ಕಾಲಿಗೆ ಗೆಜ್ಜೆಯ-ಕಟ್ಟಿ ಮೀರಾ ಕುಣಿದಳೋ', 'ಕಾಹೇ ಘಟಾಮೇ ಬಿಜಲೀ ಚಮಕೀ' ವಾಹ್ ವ್ಹಾ-ವಾಹ್ ವ್ಹಾ ಕರತಾಡನ ಗಳ ಸದ್ದಲ್ಲಿ ಕಣ್ಬಿಟ್ಟಾಗ ಮೂಡಲ ಮನೆ ಸೂರ್ಯ ಕೆಂಪಾಗೆದ್ದಿದ್ದ ಹಕ್ಕಿ-ಕಲರವ್ದಾಗ್ ಅವ್ವಾಅಂತಿದ್ಲು"ಯಾಕೋ ಪುಟ್ಯಾ ಇನ್ನೂ ಮಲಗ್ಯಾನ" ಎದ್ದು ನೋಡಿದ್ರ ಎಲ್ಲಿ ಅವ್ವಾ ಅಪ್ಪಾ ಅಕ್ಕಾ ಭಾವಾ ಅಣ್ಣಾ ಎಲ್ಲಾ ಮೋಡೀ ಮಾಡೀ ಹೋದ ತಲೆ ಮಾರು ಗಳು ಕಂಡ ಮನೆತನದ ಮನೆ ಬಿಕ್ಕೋ ಎನ್ನುತ್ತಾ ಕಾಲಾಯ ತಸ್ಮೈ ನಮಃ ಎನ್ನುವಂತೆ ಕಾಣು ಕಂಡ ಕಥೆ ನಾಲ್ಕು ಸಾಲು ಗೀಚಿದೆ ಇನ್ನೇನು ಮಾಡಲು ಸಾಧ್ಯ ಇಷ್ಟ ವಾದರೆ ಓದಿ ಮರೆತು ಬಿಡಿ.
B.R. Bhate, at Slough-U.K. Dt: 14-11-2014

Tuesday, 11 November 2014

ಶುಭೋದಯದ ಇಂದು ಬೆಳಗು ಹಾಡುತಿದೆ "ಈ(e-ಕನ್ನಡ)"!!!


ಶುಭೋದಯದ ಇಂದು ಬೆಳಗು ಹಾಡುತಿದೆ "(e-ಕನ್ನಡ)"!!!

"ಏಳೋ ಗೋವಿಂದಾ, ಏಳೋ ಗೋಪಾಲಾ!" ಅಂತ ಅಪ್ಪನ ಕಂಠ ಬಿರೀ-ತಿತ್ತಂದ್ರ, ಖಂಡಿತ-ಬೆಳಕಾಗಿರ್ತದ.. ಅಂತ ಅನ್ನೋದರ ವಳಗ 'ಎದ್ದು ನೋಡಿದ್ರ', ಮನ್ಯಾಗ-ಇನ್ನೂ-ಕತ್ತಲಿ ಬೆಳಕ-ಹೆಂಗ-ಕಾಣಬೇಕು, ಮತ್ತ ಮುಸುಕು-ಹಾಕೊದ್ರಾಗ; ದೆವ್ವನ-ಕೇರಿ-ಮುಲ್ಲಾನ ಮೈಕಿನ-ಧ್ವನಿ, "ಅಲ್ಲಾ ಹೋ ಅಕ್ಬರ್" ಅನ್ನುವದಕ್ಕೂ, ಛಪ್ಪರ-ಬಂದ್ ಬಾವಾ-ಸಾಬನ ಕೋಳಿ-ಹುಂಜ ಗಳು, 'ಕೊಕ್ಕ್-ಕೋ$ಕೋ'... ಆಕಾಶವಾಣಿ-ಆಗೋದ್ರಾಗ, ತುರಬೀಗುಡ್ಡ-ಮೂಡೀ-ಸ್ವಾಮಿಗಳ ಮಠದ 'ಝಾಗಟೇ-ಸದ್ದು', ಕ್ವಾಟಿ 'ದತ್ತಾತ್ರೇಯ-ಗುಡಿ' ದಿಂದ 'ಶಂಖನಾದ' ಕೇಳಿಸ್ತು ಅಂದ್ರ; ಕಕ್ಕಡಾರತೀಗೇ ಮಬ್ಬು-ಕತ್ತಲು ಸರಿದಿರೋದು ಗ್ಯಾರಂಟೀ. ಅನ್ನೋದ್ರಾಗ ನಿಲ್ಲದ-ಮುಲ್ಲಾನ-ಧನ್ಯಾಗ ಓಣ್ಯಾಗಿನ-ನಾಯಿ ಓ-ಎಂದು-ಊಳಿಡುವದು ಸಾಮಾನ್ಯ. ಗೌಳಿ-ಬಸ್ಯಾನ ಆಕಳು ಗಳು'ಅಂಬಾ' ಎನ್ನುವದಕ್ಕೂ; ಹಿತ್ತಳದಾಗಿನ ಬೆಣ್ಣಿ-ಸಂಗಪ್ಪನ ಎಮ್ಮೆ,'ಆಂಯ್' ... ನಿಲ್ಸೋದ್ರಾಗ; ಕುರುಬರ-ಬೀರಪ್ಪನ ದೊಡ್ದೀಂದ ಕುರಿಗಳ 'ಬ್ಯಾ$ಬ್ಯಾ'...
ಇವೆಲ್ಲಾ-ನಮ್ಮೂರಾಗಿನ 'ಆರ್ಕೇಸ್ಟ್ರಾ' ಆರಂಭ-ಆಗೋದ್ರಾಗ; ಅಗಸರ ಅಂದಾನೆಪ್ಪನ-ಕತ್ತೆಗೇ 'ಮಾಮೂಲಿ-ಶಿವಪ್ಪ' ಎದ್ದಾನೋ? ಇಲ್ಲಾ--ನೋಡಾಕ 'ಹಜರತ್' ಇಮಾಮ ನನ್ನೇ ಪ್ರಶ್ನಿಸುವಂತೆ "ಹಜರತ್ ಹಾಯ್$ ಕೀ-ನೈಕೀ?"... ಅನ್ನೋದ್ರಾಗ ಶಿವಪ್ಪನ- 'ಡೊಣ್ಣೆ-ಏಟು', ಸಿಕ್ಕತೋ-ಏನೋ! ಪಾಪ. ' ಹೀ$$ ಹೀ' ಎನ್ನುವ ಕುಡ್-ಖಾದೀರ ನ ಕುದರಿ ಸದ್ದು ಇಷ್ಟೆಲ್ಲಾ 'ಹಾಜ್ರೀ' ಕೊಟ್ಟಾಗ ನಸುಕೇನು, ಬೆಳ್ಳನ ಬೆಳಗೇ!
