Saturday 22 March 2014

ಪಂಚಮ ರಾಗದೊಳು ಎದೆ-ಬಿಚ್ಚಿದಾ ಭಾವ



ಹಿತ್ತಲಂಗಳ ದಲ್ಲಿ ಹೀಗೊಂದು ಝಲಕು, ಮೌನ ಭಂಗಾರದೊಳು ಬೆಳ್ಳಿಯ ಮೆಲಕು.  
ತುಂಬ-ದುಂಬಿಯ ದಂಡು ಮಧು-ಬಂಡು ತಿರುವಾಗ, ಝೇಂಕಾರ ನಾದ-ದೊಳು ಜೇನು-ಗೂಡಿನ ಹಿಂಡು.
ನೆನಪು ಪುಳಕಿತ ಗೊಳದೇ ಹೂವಿನಲಿ ದಂಡು, ನಿತ್ಯ-ಗೆಲುವಿನ ಪಥವ ಕಲಿ ಅದನ ಕಂಡು,
ಪಂಚಮ ರಾಗದೊಳು ಎದೆ-ಬಿಚ್ಚಿದಾ ಭಾವ ಏಕ-ತಾನದ ಗಾನ ಇಹ-ಪರವ-ಮರೆತು || ೧ ||
ಜಗವೆಲ್ಲ ನಿನದಿರಲು ಸುಖ-ದುಃಖ ಬದುಕಿನೊಳು, ದುಗುಡ-ದುಮ್ಮಾನ ಗಳ-ಬಿಟ್ಟು ಹಾಡು    
ರಾಗ ಭೂಪಾಲಿ ತಾ ಉದಯ ರಾಗದೊಳು ಮುಗಿಸು ನೆಮ್ಮದಿ ಪಯಣ ಸುಖದ ಸಂಜೆಯೋಳು || ೨ ||           

No comments:

Post a Comment