Sunday 29 April 2012

ಮೇಘರಾಜನ ಫರ್ಮಾನು!!!

ವನಚರಿ ತೋಳ ನರಿ ಹದ್ದುಗಳು;
ಮಾಂಸ ತಿನ್ನುವ ಪ್ರಾಣಿಗಳು;
ವಿಚಾರ ವಿನಿಮಯ ಮಾಡಿದವು.
ಕೂಡಲು ಮಂಗವು ಕತ್ತೆಯ ಮೇಲೆ;
ಮೆರವಣಿಗೆಯನು ಮಾಡಿದವು; 
ಮೇಘ ರಾಜನ ಸಭೆಗವು ಬರಲು.
ತಮಗೆ ನ್ಯಾಯವ ಕೇಳಿದವು.
ಚಿತ್ತದಿ ಆಲಿಸಿ ಮೇಘ-ರಾಜನು;
ಹೊರಡಿಸುತ ಫರ್ಮಾನೊಂದು.
ನನಗೆ ಪ್ರಿಯ ಸಸ್ಸ್ಯಾ-ಹಾರ;
ನಿಮಗೆ ಪ್ರಿಯ ಮಾಂಸಾ-ಹಾರ.
ಹಸಿವಿಗೆ ಪ್ರಿಯವೇ-ಆಹಾರ.
ಮಿಗಿಲದಕೆ? ಬದುಕೇ?
ಕೊಡುವೆನು ನಿಮಗೆ;
ತಿನ್ನಲು ಪ್ರಾಣಿಗಳ
ಅಷ್ಟಕ್-ಕಷ್ಟೇ  
ಮಾಂಸಾ-ಹಾರ.
ತಪ್ಪದಿರಿ ಈ ಋಣ-ಭಾರ


 

Saturday 28 April 2012

ಹಾರುತಲಿದ್ದೆ ಹಕ್ಕಿಯ ತೆರದಲಿ

ಹಾರುತಲಿದ್ದೆ ಹಕ್ಕಿಯ ತೆರದಲಿ
ಕನಸಿನ ಲೋಕ ವಿಹಾರದಲಿ,
ಮನದಾಸೆಯ ಆ ಕನಸಿನಲಿ.
ಬೇಸಿಗೆ ಬಿಸಿಲ ಬೇಗೆಯಲಿ,
ಬೇವಿನ ಮರದ ತಂಪಿನಲಿ.
ಕರಿ ಬಿಳಿ ಮೋಡದ ಹನಿಗಳೊಡೆಯಲು;
ನಿದ್ದೆಯು ಹಾರಿತು ಭರದಲ್ಲಿ,

ನೆನಪಿನಂಗಳ ದೊಳಗೆ ಪ್ರಾಥಮಿಕ ಸಾಲೆ[part1]

