Tuesday 1 May 2012

ಖಾನಾಪುರ ಮಲಪ್ರಭೆ

ಖಾನಾಪುರ ಮಲಪ್ರಭೆ ಮನ ತುಂಬಿ ಹರೆದು ಭಾರಿ ಸುದ್ದಿ ಮಾಡ್ಯಾಳ;
ಘಟಪ್ರಭೆ ಧಬ-ಧಭೆ ಸದ್ದನು ಮಾಡಿ ಭರ್ಜರಿ ಜೋರ ಹರಿದಾಳ;
ನೋಡಾಕ್  ಔತಣ ತವರಲಿ ನಿಡ್ಯಾಳ. (೧)

ಹುರುಪಿನ ಜನ ಮನಸ ಮಾಡ್ಯಾರ. ರಾಗಿ ಮುದ್ದಿ,ನುಚ್ಚಂಬ್ಲಿ ಜಡದು;
ಕಡಕ್ ರೊಟ್ಟಿ ಇಡುಗೈ ಪಲ್ಲ್ಯ ರಂಜಕಾ ಚೆಟನಿ ಬುತ್ತಿ ಗಂಟ ಕಟ್ಟ್ಯಾರ.
ಗಂಡಸರಿಗೊಂದು ಹೆಂಗಸರಿಗೊಂದು ಎರಡು ಟೆಂಪೂ ಮಾಡ್ಯಾರ (೨)

ಲಿಂಬಿ ಹಣ್ಣು ಗಾಲಿಗಿಟ್ಟು ಹಣ್ಣು ಕಾಯಿ ಎಡೆ ಕೊಟ್ಟು
ಧೂಪ ದೀಪ ಆರತಿ ಎತ್ತಿ ಗ್ರಾಮ ದೇವಿ ಗೆ ಕೈ ಮುಗಿದು;
ಶುಭದ ಹರಕೆ ಹೊತಾರೆ. ಖುಷಿಯಲಿ ಟೆಂಪೋ ಹತ್ತಿದರು. (೩)

ಗರಿ ಗರಿ ಇಸ್ತ್ರಿ ಬಟ್ಟೆ ಅವ್ರವರಿಸ್ಟ್ ವೇಷ ಭೂಷ ಮಾಟಾಗಿ ಹಾಕೊಂಡು;
ಎಲ್ಲರು ಒಟ್ಟಾಗಿ ಹೊಂಟಾರ. ಜೋರಾಗಿ ಬಹೂಪರಾಕ್ ಹೇಳ್ಯಾರ.
ಅತ್ತಿ ಆಳದ ಮರ ಸುತ್ತು ಬೇವಿನ ಮರ ನಡುವೆ ಮುತ್ತತ್ತಿ ಮರ
ಕುಂತ ಧಾರವಾಡ ಉಳವಿ ಚೆನ್ನ ಬಸವೇಶ್ವರ ಬಹೂಪರಾಕ್. (೩)
  
ಹೊಗಾಕ್ ಬೇಕು ಗೋಕಾಕ; ತಿನ್ನಾಕ ಬೇಕು ಕರದಂಟ.
ಗಡಿಬಿಡಿ ಮಾಡ ಬ್ಯಾಡ ಗಡ-ಬಡ್ ಭಾರಿ ತಿಂದಾರ.
ಬೆಳಗಾಂ ಕುಂದಾ ತಂದಾರ ಸಂಪಾಗಿ ಕುಂತ ತಿಂದಾರ.
ಪದಗಳ ಬಂಡಿ ಹಚ್ಚ್ಯಾರ.(೪)

ಎಳನೀರು ಕಂಠಮಟ ಕುಡದಾರ. ಗಮ್ಮತಲ್ಲಿ ಪ್ರಯಾಣ ಹೊಂಟಾರ.
ಮಿರ್ಚಿ ಭಜಿ, ಕಾಂದಾ ಭಜಿ, ಗಿರ್ಮಿಟ್ ಭರ್ಜರಿ; ಹೊಡ ದಾರ.
ಮತ್ತೆನೀಲ್ಲ ನವ್ಲೂರ್ ಪೆರ್ಲ್ಹಣ್ಣ ತಿಂದಾರ. ಪಡ್ಡೆ ರಂತೂರ ತಿರ್ಗ್ಯಾರ.
ಲೈನ್ ಬಜಾರ್ ಧಾರವಾಡ ಪೇಢ;ಖಂಡಿತ ಕೊಂಡಾರ. (೫)

