Saturday 28 April 2012

ನೆನಪಿನಂಗಳ ದೊಳಗೆ ಪ್ರಾಥಮಿಕ ಸಾಲೆ[part1]

ನೆನಪಿನಂಗಳ ದೊಳಗೆ ಕ್ಷಣಿಕ ಮುತ್ತೊಂದರಳಿ
ಬಾಳ ಚಿಗುರಿನ ಕೊನರು ಹೊರಹೊಮ್ಮಿತಲ್ಲಿ;
ಓದುಗರೇ ಹುದುಗಿಹುದು ನನ್ನ ಕಥೆ ಇಲ್ಲಿ. (೧)
ಬಾಲ-ಬಳಗದ ಬಾಳು ಹಾಲು-ಸವಿ-ಜೇನು,
ತೊದಲು ನುಡಿ ನಡೆ ಮಾಟ; ಚೆಂದ-ಮಾಮನ ಕಥೆಯು.
ಕಥೆ ಕೇಳಿದ ಮೇಲೆ ನಿದ್ದೆ ತಗಲುವದು. (೨)
ತುಂಟ ಹಟಮಾರಿತನ ಸಿಟ್ಟು ಸೆಡಕು;
ಬಡೆತ ಗದರಿಕೆಗಳಲಿ ಬಿಕ್ಕಳಿಸುತಲಿಹುದು;
ಮಾಯಾ ಮೋಹದ ಜಾಲ ಮುದವ ತುಂಬಿಹುದು.(೩)
ಸಾಲೆ ಹೋಗುವ ಪರಿಯು ಹಿರಿಯ ಬಾಲರು ಹೊರುವ
ಮರಕೋತಿಯ ಮಜವು,ತುಂಬಿಹುದು ನೆನಹು.(೪)
ಹೊಸ ಅಂಗಿ ಹೊಸ ಪಾಟಿ ಖಾಕಿ ಚಡ್ಡಿಯ ಧರಿಸಿ 
ಹಣಿಗೆ ನಾಮವ ನೆಳೆದು ತಲಿಗೆ ಟೊಪ್ಪಿಗೆ ಹಾಕಿ
ಹೊರಟೆ ಸಾಲೆಗೆ ಮಾಣಿ ಚಿಣ್ಣರ ಜೊತೆಯಲ್ಲಿ. (೫)
ದೇವಿ ಶಾರದೆ ಲಕುಮಿ ಧ್ಯಾನ-ಮನ ಮುಗಿಸಿ
ಅವರವರ ತರಗತಿಗೆ ಆ ಮಕ್ಕಳನು ಕಳಿಸಿ;
ಹರಸಿ ಗುರುಗಳು ಕಂಠ ಪಾಠ ಓಲೈಸಿ.(೬)
ಹಲಿಗೆ ಬಳಪದ ಬರಹ ಲೆಕ್ಕಣಿಕೆ ದೌತಿ,
ಅಂದಿನಂದಿನ ಪಾಠ ಮಾಡಲಾಗದೆ ಅಲ್ಲಿ,
ಚಿಮಣಿ ದೀಪದ ಕೆಳಗೆ ಆ ರಾತ್ರಿ ಸಾಲೆ. (೭)
ಗಾಂಧೀ ಹಾಕದ ಟೋಪಿ ಕಡ್ಡಾಯ ಹಾಕಿ,
ಹಲ್ಲುಗುರು ಮುಖ ಮಾಟ; ಮನೆಕೆಲಸ ನೋಡಿ,
ತಪ್ಪಿದವರನು ಸನ್ನೆ ; ತರಗತಿಯ ಹೊರ ಹಾಕಿ; (೮)
ಲೇಖ ಚೂಕ್ಕತೆ ನೋಡಿ,ಕಂಠ ಪಾಠದ ದತ್ತಿ,
ತಪ್ಪಿದರೆ ಚಳಿ ನಡುಕ ಚುಳಿಕಿ(ಬೆತ್ತ) ಬಾರಿಸೆ ಅಲ್ಲಿ.
ಕಲಿತೆ ವೀ ಪರಿ ಮುಲ್ಕಿ ಪಾಸಾದೆ ವಲ್ಲಿ.(೯)
ಆಟ ಪಾಠದ ಮಾಟ ಕಳೆದು ಬಯಲಾಟ 
ಎಲ್ಲ ಕಥೆಯದು ಬರಿ ಬಾಲ್ಯ ಹುಡುಗಾಟ.(೧೦)
ಪ್ರಾಥಮಿಕ ಸಾಲೆಯಲಿ ಮುಗಿಸಿ ಪಂದ್ಯಾಟ;
ಮುಂದಕಾದುದು ಎಲ್ಲ ಬರಿಯ ದೊಡ್ಡಾಟ.(೧೧)   
ಒತ್ತುಸಿರು ಬಿಟ್ಟುಸಿರು ನಾಗ-ಬೈರನ(ಸರಕಾರೀ) ಸಾಲೆ(೧೨)

  

   
  

No comments:

Post a Comment