ನೆನಪಿನಂಗಳ ದೊಳಗೆ ಕ್ಷಣಿಕ ಮುತ್ತೊಂದರಳಿ
ಬಾಳ ಚಿಗುರಿನ ಕೊನರು ಹೊರಹೊಮ್ಮಿತಲ್ಲಿ;
ಓದುಗರೇ ಹುದುಗಿಹುದು ನನ್ನ ಕಥೆ ಇಲ್ಲಿ. (೧)
ಬಾಲ-ಬಳಗದ ಬಾಳು ಹಾಲು-ಸವಿ-ಜೇನು,
ತೊದಲು ನುಡಿ ನಡೆ ಮಾಟ; ಚೆಂದ-ಮಾಮನ ಕಥೆಯು.
ಕಥೆ ಕೇಳಿದ ಮೇಲೆ ನಿದ್ದೆ ತಗಲುವದು. (೨)
ತುಂಟ ಹಟಮಾರಿತನ ಸಿಟ್ಟು ಸೆಡಕು;
ಬಡೆತ ಗದರಿಕೆಗಳಲಿ ಬಿಕ್ಕಳಿಸುತಲಿಹುದು;
ಮಾಯಾ ಮೋಹದ ಜಾಲ ಮುದವ ತುಂಬಿಹುದು.(೩)
ಸಾಲೆ ಹೋಗುವ ಪರಿಯು ಹಿರಿಯ ಬಾಲರು ಹೊರುವ
ಮರಕೋತಿಯ ಮಜವು,ತುಂಬಿಹುದು ನೆನಹು.(೪)
ಹೊಸ ಅಂಗಿ ಹೊಸ ಪಾಟಿ ಖಾಕಿ ಚಡ್ಡಿಯ ಧರಿಸಿ 
ಹಣಿಗೆ ನಾಮವ ನೆಳೆದು ತಲಿಗೆ ಟೊಪ್ಪಿಗೆ ಹಾಕಿ
ಹೊರಟೆ ಸಾಲೆಗೆ ಮಾಣಿ ಚಿಣ್ಣರ ಜೊತೆಯಲ್ಲಿ. (೫)
ದೇವಿ ಶಾರದೆ ಲಕುಮಿ ಧ್ಯಾನ-ಮನ ಮುಗಿಸಿ
ಅವರವರ ತರಗತಿಗೆ ಆ ಮಕ್ಕಳನು ಕಳಿಸಿ;
ಹರಸಿ ಗುರುಗಳು ಕಂಠ ಪಾಠ ಓಲೈಸಿ.(೬)
ಹಲಿಗೆ ಬಳಪದ ಬರಹ ಲೆಕ್ಕಣಿಕೆ ದೌತಿ,
ಅಂದಿನಂದಿನ ಪಾಠ ಮಾಡಲಾಗದೆ ಅಲ್ಲಿ,
ಚಿಮಣಿ ದೀಪದ ಕೆಳಗೆ ಆ ರಾತ್ರಿ ಸಾಲೆ. (೭)
ಗಾಂಧೀ ಹಾಕದ ಟೋಪಿ ಕಡ್ಡಾಯ ಹಾಕಿ,
ಹಲ್ಲುಗುರು ಮುಖ ಮಾಟ; ಮನೆಕೆಲಸ ನೋಡಿ,
ತಪ್ಪಿದವರನು ಸನ್ನೆ ; ತರಗತಿಯ ಹೊರ ಹಾಕಿ; (೮)
ಲೇಖ ಚೂಕ್ಕತೆ ನೋಡಿ,ಕಂಠ ಪಾಠದ ದತ್ತಿ,
ತಪ್ಪಿದರೆ ಚಳಿ ನಡುಕ ಚುಳಿಕಿ(ಬೆತ್ತ) ಬಾರಿಸೆ ಅಲ್ಲಿ.
ಕಲಿತೆ ವೀ ಪರಿ ಮುಲ್ಕಿ ಪಾಸಾದೆ ವಲ್ಲಿ.(೯)
ಆಟ ಪಾಠದ ಮಾಟ ಕಳೆದು ಬಯಲಾಟ 
ಎಲ್ಲ ಕಥೆಯದು ಬರಿ ಬಾಲ್ಯ ಹುಡುಗಾಟ.(೧೦)
ಪ್ರಾಥಮಿಕ ಸಾಲೆಯಲಿ ಮುಗಿಸಿ ಪಂದ್ಯಾಟ;
ಮುಂದಕಾದುದು ಎಲ್ಲ ಬರಿಯ ದೊಡ್ಡಾಟ.(೧೧)   
ಒತ್ತುಸಿರು ಬಿಟ್ಟುಸಿರು ನಾಗ-ಬೈರನ(ಸರಕಾರೀ) ಸಾಲೆ(೧೨)

  

   
  

ನೆನಪಿನಂಗಳದೊಳಗೆ ಮಾಧ್ಯಮಿಕ ಸಾಲೆ(ಹೈಸ್ಕೂಲು) [part2]

