Saturday 19 April 2014

ಹೇಳುವಿರಾ ಹಳ್ಳಿ ಸುಡುಗಾಡು. ಎನ್ನುವಿರದು ಪಟ್ಟಣಕೂ ಕೇಡು!!...



ಮರೆಯಲಾಗದ-ನೆನಪು, ಮುತ್ತುಗದ ಹೂವು, ಸ್ವಾಗತವ ಕೋರುವದು ಹುಲ್ಲುಗಾವಲಿ ನಲ್ಲೂ!
ಏನು ಹೇಳಲಿ-ನಾನು..ನೆನಪು ದೋಣಿಯಲಿ!! ಇಂದು ನೋಡುತ ಕಂಡೆ, ಬಾಳೆಲೆ-ತಿಂಡಿಯಲಿ. ಆ ಚೀಕ್ಕಂದಿನ-ಬಾಳು, ಹಾಲು-ಸವಿ ಜೇನು!.
ಸಣಬುಹುರಿ-ಡಬ್ಬಣ ವನು-ಹಿಡಿದು, ಹೊರಟು-ಮೂವರು(ಸರಿಕರು) ಸೇರಿ, ಭತ್ತ-ಗದ್ದೆಯ ದಾಟಿ. ಬೆಟ್ಟಕಣಿವೆ ಹಾದಿ, ಮುತ್ತುಗದ ಎಲೆಗಾಗಿ,
ಸರವ ಕಟ್ಟುತ ಎಲೆಯ, ಸರ-ಸರದ ಕೆಲಸದಲಿ, || ೧ ||
ಈ ಪರಿಯ ಸೋಬಗಿನಲಿ ಮನತುಂಬ ತೃಪ್ತಿ, ಎಲೆ-ದೊನ್ನೆ ಕಾಯಕವು, ಬರು-ಹಬ್ಬ ಹರಿ-ದಿನಕೆ, ರಾಮನವಮಿ, ದತ್ತ ಹನುಮ-ಜಯಂತಿಯಲ್ಲಲ್ಲೂ.
ಕೋಸಂಬ್ರಿ-ಪಾನಕಕೆ ಮುತ್ತುಗದ ಎಲೆ ಬೇಕು.ಶಿವರಾತ್ರಿ ಶಿವ ಪ್ರಿಯವು, ಮುತ್ತುಗದ ಹೂವು, ಗಿಳಿ-ಹಸಿರೆಲೆಯೋಳು-ಕೆಂಪಡರುತಿರೆ,
ಬರುತ-ವಸಂತ-ಕೋಗಿಲೆ-ಕುಹೂ-ಕುಹೂ, ತಳಿರು-ಮಾವು-ಬೇವು-ಹೂವಿನೊಳು, ಘಮ್ಮಡಿಸುತಿವೆ, ಮಲ್ಲಿಗೆ ಹೂವು, || ೨ ||
ನದಿಯಲಿ ಜುಳು-ಜುಳು ಮಂಜುಳ ಗಾನ, ಪ್ರಾಣಿ-ಪಶು-ಪಕ್ಷಿಗಳ$ಪ್ರಪಂಚ, ಸ್ವಾಗತ ನೋಡಲು ಬರುತಿರಾ ನೀವು, ‘ಮೊದಲು-ನಾವು-ನಂತರ-ನೀವು,
ಹೇಳುವಿರಾ ಹಳ್ಳಿ ಸುಡುಗಾಡು. ಎನ್ನುವಿರದು ಪಟ್ಟಣಕೂ ಕೇಡು!!... ಏನು ಹೇಳಲಿ ಆ ನೆನಪು? || ೩ ||
B.R. Bhate, Dt: 20-04-2014

No comments:

Post a Comment