Tuesday 25 March 2014

ಅಂತರಾತ್ಮ ನರಿತು ಸಾಗು ತರದು ಜಗಳ ಭಾವನ



ಮನಸಿನಂತೆ ಕೊಡಿ ಬರಲು ಇಲ್ಲ ಜಗಳ  ಚಣ ಚಣ
ಇಲ್ಲದಿರಲು ಭಾವ ಮನದ ಆಸೆ ಎಲ್ಲ ಭಣ ಭಣ
ಹೊಂದಿ ಕೊಂಡ ರಿಲ್ಲ ರಗಳೆ ಇಲ್ಲ ತರಲೆ ಒಣ ಒಣ  || ೧ ||
ಏನೇ ಬರಲಿ ಸೋಲು ಗೆಲುವು ಒಲವು ಸಹ ಜೀವನ
ಅಂತರಾತ್ಮ ನರಿತು ಸಾಗು ತರದು ಜಗಳ ಭಾವನ
ಅದಕು ಇದಕು ಒಲವು ಬದುಕು ಸಮರಸವೇ ಜೀವನ || ೨ ||
B.R. Bhate, Dharwad Dt:26-03-2014

Sunday 23 March 2014

ಹರಿ-ಕಥೆಯಲಿ ಯಾರು ಆ$ವಾ ? – ಭಾಗ್ಯವಂತ



ಹರಿ-ಕಥೆಯಲಿ ಯಾರು ಆ$ವಾ ? – ಭಾಗ್ಯವಂತ
ಬುದ್ಧಿಬಲ / ಧೈರ್ಯಶಾಲಿ, ದುಡಿವ$ಚೇತನ ವಿರಲು, ಕಲಿ-ಕಾಡಿದರೂ-ವಿಠಲ, ಅವಾ-ಭಾಗ್ಯವಂತ.       
ಭಾಗ್ಯವಂತನ ಭಾಗ್ಯ, ಭಾಗವತ$ನಾ ಕೇಳು, ಭೋಗ-ಭಾಗ್ಯದ ಹರಿ - ಕಥೆಯ ಮಾಡುವರು .
ತಾಳ-ತಂಬೂರೀಗಳು ಹರಿ$ದಾಸರ-ಭಾಗ್ಯ, ಕೊಟ್ಟರೆ-ಜೋಳಿಗೆಗೆ ಹೋಳಿಗೆ-ಭಾಗ್ಯ,
ಇಲ್ಲದಿರೆ-ರಮಣಾ ಶ್ರೀ-ಹರಿ$-ನಾಮವೇ ಭಾಗ್ಯ.                                                || ೧ ||
ವಿದ್ಯಾ$ಬುಧ್ಧಿ / ಜ್ಯೊತೆ$ಶ್ರದ್ಧೆ, ಭಕ್ತಿ$ಕೆಲಸ-ದೊಳಿರಲು, ಸಂತೃಪ್ತಿ-ಆರೋಗ್ಯ$ವಂತ-ಸೌಭಾಗ್ಯ     
ಸಂಪತ್ತು$ಸಿತಾಪತಿ, ರಮಾಪತಿ$ಉಮಾಪತಿ, ಶ್ರೀಮತ್-ರಮಾ-ರಮಣ ಅವಾ-ಭಾಗ್ಯವಂತ || ೨ ||
ಲಕ್ಷ್ಮೀ-ವಲಿದರೆ ಲಕ್ಷ್ಮೀ – ರಮಣ $ ನಾರಾಯಣನು, ತಿರು $ ಮುನಿದರೆ, – ತಿರು $ ಪತಿ-ವೆಂಕಟ$ ರಮಣ      
ಕೊಟ್ಟರೆ-ಜೋಳಿಗೆಗೆ ಹೋಳಿಗೆ-ಭಾಗ್ಯ, ಇಲ್ಲದಿರೆ-ಶ್ರೀ-ಹರಿ$-ನಾಮವೇ ಭಾಗ್ಯ.                 || ೩ ||
B.R. Bhate, Dt: 23-03-2014

Saturday 22 March 2014

ಚೆಲುವ ರಂಗನೇ ಕೇಳು ನಿನ್ನ ಸಾಧನೆ ಏನು ?