ಪ್ರಾಥಮಿಕ ಸಾಲೆ ಪ್ರಮಾಣ ಪತ್ರವ ಪಡೆದು,
 ಪಾಟಿ ಚೀಲ ಬಳಪ ಟೊಪಿಗೆ ತಿಮ್ಮಗೆ ಕೊಟ್ಟು.
ದಾಖಲಿಸೆ ಸುರುವಾಯ್ತು ನನ್ನ ಮಾಧ್ಯಮ ಸಾಲೆ.(೧)
ತಲೆಗೆ ತೈಲವ ಹಚ್ಚಿ,ಹಣಿಗೆ ಬೈತಲೆ ಹೊಡೆದು.
ಅಕ್ಕ ಕೊಟ್ಟ ಹೊಸ ಹೊಸ ಬಟ್ಟೆ ಉಡುಪು.
ಒಂದೆರಡೆ ನೋಡು!(೨)
ಲಂಡ ಚೊಣ್ಣದ ಜೊತೆಗೆ ಹಾಕೆ ಟೀ-ಶರ್ಟು
ಸೊಂಟ ಪಟ್ಟಿಗೆ ಹಾಕೆ ಚರ್ಮದ ಬೆಲ್ಟು;
ಅಪ್ಪ ಕೊಡಿಸಿದ ತೊಟ್ಟೆ,ಇಲಿಮೊತಿ ಚಪ್ಪಲ್ಲು.(೩)
ಝುಗ ಮಗ ದ ದಿರಿಸ್ತು ಬಿರಿಸಿತ್ತು ಕೆಲವರಲಿ;
ಉಂಗುರ ವಾಚು.ನೀ ಮಿಗಿಲೋ ನಾ ಮಿಗಿಲೋ;
ಕಿಲ ಕಿಲ ದ ನಗುವು.(೪)
ಬಾಲೆಯರು ಕಮಿಇಲ್ಲ ಲಂಗ ದಾವಣಿ ತೊಟ್ಟು
ಜಡೆಗೆ ಮಲ್ಲಿಗೆ ಮಾಲೆ ಮುಖ ತುಂಬಾ ನಗುವು.   
ಹುರುಪಲ್ಲಿ ಹೊರಟಿತ್ತು ಜಂಬೂಸವಾರಿ.(೫)
ಗಂಟೆ ಸೌದಾಗರನ ಗಣ ಗಣ ಗಂಟೆ.
ಸೂಚಿಸುತ ಕೂಡಿಸುತ ಕಳಿಸೆ ಹೊಸ ಕೋಣೆ (೬)
ಅದ್ಧ್ಯಾಪಕರ ಜೊತೆಗೆ ಪ್ರಾಧ್ಯಾಪಕರು ಬಂದು;
ಮಕ್ಕಳೆಲ್ಲರ ಪರಿಚಯ ವ ನೆವರಿಸೆ,
ಸುರುವೈತು ಅವರವರ ಕ್ಲಾಸು ರೂಮು (೭)
ಸುರ್ವೈತು ಅಲ್ಲಲ್ಲಿ ಅವರವರ ಭಾಷೆ ವೈವಿಧ್ಯಮವು;
ಮಾಧ್ಯಮಿಕ ಮಾಧ್ಯಮದ ಭಾವ ಗೀತೆಯ ಸೊಗಸು.(೮)
ನಾಕು ಭಾಷೆಯ ತಿಗಡು ಕಲಿಯ ಲಾಗದೆ ಕಲಿಯೇ
ಹಿಂದಿ ಯಲಿ ಹಿಂದೆ ಕನ್ನಡದಿ ಮುಂದೆ.(೯)
ಸಂಸ್ಕೃತಿಯ ಸಂಸ್ಕ್ರುತ ವು ಅರ್ಧ-ಮರ್ಧ;
ಮತ್ತೆ ಕಲಿಯಲೇ ಬೇಕಲ್ಲ; ಆಂಗ್ರೆಜಿನಲ್ಲೇ!(೧೦)
ಬಾರದವರಿಗೆ ಸೇರಿ ಓತ್ತೊತ್ತಿ ಕಳಿಸಿದರು;
ಕಂಠ-ಪಾಠ ದ ಐಸಿ;ಹಾಗಾದೆ ಎಸ್.ಎಸ್.ಎಲ್.ಸಿ.!(೧೧)
ಅರ್ಥ ವಾಗದ ತಿರುಪು ಕರಿಯ ನೆರಳಲಿ ಕಲಿಯೇ;
ಬಿದ್ದೆ ಪಿ.ಯು.ಸಿ.ಆಗ ದ್ಹೋಗದೆ ಎ.ಟಿ.ಕೆ.ಟಿ. ಬಿ.ಎಸ.ಸಿ. (೧೨)
    































ನಾನು ನಾನಿರುವಂತೆ ಬಯಸಿ ಬರೆ ತಿರುವಾಗ;[part3]

ನಾನು ನಾನಿರುವಂತೆ ಬಯಸಿ ಬರೆ ತಿರುವಾಗ;
ಹುಚ್ಚು ಮುಖಗಳ ಹಲವು...!!!(ಶಿವರಾಮ ಕಾರಂತ)
ಬೇಕು ಬೇಡದ ಮದ್ಧ್ಯೆ ಮನದಾಳ ನೆನಕೊಂಡೆ;
ಏನ ಬರೆವುದು ಎಂದೇ ? ಯಾಕೆ ಬರಯುವುದೆಂದೆ?
ಮನಸಾರೆ ಒಪ್ಪದದು ಹೀಗೆ ಬರೆಯಲು ಹೇಗೆ?
ಜಗ್ಗು ಜಗ್ಗುತ ಹೇಳಿ ಹಾಗೆ ಬರೆದರೆ ಹೇಗೆ? (೧)