ಎದ್ದು ಹಾಸಿಗೆ-ಹಚ್ಚಡ ಮಡಚಿ; ಬಚ್ಚಲಿಗೆ ಹೋಗಿ ಹಲ್ಲುಜ್ಜಿ ಮುಖತೊಳಕೊಂಡು; ಫ್ರೆಶ್-ಆಗೀ, ದೇವರಿಗೆ ಕೈಮುಗಿತಿದ್ಧಂಗ: 'ಸಣ್ಣಕ್ಕ' "ಎಷ್ಟೊತ್ತಪಾ! ಏಳ್ಲಿಕ್ಕೆ!! ಮಾವಷಿ ಕರೆದದ್ದು ಕೇಳಿಸ್-ಲಿಲ್ಲೇನು?" ಬಾ-ಎಂದು ಮಣೆ ಹಾಕೀ; ಎದುರಿಗೆ ಬಿಸಿ-ಬಿಸಿ ಕಾಫೀ-ಕಪ್ಪು ಇಟ್ಟಳು. "ಇಲ್ಲ್ ಸಣ್ಣಕ್ಕಾ, ರಾತ್ರೀ ಕೆಲ್ಸ್ ಮುಗ್ಸಿ ಬರೋದಕ್ಕ ತಡಾ-ಆಗೀ ಮಲಗಿದ್ದೆ". "ಈಗ-ಲಗೂನ-ಹೋಗಬೇಕಾಗೀದ". ಅಂತ ಒಂದ್ ಸಣ್ಣ ಸುಳ್ಳು ಹೇಳಿ ಕಾಫೀ ಕುದೀತಿದ್ಧಂಗ ಆಕಾಶವಾಣಿ "ಬೆಳ್ಳನ ಬೆಳಗಾ ಆಯಿತು ... " ಕೇಳ್ತಿದ್ದ್ಂಘ ಪಡಸಾಲ್ಯಾಗ ಆರಾಮ ಖುರ್ಚಿ ಮ್ಯಾಗ ಕುಂತೆ.
ಹೊರಗ ಬಾಗಿಲದಾಗ ಸೂರ್ಯನ ಕಿರಣ ಪಸರಿಸಿತ್ತು. ಕೈಯಾಗ ವರ್ತಮಾನ ಪತ್ರ ಹಿಡಿತಿದ್ದ್ಂಘ ರಾರಾಜಿಸಿದ್ದು ಶುಭೋದಯ "ಕನ್ನಡ ರಾಜ್ಯದ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು "
ಇತ್ತ ತಂಗಿ, ಹಾರ್ಮೊನಿಮ್ ಹಿಡಿದು; ಸುಪ್ರಭಾತದ ಪದ " ಮೋದದಿ-ನಗಿಸುತಾ ಮಾತೆಯ-ಅರುಣಾ " ಹಾಡುತ್ತಿದ್ದಂತೆ ತಮ್ಮನ 'ಪ್ರಭಾತ್ ಭೇರಿ ತಾಲಿಮ್', "ತಾಯೇ ಬಾರೇ ಮೊಗವ ತೋರೆ ಕನ್ನಡಿಗರ ಮಾತೆಯೇ ".
ಅಂದು ಧಾರವಾಡದ ಹುಯಿಲಗೋಳ ನಾರಾಯಣ ರಾಯರು " ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು " ಗಾಗಿ ಗರ್ಜಿಸಿದ್ದರು.
ಇಂದು ಬದುಕಾಗಲೀ ಕನ್ನಡ ಎನ್ನುವ ಅನುಷ್ಠಾನ ಚಿಂತನೆ ನಡೆದಿದೆ. ನಾಡು-ಕನ್ನಡ ನುಡಿಯು-ಕನ್ನಡ ಮನೆ-ಮನ-ಜನ ದನಿಯು ಕೂಡ ಹಾಡುತಿದೆ "(e-ಕನ್ನಡ)"!!!
B.R. Bhate, at Slough-UK. Dt:01-11-2014

Tuesday, 30 September 2014

ಹೀಗೊಂದು Uk-ಸಫಾರಿ-ಪಾರ್ಕು!'ಲೌಲಿ-ಲಾಂಗ್-ಲೀಟ್ ಮಂಗ್ಯಾನ ಕಾಡು'!.


ಹೀಗೊಂದು Uk-ಸಫಾರಿ-ಪಾರ್ಕು!'ಲೌಲಿ-ಲಾಂಗ್-ಲೀಟ್ ಮಂಗ್ಯಾನ ಕಾಡು'!.
(ನಮ್ಮೂರ ಬೆಟ್ಟದ-ಮಂಗ್ಯಾಕಥಿ-ಹ್ಯಾಂಗ್-ಐತಿ!)
