Sunday 16 January 2011

ಸಂಕ್ರಮಣದ ಕರಿ ಹಬ್ಬದ ಸಡಗರ;

ಸಂಕ್ರಮಣದ ಕರಿ ಹಬ್ಬದ ಸಡಗರ;
ಹಳ್ಳಿಮನೆಯಲ್ಲಿ, ವೈಭವ ಹಳ್ಳಿಮನೆಯಲ್ಲಿ.
ಬೆಳಗಾಗೆದ್ದು; ಹೊಳೆಸ್ನಾನವ ಮಾಡೀ,
ನಮಿಸುತ ಸೂರ್ಯಂಗೇ,ದೇವಗೆ.
ಅರ್ಘ್ಯ ಪಾನ ವ ಕೊಟ್ಟು,ಹೂ ತುಳಸಿ ಹಾಕಿ;
ಕುಂಕುಮಾರ್ಚನೆ ಮಾಡೀ,ಕರ್ಪುರಾರತಿ ಮಾಡೀ;
ಹಣ್ಣು ಕಾಯಿ ನೈವೇದ್ಯವ ಮಾಡೀ; ಧೂಪ ದೀಪ ಹಚ್ಚಿ ;
ಭಕ್ತೀಲಿ ದೇವಗೆ ಕೈಮುಗಿದು,
ಗೋಮಾತೆ ಭೂಮಾತೆಗೆ ಎಡೆ ಕೊಟ್ಟು,
ಹೊಸಫಸಲಿಗೆ ನೊರೆ ಹಾಲನು ನಿತ್ತು,
ಸಂಭ್ರಮ ಸ್ವಾಗತ ಕೋರಿದರು. 
ಚರಗವ ನೆಸೆದರು ಹೊಲ ತುಂಬ;
ನೇಗಿಲಯೋಗಿ ಭೋಗಿ ತಾಂಬೂಲ ಕೊಟ್ಟು,
ಕಾಯಪ್ಪ ಬಸವಗೆ ನೆನಿಸಿದರು,
ಹಳೆಬಟ್ಟೆ ಬಿಸಾಕಿ ಹೊಸಾ ಬಟ್ಟೆಯ ತೊಟ್ಟು,
ಹೊಸ ವರ್ಷ ಹೊಸ ಹರುಷವ ಕೋರಿದರು,
ಹಳ್ಳಿಮನೆಯದು ಹಳೆಯದಾದರೂ,
ಹೊಸತನ ನಿತ್ತ್ಯ ಚಿಗುರುವದು.
ದಿನಕೊಂದು ಹೊಸತನ ನೀಡುವದು,

ನೆಮ್ಮದಿ ತಾಣವದು.ಕೈ ಕೆಸರಾದರೆ ಬೈಮೊಸರು.
ದುಡಿತದ ದುಡ್ಡಿನ ತಾಯಿ ಅದು.
ದಿನವೂ ಹಬ್ಬದ ತಾಣವದು.




ಮನೆಮನೆಯಲಿ ದವಸ ಧಾನ್ಯ ಕನಕ ಪೂಜೆ ಮಾಡಿದರು,
ಹಾಲು ಹಣ್ಣು ಹೂವ ಎಳ್ಳು ಬೆಲ್ಲ ಹಂಚಿದರು,

No comments:

Post a Comment