ಭಾವನಾತ್ಮಕ ಜೀವ ಭಾವವನೆ ತಡೆ ದಾಗ
ಹೇಳು ಕೇಳದ ಗೋಳು ಹೇಳಲಾಗದೆ ಅಲ್ಲಿ.
ತೇಲಿಹೊಗಲು ನಾನು ನನ್ನ ಕಥೆಯಲ್ಲಿ. (೨)

ಕಳೆದ ದಿನಗಳ ನೆನಪು ಮನಸು ಮಾಸದ ಹೂವು;
ಪೋಣಿಸುತ ಹೋದಂತೆ ರಾಶಿ ಕಾಶಿಯ ಮಾಲೆ.
ಬರೆಯಲಾಗದ ಬರಹ ಅದು ಒಂದು ಕೇಡು.(3)

ಹೊಸ ಅಂಗಿ ಹೊಸ ಪಾಟಿ ಖಾಕಿ ಚಡ್ಡಿ ಧರಿಸಿ
ತಲೆಗೆ ಟೊಪ್ಪಿಗೆ ಹಾಕಿ ಹಣೆಗೆ ಗಂಧವ ನೆಳೆದೆ
ದೇವ ನೋಲಿಮೆಗೆ ಪೂಜೆ ಮನಸಾರೆ  ಗೈದೆ
ಹೊರಟೆ ಶಾಲೆಗೆ ಶಾಲೆ ಮಕ್ಕಳ ಜೊತೆಗೆ 
ನಾನು ಖುಷಿಯಲ್ಲೇ ಅವರ ಜೊತೆಗೆ . (೩)

ಚಿಕ್ಕಂದಿನ ಬಾಳು ಹಾಳು ಸವಿ ಜೇನು 
ಕಳೆದ ದಿನಗಳವು ಇಂದು ಸಂಜೆ ಮುಸುಕು 
ಹಳ್ಳಿಗಾಡಿನ ಓದು ಮುಘ್ದ ಪ್ರೇಮದ ಬದುಕು.(೪)

ಮಾಧ್ಯಮದ ಕೊರತೆ ದಿನಕೊಂದು ಗುರುವು 
ಅರ್ಥ ವಾಗದ ವಿದ್ಯೆ ಕೀಳರಿಮೆ ಮಧ್ಯೆ 
ಹೇಳತಿರದ ಕಥೆಯು ಇನ್ನೆಲ್ಲಿ ಓದು?       (೫)

ಜಗವೊಂದು ನೆಪ ಮುಂದು,ದೊರ ಸರಿದವರು
ಸಾಗು ಸಾಗದೆ ಮುಂದೆ ;ಎಡವಿ ಬಿದ್ದೇನು ಹಿಂದೆ.
ಬದಕು ತಾಸಿನ ಕೆಲಸ ಕೊಡುವ ಕಾಸಿನ ಮುಂದೆ 
ದೂರ ತಿರದ ಪಯಣ ಸಹನೆ ಒಂದೇ!   (೬)

ಈ ಪರಿಯ ಬದುಕಿನಲಿ ಸಂಸಾರಿಯಾದೆ.
ಗಂಡ ಹೆಂಡತಿ   ಒಲುಮೆ; ಆಸೆ ಚಿಗುರಿನ ಕುಲುಮೆ.
ದೇವ ನೊಲುಮೆಯ ಮುಂದೆ; ಎರಡು ಮಕ್ಕಳ ತಂದೆ
ಎಳೆಯುತ್ತ ಬಂಡಿ ಬದುಕು ಗಂಡಾಗುಂಡಿ. (೭)