ವಲಯ ಪ್ರವೇಶಿಸುವ ಮೊದಲು ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ರಾರಾಜಿಸಿದ ಮಾರ್ಗದರ್ಶಿ ಕೋಲು-ಫಲಕಗಳು ಪ್ರವಾಸಿಕರ ಗಮನ ತಮ್ಮತ್ತ ಸೆಳೆಯುತ್ತವೆ.ಅವುಗಳನ್ನು ಒಂದೊಂದಾಗಿ ಓದುತ್ತ ಹೋದಂತೆ ವಿಕ್ಷಕರಿಗೆ ಎಚ್ಚರಿಕೆ ಗಂಟೆ ಯಾಗ ಬೇಕು. ಕೆಂಪು-ಮಾರಿ-ಮಂಗಗಳ ಹಾರು/ನೆಗೆತ ತುಂಟಾಟ!'ಈ ಉಸಾಬರಿ ನಿಮಗೆ ಬೇಡ ವಾದರೆ ಸರಿ ಕೈಮರ-ತೋರಿಸುವ ಬದಿ ದಾರಿ ಹಿಡಿದು ನಿವಾಂತ ನೆಮ್ಮದಿ ದಾರಿ-ಹಿಡೀರಿ. ಆದರೆ, ಅದು ಹಾಗೆ-ಆಗುವದಿಲ್ಲ, ಎಂಬುದು ಈ ನಿದರ್ಶನ ಮನವರಿಕೆ ಮಾಡಿ ಕೊಡುತ್ತದೆ. ಫಲಕಗಳು ಕಣ್ಣು ಪಟಲ ದೊಳಗೆ ಓದಿಸುತ್ತಾ ಸಾಗುತ್ತವೆ. ನೀವೇ ನೋಡಿ ಈ ಸೋಜಿಗವನ್ನು!!!.
ಕೋತಿಗಳಿವೆ ಜಾಗೃತೆ ! ಮೊಂದಾಗುವ ಹಾನಿಗಳಿಗೆ ನೀವೇ ಹೊಣೆ ! ಮುಂದಿನ ಫಲಕ ಮತ್ತೆ
ಕೊಟ್ಟಿತು. 'ಎಚ್ಚರಿಕೆ!' ಗಮನಿಸಿ:- ಇಲ್ಲಿಂದ ನೀವು ಕೋತಿ-ವಲಯಕ್ಕೆ ಪ್ರವೆಶಿಸಿದ್ದಿರಾ....! ಮತ್ತೆ ಅದೇ ಒದರು ಬೋರ್ಡು "ಮಂಗವಾಣಿ”: 'ಎಚ್ಚರಿಕೆ':- "ನೀವು ನನ್ನ ವನವಿಭಾಗ ಪ್ರವೆಶಿಸಿದ್ದೀರಾ! ನಮ್ಮ ಕಿಲಾಡಿಗಳ ಬಗ್ಗೆ ಹುಷಾರಾಗಿರಿ”. "ಅವರು ನಿಮ್ಮ ವಾಹನ ಮೇಲೆ ಹತ್ತಿ ಅದನ್ನು ಹಾನಿಯನ್ನುಂಟುಮಾಡಬಹುದು”. ಛೇ ಹೌದೇ!'ಪಾಪದ-ಮಂಗಗಳು'. 'ಅವೇನು-ಮಾಡಿಯಾವು'. 'ಹಳ್ಳಿ-ಬಿಟ್ರ-ನಮಗೆ ಅವು-ಪುನಃ-ಎಲ್ಲಿಸಿಗಬೇಕು?' “ಕಾರೊಳಗ-ಇದ್ದೇವೆ ಹೋಗಿ-ನೋಡೇ ಬಿಡೋಣ”!
