ನಮ್ಮೂರ ಹಳ್ಳಿ ನಮಗ ಪಾಡಾ,ಬಂದು ನೋಡಿ ನಮ್ಮ ಹಳ್ಳಿ ವಾಡಾ.
ನೆಮ್ಮದಿಲಿರಾಕ ಹಳ್ಳಿ ಸಾಕು ತಿರುಗಾಟ ಪಟ್ಟಣ ಬಳ್ಳಿ.
ಹೊತ್ತು ಹೋಗಾಕ ಬೇಕು ಹಳ್ಳಿ,ನೆಮ್ಮದಿಗೂ ಇಲ್ಲ ಆ ದಿಳ್ಳಿ.
ಹರಟೆ ಹೊಡಿಯಾಕ ಪುರಸೊತ್ತು ಇಲ್ಲಿ,ಖಾಲಿ ಎಲ್ಲೈತಿ ಹೊತ್ತು ಅಲ್ಲಿ,
ನೋಡ್ತಾರ ಇಲ್ಲಿ ಕಳಬಳ್ಳಿ; ಬಿಡ್ತಾರ ಪಟ್ಟಣ ರೈಲಲ್ಲಿ.
ಹಾಲು ಹೈನ ಬೆಳದ ರೈತ ಜಗ ಜಟ್ಟಿ;ಸುಸ್ತಾದ ಸೇರಿ ಪಟ್ಟಣ ಶೆಟ್ಟಿ.
ಇರಲಿ ಬಿಡಲೀ ಹಳ್ಳಿ ಬಾಳ ಪಾಡ, ದುಡ್ಡಿಲ್ಲಾಂದ್ರೆ ಪಟ್ಟಣ ಸುಡುಗಾಡ.
No comments:
Post a Comment