ಭರ್ಜಾರಿ ಸೀರಿ ಲಂಗಾ ದಾವಣಿ ಅವರವ್ರಿಗಿಸ್ಟ ತೊಟ್ಟಾರ;
ಹಾಡಿನ ಬಂಡಿ ಕಟ್ಟ್ಯಾರ. ಎಲ್ಲಮ್ಮಗೆ ಉಧೋ ಉಧೋ ಅಂದಾರ.
ಹಾಕ್ಯಾರ ಕೈತುಂಬಾ ಕಾಜಿನ ಬಳೆ; ತೊಡಿಸ್ಯಾರ ಇಚಲ್ಕರಂಜಿ ಸೀರೆ.
ಚೂಡಿ-ದಾರಾ ಅಂದ ಚೆಂದ ತೊಡುಗೆ ತೊಟ್ಟಾರ. (೬)

ಧಬೆ ಧಬೆ ಊರಾ ಸೇರ್ಯಾರೆ; ತೂಗು ಸೇತುವೆ ಮೇಲೆ ಹೊಯ್ದಾರೆ.
ಮಲ್ಲವ್ವಗೆ ನೋಡಿ  ಮನಸಾರೆ ಕೈಮುಗಿದಾರೆ.
ಪೂಜೆ ಹೂ ಹಣ-ಕಾಯಿ ಎಡೆ  ಮಾಡ್ಯಾರೆ.
ಆನಂದ ಸಾಗರಕೆ ಕೈ ಬಿಸ್ಯಾರೆ; ಹೋಗಿ ಬಾ ತಾಯಿ ಅನ್ದಾರೆ.(೭)

ತವರವರ ಕಂಡು ಉಕ್ಕಿ ಉಕ್ಕಿ  ಹರಿದು ಮುಂದ ಮುಂದಕೆ ಸಾಗ್ಯಾಳೆ;
ಹತ್ತೂರ ಸೇವೆ ಹರಸ್ಯಾಳೆ ನಮ್ಮಮ್ಮ. ಕೊನೆ ತನಕ ನಮ್ಮ ಸಾಕ್ಯಾಳೆ.   
ರಾಜ ನಾದರೇನು ರಂಕ ನಾದರೇನು ಎಲ್ಲರಿಗು ಒಂದೇ ನಮ್ಮವ್ವ. (೮)
ಸಿರಸಿಯ ಮಾರೆಮ್ಮ, ಚಂದ್ರಗುತ್ತಿ ಗುತ್ತೆಮ್ಮಾ.ಜೋಯಿಡಾ ದುರ್ಗಮ್ಮ ;
ಸವದತ್ತಿ ಎಲ್ಲವ್ವ, ತಿಳವಳ್ಳಿ ದ್ಯಾಮ್ಮವ್ವ;
ದಾಂಡೇಲಿ ಜಗದಂಬೆ, ಕೊಲ್ಲೂರ ಮೂಕಾಂಬೆ,ಜದಂಬೆ. (೯)

ಉಡಿಯಲಿ ನೀಡೌರೆ; ದಾಳಿಂಬೆ ಮೊಸಂಬೆ;
ಪ್ರಸಾದ ನಿಡೌಳೇ;ಪನಿವಾರ-ಫಳ್ಹಾರ ಏಕ್ಕುಂಬೆ;
ತಿಂದುಂಡು ತೆಗ್ಯಾರೆ ಜಗದಂಬೆ. (೧೦)

ಸವಣೂರೆಲೇ,ಸಿಂಪಿ-ಸುಣ್ಣ ,ಚಿಕಣಾ-ಅಡಕಿ,ಕಾಚುಪುಡಿ
ಕಸಕಸಿ ಏಲಕ್ಕಿ ಹಾಕಿ ಮಡಿಚಿ, ಬಾಯೋಳಗಿಡಲು;
ಕಲ್ಲು ಸಕ್ಕರೆ ಧನ್ನ್ಯ ಎಂದಿತು ಆ ಗೋವೆ ಗೋಡಂಬೆ.(೧೧)
  
   

No comments:

Post a Comment