ಶಾಲೆ ಮಕ್ಕಳ ಓದು;ಓದು ಮಕ್ಕಳ ಬುದ್ಧಿ ;
ಸರಿ ದಾರಿ ಯಲಿ ಮುಂದೆ ವಿಶ್ವಾಸ- ಬುದ್ಧಿ.
ಉದ್ದ್ಯೋ ಗ ವರೆಸಿದರು ಜೀವ ಗರಿ ಗೆದರಿ. (೮)
ತಂದೆ ತಾಯಿಯಾ ಹರಕೆ; ಮಾಡಿ ಮಗಳಿಗೆ ಮದುವೆ; 
ಅಜ್ಜ ನಾದೆನು ನಾನು ಅಜ್ಜಿ ಯಾದಳು ಅವಳು 
ಸ್ನೇಹಮಯ ಜೀವನವು ಸಾಫಲ್ಲ್ಯ ಸೊಗಸು .(೯)
ದಿನ ದಿನದ ಬಾಳಲ್ಲಿ ಸುಖ ಒಂದು ಸೋಲೆರಡು;
ಗಳಿಸಿದ್ದು ಕೆಲವು ಕಳೆದದ್ದು ಹಲವು .
ತಂದೆ- ತಾಯಿ; ಅಕ್ಕ-ಭಾವ ; ಜೊತೆ ಅತ್ತೆ-ಮಾವ
ಸರತಿಯಲಿ ಸಾಗಿದರು ಇಹ ಲೋಕ ಧಾಮ.(೧೦)
ಇಹ ಪರದ ಗತಿಗೆ ಮರಳಿ ಬಾರದ ಕರೆಗೆ 
ಕ್ಷಣ ವೊಂದು ಯುಗ ವಾಗೆ;ಯುಗವು ಕ್ಷಣ ವಾಗೆ;
ಹರಸಿ ಹೋದರು ಅವರು ತೋರಿ ಧ್ರುವ ತಾರೆ! (೧೧)

ಬಯಸಿ ಬರೆಯುತ ಕೊನೆಗೆ ಚಕ್ರ ವಾಕದ ಜೊತೆಗೆ.
ಅವರವರ ಕಾರ್ಯ ಕುಶಲತೆಯ ಸೌ ಭಾಗ್ಯ;
ಬರುವದೇ ನುಂಟೊಮ್ಮೆ ಬರುವ ಕಾಲಕೆ ಬಹುದು.
ಸ್ನೇಹಮಯ ಜೀವನವು ಸಾಫಲ್ಲ್ಯ   ಸೊಗಸು.(೧೨)
        



 
ಇದ್ದುದಿದ್ದನ ಬರೆವೆ,ಮನಸಾರೆ ಬರೆವೆ.
ನನ್ನ ಜೀವನ ವ್ಯರ್ಥ ಕಳಕೊಂಡೆ ಪರಿಯಾಗೆ.
ನನ್ಹಾಗೆ ಆಗದಿರಿ ಸಿಲುಕಿ ಶೋಷಣೆ ಯೊಳಗೆ.
ಹುಟ್ಟು ಹಾಕದೇ ತೆಪ್ಪ ಸಾಗದದು ಮುಂದೆ.  
ಹಿರಿದೇನು ಕಿರಿದೇನು ಹಾಕಿ ತಿಪ್ಪರ-ಲಾಗ.
ಸಿಕ್ಕೀರೀ ಜೋಕೇ ತಪ್ಪಿ ಮೀನದ ಗಾಳ.
  

ಬಾಳು ಕೂಳಿಗೂ ಒತ್ತಾಯದ ದುಡಿಮೆ.[ಕನಸು ಗಾರನ ಕನಸು 1 ]

ಆಸೆ ಚಿಗುರಿನ ಕುಸುಮ ಗಗನ ತುಂಬಿದ ಕನಸು. 
ತಗಲ ಲಾರದ ವಿದ್ಯೆ, ಬಾಳ ಬದುಕಿಗೆ ಹೊಸೆದು;
ಹೇಳ ತಿರದ ಕಥೆಯು ದುಡಿಯಲಾಗದ ಮಾಣಿ; 
ಹರಿವ ನದಿಯಲಿ ಹೊರಟ ಹುಟ್ಟಿಲ್ಲದ ದೋಣಿ,(೧)

ಮುಂದೆ ಕಂದರದಲ್ಲಿ ಭೋರೆಂದು ಹಾರಿ,
ಜೀವನದ ಪಡಿ-ಪಾಟ ಸಾಕು ಮುರಾರಿ.
ಕಂಗೆದಿಸಿದಾ ಬಾಳು ಕೂಳಿಗೂ ಗೋಳು.
ಬೇಕು-ಬೇಡದ ಕೆಲಸ ಒತ್ತಾಯದ ದುಡಿಮೆ.
ಮೊಣ ಕೈಗೆ ಹಚ್ಚಿದ ಬೆಲ್ಲದಾಸೆ. (೨)

