Saturday, 28 April 2012

ನಾನು ನಾನಿರುವಂತೆ ಬಯಸಿ ಬರೆ ತಿರುವಾಗ;[part3]

ನಾನು ನಾನಿರುವಂತೆ ಬಯಸಿ ಬರೆ ತಿರುವಾಗ;
ಹುಚ್ಚು ಮುಖಗಳ ಹಲವು...!!!(ಶಿವರಾಮ ಕಾರಂತ)
ಬೇಕು ಬೇಡದ ಮದ್ಧ್ಯೆ ಮನದಾಳ ನೆನಕೊಂಡೆ;
ಏನ ಬರೆವುದು ಎಂದೇ ? ಯಾಕೆ ಬರಯುವುದೆಂದೆ?
ಮನಸಾರೆ ಒಪ್ಪದದು ಹೀಗೆ ಬರೆಯಲು ಹೇಗೆ?
ಜಗ್ಗು ಜಗ್ಗುತ ಹೇಳಿ ಹಾಗೆ ಬರೆದರೆ ಹೇಗೆ? (೧)

ಭಾವನಾತ್ಮಕ ಜೀವ ಭಾವವನೆ ತಡೆ ದಾಗ
ಹೇಳು ಕೇಳದ ಗೋಳು ಹೇಳಲಾಗದೆ ಅಲ್ಲಿ.
ತೇಲಿಹೊಗಲು ನಾನು ನನ್ನ ಕಥೆಯಲ್ಲಿ. (೨)

ಕಳೆದ ದಿನಗಳ ನೆನಪು ಮನಸು ಮಾಸದ ಹೂವು;
ಪೋಣಿಸುತ ಹೋದಂತೆ ರಾಶಿ ಕಾಶಿಯ ಮಾಲೆ.
ಬರೆಯಲಾಗದ ಬರಹ ಅದು ಒಂದು ಕೇಡು.(3)

ಹೊಸ ಅಂಗಿ ಹೊಸ ಪಾಟಿ ಖಾಕಿ ಚಡ್ಡಿ ಧರಿಸಿ
ತಲೆಗೆ ಟೊಪ್ಪಿಗೆ ಹಾಕಿ ಹಣೆಗೆ ಗಂಧವ ನೆಳೆದೆ
ದೇವ ನೋಲಿಮೆಗೆ ಪೂಜೆ ಮನಸಾರೆ  ಗೈದೆ
ಹೊರಟೆ ಶಾಲೆಗೆ ಶಾಲೆ ಮಕ್ಕಳ ಜೊತೆಗೆ 
ನಾನು ಖುಷಿಯಲ್ಲೇ ಅವರ ಜೊತೆಗೆ . (೩)

ಚಿಕ್ಕಂದಿನ ಬಾಳು ಹಾಳು ಸವಿ ಜೇನು 
ಕಳೆದ ದಿನಗಳವು ಇಂದು ಸಂಜೆ ಮುಸುಕು 
ಹಳ್ಳಿಗಾಡಿನ ಓದು ಮುಘ್ದ ಪ್ರೇಮದ ಬದುಕು.(೪)

ಮಾಧ್ಯಮದ ಕೊರತೆ ದಿನಕೊಂದು ಗುರುವು 
ಅರ್ಥ ವಾಗದ ವಿದ್ಯೆ ಕೀಳರಿಮೆ ಮಧ್ಯೆ 
ಹೇಳತಿರದ ಕಥೆಯು ಇನ್ನೆಲ್ಲಿ ಓದು?       (೫)

ಜಗವೊಂದು ನೆಪ ಮುಂದು,ದೊರ ಸರಿದವರು
ಸಾಗು ಸಾಗದೆ ಮುಂದೆ ;ಎಡವಿ ಬಿದ್ದೇನು ಹಿಂದೆ.
ಬದಕು ತಾಸಿನ ಕೆಲಸ ಕೊಡುವ ಕಾಸಿನ ಮುಂದೆ 
ದೂರ ತಿರದ ಪಯಣ ಸಹನೆ ಒಂದೇ!   (೬)

