Monday 14 May 2012

ದಣಿದ ಮನ ತಣಿದಾಗ

ದುಡಿ ದುಡಿದು ದಣಿದಾಗ
ತಂಪು ನೀರನು ಕುಡಿದು 
ದಣಿದ ಮನ ತಣಿದಾಗ
ಹಾಯಾಗಿ ಒರಗಿರಲು
ಮಾಮರದ ಅಡಿಯಲ್ಲಿ
ಪರಮಾತ್ಮ ಸುಖಗೊಂಡ
ನಿದ್ದೆ ಗೊರಕೆಯಲಿ.(1)
  
ಕುಹೂ ಕುಹೂ ವಾಣಿಯಲಿ
ಮಂದ ಕೋಕಿಲ ಗಾನ
ಹೂವ ಮಧು ಕೇಸರದ
ಬಂಡುಂಬು ತಿರುವಾಗ
ಹಿಂಡು ದುಂಬಿಯ ಮತ್ತು
ಝೇಂಕಾರ ದಲ್ಲಿ.
ಹಾರಿಹೋಯಿತು ನಿದ್ದೆ
ಕಂಠ ಸ್ವರದಲ್ಲಿ.(2)

           
ಹೊತ್ತು ಹೊತ್ತಿಗೆ ಬಾಳು
ಕೊಡುವಾತ ಕೊಡುತಿರಲು   
ತುತ್ತು ಜೀವಕೆ ಕೂಳು
ನೆಮ್ಮದಿಯ ಜೀವಕ್ಕೆ
ಹಾರೈಸುತಿಹುದು.(3)

No comments:

Post a Comment