ಹೇಳುವರು ಹೇಳಿದರು ನೂರೆಂಟು ಉಪದೇಶ;
ಸಿಕ್ಕ ಕೆಲಸವ ಮಾಡು ಮುಂದೆ ಒಳಿತಿಗೆ ನೋಡು;
ಇಷ್ಟ ತಿಷ್ಟ ಬಿಟ್ಟು ಹಾಸಿಗೆ-ಯಷ್ಟು ಕಾಲು-ಚಾಚು; 
ಮುಂದೆ ಚೆನ್ನಾಗುವದು ಎಂದೆಲ್ಲ ಪ್ರೀಚು.(೩)

ದಿನಕೊಂದು ಕೆಲಸ,ಅದು ಮುಂದೆ ಇದು ಮುಂದೆ.
ಓದು ಮುಗಿದರೆ ಚೆನ್ನ ಕೆಲಸ  ಕೊಡುವರು ಅಂದೇ.
ಛಲ ಬಿಡ ತ್ರಿವಿಕ್ರಮನ ಪರಿಯರ್ಧ; ಏನಾದರೂ ಸರಿಯೇ;
ಮುಗಿಸ ಹೋದರು ಮಾಮು ಬಿ.ಕಾಮು. ಅರ್ಧಮರ್ಧ.(೪)
 
ಅಂದವರು ಅಂದಾರು ಬಿಟ್ಟಾರು; ಏನೆಲ್ಲ.
ಕನಸುಗಾರಗೆ ಮಾತ್ರ ಬರಿ ಛತ್ರಿ ಎಲ್ಲ.
ಬದುಕು ದಿನ ದಿನ ಕೆಲಸ, ಕೊಡುವ ಕಾಸಿನ ಮುಂದೆ;
ದೂರ ತಿರದ ಪಯಣ ಒಣಗಿದರು ದೇಹ ಸಹನೆ ಒಂದೇ!! (೫)

ಏನಾದರೂ ಸರಿಯೇ ಚಿಕ್ಕಂದಿನಾ ಬಾಳು;ಹಾಲು -ಜೀನು;
ಚೊಕ್ಕ ಕಲಿಸದೆ ವಿದ್ಯೆ; ಬಾಳವನ ಹಾಳು.
ಇಹ ಪರದ ಈ ಗತಿಗೆ ನೀ ಬೀಜ ಬಾಳು;
ಇದನರಿಸ ದವನ ಜೀವನ ವೆಲ್ಲ ಗೋಳು.(೬)

ಒಪ್ಪು ತಪ್ಪೋಲೆಯ ಈ ನೆನಪು ಸುರಳೀ,
ಎದ್ದು ನೋಡಲು ನನ್ನ; ಕಣ್ಣು ಮಂಜು ಮುಸುಕಿ;
ತಿಲಿಸುತಿದೆ ಚಿನಕುರಳಿ ಎಲ್ಲ ಹೊರ-ಮರಳಿ.(೭)

ಕಲಿತ ವಿದ್ದ್ಯೆಗೆ ತಕ್ಕ ಉದ್ಯೋಗ ವರೆಸಿ;
ಕೆಲಸವಾಗದೇ ಬಿದ್ದೆ ಮೀಸಲಾತಿಗಳ ಮದ್ಧ್ಯೆ.
ದಾಟುವರು ದಾಟಿದರು ನಾ ಮುಂದು,ತಾ ಮುಂದು;
ದುಡ್ಡು ತೊಳ್ಬಲದಲ್ಲಿ. ಕುಣಿತಿದೆ ಝಣ ಝಣ;
ಕುರುಡು ಕಾಂಚಾಣ.(೮)

ಕುಳಿತವರು ಕುಳಿತಲ್ಲೇ, ಕಳಕೊಂಡು ಹಿಂಡು;

ದಾರಿ ತಾಪ್ಪಿತು ಅಲ್ಲೇ; ನೋಡು ನಿನ್ನ ಬದುಕು.
ಒಂದು ಕಣ್ಣಿಗೆ ಬಣ್ಣ ಇನ್ನೊಂದಕೆ ಸುಣ್ಣ;
ಸಾದ್ಧ್ಯ ವಾಗದ ಬದಕು,ತಡಕುತ್ತ ಮಣ್ಣು.(೯)

ಕಿತ್ತು ತಿಂದರು ಭೂಮಿ ಉಳುವಾತ ವಡವಿ;
ಹಾರುವನು ಹಾರಿದನು ಹಗಲು ಭಾವಿ.
ಏನು ಜೀವನ ದರ್ಥ ಉಪದೇಶ ಬೇಡ.
ಮುಳುವಾಗದಿರಿ ಇಂಥ ಹಾಳು ಭಾವಿ.(೧೦) 













    


















ಮನೆ ಮಮಕಾರ ತುಂಬಿರ ಬೇಕು.