ಕೈಮರದ-ಫಲಕ ದಿಟ್ಟವಾಗಿ-ಹೇಳುತ್ತದೆ, ಅವುಗಳ ಕಿಲಾಡಿ-ತುಂಟತೆ ಮೋಜು-ಮಸ್ತಿ ಮ್ಯಾಜಿಕ್ಕು ಮತ್ತೆ ನಮಗೆಲ್ಲಿ ಸಿಗಬೇಕು. -ಗಿಡಮಂಗ್ಯಾನ ಆಟ ಸರಿ ಕಂಡೇ-ಬಿಡೋದು. ಮಂಗನ ವಾಣಿ ನೋಡಿದಿರಾ!!! ಇದು ಮಂಗ ತಾಣ ಕ್ಕೆ ಬರಲು ಇಲ್ಲಿ ಬಲಗಡೆಗೆ ತಿರುಗೀ(ಸ್ವಲ್ಪ ನಮ್ಮ-ಮಜನೋಡಿ) ಆಗುವ ಹಾನಿಗೆ ನೀವೇ ಬಲಿ ಪಶು!!!
ಶಿರೋನಾಮೆ-ಶೀರ್ಷಿಕೆಯ ಎಚ್ಚರಿಕೆ ! ಆದರೆ ಲಕ್ಷಕ್ಕೆ-ತಾರದವರು ಕೊನೆಯಲ್ಲಿ ಕೆಲವೊಮ್ಮೆ ಅದಕ್ಕೆ ದುಬಾರಿ-ಬೆಲೆ ತೆರುತ್ತಾರೆ. ಪ್ರವಾಸಿಗರನ್ನು ಕಂಡ ಕೋತಿ ಹಿಂಡು ಕುಲ-ಕಸುಬು-ಕಿಲಾಡಿತನ ಸುರು-ಮಾಡುತ್ತವೆ ಒಹ್ ತಮಾಷೆ ಕೋತಿಗಳು ಕಾರನ್ನು-ಏರಿದವು. ಆಹಾ! ಎಂಥ ಅದ್ಭುತ ಜಂಪು! ಒಂದೆಡೆ ಚಳಿ-ಮಂಜು ತಟ-ತಟ ಮಳೆ-ಬಂತು-ಮಳೆ!
ಮಳೆ ಬೀಳುತ್ತಿರುವಾಗ ಕಾರ-ನೇರಿ ಕುಳಿತ-ಕೋತಿಗಳು ಮಳೆ-ಚಳಿಯಲ್ಲಿ ನಡುಗುತಿರುವ-ತಮ್ಮನ್ನು, ಕಾರೊಳಗೆ-ಅನುಮತಿಸಲು-ರೋದಿಸುತ್ತಿರುವಂತೆ ಮಾಡುತ್ತವೆ. ಅದೋ ಅಲ್ಲಾಡುತ್ತಿರುವ ಕಾರಿನ ವೈಪರು! ಅವುಗಳ ಕೆಂಗಣ್ಣಿಗೆ ಗುರಿಯಾಗುತ್ತವೆ.ಓಹೋ ಕುಪಿತ ಸಿಡುಕನ ಕೆಲಸ! ಅಯ್ಯ ಶಿವ್ನ ಲೇ ಹನಮ್ಯಾ, ತಗಳ್ಳಪ್ಪ ಹೇಳಿ-ಕೇಳಿ-ಮಂಗ್ಯಾ ಬಿಟ್ಟೀತ ಅದನ್ನ!
ಎಲಾ ಇವ್ನ ಹಿಡ್ಕೊಂಡು ಜಗ್ಯಾಡಿ ಕಿತ್ ಬಿಟ್ತಲ್ಲಲೇ ಹಾಳ್-ಮಂಗ್ಯಾ!ಹಾಳಾಗ್ಲಿ ಶಿವ್ನ ಗ್ಲಾಸ್ ಒಡ್ದು-ಒಳಾಕ ಬರ್ದಿದ್ರ ಸಾಕು! ತಮ್ಮಾ ಒಸಿ-ಗಾಡಿ ದೌಡು-ಬಿಡು, ಹಾಳಾದ್ದು ಬಡ್ಕೊಂಡೆ-ಬ್ಯಾಡ ಇವ್ಗಳ
ಸಹವಾಸ! ಆಹಾ! ವೈಪರ್ ಕಥೆ-ಮುಗಿತು.