ಎಳೆಯ-ಮುಂಜಾವಿನಲಿ, ಅಳುವ ಕೂಸಿಗೆ-ತಾಯಿ
ತಟ್ಟಿ ತಪ-ತಪ-ಎಣ್ಣೆ, ಕಂದ-ಸಳ-ಬುಳ-ಕಂಗೆ
ಬಿಸಿ-ನೀರ-ಅಭ್ಯಂಗ, ತೈಲ-ಜಳಕವ-ಮುಗಿಸಿ
ಮೈಯ-ಪಂಜಿಯ-ಲೋರಿಸಿ,ಗಂಧ-ಲೇಪಿನ-ಪೂಸಿ
ಧೂಪದೊಳು ಮಲಗಿಸಲು, ಕಂದ-ನಗು-ಹಾಯಾಗಿ.|| ೧ ||
ಅಂಗ-ಬಟ್ಟೆ ಹಾಕಿ ದಿಟ್ಟ-ಬೋಟ್ಟ-ನಿಟ್ಟು ಲಟ್ಟಿಕೆ-ಮುರಿದು
ನವಿಲು-ಗರಿಯನು-ಚುಚ್ಚಿ, ಗಿಳಿವಿಂಡು-ಗಳ-ಕರೆದು
ಗಿಲಿಕೆ-ಗಿಲಿ-ಗಿಂಚಿ, ಸಿರಿಕಂಠ-ಕೇಳು ನಿನ್ನ-ಲಾಲಿ-ಹಾಡು || ೨ ||
ತೂಗೇ ತೊಟ್ಟಿಲ ಗೀಗೀ ಪದ-ಜೋಗಿ-ಮಲಗೆ   
ಗೋಧೂಳಿ ಸಮಯ-ದೊಳು ಜಗ-ವಾಗೆ-ಸಂಜೆ. || ೩ ||

ಪಂಚಮ ರಾಗದೊಳು ಎದೆ-ಬಿಚ್ಚಿದಾ ಭಾವ



ಹಿತ್ತಲಂಗಳ ದಲ್ಲಿ ಹೀಗೊಂದು ಝಲಕು, ಮೌನ ಭಂಗಾರದೊಳು ಬೆಳ್ಳಿಯ ಮೆಲಕು.  
ತುಂಬ-ದುಂಬಿಯ ದಂಡು ಮಧು-ಬಂಡು ತಿರುವಾಗ, ಝೇಂಕಾರ ನಾದ-ದೊಳು ಜೇನು-ಗೂಡಿನ ಹಿಂಡು.
ನೆನಪು ಪುಳಕಿತ ಗೊಳದೇ ಹೂವಿನಲಿ ದಂಡು, ನಿತ್ಯ-ಗೆಲುವಿನ ಪಥವ ಕಲಿ ಅದನ ಕಂಡು,
ಪಂಚಮ ರಾಗದೊಳು ಎದೆ-ಬಿಚ್ಚಿದಾ ಭಾವ ಏಕ-ತಾನದ ಗಾನ ಇಹ-ಪರವ-ಮರೆತು || ೧ ||
ಜಗವೆಲ್ಲ ನಿನದಿರಲು ಸುಖ-ದುಃಖ ಬದುಕಿನೊಳು, ದುಗುಡ-ದುಮ್ಮಾನ ಗಳ-ಬಿಟ್ಟು ಹಾಡು    
ರಾಗ ಭೂಪಾಲಿ ತಾ ಉದಯ ರಾಗದೊಳು ಮುಗಿಸು ನೆಮ್ಮದಿ ಪಯಣ ಸುಖದ ಸಂಜೆಯೋಳು || ೨ ||