ಇರಬೇಕು ದುಡಿತಿರಬೇಕು,
ಅಷ್ಟ ಲಕ್ಷ್ಮೀ ಮನೆ-ಮನ,ತುಂಬ ಬೇಕು.
ಮನಮೆಚ್ಚುತ ಸುಖ ಭರಿಸ ಬೇಕು,
ಸಂಸಾರ ಸುಖದೀ ಬಾಳ ಬೇಕು.
ಬರಬೇಕು ಕೂಡಿ ಕಳೆಯ ಬೇಕು.
ಗುಣಿತ-ಭಾಗಾಕಾರ ಸಾಗ ಬೇಕು.
ಹಾಗೇ ಶೇಷ ವು ನಿತ್ತ್ಯ ಉಳಿಯ ಬೇಕು.
ಮನೆ ಮಮಕಾರ ತುಂಬಿರ ಬೇಕು.

ಸಹಜವಿದು ಪ್ರಕುರ್ತಿಯ ಧರ್ಮ.

ಮನದೊಳಗಿರೋ ಮನದಾಳದ ಮಾತು
ಹೊಮ್ಮದೇ ಹೊರಗೆ; ಹಿಡಿವುದೇ ಒಳಗೇ .
ಹೇಳುವದೆಲ್ಲಾ ಹೇಳಿದರೆ; ಕೆಳುಗರೆಲ್ಲಾ ಕೇಳುವರೇ?
ಹೇಳುಗರಿಗದು ಹೃದಯದ ಭಾವ,
ಕೇಳುಗರಿಗದು; ನಿರ್ಜೀವ.
ಅನುಭವಿಸುವದು, ಅವರ ಕರ್ಮ; 
ಸಹಜವಿದು ಪ್ರಕುರ್ತಿಯ ಧರ್ಮ. 

Friday 27 April 2012

ಬದುಕು ತಿರಿದಮೇಲೆ; ಕಥೆ ಅರ್ಧ ಸತ್ತ್ಯ.[ಕನಸು ಗಾರನ ಕನಸು 2]

ನನ್ನ ನೀ ಮರೆತಂತೆ ನಿನ್ನ ನೀ ಮರೆಯುವೆಯಾ?
ನಿನ್ನ ನೀ ಮರೆತರೆ ಹಂಗಂತೆ ಬದುಕುವೆಯಾ? (೧)
ಮರೆಗುಳಿ ಮನದಲಿ ಮನಕೆ ನೆನಪುಳಿಯದಿರೆ;
ಮರೆಯಲಾಗದ ಮನಕೆ ತನದ ನೆನಪುಳಿಯುವದೇ?(೨)
ಕಳೆದು ಮೂವ ತ್ತಿಂದು ಆಗೇ ಅರವತ್ತಾಗೆ;
ಓ ಮರೆಗುಳಿ ಮರೆವು ನೆನಪುಳಿಯದು ಸತ್ತ್ಯ.(೩)
ಬರುವದೆ ನುಂಟೊಮ್ಮೆ ಬರುವ ಕಾಲಕೆ ಬಿಡದು;
ಅಲ್ಲಿ ತನಕ ಸಮಯ ಟಕ-ಟಕ ನಿಲದು.(೪)
ಹಸಿರೆಲೆಯು ನಕ್ಕಾಗ ನೆನಪು ಹಣ್ಣೆಲೆ ಚಿಗುರೆ!
ಉದುರದೇ ಹರೆ ಚಿಗುರೇ ವ್ಯರ್ಥ ಪ್ರಲಾಪ.(೫)
ನೆನಪೆಂಬುದು ಬಾಳ ಬದುಕಿನ ಸತ್ತ್ಯ;
ಬದುಕು ತಿರಿದಮೇಲೆ; ಕಥೆ ಅರ್ಧ ಸತ್ತ್ಯ.(೬}