ಈ ಪರಿಯ ಬದುಕಿನಲಿ ಸಂಸಾರಿಯಾದೆ.
ಗಂಡ ಹೆಂಡತಿ   ಒಲುಮೆ; ಆಸೆ ಚಿಗುರಿನ ಕುಲುಮೆ.
ದೇವ ನೊಲುಮೆಯ ಮುಂದೆ; ಎರಡು ಮಕ್ಕಳ ತಂದೆ
ಎಳೆಯುತ್ತ ಬಂಡಿ ಬದುಕು ಗಂಡಾಗುಂಡಿ. (೭)

ಶಾಲೆ ಮಕ್ಕಳ ಓದು;ಓದು ಮಕ್ಕಳ ಬುದ್ಧಿ ;
ಸರಿ ದಾರಿ ಯಲಿ ಮುಂದೆ ವಿಶ್ವಾಸ- ಬುದ್ಧಿ.
ಉದ್ದ್ಯೋ ಗ ವರೆಸಿದರು ಜೀವ ಗರಿ ಗೆದರಿ. (೮)
ತಂದೆ ತಾಯಿಯಾ ಹರಕೆ; ಮಾಡಿ ಮಗಳಿಗೆ ಮದುವೆ; 
ಅಜ್ಜ ನಾದೆನು ನಾನು ಅಜ್ಜಿ ಯಾದಳು ಅವಳು 
ಸ್ನೇಹಮಯ ಜೀವನವು ಸಾಫಲ್ಲ್ಯ ಸೊಗಸು .(೯)
ದಿನ ದಿನದ ಬಾಳಲ್ಲಿ ಸುಖ ಒಂದು ಸೋಲೆರಡು;
ಗಳಿಸಿದ್ದು ಕೆಲವು ಕಳೆದದ್ದು ಹಲವು .
ತಂದೆ- ತಾಯಿ; ಅಕ್ಕ-ಭಾವ ; ಜೊತೆ ಅತ್ತೆ-ಮಾವ
ಸರತಿಯಲಿ ಸಾಗಿದರು ಇಹ ಲೋಕ ಧಾಮ.(೧೦)
ಇಹ ಪರದ ಗತಿಗೆ ಮರಳಿ ಬಾರದ ಕರೆಗೆ 
ಕ್ಷಣ ವೊಂದು ಯುಗ ವಾಗೆ;ಯುಗವು ಕ್ಷಣ ವಾಗೆ;
ಹರಸಿ ಹೋದರು ಅವರು ತೋರಿ ಧ್ರುವ ತಾರೆ! (೧೧)

ಬಯಸಿ ಬರೆಯುತ ಕೊನೆಗೆ ಚಕ್ರ ವಾಕದ ಜೊತೆಗೆ.
ಅವರವರ ಕಾರ್ಯ ಕುಶಲತೆಯ ಸೌ ಭಾಗ್ಯ;
ಬರುವದೇ ನುಂಟೊಮ್ಮೆ ಬರುವ ಕಾಲಕೆ ಬಹುದು.
ಸ್ನೇಹಮಯ ಜೀವನವು ಸಾಫಲ್ಲ್ಯ   ಸೊಗಸು.(೧೨)
         
ಇದ್ದುದಿದ್ದನ ಬರೆವೆ,ಮನಸಾರೆ ಬರೆವೆ.
ನನ್ನ ಜೀವನ ವ್ಯರ್ಥ ಕಳಕೊಂಡೆ ಪರಿಯಾಗೆ.
ನನ್ಹಾಗೆ ಆಗದಿರಿ ಸಿಲುಕಿ ಶೋಷಣೆ ಯೊಳಗೆ.
ಹುಟ್ಟು ಹಾಕದೇ ತೆಪ್ಪ ಸಾಗದದು ಮುಂದೆ.  
ಹಿರಿದೇನು ಕಿರಿದೇನು ಹಾಕಿ ತಿಪ್ಪರ-ಲಾಗ.
ಸಿಕ್ಕೀರೀ ಜೋಕೇ ತಪ್ಪಿ ಮೀನದ ಗಾಳ.
  

No comments:

Post a Comment