ವಾಹ್! ಸೇನಾ-ದುರಂಧರರು ಕಾರಮೇಲೆ ಹೈಜಂಪ್ ಮಾಡೇ-ಬಿಟ್ವು, ಒಂದೇ ನೆಗೆತಕ್ಕೆ ಕಾರು ಹಿಗ್ಗಾಮುಗ್ಗು. ಒಟ್ಟಾರೆ ಕಾರಿನ ಬಂಪರ ಕಥೆನೂ$ಮುಗಿಸಿದವು, ಅಯ್ಯೋ ಎಲ್ಲಾ ಹಾಳು
ಮಾಡಿದೆ ಮರ್ಕಟಕ ಮೂರ್ಖ! ನೀನೋ ನಾನೋ ?!
ಫಲಕದ ಬರಹ ಮರುಗಿತು 'ಅಯ್ಯಾ ಹಣೆಬರಹವೇ'!
ಆದರ-ಕಾ$ಕಾ, ಅದು ಸಮ್ಯಾನ ಕಾರಿನ-ಕಥಿ ! ಮತ್ತ ನಮ್ದು-ಕಥಿ ಸಫಾರಿ ದಾಟಿ ಕಾರು-ನಿಲ್ಲಿಸಲಿಕ್ಕೆ
ಅವಕಾಶ ಸಿಕ್ಕಾಗ-ಗೊತ್ತಾಗೋದು ಆ ಯಂಕಪ್ಪಗ ಗೊತ್ತು ಅದರ ಕಥಿ! ಸೈ ಬಿಡು ಅವ ಮಾಡಿದಂಘ ಆಗಲಿ. ಎನೂ ಹಾನಿ ಆಗಿಲ್ಲವೇ! ಒಹ್ ನಿಜವೇ? ಅತ್ಯುತ್ತಮ ಕೆಲಸ ಮಾಡಿದ ಬಿಡು! ಸೊಗಸಾದ-ಕಿರಿಚು/ಭಯಂಕರ--ನೆಗೆತ! ಮಿಸ್ಟರ್ ಕಿಲಾಡಿ ಮರ-ಗೋತಿಗಳಿಂದ ಎಂಥಾ ಸುರಕ್ಷಿತ ಭದ್ರತೆ ಸಿಕ್ಕದ್ದು!ಮನಸ್-ಮಾಡಿದ್ರ್ ಮೀಸಿ-ಗುರು-ಬಸ್ಯಾನ್ ಕಥಿ ದೊಡ್ದದ-ಬಿಡು, ಈಗ ಬ್ಯಾಡ.
ನಿಜಕ್ಕೂಕಿರಿಚು-ಕುಚೇಷ್ಟೆ-ಕೋತಿಗಳ ಜ್ಯೊತೆ ಇದೊಂದು ನಮ್ಮ ಪಾಲಿಗೆ, ಲಾಂಗ್ ಲೆಟ್ಟಿ ನಲ್ಲಿ ಕಳೆದ ಸುಂದರ ದಿನ ಅವಿಸ್ಮರಣೀಯ ದಿನವೇ!
ಈ ಪಡಿಪಾಟಲಿನ್ಯಾಗ ಸಿಕ್ಕದು ಮುಗಿತು.. ಈಗ ಹೇಳಿ ಹುಚ್ಮಂಗ್ಯಾನ ಹಾವಳಿ ಕಾಡ್ನ್ಯಾಗ ಹೋದವರ ಪ್ರಶ್ನೆ ಇಲ್ಲಿ ನಿಜವಾದ ಮಂಗ್ಯಾ ಯಾರು?

B.R. Bhate at Slough UK. Dt:30-09-2014